ಹಾಸನದ ಕೊರಿಯರ್ ಶಾಪ್ನಲ್ಲಿ (Hassan Courier Shop) ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಿಕ್ಸಿಯಲ್ಲಿ ಬಾಂಬ್ ಇರಿಸಿದವನ ಕರಾಳ ಮುಖ ಬಯಲಾಗಿದೆ. ಮಿಕ್ಸಿಯಲ್ಲಿ (Mixer Grinder) ಬಾಂಬ್ ಇರಿಸಿರುವ ಸೈಕೋ ಅನೂಪ್ ಎಂಬಾತನ ಮುಖವಾಡವನ್ನು ಪೊಲೀಸರು ಕಳಚಿದ್ದಾರೆ. ಸೈಕೋ ಅನೂಪ್ ಮ್ಯಾಟ್ರಿಮೋನಿಯಲ್ಲಿ (Matrimony) ಫೇಕ್ ಅಕೌಂಟ್ ಕ್ರಿಯೇಟ್ (Fake Account Creation) ಮಾಡಿ ಮಹಿಳೆಯರು, ಯುವತಿಯರಿಗೆ ವಂಚಿಸುತ್ತಿದ್ದನು ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ಬಳಿ ಕೆಜಿಗಟ್ಟಲೆ ಚಿನ್ನ, ಬಂಗಾರದ ಬಿಸ್ಕೆಟ್ ಇದೆ. ನಾನು ಕೋಟಿ ಕೋಟಿ ಹಣದ ಒಡೆಯ ಎಂದು ಫೇಕ್ ವಿಡಿಯೋ ತೋರಿಸಿ ವಂಚಿಸುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಕಲಿ ಚಿನ್ನದ ಜೊತೆ ವಿಡಿಯೋ ಮಾಡಿ ಮಹಿಳೆಯರನ್ನು ನಂಬಿಸಿ ವಂಚಸುತ್ತಿದ್ದನು.ಮದುವೆಯಾಗಿ ಮಕ್ಕಳಿದ್ದರೂ ಮಹಿಳೆಯರಿಗೆ ವಂಚಿಸಿ ಅವರಿಂದ ಹಣ ಪೀಕಲು ನಕಲಿ ಖಾತೆ ತರೆದಿದ್ದನು. ನಕಲಿ ವಿಡಿಯೋದಲ್ಲಿ ವಂಚಕನ ಮೋಸ ಬಯಲಾಗಿದೆ.
ಇದೆಲ್ಲವೂ ನನ್ನ ಬಂಗಾರಿಗೆ ಎಂದಿದ್ದ!
20 ಲೀಟರ್ ಕುಕ್ಕರ್ನಲ್ಲಿ 40 ಕೆಜಿ ಬಂಗಾರ, ಇದು 12 ಲೀಟರ್ ಕುಕ್ಕರ್ನಲ್ಲಿರೋದು 36 ಕೆಜಿ ಬಂಗಾರ ಎಂದು ಸೆಲ್ಫಿ ವಿಡಿಯೋ ಸಹ ಮಾಡಿದ್ದಾನೆ. ಸೂಟ್ಕೇಸ್ ನಲ್ಲಿ ಕೋಟಿ ಮೌಲ್ಯದ ಗೋಲ್ಡ್ ಬಿಸ್ಕೆಟ್, ಹಂಡೆಯಲ್ಲಿ ಕಂತೆ ಕಂತೆ ನೋಟುಗಳಿವೆ. ಇದೆಲ್ಲಾ ನನ್ನ ಚಿನ್ನ, ನನ್ನ ಬಂಗಾರಿಗೆ ಎಂದು ವಿಡಿಯೋ ಮಾಡಿ ಮಹಿಳೆಗೆ ಕಳುಹಿಸಿದ್ದನು.
ಈ ರೀತಿ ವಿಡಿಯೋ ಕಳುಹಿಸಿ ಹಾಸನದ ಕುವೆಂಪು ನಗರದ ಮಹಿಳೆಯನ್ನು ಮೋಸದ ಬಲೆಗೆ ಕೆಡವಲು ಪ್ಲಾನ್ ಮಾಡಿದ್ದನು. ಫಾರ್ಮ್ ಹೌಸ್, ಕೆಜಿಗಟ್ಟಲೇ ಚಿನ್ನ, ಗೋಲ್ಡ್ ಬಿಸ್ಕೆಟ್ ಎಲ್ಲಾ ನನ್ನ ಬಳಿ ಇದೆ. ಇದೆಲ್ಲವೂ ನಿನಗೆ ಎಂದು ನಂಬಿಸಿದ್ದನು.
ಮಹಿಳೆಯನ್ನು ಕೊಲ್ಲಲು ಪ್ಲಾನ್!
ಈತನ ವರ್ತನೆ ನೋಡಿ ಅನುಮಾನಗೊಂಡು ಆತನಿಂದ ಮಹಿಳೆ ಅಂತರ ಕಾಯ್ದುಕೊಂಡಿದ್ದರು. ಮಹಿಳೆ ತನ್ನ ಬಲೆಗೆ ಬೀಳಲಿಲ್ಲ ಎಂದು ಆಕೆಯನ್ನು ಕೊಲ್ಲಲು ಅನೂಪ್ ಸಂಚು ರೂಪಿಸಿದ್ದನು. ಅದಕ್ಕಾಗಿ ಮಿಕ್ಸಿಯಲ್ಲಿ ಡಿಟೊನೇಟರ್ ಇಟ್ಟು ಕೊಲೆ ಮಾಡಲು ಯತ್ನಿಸಿದ್ದನು. ಇದು ಆತನದೇ ಪಾರ್ಸೆಲ್ ಎಂದು ತಿಳಿದು ಮಹಿಳೆ ಸ್ವೀಕರಿಸದೇ ವಾಪಸ್ ಕೊರಿಯರ್ ಶಾಪ್ಗೆ ನೀಡಿದ್ದರು.
ಡಿಸೆಂಬರ್ 26 ರಂದು ಕುವೆಂಪು ನಗರದ ಎರಡನೇ ಹಂತ ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ ಕೊರಿಯರ್ ಶಾಪ್ನಲ್ಲಿ ಮಿಕ್ಸಿ ಸ್ಫೋಟಗೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬೆಂಗಳೂರು ಮೂಲದ ಅನೂಪ್ ಕುಮಾರ್ನನ್ನು ಬಂಧಿಸಿದ್ದಾರೆ.
ಸ್ಫೋಟ ಸಂಭವಿಸಿದ್ದು ಹೇಗೆ?
ಪಾರ್ಸೆಲ್ ವಾಪಸ್ ಆಗಿದ್ದ ಕಾರಣ ಕೊರಿಯರ್ ಸೆಂಟರ್ ಮಾಲೀಕರು ಏನು ಮಾಡೋದು ಅಂತ ತಿಳಿಸಿಯದೇ, ಪಾರ್ಸೆಲ್ ಅನ್ನ ಟೇಬಲ್ ಮೇಲಿಂದ ಕೆಳಗೆ ಇಡಲು ಮುಂದಾಗಿದ್ದರಂತೆ. ಈ ವೇಳೆ ಮಿಕ್ಸಿ ಸ್ಫೋಟಗೊಂಡಿದೆ ಎಂದು ಕೊರಿಯರ್ ಸೆಂಟರ್ ಮಾಲೀಕ ಶಶಿ ನ್ಯೂಸ್18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ವಕೀಲರ ಮೇಲೆ ಹಲ್ಲೆ? PSI ಸಸ್ಪೆಂಡ್
ವಕೀಲರ ಮೇಲೆ ಹಲ್ಲೆ ಆರೋಪದ ಮೇಲೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯ PSI ಶ್ರೀಶೈಲ ಪಟ್ಟಣಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ. PSI ಶ್ರೀಶೈಲ ಪಟ್ಟಣಶೆಟ್ಟಿರನ್ನು ಅಮಾನತುಗೊಳಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ್ ಆದೇಶ ಹೊರಡಿಸಿದ್ದಾರೆ.
ಕೇಸ್ವೊಂದರ ಬಗ್ಗೆ ಠಾಣೆಗೆ ವಿಚಾರಿಸಲು ವಕೀಲರು ಹೋಗಿದ್ದಾಗ PSI ಶ್ರೀಶೈಲ ಪಟ್ಟಣಶೆಟ್ಟಿ ಅವಾಚ್ಯವಾಗಿ ಏಕವಚನದಲ್ಲಿ ಬೈದು ಅವಮಾನ ಮಾಡಿದ್ದು, ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಕೀಲ ಶಿವಕುಮಾರ್ ಠಾಣೆಗೆ ದೂರು ನೀಡಿದ್ದರು.ಈ ಹಿನ್ನೆಲೆ PSI ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ