ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಹತ್ತಿರವಾಗುತ್ತಿದ್ದಂತೆ ಒಂದೊಂದೇ ಜಿಲ್ಲೆಯಲ್ಲಿ ಅಖಾಡ ರಣರಂಗವಾಗುತ್ತಿದೆ. ಇವರನ್ನು ಬಿಟ್ಟು ಅವರು, ಅವರನ್ನು ಬಿಟ್ಟು ಇವರು ಅನ್ನೋಥರ ಕ್ಷೇತ್ರ ಸಮರ ಶುರುವಾಗಿದೆ. ಹಾಸನ (Hassan), ರಾಮನಗರ (Ramanagara) ಈಗ ಬಳ್ಳಾರಿಗೆ (Bellary) ಶ್ರೀರಾಮುಲು (Sriramulu) ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಎಲೆಕ್ಷನ್ ಕಾವೇರಿಸಿದ್ದಾರೆ. ಅಖಾಡದಲ್ಲಿ ತಂತ್ರ ಪ್ರತಿತಂತ್ರಗಳು ಜೋರಾಗಿದ್ದು, ಜೆಡಿಎಸ್ (JDS), ಬಿಜೆಪಿ (BJP), ಕಾಂಗ್ರೆಸ್‌ನಲ್ಲಿ (Congress) ದಿನಕ್ಕೊಂದು ಕ್ಷಣಕ್ಕೊಂದು ಬೆಳವಣಿಗೆಗಳಾಗುತ್ತಿದೆ. ಇವುಗಳು ರಾಜ್ಯ ರಾಜಕಾರಣವನ್ನು ಮತ್ತಷ್ಟು ಮಗದಷ್ಟು ರಂಗೇರುವಂತೆ ಮಾಡುತ್ತಿವೆ.
ಭವಾನಿಗೂ ಇಲ್ಲ, ಸ್ವರೂಪ್‌ಗೂ ಇಲ್ಲ ಟಿಕೆಟ್!
ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಾಸನದಲ್ಲಿ ಮೂರನೇ ಅಭ್ಯರ್ಥಿ ಆದರೂ ಆಗಬಹುದು ಅಂತ ಬಾಂಬ್ ಹಾಕಿದ್ದರು. ಹೆಚ್ಡಿಕೆ ಮಾತು ಹಾಸನ ಟಿಕೆಟ್ ಆಕಾಂಕ್ಷಿಗಳಾಗಿದ್ದ ಭವಾನಿ ರೇವಣ್ಣ, ಸ್ವರೂಪ್ಗೆ ದಿಗ್ಬ್ರಾಂತಿ ಮೂಡಿಸಿದೆ.
ಇದನ್ನೂ ಓದಿ: Araga Jnanendra: ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಡಿಕೆಶಿ ಕೆಂಡ; ಕೆಪಿಸಿಸಿ ಅಧ್ಯಕ್ಷರಿಗೆ ಗೃಹ ಸಚಿವ ಆರಗ ತಿರುಗೇಟು
ಅಂದಹಾಗೇ, ಮೂರನೇ ಸಂಭಾವ್ಯ ಅಭ್ಯರ್ಥಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ ರಾಜೇಗೌಡ ಎನ್ನುವ ಮಾತು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ರಾಜೇಗೌಡರನ್ನು ಕೇಳಿದರೆ ವರಿಷ್ಠರು ಟಿಕೆಟ್ ಕೊಟ್ಟರೆ ನಾನು ಸ್ಪಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಅರಸೀಕೆರೆಯಲ್ಲಿ ಕುಮಾರಸ್ವಾಮಿ ಹೊಸ ಆಟ!
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುತ್ತಿದ್ದಾರೆ. ಆದ್ದರಿಂದ ಆ ಸ್ಥಾನಕ್ಕೆ ಬಾಣಾವರ ಅಶೋಕ್‌ಗೆ ಜೆಡಿಎಸ್ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಜೆಡಿಎಸ್ ಗೆಲುವಿಗಾಗಿ ಕುಮಾರಸ್ವಾಮಿ ಮತ್ತೊಂದು ಪ್ಲಾನ್ ಮಾಡಿದ್ದು, ಮಾಜಿ ಶಾಸಕ ಹಾಗೂ ಬಸವರಾಜ್ ಪುತ್ರ ಹಾಗೂ ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ.ಜಿ.ಶಶಿಧರ್‌ಗೆ ಗಾಳಹಾಕಿದ್ದಾರೆ. ಶಶಿಧರ್ ಪಕ್ಷಕ್ಕೆ ಬಂದರೆ ಲಿಂಗಾಯತ ಮತ ಸೆಳೆಯಬಹುದು ಅನ್ನೋದು ಕುಮಾರಸ್ವಾಮಿ ಲೆಕ್ಕಾಚಾರ ಮಾಡಿದ್ದಾರೆ.
ರಾಮನಗರದಲ್ಲಿ ನಿಖಿಲ್‌ಗೆ ಬಿಗ್ ರಿಲೀಫ್!
ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧಿಸುವ ರಾಮನಗರದಲ್ಲಿ ಕಾಂಗ್ರೆಸ್ ನಿಂದ ಸಂಸದ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಾರೆ ಅನ್ನುವ ಡಿಕೆ ಶಿವಕುಮಾರ್ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಇವತ್ತು ಪ್ರತಿಕ್ರಿಯಿಸಿರುವ ಡಿಕೆ ಸುರೇಶ್ ನನಗೆ ರಾಜ್ಯ ರಾಜಕಾರಣದ ಆಸಕ್ತಿ ಇಲ್ಲ. ಬೈ ಎಲೆಕ್ಷನ್ಗೆ ಜನರ ಹಣ ಹಾಳು ಮಾಡುವ ಮನಸ್ಸಿಲ್ಲ ಅಂದಿದ್ದು ನಿಖಿಲ್ ಕುಮಾರಸ್ವಾಮಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
ರೆಡ್ಡಿ ಬ್ರದರ್ಸ್ ಜೊತೆ ಬಳ್ಳಾರಿ ಅಖಾಡಕ್ಕೆ ರಾಮುಲು
ಹಾಸನ, ರಾಮನಗರದಂತೆ ಗಣಿನಾಡು ಬಳ್ಳಾರಿಯಲ್ಲೂ ಚುನಾವಣೆ ಕಾವು ಜೋರಾಗುತ್ತಿದೆ. ಬಳ್ಳಾರಿ ನಗರ ಅಸೆಂಬ್ಲಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಕಣಕ್ಕಿಳಿದು ಮೈದುನ ಸೋಮಶೇಖರರೆಡ್ಡಿ ವಿರುದ್ಧವೇ ಸಮರ ಸಾರಿದ್ದಾರೆ. ಇನ್ನೊಂದು ಕಡೆ ಬಳ್ಳಾರಿ ಬಿಜೆಪಿಗೆ ಶಕ್ತಿ ತುಂಬಲು ಶ್ರೀರಾಮುಲು ಬಳ್ಳಾರಿ ಗ್ರಾಮೀಣದಿಂದ ಕಣಕ್ಕೆ ಇಳಿಯುವುದಾಗಿ ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಅನುಮಾನಾಸ್ಪದ ರೀತಿಯಲ್ಲಿ ನವವಧು ಸಾವು; ದಲಿತ ಯುವತಿ ಎಂದು ಕೊಲೆ ಆರೋಪ
ಈ ಮೂಲಕ ಮಾಜಿ ಆಪ್ತ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ವಿರುದ್ಧ ರಾಮುಲು ಅಖಾಡಕ್ಕಿಳಿಯೋದು ಫಿಕ್ಸ್ ಆಗಿದೆ. ರಾಜಕೀಯ ಅಖಾಡದಲ್ಲಿ ತಂತ್ರ ಪ್ರತಿತಂತ್ರ ಜೋರಾಗಿ ನಡೆಯುತ್ತಿದ್ದು, ಯುಗಾದಿ ಬಳಿಕ ಮತ್ತಷ್ಟು ರಂಗೆರುವುದರಲ್ಲಿ ಸಂಶಯವೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ