ಸರಸದ ವೇಳೆ ಗೆಳೆಯನ ಕೊಂದು ಬೆತ್ತಲಾಗಿ ಓಡಿದ ಹಾಸನದ ಯುವತಿಯ ಬಂಧನ

ಡಿ. 1ರಂದು ರಾತ್ರಿ ಮಂಜು ಮತ್ತು ವಸಂತ ಒಟ್ಟಿಗೇ ಕುಡಿದು, ತಿಂದು ಸರಸದಲ್ಲಿ ತೊಡಗಿರುವಾಗಲೇ ವಸಂತ ಹಲ್ಲೆ ನಡೆಸಿದ್ದಾಳೆ. ಬೆತ್ತಲಾಗಿದ್ದ ಮಂಜನ ತಲೆಗೆ ದೊಣ್ಣೆಯಿಂದ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದ.

news18-kannada
Updated:December 4, 2019, 10:00 AM IST
ಸರಸದ ವೇಳೆ ಗೆಳೆಯನ ಕೊಂದು ಬೆತ್ತಲಾಗಿ ಓಡಿದ ಹಾಸನದ ಯುವತಿಯ ಬಂಧನ
ಪ್ರಾತಿನಿಧಿಕ ಚಿತ್ರ
  • Share this:
ಹಾಸನ (ಡಿ. 4): ಪ್ರೇಮಿಗಳಿಬ್ಬರೂ ಸರಸವಾಡುತ್ತಿದ್ದಾಗ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳ ಶುರುವಾಗಿದೆ. ಆ ಜಗಳ ತಾರಕಕ್ಕೇರಿದ್ದರಿಂದ ಗೆಳೆಯನ ಮೇಲೆ ಕೋಪಗೊಂಡ ಯುವತಿ ಆತನನ್ನು ಕೊಂದು ಬೆತ್ತಲೆಯಾಗೇ ಓಡಿಹೋದ ಘಟನೆ ಹಾಸನದಲ್ಲಿ ನಡೆದಿದೆ.

ಡಿ. 1ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಈ ಘಟನೆ ನಡೆದಿದೆ. ಸರಸವಾಡುವಾಗ ಜಗಳ ಉಂಟಾದ ಕಾರಣ ಬೆತ್ತಲೆಯಾಗಿ ಮಲಗಿದ್ದ ಗೆಳೆಯನನ್ನು ಹೊಡೆದು ಕೊಂದ ಯುವತಿಗೆ ನಂತರ ತನ್ನ ತಪ್ಪಿನ ಅರಿವಾಗಿದೆ. ತಾನು ಸಿಕ್ಕಿಹಾಕಿಕೊಂಡರೆ ಕಷ್ಟವೆಂದು ಗಾಬರಿಯಲ್ಲಿ ಆಕೆ ಬೆತ್ತಲೆಯಾಗೇ ಓಡಿ ಪರಾರಿಯಾಗಿದ್ದಾಳೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

3 ದಿನಗಳ ಹಿಂದೆ ನಡೆದ ಕೊಲೆಯ ತನಿಖೆ ಕೈಗೊಂಡಿದ್ದ ಸಿಪಿಐ ಅಶೋಕ್ ನೇತೃತ್ವದ ತಂಡ ಈ ಹತ್ಯೆಯ ಹಿಂದಿನ ಉದ್ದೇಶವನ್ನು ಭೇದಿಸಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ನಿವಾಸಿ ಮಂಜು (43) ಕೊಲೆಯಾದ ವ್ಯಕ್ತಿ. ಹೊಳೆನರಸೀಪುರದ ವಸಂತ ಎಂಬಾಕೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಈತ ಆಕೆಯಿಂದಲೇ ಹತ್ಯೆಯಾಗಿರುವ ಅನುಮಾನ ವ್ಯಕ್ತವಾಗಿದೆ.

ಹನಿಟ್ರ್ಯಾಪ್​ ಪ್ರಕರಣ; ಬೆಳಗಾವಿ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿಯ ಗ್ಯಾಂಗ್ ಬಂಧನ

ಏನಿದು ಘಟನೆ?:
ಡಿ. 1ರಂದು ರಾತ್ರಿ ಮಂಜು ಮತ್ತು ವಸಂತ ಒಟ್ಟಿಗೇ ಕುಡಿದು, ತಿಂದು ಸರಸದಲ್ಲಿ ತೊಡಗಿರುವಾಗಲೇ ಮಂಜನ ಮೇಲೆ ವಸಂತ ಹಲ್ಲೆ ನಡೆಸಿದ್ದಾಳೆ. ಇಬ್ಬರೂ ಬೆತ್ತಲಾಗಿರುವಾಗಲೇ ದೊಣ್ಣೆಯಿಂದ ಮಂಜುವಿನ ತಲೆಗೆ ಬಲವಾಗಿ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದ. ಡಿ. 2ರಂದು ಪುರಸಭೆ ಮಳಿಗೆಯಲ್ಲಿ ಮಂಜನ ಮೃತದೇಹ ಬೆತ್ತಲೆಯಾಗಿ ಪತ್ತೆಯಾಗಿತ್ತು. ಈ ಬಗ್ಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಕೊಲೆ ನಡೆದ ರಾತ್ರಿ ಗಾಬರಿಯಿಂದ ವಸಂತ ಬೆತ್ತಲಾಗಿ ಓಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಆರೋಪಿ ವಸಂತಳನ್ನು ಬಂಧಿಸಿದ್ದಾರೆ.
First published: December 4, 2019, 10:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading