ಶಿಕ್ಷಕಿ ಆತ್ಮಹತ್ಯೆ ಪ್ರಕರಣ: ಸಂಸಾರಸ್ಥ ಶಿಕ್ಷಕನ ಪ್ರೀತಿ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ನತದೃಷ್ಟೆ

ಶಿಕ್ಷಕಿ ರಾಣಿ ಮೊಬೈಲ್​ನ ಮೆಸೆಂಜರ್​ನಲ್ಲಿ ಇವರಿಬ್ಬರ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪರಿಚಯವಾಗಿ ಪ್ರೀತಿಯ ನಾಟಕವಾಡಿದ್ದ ಧನಂಜಯ್ ಆಗಿಂದಾಗ್ಗೆ ಆಕೆಯನ್ನ ಪ್ರವಾಸಕ್ಕೆಂದು ಎಲ್ಲೆಡೆ ಸುತ್ತಾಡಿಸಿದ್ದ.

news18-kannada
Updated:February 14, 2020, 5:38 PM IST
ಶಿಕ್ಷಕಿ ಆತ್ಮಹತ್ಯೆ ಪ್ರಕರಣ: ಸಂಸಾರಸ್ಥ ಶಿಕ್ಷಕನ ಪ್ರೀತಿ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ನತದೃಷ್ಟೆ
ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ (ಬಲಬದಿ)
  • Share this:
ಹಾಸನ: ಆತ ಮಕ್ಕಳಿಗೆ ಪಾಠ ಕಲಿಸುವ ಹಳ್ಳಿ ಮೇಷ್ಟ್ರು. ಯಾವುದೋ ಕಾರ್ಯಕ್ರಮದಲ್ಲಿ ಅವರಿಬ್ಬರಿಗೂ ಪರಿಚಯವಾಗಿ ಆ ಪರಿಚಯ ಪ್ರೀತಿ ಪ್ರೇಮ ಪ್ರಣಯಕ್ಕೂ ತಿರುಗುತ್ತೆ. ಆದರೆ ಆ ಶಿಕ್ಷಕ ಸಂಸಾರಸ್ಥ ಎಂದು ತಿಳಿದ ಕೂಡಲೇ ನಡೆದಿತ್ತು ಆ ಒಂದು ಘೋರ ಘಟನೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ, ಆಕೆಯದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಆಕೆಯ ಫೋನ್​ನಲ್ಲಿದ್ದ ಒಂದು ಮೆಸೇಜ್​ನಿಂದ ಸುಳಿವು ಸಿಗುತ್ತದೆ. ಇಂಥದ್ದೊಂದು ಲವ್ ದೋಖಾ ದುರಂತದ ಕಥೆ ಹಾಸನದಲ್ಲಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ಮಂಜಲಗೋಡು ಗ್ರಾಮದ ರಾಣಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ. ಹೊಸದಾಗಿ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಂಡು ಬಾಳು ಕಟ್ಟಿಕೊಳ್ಳಬೇಕಾಗಿದ್ದವಳು ಪ್ರೀತಿ ಬೆಲೆಗೆ ಬಿದ್ದು ಹೆಣವಾಗಿ ಹೋಗಿದ್ದಾಳೆ. ಅದೇ ಸರ್ಕಾರಿ ಶಾಲೆಯಲ್ಲಿ ಧನಂಜಯ್ ಕೂಡ ಶಿಕ್ಷಕನಾಗಿದ್ದ. ಇವರಿಬ್ಬರಿಗೂ ಪರಿಚಯವಾಗಿ ಪರಿಚಯದಿಂದ ಪ್ರೀತಿ ಪ್ರೇಮ ಪ್ರಣಯಕ್ಕೆ ತಿರುಗಿತ್ತು.

ಇಬ್ಬರೂ ಎಲ್ಲೆಡೆ ಸುತ್ತಾಡಿ ಪ್ರಣಯ ಹಕ್ಕಿಗಳಂತಿದ್ದರು‌. ಆದರೆ ಯಾವಾಗ ಧನಂಜಯ್​ಗೆ ಮದುವೆಯಾಗಿದೆ ಎಂಬ ಸುದ್ದಿ ಶಿಕ್ಷಕಿ ರಾಣಿಗೆ ಗೊತ್ತಾದ ದಿನದಿಂದ ಇಬ್ಬರಿಗೂ ಜಗಳ ಶುರುವಾಗುತ್ತೆ. ಅದರೂ ಕೂಡ ಶಿಕ್ಷಕಿ ಮಾತ್ರ ಇದೆನ್ನೆಲ್ಲಾ ಸಹಿಸಿಕೊಂಡು ನನ್ನನ್ನು ಮದುವೆ ಆಗು ಎಂದು ಹಠ ಹಿಡಿದಿರುತ್ತಾಳೆ. ಆದರೆ ಈ ಧನಂಜಯ್ ಮಾತ್ರ ಬೇರೆ ಬೇರೆ ಕಾರಣ ಕೊಟ್ಟು ಸುಮ್ಮನಾಗುತ್ತಿದ್ದ. ಶಿಕ್ಷಕಿ ರಾಣಿಯ ಬ್ಯಾಂಕ್ ಖಾತೆಯಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ಪೀಕಿರುತ್ತಾನೆ ಧನಂಜಯ್. ಇಷ್ಟೆಲ್ಲಾ ಆದರೂ ಕೂಡ ಧನಂಜಯ್ ಮಾತ್ರ ಇದ್ದಕ್ಕಿದ್ದ ಹಾಗೆ ಶಿಕ್ಷಕಿ ರಾಣಿ ಮೇಲೆ ಅನುಮಾನಗೊಳ್ಳುತ್ತಾನೆ. ಅನುಮಾನದಿಂದ ನೋಡುವುದು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನ ಮಾಡುತ್ತಿರುತ್ತಾನೆ.

ಇದನ್ನೂ ಓದಿ: ಬೀದರ್ ಪ್ರಕರಣ - ಅವಾಚ್ಯ ಶಬ್ದ ಬಳಸಿದ್ದು ಮೋದಿಗಲ್ಲ - ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದ್ರೆ ದೇಶದ್ರೋಹವಾಗಲ್ಲ; ಸಿದ್ಧರಾಮಯ್ಯ

ಈತನ ಕಾಟ ತಾಳಲಾರದೇ ಕಳೆದ ತಿಂಗಳು ಜನವರಿ 7 ರಂದು ಶಿಕ್ಷಕಿ ರಾಣಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಧನಂಜಯ್ ಆಕೆಯನ್ನು ಆಸ್ಪತ್ರೆ ಸಾಗಿಸುವ ನಾಟಕ ಮಾಡುತ್ತಾನೆ. ರಾಣಿಯ ತಂದೆ ಮೃತಪಟ್ಟಿದ್ದಾರೆ. ಹಾಗಾಗಿ ಈಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಸುಳ್ಳು ಹೇಳುತ್ತಾನೆ. ಆ ನಂತರ ರಾಣಿ ಮನೆಯವರಿಗೆ ಸುದ್ದಿ ತಿಳಿಸಿ ನಾಟಕ ಮಾಡಲು ಶುರುಹಚ್ಚಿದ್ದಾನೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ಬಳಿಕ ಜನವರಿ 9 ರಂದು ಶಿಕ್ಷಕಿ ರಾಣಿ ಮೃತಪಟ್ಟಿದ್ದಾಳೆ. ಆಗ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆತ್ಮಹತ್ಯೆ ಕೇಸ್ ದಾಖಲಿಸಿಕೊಂಡು ಕೈ ತೊಳೆದುಕೊಳ್ಳುತ್ತಾರೆ‌.

ಆದರೆ ಶಿಕ್ಷಕಿ ರಾಣಿ ಮೊಬೈಲ್​ನ ಮೆಸೆಂಜರ್​ನಲ್ಲಿ ಇವರಿಬ್ಬರ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪರಿಚಯವಾಗಿ ಪ್ರೀತಿಯ ನಾಟಕವಾಡಿದ್ದ ಧನಂಜಯ್ ಆಗಿಂದಾಗ್ಗೆ ಆಕೆಯನ್ನ ಪ್ರವಾಸಕ್ಕೆಂದು ಎಲ್ಲೆಡೆ ಸುತ್ತಾಡಿಸಿದ್ದ. ಪ್ರತೀ ತಿಂಗಳು ರಾಣಿಯ ಸಂಬಳದ ಹಣವನ್ನ ಈತ  ಪಡೆದುಕೊಳ್ಳುತ್ತಿದ್ದ. ಫೋನ್ ಪೇ ಮತ್ತು ಗೂಗಲ್ ಪೇನಲ್ಲಿ ಆಕೆ ತನ್ನ ಹಣವನ್ನು ಈತನಿಗೆ ನೀಡುತ್ತಿದ್ದುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ಯಾನ್ಸರ್​ಗಳಿಗೆ ಸ್ಟೇಜ್ ಶೋ ಆಸೆ ತೋರಿಸಿ ವೇಶ್ಯಾವಾಟಿಕೆಗೆ ದೂಡುವ ಜಾಲ ಪತ್ತೆಐದು ಸಾವಿರ, ಹತ್ತು ಸಾವಿರ ಹೀಗೆ ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 10 ಲಕ್ಷ ಹಣವನ್ನ ಪೀಕಿದ್ದಾನೆ. ಆಕೆಯ ಬ್ಯಾಂಕ್​ನ ಖಾತೆಯ ಡೀಟೈಲ್ಸ್ ತೆಗೆದಾಗ ಇದೆಲ್ಲವೂ ಬಯಲಾಗಿದೆ‌. ಮೃತಳ ಸಹೋದರ ರಾಕೇಶ್ ಎಲ್ಲಾ ದಾಖಲೆಗಳನ್ನು ಕಲೆಹಾಕಿ ತಮ್ಮ ಅಕ್ಕನನ್ನ ಧನಂಜಯ್ ಕೊಲೆ ಮಾಡಿದ್ದಾನೆಂದು ಕಳೆದ 15 ದಿನಗಳ ಹಿಂದೆ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೇಲೂರು ಪೊಲೀಸರು ಕೊಲೆಗೆ ಪ್ರಚೋದನೆ ಅಡಿ ಕೇಸ್ ದಾಖಲಿಸಿ ಎಫ್ ಐಆರ್ ದಾಖಲಿಸುತ್ತಾರೆ.

ಇತ್ತ ಶಿಕ್ಷಕಿ ರಾಣಿ ಮೃತಪಟ್ಟು ಒಂದು ತಿಂಗಳು ಕಳೆದಿದೆ. ಆದರೆ ಶಿಕ್ಷಕ ಧನಂಜಯ್ ವಿರುದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೃತಳ ಪೋಷಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಂತ್ರಿ, ಗೃಹಸಚಿವ, ಶಿಕ್ಷಣ ಸಚಿವರು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿ ಮನವಿ ಮಾಡಿದ್ರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಗೋಗರೆಯುತ್ತಿದ್ದಾರೆ ಮೃತಳ  ಕುಟುಂಬಸ್ಥರು.

ಅಂದಚಂದದ ಸರ್ಕಾರಿ ಕೆಲಸವುಳ್ಳ ಶಿಕ್ಷಕಿ ಒಳ್ಳೆಯ ಹುಡುಗನನ್ನ ಮುದುವೆಯಾಗಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದಿತ್ತು. ಪ್ರೀತಿ ಪ್ರೇಮ ಪ್ರಣಯಕ್ಕೆ ಹೋಗಿ ಶಿಕ್ಷಕಿ ಮೃತಪಟ್ಟಿದ್ದಾಳೆ. ಒಟ್ಟಾರೆ ಈ ಪ್ರಕರಣದಲ್ಲಿ ಕಷ್ಟಪಟ್ಟು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಯುವತಿಯೊಬ್ಬಳು ಸಂಸಾರಸ್ಥ ಹಳ್ಳಿ ಮೇಷ್ರ್ಟು ಧನಂಜಯ್​ನ ಬಲೆಗೆ ಬಿದ್ದು ಪ್ರಾಣ ಬಿಟ್ಟಿದ್ದು ನಿಜಕ್ಕೂ ದುರಂತವೇ ಸರಿ.

(ವರದಿ: ಡಿಎಂಜಿ ಹಳ್ಳಿ ಅಶೋಕ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ