ಹಾಸನ: ಡಿಸೆಂಬರ್ 26 ಸಂಜೆ ಹಾಸನದ (Hassan) ನಗರದ ಕೆ.ಆರ್ ಪುರಂ ಬಡಾವಣೆಯ (KR Puram Badavane) ಡಿಟಿಡಿಸಿ ಕೊರಿಯರ್ ಶಾಪ್ನಲ್ಲಿ ನಡೆದಿದ್ದ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ಹಿಂದಿದ್ದ ಮ್ಯಾಟ್ರಿಮೋನಿ (Matrimony) ಪ್ರೇಮ್ ಕಹಾನಿ (Love Story) ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಹಾಸನ ನಗರದ ಮಹಿಳೆಯನ್ನು (Women) ಕೊಲೆ ಮಾಡುವ ಉದ್ದೇಶದಿಂದ ಮಿಕ್ಸಿಯಲ್ಲಿ (Mixer Grinder) ಸ್ಫೋಟಕ ಅಳವಡಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಹೆಚ್ಚಿನ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇತ್ತ ತನ್ನದಲ್ಲದ ತಪ್ಪಿಗೆ ಕೊರಿಯರ್ ಶಾಪ್ ಮಾಲೀಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಪ್ರಕರಣ?
ನಗರದ ಕೆ.ಆರ್ ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್ನಲ್ಲಿ ಮಿಕ್ಸಿ ಸ್ಫೋಟಗೊಂಡಿತ್ತು. ಡಿಟಿಡಿಸಿ ಕೊರಿಯರ್ ಸೆಂಟರ್ ಬಂದಿದ್ದ ಮಿಕ್ಸಿ ಪರಿಶೀಲನೆ ನಡೆಸುವ ವೇಳೆ ಸ್ಫೋಟ ಸಂಭವಿಸಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ, ಸ್ಫೋಟದ ತೀವ್ರತೆಗೆ ಕೊರಿಯರ್ ಶಾಪ್ ಮಾಲೀಕ ಶಶಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅಲ್ಲದೇ ಕೊರಿಯರ್ ಸೆಂಟರ್ನಲ್ಲಿದ್ದ ವಸ್ತುಗಳು ಸ್ಫೋಟದ ಪರಿಣಾಮ ಛಿದ್ರಗೊಂಡಿದ್ದವು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರು ಪ್ರಕರಣ ತನಿಖೆಯನ್ನು ಆರಂಭಿಸಿದ್ದರು.
ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಭಯಾನಕ ಸ್ಫೋಟಕ ಸತ್ಯ
ಪ್ರಕರಣ ತನಿಖೆ ಆರಂಭಿಸಿದ್ದ ಪೊಲೀಸರು ಯಾರ ಹೆಸರಿಗೆ ಪಾರ್ಸೆಲ್ ಬಂದಿತ್ತು ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು. ಈ ವೇಳೆ ಹಾಸನ ನಿವಾಸಿಯಾಗಿದ್ದ ಮಹಿಳೆಯ ವಿಳಾಸಕ್ಕೆ ಪಾರ್ಸೆಲ್ ಬಂದಿರುವುದು ಬೆಳಕಿಗೆ ಬಂದಿತ್ತು. ಕೊರಿಯರ್ ಮಾಲೀಕರು ಸಹ ಬಂದಿದ್ದ ಪಾರ್ಸೆಲ್ಅನ್ನು, ಮಹಿಳೆಯ ವಾಸಿಸುತ್ತಿದ್ದ ವಿಳಾಸಕ್ಕೆ ತಲುಪಿಸಿದ್ದರು.
ಆದರೆ ಪಾರ್ಸೆಲ್ ಮೇಲೆ ಯಾರು ಕಳುಹಿಸಿದ್ದಾರೆ ಎಂಬ ಮಾಹಿತಿ ಇಲ್ಲದ ಕಾರಣ ಮಹಿಳೆ ಪಾರ್ಸೆಲ್ಅನ್ನು ಮತ್ತೆ ಕೊರಿಯರ್ ಸೆಂಟರ್ಗೆ ವಾಪಸ್ ನೀಡಿದ್ದರು. ಆ ವೇಳೆ ಕೊರಿಯರ್ ಸೆಂಟರ್ ಮಾಲೀಕರು, ಪಾರ್ಸೆಲ್ ವಾಪಸ್ ಕಳುಹಿಸಲು 350 ಶುಲ್ಕ ರೂಪಾಯಿ ಶುಲ್ಕ ಆಗುತ್ತೆ ಅಂತ ಮಹಿಳೆಗೆ ತಿಳಿಸಿದ್ದರಂತೆ. ಆದರೆ ಪಾರ್ಸೆಲ್ ಮೇಲೆ ಯಾವುದೇ ವಿಳಾಸ ಇಲ್ಲ, ಇದು ನನಗೆ ಬೇಡ ನೀವೇ ಏನಾದ್ರು ಮಾಡಿಕೊಳ್ಳಿ ಅಂತ ಹೇಳಿ ಆಕೆ ಅಲ್ಲಿಂದ ವಾಪಸ್ ಆಗಿದ್ದರಂತೆ.
ಪಾರ್ಸೆಲ್ ವಾಪಸ್ ಆಗಿದ್ದ ಕಾರಣ ಕೊರಿಯರ್ ಸೆಂಟರ್ ಮಾಲೀಕರು ಏನು ಮಾಡೋದು ಅಂತ ತಿಳಿಸಿಯದೇ, ಪಾರ್ಸೆಲ್ ಅನ್ನ ಟೇಬಲ್ ಮೇಲಿಂದ ಕೆಳಗೆ ಇಡಲು ಮುಂದಾಗಿದ್ದರಂತೆ. ಈ ವೇಳೆ ಮಿಕ್ಸಿ ಸ್ಫೋಟಗೊಂಡಿದೆ ಎಂದು ಕೊರಿಯರ್ ಸೆಂಟರ್ ಮಾಲೀಕರ ಶಶಿ ನ್ಯೂಸ್18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hassan: ಖಾಲಿ ಗಾಜಿನ ಬಾಟಲಿ ಬ್ಯುಸಿನೆಸ್! ತಿಂಗಳಿಗೆ 50 ಸಾವಿರ ಆದಾಯ ಗಳಿಸುತ್ತಿರುವ ಹಾಸನದ ಯುವಕ
ಅಸಲಿಗೆ ಆಗಿದ್ದೇನು?
ವಿವಾಹ ವಿಚ್ಛೇದನದ ಪಡೆದಿದ್ದ ಹಾಸನದ ಮಹಿಳೆ ಮತ್ತೆ ಮದುವೆಯಾಗುವ ಉದ್ದೇಶಿದಿಂದ ಮ್ಯಾಟ್ರಿಮೋನಿಯಲ್ಲಿ ತಮ್ಮ ಫೋಟೋ ಅಪ್ಲೋಡ್ ಮಾಡಿದ್ದರಂತೆ. ಮಹಿಳೆಯ ಅಂದಕ್ಕೆ ಮಾರುಹೋಗಿದ್ದ ಬೆಂಗಳೂರು ಮೂಲದ ಅನೂಪ್ ಕುಮಾರ್ ಎಂಬಾತ ಮದುವೆ ಪ್ರಸ್ತಾಪ ಮಾಡಿದ್ದನಂತೆ. ಮೊದಲು ಅನೂಪ್ ಪ್ರಸ್ತಾಪ ಒಪ್ಪಿಕೊಂಡಿದ್ದ ಮಹಿಳೆ ಆತನ ಜೊತೆ ಕೆಲಕಾಲ ಸುತ್ತಾಡಿದ್ದಂತೆ. ಅಲ್ಲದೇ ಅನೂಪ್ ಕುಮಾರ್ ವಿಶ್ವಾಸಗಳಿಸಿದ್ದ ಆತನಿಂದ ಲಕ್ಷಾಂತರ ರೂಪಾಯಿ ಹಣ ಸಾಲ ಪಡೆದುಕೊಂಡಿದ್ದರಂತೆ. ಆದರೆ ಹಣ ಪಡೆದುಕೊಂಡ ನಂತರ ಮಹಿಳೆ ತನ್ನ ವರಸೆ ಬದಲಿಸಿ, ಕೊಟ್ಟ ಹಣವನ್ನು ವಾಪಸ್ ಕೊಡದೆ, ಇತ್ತ ಮದುವೆಯೂ ಆಗದೆ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಮಹಿಳೆಯನ್ನು ಕೊಲೆ ಮಾಡ್ಬೇಕು ಅಂತ ಸ್ಕೆಚ್
ಮಹಿಳೆಯಿಂದ ವಂಚನೆಗೆ ಒಳಗಾಗಿದ್ದೇ ಅಂತ ತೀವ್ರ ನಿರಾಸೆಗೆ ಒಳಗಾಗಿದ್ದ ಆರೋಪಿ, ನನ್ನನ್ನು ಮದುವೆಯಾಗಬೇಕು. ಇಲ್ಲವೇ ಹಣ ವಾಪಾಸ್ ನೀಡಬೇಕು ಎಂದು ಬೆನ್ನು ಬಿದ್ದಿದ್ದರಂತೆ. ಆದರೆ ಮಹಿಳೆ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಮಿಕ್ಸಿಯಲ್ಲಿ ಸ್ಫೋಟಕ ಇಟ್ಟು ಪಾರ್ಸೆಲ್ ಕಳುಹಿಸಿ ಹತ್ಯೆಗೆ ಸಂಚು ರೂಪಿಸಿದ್ದರಂತೆ.
ಇದಕ್ಕೂ ಮುನ್ನ ಆರೋಪಿ, ಒಂದೆರಡು ಬಾರಿ ಹಾಸನಕ್ಕೆ ಬಂದು ಮಹಿಳೆ ಮನೆ ಎದುರು ಗಲಾಟೆ ಮಾಡಿದ್ದರಂತೆ. ಇದರಿಂದ ಅಸಮಾಧಾನಗೊಂಡಿದ್ದ ಮಹಿಳೆ, ಆರೋಪಿ ಅನೂಪ್ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರಂತೆ. ತನಗೆ ಮೋಸವಾಗಿದೆ ಎಂದು ಮಹಿಳೆ ವಿರುದ್ಧ ಕೆರಳಿದ ಅನೂಪ್, ಮೊದಲು ಸೀರೆ ಪಾರ್ಸೆಲ್ ಕಳುಹಿಸಿದ್ದನಂತೆ. ಆ ಬಳಿಕ ಸೀರಿಯಲ್ ಸೆಟ್ ಪಾರ್ಸೆಲ್ ಮಾಡಿದ್ದನಂತೆ.
ಪಾರ್ಸೆಲ್ ವಾಪಸ್ ಕಳುಹಿಸಿದ್ದ ಮಹಿಳೆ
ಎರಡು ಬಾರಿ ಮಹಿಳೆ ಅವುಗಳನ್ನು ವಾಪಸ್ ಕಳುಹಿಸಿ ಈ ರೀತಿ ಮಾಡಬೇಡ ಅಂತ ವಾರ್ನ್ ಮಾಡಿದ್ದಳಂತೆ. ಇದರಿಂದ ಮೂರನೇ ಬಾರಿ ಪಕ್ಕ ಪ್ಲಾನ್ ಮಾಡಿದ್ದ ಆರೋಪಿ, ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು, ಸ್ಫೋಟ ಆಗುವಂತೆ ಫಿಕ್ಸ್ ಮಾಡಿದ್ದನಂತೆ. ತನಗೆ ಮೋಸ ಮಾಡಿದವಳ ಮುಖ ವಿಕಾರವಾಗಬೇಕು ಇಲ್ಲ, ಆಕೆ ಸಾಯಬೇಕು ಎಂದು ಅಂತ ಪಾರ್ಸೆಲ್ ಕಳುಹಿಸಿದ್ದನಂತೆ.
ಇದನ್ನೂ ಓದಿ: Crime News: ಪರ ಸ್ತ್ರೀ ಜೊತೆ ಗಂಡನ ಲವ್ವಿ ಡವ್ವಿ, ಪತ್ನಿ ಆತ್ಮಹತ್ಯೆ; ಹಾಸನದಲ್ಲಿ ಮಗುವನ್ನು ಕೊಂದು ತಾಯಿ ಸೂಸೈಡ್
ಇದರಂತೆ ಡಿಸೆಂಬರ್ 17 ರಂದು ಕೊರಿಯರ್ ಮಾಲೀಕ ಶಶಿ, ಪಾರ್ಸೆಲ್ ಡೆಲಿವರಿ ಮಾಡಿಸಿದ್ದರಂತೆ. ಮೂರನೇ ಸಲ ಕಳುಹಿಸಿದ್ದ ಪಾರ್ಸಲ್ ಬಿಚ್ಚಿ ನೋಡಿದ್ದ ಮಹಿಳೆ, ಅದು ಮಿಕ್ಸಿ ಎಂದು ಗೊತ್ತಾಗಿ ಆತನ ವಸ್ತು ತನಗೆ ಬೇಡ ಅಂತ ವಾಪಸ್ ನೀಡಿದ್ದಾರೆ. ಡಿಸೆಂಬರ್ 26 ರಂದು ಮಿಕ್ಸಿ ವಾಪಸ್ ಕಳಿಸುವಂತೆ ಕೊರಿಯರ್ ಅಂಗಡಿಗೆ ಮಹಿಳೆ ಹಿಂದಿರುಗಿಸಿದ್ದರು. ಸದ್ಯ ಪ್ರಕರಣ ವಿಚಾರಣೆಗೆ ವೇಗ ತುಂಬಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ