ಸುಟ್ರೆ ಬೂದಿ ಆಗ್ತೀನಿ, ಹೂತ್ರೆ ಕೊಳೆತು ಹೋಗ್ತೀನಿ, ಅಂಗಾಂಗ ದಾನ ನೀಡಿ: ವಿಡಿಯೋ ಮಾಡಿ Engineering Student ಆತ್ಮಹತ್ಯೆ

ನನ್ನ ಅಂತ್ಯಕ್ರಿಯೆಯಾದ ಬಳಿಕ ನನ್ನ ಆಸೆಯಂತೆ ಅನಾಥ ಮಕ್ಕಳನ್ನು ಬೆಳೆಸಿ. ನೀವು ಇಷ್ಟು ದಿನ ಕಷ್ಟಪಟ್ಟು ದುಡಿದಿದ್ದೀರಿ. ಇಂದು ನೀವೂ ತೋರಿಸಿದ ಪ್ರೀತಿಯನ್ನು ನೆನಪು ಮಾಡಿಕೊಂಡರೆ ನನ್ನ ಕಣ್ಣುಗಳು ತುಂಬುತ್ತವೆ. ನನ್ನ ಸಾವಿನ ಬಳಿಕ ನೀವು ಹೊಸ ಜೀವನ ಕಟ್ಟಿಕೊಳ್ಳಿ.

ಇಂಜಿನೀಯರಿಂಗ್ ವಿದ್ಯಾರ್ಥಿ

ಇಂಜಿನೀಯರಿಂಗ್ ವಿದ್ಯಾರ್ಥಿ

  • Share this:
ಹಾಸನ: ಸುಟ್ಟರೆ ಬೂದಿ ಆಗುತ್ತೇನೆ.ಮಣ್ಣಲ್ಲಿ ಹೂತರೆ ದೇಹ ಕೊಳೆತು ಹೋಗುತ್ತದೆ. ಹಾಗಾಗಿ ನನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ವಿಡಿಯೋ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ(Hassan)ದಲ್ಲಿ ನಡೆದಿದೆ. ಸಂದೇಶ್ ಆತ್ಮಹತ್ಯೆಗೆ ಶರಣಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕೆಂದು ಸಂದೇಶ್ ಮನವಿ ಮಾಡಿಕೊಂಡಿದ್ದಾನೆ. ವಿಡಿಯೋ (Video) ತುಂಬೆಲ್ಲ ಶಿಕ್ಷಣ ವ್ಯವಸ್ಥೆ (Education System) ಸುಧಾರಣೆ ಆಗಬೇಕೆಂದು ಯುವಕ ಆತ್ಮಹತ್ಯೆಗೆ ಮುನ್ನ ಒತ್ತಾಯಿಸಿದ್ದಾನೆ. ಸೂಸೈಡ್ ಮುನ್ನ ವಿಡಿಯೋವನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾನೆ.

ಸಂದೇಶ್ ವಿಡಿಯೋದಲ್ಲಿ ಹೇಳಿದ್ದೇನು?

ವಿಡಿಯೋದಲ್ಲಿ ಸ್ನೇಹಿತೆಯ ನೀಟ್ ಪರೀಕ್ಷಗೆ ಒಳ್ಳೆಯದಾಗಲಿ. ನಿನ್ನ ಗುರಿಗಳು ಎಲ್ಲವೂ ಸಾಕಾರವಾಗಲಿ ಎಂದು ಹಾರೈಸುತ್ತೇನೆ. ನಾನು ನಿನ್ನನ್ನು ಕೇವಲ ಸ್ನೇಹಿತೆಯಾಗಿ ನೋಡಿಲ್ಲ. ನಿನ್ನನ್ನು ಕುಟುಂಬದ ಸದಸ್ಯೆಯಂತೆ ನೋಡಿಕೊಂಡಿದ್ದೇನೆ. ಮುಂದೆ ನನ್ನ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನ ಮೇಲಿದೆ. ನಿನ್ನ ಅಪ್ಪ-ಅಮ್ಮನ ರೀತಿಯಲ್ಲಿ ನೋಡಿಕೊಳ್ಳುತ್ತೀಯಾ ಎಂದು ತಿಳಿದುಕೊಳ್ಳುತ್ತೇನೆ. ನನ್ನ ಅಂತ್ಯಕ್ರಿಯೆ ಬಳಿಕ ಅಪ್ಪ-ಅಮ್ಮ ನೀವೂ ಧೈರ್ಯ ಕಳೆದುಕೊಳ್ಳದೇ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಒಂದೆರಡು ಅನಾಥ ಮಕ್ಕಳನ್ನು ತಂದು ಮನೆಯಲ್ಲಿ ಸಾಕಿ. ಆ ಮಕ್ಕಳಲ್ಲಿ ನಾನು ಜೀವಂತವಾಗಿರುತ್ತೇನೆ. ಬದುಕಿದ್ದ ವ್ಯಕ್ತಿ ಸತ್ತರೆ ಯಾರೂ ನೆನಪು ಮಾಡಿಕೊಳ್ಳಲ್ಲ. ಬದಲಾವಣೆ ತಂದೆ ಮಾತ್ರ ಸಮಾಜ ಆತನನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ನಿಮ್ಮ ಕನಸನ್ನು ನಾನು ಈಡೇರಿಸಲು ಆಗುತ್ತಿಲ್ಲ ಎಂಬುದನ್ನು ಈ ವಿಡಿಯೋ ಮೂಲಕ ನನ್ನ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ:  Congress Meeting: ಪೆಟ್ರೋಲ್​ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್​ ಸಜ್ಜು; ಇಂದು ರೂಪುರೇಷ ಸಭೆ

ಆ ಬದಲಾವಣೆಗೆ ನಾನು ಬುನಾದಿ ಆಗ್ತೀನಿ

ನನ್ನ ಅಂತ್ಯಕ್ರಿಯೆಯಾದ ಬಳಿಕ ನನ್ನ ಆಸೆಯಂತೆ ಅನಾಥ ಮಕ್ಕಳನ್ನು ಬೆಳೆಸಿ. ನೀವು ಇಷ್ಟು ದಿನ ಕಷ್ಟಪಟ್ಟು ದುಡಿದಿದ್ದೀರಿ. ಇಂದು ನೀವೂ ತೋರಿಸಿದ ಪ್ರೀತಿಯನ್ನು ನೆನಪು ಮಾಡಿಕೊಂಡರೆ ನನ್ನ ಕಣ್ಣುಗಳು ತುಂಬುತ್ತವೆ. ನನ್ನ ಸಾವಿನ ಬಳಿಕ ನೀವು ಹೊಸ ಜೀವನ ಕಟ್ಟಿಕೊಳ್ಳಿ. ಪ್ರತಿಯೊಂದು ಬದಲಾವಣೆಗೂ ಬುನಾದಿ ಹಾಕಬೇಕಾಗುತ್ತದೆ. ಇಂದು ಆ ಬುನಾದಿಯನ್ನು ನಾನು ಹಾಕುತ್ತಿದ್ದೇನೆ. ಆ ಬದಲಾವಣೆಗೆ ನಾನು ಕಾರಣ ಆಗಿದ್ದೇನೆ ಎಂಬ ಆತ್ಮತೃಪ್ತಿ ನನಗಿರುತ್ತದೆ. ಪ್ರತಿ ಜನ್ಮದಲ್ಲೂ ಇದೇ ನಾಡಿನಲ್ಲಿ ಹುಟ್ಟಿಸುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮುಂದಿನ ಜನ್ಮದಲ್ಲಿಯೂ ನೀವೇ ನನ್ನ ಅಪ್ಪ-ಅಮ್ಮ ಆಗಿರಲಿ ಎಂದು ಕೇಳಿಕೊಳ್ಳುತ್ತೇನೆ. ಇದೇ ಕುಟುಂಬದ ಜೊತೆ ಮತ್ತೆ ಹುಟ್ಟಿ ಬರುತ್ತೇನೆ. ಮುಂದಿನ ಜನ್ಮದಲ್ಲಿಯೂ ಇದೇ ಪ್ರೀತಿ, ವಾತ್ಸಲ್ಯ ತೋರಿಸುತ್ತೀರಿ ಎಂದು ಭಾವಿಸುತ್ತೇನೆ. ನನ್ನ ಎಲ್ಲ ಫ್ರೆಂಡ್ಸ್ ಗಳಿಗೂ ಒಳ್ಳೆಯದು ಆಗಲಿ ಎಂದು ಹಾರೈಸುತ್ತೇನೆ.

ಇದನ್ನೂ ಓದಿ:  Shops Near Schools: ಶಾಲೆಗಳ ಪಕ್ಕ ಅಂಗಡಿ ಇಟ್ಟುಕೊಂಡಿದ್ದರೆ ಎಚ್ಚರ; ಈ ವಸ್ತುಗಳನ್ನು ಮಾರಿದ್ರೆ ಬೀಳುತ್ತೆ ದಂಡ!

ಈ ವಿಡಿಯೋ ಶೇರ್ ಮಾಡಿ

ನಾನು ಸತ್ತ ಬಳಿಕ ಈ ವಿಡಿಯೋ ನಿಮಗೆ ಸಿಗುತ್ತೆ. ಈ ವಿಡಿಯೋವನ್ನು ಎಲ್ಲ ಟಿವಿ, ನ್ಯೂಸ್ ಚಾನೆಲ್ ಗಳಲ್ಲಿ ಪ್ರಸಾರ ಮಾಡಿ ಶಿಕ್ಷಣ ವ್ಯವಸ್ಥೆಗೆ ಬದಲಾಯಿಸಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕು. ಬೋರ್ಡಿಂಗ್ ಸ್ಕೂಲ್ ನಲ್ಲಿದ್ದಾಗಲೂ ಅಪ್ಪ-ಅಮ್ಮನನ್ನು ಮಿಸ್ ಮಾಡಿಕೊಂಡಿದ್ದೆ. ಐ ಲವ್ ಯು ಅಪ್ಪ-ಅಮ್ಮ, ನಿಮ್ಮನ್ನು ಇಂದೂ ಮಿಸ್ ಮಾಡಿಕೊಳ್ಳುತ್ತೇನೆ. ನನಗೆ ಒಳ್ಳೆಯ ಸ್ನೇಹ ನೀಡಿದ ಗೆಳತಿಗೆ ಧನ್ಯವಾದಗಳು. ಈ  ವಿಡಿಯೋವನ್ನು ಎಲ್ಲ ಶಾಲೆಗಳಲ್ಲಿ ಪ್ರಸಾರ ಮಾಡಿ ಎಂದು ಸಂದೇಶ ವಿನಂತಿ ಮಾಡಿಕೊಂಡಿದ್ದಾನೆ.
Published by:Mahmadrafik K
First published: