ಹಾಸನ: ನಿನ್ನೆ ಹಾಸನದ ಕುವೆಂಪು ನಗರದ ಎರಡನೇ ಹಂತದ ಕೊರಿಯರ್ ಶಾಪ್ನಲ್ಲಿ (courier shop) ಮಿಕ್ಸಿ ಒಂದು ಬ್ಲಾಸ್ಟ್ ಆಗಿ (Mixer Blast) ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಡಿಟಿಡಿಸಿ ಕೊರಿಯರ್ (DTDC Courier) ಏಜೆನ್ಸಿ ನಡೆಸುತ್ತಿದ್ದ ಶಶಿ ಎಂಬುವರು ಮಿಕ್ಸಿ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ (Mangaluru Cooker Blast) ಪ್ರಕರಣ ಮಾಸುವ ಮುನ್ನವೇ ಮಿಕ್ಸಿ ಬ್ಲಾಸ್ಟ್ ನಡೆದಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರರ (Terrorist) ಕೃತ್ಯ ಇರಬಹುದಾ ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಮಿಕ್ಸಿ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ಹಿಂದೆ ವೈಯಕ್ತಿಕ ದ್ವೇಷದ ಸಂಶಯವಿದ್ದು, ಓರ್ವ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಿನ್ನೆ ಸಂಜೆ ಸಂಭವಿಸಿದ್ದ ಮಿಕ್ಸಿ ಸ್ಫೋಟ
ನಿನ್ನೆ ಹಾಸನದ ಕುವೆಂಪು ನಗರದ ಕೊರಿಯರ್ ಶಾಪ್ನಲ್ಲಿ ಸಂಜೆ 7.30ರ ಸುಮಾರಿಗೆ ಕೊರಿಯರ್ ಶಾಪ್ನಲ್ಲಿ ಬ್ಲಾಸ್ಟ್ ಸಂಭವಿಸಿತ್ತು. ಕೊರಿಯರ್ ಶಾಪ್ಗೆ ಪಾರ್ಸೆಲ್ ಮೂಲಕ ಬಂದಿದ್ದ ಮಿಕ್ಸಿಯನ್ನು ಕೊರಿಯರ್ ಅಂಗಡಿ ಮಾಲೀಕ ಡೆಲಿವರಿ ಮಾಡಿದ್ದರು. ಪಾರ್ಸೆಲ್ ಪಡೆದಿದ್ದವರು ನಿನ್ನೆ ಕೊರಿಯರ್ ವಾಪಸ್ ನೀಡಿದ್ದರು. ವಾಪಸ್ ಪಡೆಯುವ ವೇಳೆ ಪರಿಶೀಲನೆ ನಡೆಸಿದಾಗ ಸ್ಫೋಟ ಸಂಭವಿಸಿತ್ತು.
ಮಹಿಳೆ ಸೇರಿ ಇಬ್ಬರ ಬಂಧನ
ಮಿಕ್ಸರ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದೀಗ ಬ್ಲಾಸ್ಟ್ ಸಂಬಂಧ ಓರ್ವ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬ್ಲಾಸ್ಟ್ ಆದ ಬಳಿಕವೇ ಸಿಕ್ಕ ಮಾಹಿತಿ ಆಧರಿಸಿ ಇಬ್ಬರನ್ನು ಠಾಣೆಗೆ ಕರೆಸಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Narendra Modi's Brother: ನರೇಂದ್ರ ಮೋದಿ ಸಹೋದರನ ಕಾರು ಅಪಘಾತ; ಪ್ರಹ್ಲಾದ ಮೋದಿ, ಪುತ್ರ, ಸೊಸೆಗೆ ಗಾಯ
ಘಟನಾ ಸ್ಥಳದಲ್ಲಿ ಸ್ಯಾಂಪಲ್ ವಿಚಾರಣೆ
ನಿನ್ನೆ ಸಂಜೆ ನಡೆದ ಮಿಕ್ಸಿ ಬ್ಲಾಸ್ಟ್ ಸಂಬಂಧ ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿತ್ತು. ನಿನ್ನೆ ತಡರಾತ್ರಿಯೇ ಮೈಸೂರು ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳದಲ್ಲಿ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ.
ಹಾಸನ ಎಸ್ಪಿ ಹೇಳಿದ್ದೇನು?
ಘಟನೆ ಸಂಬಂಧ ಹಾಸನ ಎಸ್ಪಿ ಹರಿರಾಂ ಇಂದು ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದರು. ಈ ಸಂಬಂಧ ಸ್ಪೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಸ್ಪೋಟದಲ್ಲಿ ಆಂತರಿಕ ಭದ್ರತೆಗೆ ಧಕ್ಕೆಯಾಗುವ ಯಾವುದೇ ಸುಳಿವು ಇರೋ ಮಾಹಿತಿ ಸಧ್ಯಕ್ಕೆ ಇಲ್ಲಾ ಎಂದು ಸ್ಪಷ್ಟನೆ ನೀಡಿದರು.
ಗಾಯಾಳು ಶಶಿಕುಮಾರ್ ಹೇಗಿದ್ದಾರೆ?
ಮಿಕ್ಸಿ ಬ್ಲಾಸ್ಟ್ ಆಗಿ ಶಶಿಕುಮಾರ್ ಎಂಬುವರಿಗೆ ಗಾಯವಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಶಿಕುಮಾರ್ಗೆ ಯಾವುದೆ ಪ್ರಾಣಾಪಾಯದ ತೊಂದರೆ ಇಲ್ಲ ಅಂತ ಎಸ್ಪಿ ಹರಿರಾಂ ಹೇಳಿದ್ದಾರೆ. ಈ ಘಟನೆಯಿಂದ ಗೊಂದಲ ಸೃಷ್ಟಿಯಾಗಿದೆ..
ಇದನ್ನೂ ಓದಿ: Street Dog Attack: ಎಂಟು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ; ಮುಖ, ಕುತ್ತಿಗೆ ಭಾಗದಲ್ಲಿ ಹೊಲಿಗೆಗಳು
“ಇದು ಯಾವುದೇ ಉಗ್ರರ ಕೃತ್ಯವಲ್ಲ”
ಇದು ಯಾವುದೇ ಉಗ್ರಗಾಮಿಗಳಿಗೆ ಸಂಬಂಧಿಸಿದ್ದಲ್ಲ ಅಂತ ಎಸ್ಪಿ ಹರಿರಾಂ ಹೇಳಿದ್ದಾರೆ. ಇದು ಡೆಲಿವರಿಗೆ ಕೊಟ್ಟ ವ್ಯಕ್ತಿಯನ್ನ ಟಾರ್ಗೆಟ್ ಮಾಡಲಾಗಿದೆ. ಇದರಲ್ಲಿ ಉಗ್ರರು ನಡೆಸುವ ರೀತಿ ಯಾವುದೇ ತಂತ್ರಜ್ಞಾನ ಬಳಸಿಲ್ಲ. ಮೈಸೂರಿನ ಎಫ್ಎಸ್ಎಲ್ ನವರು ಈಗಾಗಲೇ ಅವಶೇಷ ಪಡೆದಿದ್ದಾರೆ. ಇದು ವಯಕ್ತಿಕ ದ್ವೇಷದಿಂದ ನಡೆದಿರುವ ಘಟನೆಯಗಿದೆ. ಇದರಲ್ಲಿ ಯಾವುದೇ ಉಗ್ರರಪಾತ್ರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಎಲ್ಲಾ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ