ಬೆಂಗಳೂರು: ಹಾಸನ ಟಿಕೆಟ್ ಗೊಂದಲಕ್ಕೆಲ್ಲಾ ನಾಳೆ ತೆರೆ ಎಳಿತೀನಿ ಅಂತ ಇವತ್ತು ಶೃಂಗೇರಿಯಲ್ಲಿ ಕುಮಾರಸ್ವಾಮಿ ಹೇಳಿದ್ದರು. ಹಾಸನ ಕ್ಷೇತ್ರದ ಪ್ರಮುಖರ ಸಭೆ ಕರೆದಿದ್ದೀನಿ ಎಂದು ತಿಳಿಸಿದ್ದರು. ಆದರೆ ರೇವಣ್ಣ ಸಭೆ ಬಗ್ಗೆ ನನಗೇನೂ ಗೊತ್ತಿಲ್ಲ ಅಂತಿದ್ದಾರೆ. ಈ ಮಧ್ಯೆ ನಾಳೆ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲ್ಲ. ದೇವೇಗೌಡರೆ ಬೇಡ ಅಂದಿದ್ದಾರೆ ಅಂತ ಸಂಸದ ಪ್ರಜ್ವಲ್ ರೇವಣ್ಣ ಹೇಳಿರುವುದು ಜೆಡಿಎಸ್ ಒಳಗೆ ಏನೇನಾಗ್ತಿದೆ ಅನ್ನೋ ಗೊಂದಲ ಸೃಷ್ಟಿಯಾಗಿದೆ. ಈ ನಡುವೆ ಕೊಪ್ಪದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು, ನಾಳೆ ನಡೆಯಬೇಕಿದ್ದ ಸಭೆ ರದ್ದು ಬಗ್ಗೆ ಮಾಹಿತಿ ಪಡೆಯುತ್ತೇನೆ. ಸಭೆ ರದ್ದಾದರೂ ನನ್ನ ನಿರ್ಧಾರ ಬದಲಾಗುವುದಿಲ್ಲ. ಸಭೆ ಮುಂದೂಡಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ತಾವೇ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯೋದಾಗಿ ಹೇಳಿದ ಜೆಡಿಎಸ್ ವರಿಷ್ಠರು
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲ್ಲೆಯಲ್ಲಿ ಫೆಬ್ರವರಿ 26 ರಂದು ನಿಗಧಿಯಾಗಿದ್ದ ಸಭೆ ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ 300 ಪ್ರಮುಖ ನಾಯಕರ ಸಭೆ ಕರೆದಿದ್ದರು.
ಸಭೆ ನಡೆದರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಯಾವುದೆ ಸಭೆ ನಡೆಸದಂತೆ ಸಭೆಯನ್ನೇ ರದ್ದು ಮಾಡಲಾಗಿದೆ ಎನ್ನಲಾಗಿದೆ.
ಇನ್ನು, ಒಂದು ವಾರದ ಬಳಿಕ ತಾವೇ ಹಾಸನಕ್ಕೆ ಬಂದು ಸ್ವತಃ ತಾವೇ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯೋದಾಗಿ ಜೆಡಿಎಸ್ ವರಿಷ್ಠರು ಹೇಳಿದ್ದಾರಂತೆ. ಇತ್ತ ಇಂದು ಬೆಳಗ್ಗೆ ಸಭೆ ಬಗ್ಗೆ ಮಾಹಿತಿ ನೀಡಿದ್ದ ಕುಮಾರಸ್ವಾಮಿ ಅವರು, ನಾಳೆ ಸಂಜೆ 4:30ಕ್ಕೆ ಬೆಂಗಳೂರಿನ ಜೆಪಿ ಭವನದಲ್ಲಿ ಹಾಸನ ಕ್ಷೇತ್ರದ ಮುಖಂಡರ ಸಭೆ ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಟಿಕೆಟ್ ಆಕಾಂಕ್ಷಿ ಸ್ವರೂಪ್ ಪರವಾಗಿ ಬ್ಯಾಟ್ ಬೀಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಮತ್ತೊಂದು ಗುಂಪಿನಲ್ಲಿ ಆತಂಖ ಸೃಷ್ಟಿಯಾಗಿತ್ತು. ಹಾಗಾಗಿಯೇ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.
ಸಭೆ ರದ್ದಾದರೂ ನನ್ನ ನಿರ್ಧಾರ ಬದಲಾಗುವುದಿಲ್ಲ
ಇದರ ನಡುವೆ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಬ್ಯುಸಿಯಾಗಿರುವ ಹೆಚ್ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಹಿತ ಮುಖ್ಯ. ನಿಗದಿಯಾಗಿದಗದ ಸಭೆ ರದ್ದು ಬಗ್ಗೆ ಮಾಹಿತಿ ಪಡೆಯುತ್ತೇನೆ. ಸಭೆ ರದ್ದಾದರೂ ನನ್ನ ನಿರ್ಧಾರ ಬದಲಾಗುವುದಿಲ್ಲ. ಸಭೆ ಮುಂದೂಡಿರುವುದು ನನಗೆ ಗೊತ್ತಿಲ್ಲ. ಯಾರಿಂದ ಸಭೆ ಮುಂದೂಡಲ್ಪಟ್ಟಿದೆ ತಿಳಿದು ಮಾಹಿತಿ ನೀಡುತ್ತೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ನನ್ನ ಕಾರ್ಯಕರ್ತರನ್ನ ಗೌರವಿಸುತ್ತೇನೆ, ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ಹಾಸನ ರಾಜಕೀಯದಲ್ಲಿ ಮೂಗು ತೂರಿಸುವ ಪರಿಸ್ಥಿತಿ ಎದುರಾಗಿದೆ
ಬಿಜೆಪಿಯ ದುರಂಕಾರದ ಅಭ್ಯರ್ಥಿ ನಮ್ಮ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುವೆ. ದುರಂಕಾರದ ಅಭ್ಯರ್ಥಿಯ ವಿರುದ್ಧ ಸಾಮಾನ್ಯ ಕಾರ್ಯಕರ್ತರ ನಿಲ್ಲಿಸಿ ಗೆಲ್ಲಿಸುವ ಸಾಮರ್ಥ್ಯವಿದೆ. ಏನೇ ಆಗಲಿ ನನ್ನ ಕಾರ್ಯಕ್ರಮವನ್ನು ನಾನು ಮುಂದುವರಿಸುತ್ತೇನೆ. ಸಭೆ ಮುಂದೂಡಿಕೆ ಬಗ್ಗೆ ನಾನು ತಿಳಿಯುತ್ತೇನೆ. ಹಾಸನ ಟಿಕೆಟ್ ಹಂಚಿಕೆ ಬಗ್ಗೆ ಯಾರಿಗೂ ಆತಂಕ ಬೇಡ. ನನ್ನ ಹೋರಾಟದ ಬಗ್ಗೆ ಎಲ್ಲಿಯೂ ಲೋಪ ಬರಬಾರದು.
ಇದನ್ನೂ ಓದಿ: Bengaluru: ಅಕ್ರಮ 'A' ಖಾತಾದಾರರಿಗೆ ಬಿಬಿಎಂಪಿ ಶಾಕ್; 'B' ಖಾತಾ ಬದಲು 'A' ಖಾತಾ ಪಡೆದಿದ್ರೆ ಗುನ್ನಾ!
ಇಲ್ಲಿಯವರೆಗೂ ಹಾಸನದ ರಾಜಕಾರಣದ ಒಳಗೆ ಇಂಟರ್ಫಿಯರ್ ಆಗಿಲ್ಲ. ಆದರೂ ಕೂಡ ಇಂದು ಮೂಗು ತೂರಿಸುವ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಉಳಿಸಬೇಕಾಗಿದೆ. ದೇವೇಗೌಡರ ಹೆಸರು ಉಳಿಸಬೇಕಾಗಿದೆ ಎಂದು ಹೇಳಿದರು. ಇದೇ ವೇಳೆ ಸಭೆಯಲ್ಲಿ ಕುರಿತು ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾರು ಪತ್ರ ಬರೆದಿದ್ದಾರೆ ಯಾರು ಬರೆಸಿಕೊಂಡಿದ್ದಾರೆ ಅವರನ್ನೇ ಕೇಳಿ. ಈ ವಿಚಾರದಲ್ಲಿ ಯಾರೂ ಗೊಂದಲ ಮೂಡಿಸುತ್ತಿದ್ದಾರೆ? ಸಭೆಯ ಬಗ್ಗೆ ಬೆಳಗ್ಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ