HOME » NEWS » State » HASSAN MID MEAL SCANDAL POOR QUALITY DAL SUPPLIED TO SCHOOLS IN HASSAN SCT

ಮಕ್ಕಳ ಬಿಸಿಯೂಟಕ್ಕೆ ಕಳಪೆ ಬೇಳೆ ಪೂರೈಕೆ; ಹಾಸನದಲ್ಲಿ ಕೋಟ್ಯಂತರ ರೂ. ಲೂಟಿ

ಹಾಸನ ಜಿಲ್ಲೆ ಒಂದರಲ್ಲೇ 2641 ಶಾಲೆಗಳ 1 ಲಕ್ಷದ 18 ಸಾವಿರ ಮಕ್ಕಳಿಗೆ ತೊಗರಿ ಬೇಳೆ ಪೂರೈಕೆ ಮಾಡಲಾಗುತ್ತಿದೆ. ಹಾಸನಕ್ಕೆ ಬೇಳೆ ಪೂರೈಸುತ್ತಿರುವ ಗುತ್ತಿಗೆದಾರನೇ 14 ಜಿಲ್ಲೆಗಳಿಗೆ ತೊಗರಿ ಬೇಳೆ ಪೂರೈಸುತ್ತಿರುವ ಆರೋಪ ಕೇಳಿ ಬಂದಿದೆ.

news18-kannada
Updated:June 28, 2020, 2:58 PM IST
ಮಕ್ಕಳ ಬಿಸಿಯೂಟಕ್ಕೆ ಕಳಪೆ ಬೇಳೆ ಪೂರೈಕೆ; ಹಾಸನದಲ್ಲಿ ಕೋಟ್ಯಂತರ ರೂ. ಲೂಟಿ
ಸಾಂದರ್ಭಿಕ ಚಿತ್ರ
  • Share this:
ಹಾಸನ (ಜೂ. 28): ಶಾಲಾ ಮಕ್ಕಳಿಗೆ ನೂರಾರು ಕೋಟಿ ರೂ. ಖರ್ಚು ಮಾಡಿ ಸರ್ಕಾರ ಅಕ್ಷರ ದಾಸೋಹ ಕಾರ್ಯಕ್ರಮ ಆಯೋಜಿಸಿದೆ. ಮಕ್ಕಳೇ ದೇಶದ ಮುಂದಿನ ಪ್ರಜೆಗಳು ಅಂತಾರೆ. ಆದರೆ ಈಗ 1 ರಿಂದ 10 ನೇ ತರಗತಿವರೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆ ಮಾಡುವ ಬೇಳೆ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಕೊರೋನಾ ಸಮಯದಲ್ಲಿ ಈ ಮಕ್ಕಳು ತಿನ್ನುವ ಬೇಳೆ ಕಳಪೆ ಗುಣಮಟ್ಟದ್ದಾಗಿದ್ದು, ಈ ಬೇಳೆ ಲಕ್ಷಾಂತರ ಮಕ್ಕಳ ಪ್ರಾಣಕ್ಕೆ ಕುತ್ತು ತರಲಿದೆಯಾ? ಎಂಬ ಪ್ರಶ್ನೆ ಮೂಡಿದೆ.

ಬೇಳೆ ಕಾಳುಗಳು ಕಳಪೆ ಗುಣಮಟ್ಟದ್ದಾಗಿದೆ ಎಂದು ಲ್ಯಾಬ್ ವರದಿ ಬಂದಿದೆ.  ಆದರೂ ನೂರಾರು ಕ್ವಿಂಟಾಲ್ ಬೇಳೆ ಸದ್ದಿಲ್ಲದೇ ಸರ್ಕಾರದ ಕೆಎಸ್ ಎಫ್ ಸಿ ಗೋಡೋನ್ ಸೇರಿದೆ. ಆಹಾರ ಸಚಿವ ಗೋಪಾಲಯ್ಯ ಉಸ್ತುವಾರಿ ಹೊಣೆ ಹೊತ್ತಿರುವ ಹಾಸನ ಜಿಲ್ಲೆಯಲ್ಲೇ ಕಳಪೆ ಗುಣಮಟ್ಟದ ಬೇಳೆ ಪೂರೈಕೆಯಾಗಿದೆ. ಸಚಿವರೇ ಕಳಪೆ ಬೇಳೆ ಗೋಡೋನ್ ಸೇರಲು ಸಚಿವರೇ ಅಧಿಕಾರಿಗಳಿಗೆ ಕುಮಕ್ಕು ನೀಡಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ. ಕಳಪೆ ಗುಣಮಟ್ಟ ಎಂದು ನೀಡಿರುವ ಲ್ಯಾಬ್ ರಿಪೋರ್ಟ್ ನ್ಯೂಸ್18ಕನ್ನಡಕ್ಕೆ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ವೈರಸ್​ಗೆ ಮತ್ತೊರ್ವ ಎಎಸ್ಐ ಬಲಿ

ಜಿಲ್ಲಾ ಉಸ್ತುವಾರಿ ಮತ್ತು ಆಹಾರ ಇಲಾಖೆ ಸಚಿವರಾಗಿರುವ  ಗೋಪಾಲಯ್ಯರ ಹಾಸನ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಬೇಳೆ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಡೀ ರಾಜ್ಯ ಕೊರೋನ ಬಗ್ಗೆ ತಲೆ ಕೆಡಿಸಿಕೊಂಡಿರುವಾಗ ಸದ್ದಿಲ್ಲದೆ ಕಳಪೆ ಗುಣಮಟ್ಟದ ಬೇಳೆ ಗೋಡೋನ್ ಸೇರಿದೆ. ಅಕ್ಷರ ದಾಸೋಹದ ಹೆಸರಲ್ಲಿ ಗೋಡೌನ್ ಸೇರುತ್ತಿದೆ ಕಳಪೆ ಗುಣಮಟ್ಟದ ಬೇಳೆ ಪೂರೈಸಲಾಗುತ್ತಿದೆ. ಹಾಸನ ಜಿಲ್ಲೆಯೊಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣಕ್ಕೆ ಕುತ್ತಾಗಲಿದೆಯಾ ತೊಗರಿ ಬೇಳೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬೇಳೆ ಕಳಪೆ ಗುಣಮಟ್ಟ ಎಂದು ಲ್ಯಾಬ್ ವರದಿಯ ಪ್ರತಿ ನ್ಯೂಸ್18ಕನ್ನಡಕ್ಕೆ ಲಭ್ಯವಾಗಿದೆ.

ಸರ್ಕಾರ ನಿಗದಿ ಪಡಿಸಿರುವ ಗುಣಮಟ್ಟ ಇಲ್ಲದಿದ್ದರೂ ಬೇಳೆ ಸರ್ಕಾರದ ಕೆಎಸ್‌ಎಫ್‌ಸಿ ಗೋಡೌನ್ ಸೇರಿದೆ. ಹಾಸನ ಜಿಲ್ಲೆ ಒಂದರಲ್ಲೇ 2641 ಶಾಲೆಗಳ 1 ಲಕ್ಷದ 18 ಸಾವಿರ ಮಕ್ಕಳಿಗೆ ತೊಗರಿ ಬೇಳೆ ಪೂರೈಕೆ ಮಾಡಲಾಗುತ್ತಿದೆ. ಹಾಸನಕ್ಕೆ ಬೇಳೆ ಪೂರೈಸುತ್ತಿರುವ ಗುತ್ತಿಗೆದಾರನೇ 14 ಜಿಲ್ಲೆಗಳಿಗೆ ತೊಗರಿ ಬೇಳೆ ಪೂರೈಸುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಿಓಡಿ ತನಿಖೆಯಾಗಬೇಕು ಎಂದು ಎಂಎಲ್ ಸಿ ಗೋಪಾಲಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದ ಕೊರೋನಾ ಪ್ರಯೋಗಾಲಯವೇ ಸೀಲ್​ಡೌನ್!

1 ರಿಂದ 10 ನೇ ತರಗತಿ ಮಕ್ಕಳು ಮದ್ಯಾಹ್ನ ಬಿಸಿಯೂಟ ಮಾಡುವ ಬೇಳೆ ಇದಾಗಿದ್ದು, ಅಕ್ಷರ ದಾಸೋಹ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗುತ್ತಿದೆ. ಹಾಸನ ಜಿಲ್ಲೆಯ ಸುತ್ತಮುತ್ತಲ 14 ಜಿಲ್ಲೆಗಳಲ್ಲಿ ಇದೇ ಗುತ್ತಿಗೆದಾರ ಕಳಪೆ ಬೇಳೆ ಪೂರೈಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, 14 ಜಿಲ್ಲೆಯಲ್ಲಿ ಕಳಪೆ ಬೇಳೆ ಲಕ್ಷಾಂತರ ಮಕ್ಕಳ ಪ್ರಾಣಕ್ಕೆ ಕುತ್ತಾಗಲಿದೆಯಾ? ಎಂಬ ಅನುಮಾನ ದಟ್ಟವಾಗಿದೆ. ಆಹಾರ ಸಚಿವ ಗೋಪಾಲಯ್ಯರೇ ಕಳಪೆ ಗುಣಮಟ್ಟದ ಬೇಳೆ ಗೋಡೋನ್ ಗೆ ಹಾಕಲು ಕುಮ್ಮಕ್ಕು ನೀಡಿದ್ರಾ? ಕಳಪೆ ಬೇಳೆ ಅನ್ ಲೋಡ್ ಮಾಡಲು ಸಚಿವ ಗೋಪಾಲಯ್ಯ ಕೆಎಸ್ ಎಫ್ ಸಿ ಅಧಿಕಾರಿಗೆ ಸೂಚಿಸಿದ್ರಾ ಎಂಬ ಅನುಮಾನ ದಟ್ಟವಾಗಿದೆ. ಸಚಿವ ಗೋಪಾಲಯ್ಯ ಅಧಿಕಾರಿಗೆ ಸೂಚಿಸಿದ್ದಾರೆಂದು ಹೇಳಿರುವ ಅಧಿಕಾರಿಯ ಆಡಿಯೋ ನ್ಯೂಸ್18ಕನ್ನಡಕ್ಕೆ ಲಭ್ಯವಾಗಿದೆ.ಆಹಾರ ಸಚಿವ ಗೋಪಾಲಯ್ಯ  ಉಸ್ತುವಾರಿ ವಹಿಸಿಕೊಂಡಿರುವ ಹಾಸನ ಜಿಲ್ಲೆಯಲ್ಲೇ ಕಳಪೆ ಗುಣಮಟ್ಟದ ಬೇಳೆ ಪೂರೈಕೆ ಮಾಡಲಾಗಿದೆ. ಅಕ್ಷರ ದಾಸೋಹ ಹೆಸರಿನಲ್ಲಿ ಬಾರೀ ಗೋಲ್ ಮಾಲ್ ನಡೆದಿದ್ದು,ಕಳಪೆ ಗುಣಮಟ್ಟ ಎಂದು ವರದಿ ಬಂದಿದ್ದರೂ ಬೇಳೆ ಸರ್ಕಾರಿ ಗೋಡೋನ್ ಸೇರಿದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಬವವಾಗಿದೆ. ಬೇಳೆ ಗೋಡೌನ್ ಸೇರುವ ಮುನ್ನ ಬೇಳೆಯ ಗುಣಮಟ್ಟ ಪರಿಶೀಲನೆ ಆಗಬೇಕು.  ನಿಯಮದ ಪ್ರಕಾರ ತೊಗರಿ ಬೇಳೆ ಗುಣಮಟ್ಟದಲ್ಲಿ ಲೋಪ ಕಂಡು ಬಂದರೆ ಸೀಜ್ ಮಾಡಿ ವಾಪಾಸ್ ಕಳಿಸಬೇಕು. ಆದರೆ ಯಾವುದೇ ಕಾನೂನು ಪಾಲಿಸದೇ ಕಾನೂನುಬಾಹಿರವಾಗಿದ್ದು, ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇದೇ ಕಳಪೆ ಗುಣಮಟ್ಟದ ಬೇಳೆ 14 ಜಿಲ್ಲೆಗಳ ಗೋಡೋನ್ ಸೇರಿರುವ ಅನುಮಾನ ವ್ಯಕ್ತವಾಗಿದೆ. ಇನ್ನೂ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಳಪೆ ಬೇಳೆ ಗೋಡೋನ್ ಸೇರಿದೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾತ್ರ ಈ ಲ್ಯಾಬ್ ರಿಪೋರ್ಟ್ ನನ್ನ ಗಮನಕ್ಕೆ ಬಂದಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ.

ಕೊರೋನಾ ಸಮಯದಲ್ಲಿ ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಕಳಪೆ ಬೇಳೆ ಪೂರೈಕೆ ಮಾಡುವ ಮೂಲಕ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಸಂಪೂರ್ಣವಾಗಿ ಸಿಓಡಿ ತನಿಖೆಯಾಗಿ ಕಳಪೆ ಗುಣಮಟ್ಟ ಬೇಳೆ ಸೀಜ್ ಮಾಡಿ ಸರಬರಾಜು ಮಾಡಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕಿದೆ.

 
First published: June 28, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories