HOME » NEWS » State » HASSAN LAB TECHNICIAN ASSAULT BY MAN FOR GIVING CORONA POSITIVE REPORT SESR

ಕೊರೋನಾ ಪಾಸಿಟಿವ್​ ಬಂದಿದ್ದಕ್ಕೆ ಲ್ಯಾಬ್​ ಟೆಕ್ನಿಶಿಯನ್​ ಮೇಲೆ ಹಲ್ಲೆ

ಕೊರೋನಾ ಸೋಂಕಿಲ್ಲದಿದ್ದರೂ ಲ್ಯಾಬ್​ ಟೆಕ್ನಿಶಿಯನ್​ ಸುಳ್ಳು ವರದಿ ನೀಡಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಸೋಂಕಿತ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. 

news18-kannada
Updated:September 29, 2020, 6:43 PM IST
ಕೊರೋನಾ ಪಾಸಿಟಿವ್​ ಬಂದಿದ್ದಕ್ಕೆ ಲ್ಯಾಬ್​ ಟೆಕ್ನಿಶಿಯನ್​ ಮೇಲೆ ಹಲ್ಲೆ
ಪ್ರಾತಿನಿಧಿಕ ಚಿತ್ರ.
  • Share this:
ಹಾಸನ (ಸೆ.29):  ವ್ಯಕ್ತಿಯೊಬ್ಬನಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದಕ್ಕೆ ಲ್ಯಾಬ್​ ಟೆಕ್ನಿಶಿಯನ್​ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.  ಜಿಲ್ಲೆಯ ಅರಸೀಕೆರೆ ತಾಲೂಕಿನ ದೊಡ್ಡಮೇಟಿ ಕುರ್ಕಿ ಗ್ರಾಮದ ಮಂಜುನಾಥ್​ ಹಲ್ಲೆ ನಡೆಸಿದ ಆರೋಪಿ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್​ ಟೆಕ್ನಿಶಿಯನ್​ ಧರಣೀಶ್​ ಸ್ವಾಬ್​ ಪರೀಕ್ಷೆ ನಡೆಸಿದ್ದರು. ಈ ವೇಳೆ ಅವರಲ್ಲಿ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ಕುರಿತು ಮಂಜುನಾಥ್​ಗೆ ಕರೆ ಮಾಡಿದ ಹಿಮ್ಸ್​ ವೈದ್ಯರು ನಿಮಗೆ ಕೊರೋನಾ ಸೋಂಕಿದೆ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಂಜುನಾಥ್​ ನನಗೆ ಯಾವುದೇ ಕೊರೋನಾ ಸೋಂಕಿಲ್ಲದಿದ್ದರೂ ಲ್ಯಾಬ್​ ಟೆಕ್ನಿಶಿಯನ್​ ಸುಳ್ಳು ವರದಿ ನೀಡಿದ್ದಾನೆ  ಎಂದು ಆರೋಪಿಸಿದ್ದಾನೆ. ಅಷ್ಟೇ ಅಲ್ಲದೇ, ತನಗೆ ಸ್ವಾಬ್​ ಟೆಸ್ಟ್​ ಮಾಡಿದ ಲ್ಯಾಬ್​ ಟೆಕ್ನಿಶಿಯನ್​ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. 

hassan Lab technician assault by man for giving corona positive report corona corona effect, corona patient, corona positive, corona symptom, corona case in Karnataka, corona cases in india, corona pandemic, world suffering from corona pandemic, corona vaccine,  ಕೊರೋನಾ ಪಾಸಿಟಿವ್​, ಕೊರೋನಾ ಸೋಂಕು, ಕೊರೋನಾ ಲಸಿಕೆ
ವ್ಯಕ್ತಿಯ ಹಲ್ಲೆ ಖಂಡಿಸಿ ಪ್ರತಿಭಟನೆಗೆ ಮುಂದಾದ ಸಿಬ್ಬಂದಿ


ಸೆ.17ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಧರಣೀಶ್​ ಎಂಬುವವರು ಸ್ವಾಬ್​ ಪರೀಕ್ಷೆ ನಡೆಸಿದ್ದರು.  ಧರಣೀಶ್​ ಉದ್ದೇಶಪೂರ್ವಕವಾಗಿ ಸುಳ್ಳು ವರದಿ ನೀಡಿದ್ದಾರೆ. ನನಗೆ ಯಾವುದೇ ಸೋಂಕು ಇಲ್ಲ. ಸುಳ್ಳು ವರದಿ ನೀಡಿದ್ದರಿಂದ ಹೀಗಾಗಿದೆ ಎಂದು  ಹಲ್ಲೆ ನಡೆಸಿದ್ದಾನೆ. ಇದರಿಂದ ಧರಣೀಶ್​ ಕಣ್ಣಿಗೆ ಗಾಯವಾಗಿದ್ದು, ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಆತನ ಹುಡುಕಾಟಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.

ಆರೋಗ್ಯ ಸಿಬ್ಬಂದಿಯಿಂದ ಪ್ರತಿಭಟನೆ:

ವ್ಯಕ್ತಿಯ ಘಟನೆ ಖಂಡಿಸಿ ಕುರ್ಕಿ ಗ್ರಾಮದ ಆಸ್ಪತ್ರೆಯ ಸಿಬ್ಬಂದಿಗಳು ಕೆಲಕಾಲ  ಪ್ರತಿಭಟನೆ ನಡೆಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ವೈದ್ಯರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯ ಆಧಿಕಾರಿ ಡಾ. ನಾಗಪ್ಪ, ಆಸ್ಪತ್ರೆಯ ಸಿಬ್ಬಂದಿಗಳನ್ನು ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.
Published by: Seema R
First published: September 29, 2020, 6:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories