ನಾನು ಕತ್ತೆ ಕಾಯಲು ಬಂದಿಲ್ಲ; ಸಭೆಗೆ ಗೈರಾದ ತಹಶೀಲ್ದಾರ್​​ ವಿರುದ್ಧ ಸಂಸದ ಪ್ರಜ್ವಲ್​ ರೇವಣ್ಣ ಕಿಡಿ

ಪ್ರಧಾನಿ ಮೋದಿ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಆವತ್ತು ಮೋದಿಯವರು ವರ್ಷಕ್ಕೆ 50 ಲಕ್ಷ  ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಎಲ್ಲಿ ಕೊಟ್ಟರು? ಯಾರಾದರೂ ಒಬ್ಬ ಯುವಕ ಮೋದಿ ಹೆಸರೇಳಿ ಕೆಲಸಕ್ಕೆ ಹೋಗುತ್ತಿದ್ದಾರಾ ಎಂದು ಸಂಸದ ಪ್ರಶ್ನೆ ಮಾಡಿದರು.

news18-kannada
Updated:January 13, 2020, 1:15 PM IST
ನಾನು ಕತ್ತೆ ಕಾಯಲು ಬಂದಿಲ್ಲ; ಸಭೆಗೆ ಗೈರಾದ ತಹಶೀಲ್ದಾರ್​​ ವಿರುದ್ಧ ಸಂಸದ ಪ್ರಜ್ವಲ್​ ರೇವಣ್ಣ ಕಿಡಿ
ಸಭೆಯಲ್ಲಿ ಪ್ರಜ್ವಲ್​ ರೇವಣ್ಣ
  • Share this:
ಹಾಸನ(ಜ.13): ಇಂದು ಹಾಸನದಲ್ಲಿ ನಡೆದ ಜನಸ್ಪಂದನ ಸಭೆಗೆ ಗೈರಾಗಿದ್ದ ತಹಶೀಲ್ದಾರ್​ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಸಂಸದ ಪ್ರಜ್ವಲ್​ ರೇವಣ್ಣ ಕಿಡಿಕಾರಿದ್ದಾರೆ. 

ಜಿಲ್ಲೆಯ 35ನೇ ವಾರ್ಡ್​​​​​ ಜನಸ್ಪಂದನ ಸಭೆಗೆ ತಹಶೀಲ್ದಾರ್​ ಶಿವಶಂಕರಪ್ಪ ಗೈರಾಗಿದ್ದರು.  ಆಕ್ರೋಶಗೊಂಡ ಸಂಸದ ಪ್ರಜ್ವಲ್​ ರೇವಣ್ಣ, "ಯಾರ್ರೀ ತಹಶೀಲ್ದಾರ್​, ಯಾರ ಇಂಪ್ಲ್ಯುಯೆನ್ಸ್​ನಿಂದ ಬಂದರೂ ಇಲ್ಲಿ ನಡೆಯಲ್ಲ. ಜನಪ್ರತಿನಿಧಿಗಳಿಗೆ, ಜನರಿಗೆ ಕನಿಷ್ಠ ಬೆಲೆ ಇಲ್ವಾ? ಯಾವುದೇ ಜನಪ್ರತಿನಿಧಿಗಳು ಬಂದರೂ ಅಧಿಕಾರಿಗಳು ಬರಬೇಕಷ್ಟೇ," ಎಂದು ಎಚ್ಚರಿಕೆ ಕೊಟ್ಟರು.

ಜಮೀನು ಆಸೆ ತೋರಿಸಿ ಮುಗ್ಧರ ಮತಾಂತರ: ಕನಕಪುರ ಚಲೋ ವೇಳೆ ಬಿಜೆಪಿ ನಾಯಕರ ಆಕ್ರೋಶ

ಸಭೆಗಳಿಗೆ ಪದೇ ಪದೇ ಗೈರಾಗುವ ಅಧಿಕಾರಿಗಳ ವಿರುದ್ಧ ಸಂಸದ ಪ್ರಜ್ವಲ್​ ರೇವಣ್ಣ ಕಿಡಿಕಾರಿದರು. "ನಾನು ಇಲ್ಲಿಗೆ ಕತ್ತೆ ಕಾಯಲು ಬಂದಿಲ್ಲ. ಜನರ ಕೆಲಸ ಮಾಡಲು ಬಂದಿದ್ದೇನೆ. ಹಾಸನದಲ್ಲಿ ಈ ರೀತಿ ಮಾಡಿದರೆ ಸರಿ ಇರಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ," ಎಂದರು.

ಇದೇ ವೇಳೆ,  ಪ್ರಧಾನಿ ಮೋದಿ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಆವತ್ತು ಮೋದಿಯವರು ವರ್ಷಕ್ಕೆ 50 ಲಕ್ಷ  ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಎಲ್ಲಿ ಕೊಟ್ಟರು? ಯಾರಾದರೂ ಒಬ್ಬ ಯುವಕ ಮೋದಿ ಹೆಸರೇಳಿ ಕೆಲಸಕ್ಕೆ ಹೋಗುತ್ತಿದ್ದಾರಾ ಎಂದು ಸಂಸದ ಪ್ರಶ್ನೆ ಮಾಡಿದರು.

2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳ ಗಲ್ಲಿಗೇರಿಸುವ ಅಣಕು ತಾಲೀಮು

ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ನಮ್ಮ ಯುವಕರಿಗೆ ಕೆಲಸ ಸಿಗುವಂತೆ ನಾನು ಮಾಡುತ್ತೇನೆ ಎಂದು ಪ್ರಜ್ವಲ್​ ರೇವಣ್ಣ ಭರವಸೆ ನೀಡಿದರು. 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ