ಪ್ರಿಯಕರನ ಜೊತೆ ಓಡಿಹೋಗಲು ಗಂಡನನ್ನೇ ಹತ್ಯೆ ಮಾಡಲು ಹಾಸನದ ಮಹಿಳೆ ಸ್ಕೆಚ್!

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಮ್ಯಾ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಮಹಿಳೆ. ಈಕೆ ಸದ್ಯ ಮಗು ಹಾಗೂ ಪುನೀತ್​ ಜೊತೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.

news18-kannada
Updated:February 15, 2020, 10:14 AM IST
ಪ್ರಿಯಕರನ ಜೊತೆ ಓಡಿಹೋಗಲು ಗಂಡನನ್ನೇ ಹತ್ಯೆ ಮಾಡಲು ಹಾಸನದ ಮಹಿಳೆ ಸ್ಕೆಚ್!
ಹಾಸನದ ದಂಪತಿ
  • Share this:
ಹಾಸನ (ಫೆ.15): ಮೊದಲೆಲ್ಲ ಗಂಡನನ್ನು ದೇವರಂತೆ ಕಾಣುತ್ತಿದ್ದರು. ಇದೇ ಕಾರಣಕ್ಕೆ ಗಂಡನ ಕಾಲನ್ನು ಹೆಂಡತಿ ತೊಳೆಯುತ್ತಿದ್ದಳು. ಆದರೆ, ಈಗ ಗಂಡನ ಪೂಜಿಸುವ ಕಾಲ ಹೋಗಿದೆ. ಪತಿ-ಪತ್ನಿ ಇಬ್ಬರೂ ಸಮಾನರು ಎನ್ನುವ ಭಾವ ಮೂಡಿದೆ. ಈ ಮಧ್ಯೆ ಹಾಸನದಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ! ಮಹಿಳೆಯೊಬ್ಬಳು ಪ್ರಿಯಕರನ‌ ಜೊತೆ ಸೇರಿ ಗಂಡನನ್ನೇ ಮುಗಿಸಲು ಪ್ರಯತ್ನಿಸಿದ್ದಾಳೆ!

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಮ್ಯಾ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಮಹಿಳೆ. ಈಕೆ 6 ವರ್ಷಗಳ ಹಿಂದೆ ಆನಂದ್​ ಎಂಬಾತನನ್ನು ಮದುವೆ ಆಗಿದ್ದಳು. ಈಕೆಗೆ ನಾಲ್ಕು ವರ್ಷದ ಮಗು ಕೂಡ ಇತ್ತು. ಈ ಮಧ್ಯೆ ಪುನೀತ್​ ಎಂಬಾತನನ್ನು ಈಕೆ ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಹೀಗಾಗಿ ರಮ್ಯಾ ಪತಿಯನ್ನು ಹತ್ಯೆ ಮಾಡಿ ಪುನೀತ್​ ಜೊತೆ ಓಡಿ ಹೋಗುವ ಪ್ಲ್ಯಾನ್​ ಹಾಕಿಕೊಂಡಿದ್ದಳಂತೆ. ರಮ್ಯಾ ಊಟದಲ್ಲಿ ಸಾಕಷ್ಟು ನಿದ್ದೆ ಮಾತ್ರೆ ಹಾಕಿ ಗಂಡನನ್ನು ಕೊಲ್ಲಲ್ಲು ಯತ್ನಿಸಿದ್ದಾಳೆ. ನಂತರ ಮಗು ಹಾಗೂ ಪುನೀತ್​ ಜೊತೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿನ್ನು ಒಂಟಿತನದ ಶಿಕ್ಷೆ; ಕೊರೊನಾ ವೈರಸ್ ತಡೆಯಲು ಹೊಸ ನಿಯಮ ಜಾರಿ

ನಿದ್ದೆ ಮಾತ್ರೆ ಹಾಕಿದ ಊಟ ಮಾಡಿ ಆನಂದ್​ ಮೂರ್ಚೆ ಹೋಗಿದ್ದ. ಸದ್ಯ ಆನಂದ್​ನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಮ್ಯಾ ಹಾಗೂ ಪುನೀತ್​​ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ