ಹಾಸನ: ಜಿಲ್ಲೆಯ ಬೇಲೂರು ಶ್ರೀ ಚನ್ನಕೇಶವಸ್ವಾಮಿ (Sri Channakeshava Temple) ರಥೋತ್ಸವದ (Chariot) ವೇಳೆ ಕುರಾನ್ ಪಠಣಕ್ಕೆ (Quran Reading) ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು (Hindu Organizations ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ (Hassan DC MS Archana), ಕುರಾನ್ ಪಠನೆ ಹೊಸದಾಗಿ ಸೃಷ್ಟಿಯಾಗಿರುವಂತದ್ದಲ್ಲ. 1929ರಿಂದಲೂ ಈ ಪದ್ದತಿ ಇದೆ. ಆದು ಲಿಖಿತ ದಾಖಲೆಗಳಲ್ಲಿಯೂ ಸೇರಿದ್ದು, ಮೌಲ್ವಿಗಳು ಬಂದು ಮುಜ್ರೆ ಸರ್ವಿಸ್ ಅಂತ ಮಾಡ್ತಾರೆ. ಅದು 1929 ರಿಂದ ಇರುವಂತಹದ್ದು ಎಂದು ಹೇಳಿದರು. ಕಳೆದ ವರ್ಷ ಇದೇ ತರಹ ವಿವಾದವಾಗಿತ್ತು, ಆ ಬಗ್ಗೆ ಮುಜರಾಯಿ ಇಲಾಖೆಗೆ (Department Of Muzrai) ಸ್ಪಷ್ಟನೆ ಕೇಳಲಾಗಿತ್ತು. ಹಿಂದಿನ ಪದ್ದತಿ ಏನು ನಡೆದುಕೊಂಡು ಬಂದಿದೆ ಅದನ್ನು ಬದಲಾವಣೆ ಮಾಡೋದು ಬೇಡ ಅಂತ ಹೇಳಿದ್ದರು.ಅದರಂತೆ ಕಳೆದ ವರ್ಷ ಪದ್ದತಿ ಪ್ರಕಾರ ನಡೆದುಕೊಂಡು ಹೋಗಿದೆ ಎಂದು ಹೇಳಿದ್ದಾರೆ.
ಈ ವರ್ಷ ಮತ್ತೆ ಪದ್ದತಿ ಬದಲಾಯಿಸಿ ಅಂತ ಕೇಳಿದ್ದಾರೆ. ದಿಢೀರ್ ಎಂದು ಇಂತಹ ಪದ್ದತಿಗಳನ್ನು ಬದಲಾವಣೆ ಮಾಡಲು ಆಗಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೆವು. ಸೋಮವಾರ ಹಿಂದೂ ಸಂಘಟನನೆಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿದ್ದಾರೆ. ಆ ವೇಳೆ ಯಾರೋ ಒಬ್ಬ ಯುವಕ ಘೋಷಣೆ ಕೂಗಿದ ಅನ್ನುವ ಕಾರಣಕ್ಕೆ ಘರ್ಷಣೆ ಶುರುವಾಗಿದೆ. ತಕ್ಷಣಕ್ಕೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆನಂತರ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ ಅದನ್ನು ಸದ್ಯಕ್ಕೆ ಸರಿಪಡಿಸಲಾಗಿದೆ ಎಂದು ತಿಳಿಸಿದರು.
ಆಗಮ ಪಂಡಿತರ ಆಗಮನ
ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ದತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಬರಲ್ಲ. ಪರಿಸ್ಥಿತಿ ಏನಿದೆ ಅಂತ ಮುಜರಾಯಿ ಇಲಾಖೆಗೂ ತಿಳಿಸಿದ್ದೇವೆ. ಪರಿಸ್ಥಿತಿ ಏನು ಎಂದು ತಿಳಿದುಕೊಳ್ಳಲು ಆಗಮ ಪಂಡಿತರು ಬರುತ್ತಿರುವ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹೇಳಿದರು.
ಆಗಮ ಪಂಡಿತರು ಬಂದು ರಿಪೋರ್ಟ್ ಕೊಟ್ಟ ನಂತರ ಚರ್ಚೆ ಮಾಡಲಾಗುವುದು. ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ರಥದ ಮುಂದೆ ಕುರಾನ್ ಪಠಣೆ ಇರಲಿಲ್ಲ
ಪದ್ಧತಿ ಇದ್ದದ್ದು ಮೆಟ್ಟಿಲ ಮೇಲೆ ನಿಂತು ಕುರಾನ್ ಪಠಣ ಮಾಡುವಂತಹದ್ದು, ಅವರು ಹೇಳಿದ್ದು ನಿಜ. ರಥದ ಮುಂದೆ ಕುರಾನ್ ಪಠಣ ಮಾಡುವ ಪದ್ಧತಿ ಇರಲಿಲ್ಲ. ದೇವಸ್ಥಾನ ಮೆಟ್ಟಿಲ ಮೇಲೆ ಕುರಾನ್ ಪಠಣ ಮಾಡುವ ಪದ್ಧತಿ ಇತ್ತು. ಕಳೆದ ನಾಲ್ಕೈದು ವರ್ಷದಿಂದ ರಥದ ಮುಂದೆ ಬಂದು ಕುರಾನ್ ಪಠಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಐದು ವರ್ಷಕ್ಕಿಂತ ಮುಂಚೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಿಂತು ಕುರಾನ್ ಪಠಣ ಮಾಡುವ ಪದ್ದತಿ ಇತ್ತೋ ಅದನ್ನೇ ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ: Karnataka Elections: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸ್ಪಷ್ಟ ಎಂದ ಸಿ-ವೋಟರ್ ಸಮೀಕ್ಷೆ, ಬಿಜೆಪಿಗೆಷ್ಟು ಸ್ಥಾನ?
ಮುಜರಾರಿಯ ಇಲಾಖೆಯ ಆಗಮ ಪಂಡಿತರು ಬರುತ್ತಿದ್ದಾರೆ. ಮ್ಯಾನುಯಲ್ ಇವತ್ತು, ನಿನ್ನೆ ಕುಳಿತು ಬರೆದಿರುವುದಲ್ಲ, ಇದರ ಬಗ್ಗೆ ದಾಖಲೆಗಳಿವೆ. ಈ ಸಮಯದಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳುಲು ಆಗಲ್ಲ. ಆಗಮ ಪಂಡಿತರು ಬಂದು ಏನು ವರದಿ ಕೊಡ್ತಾರೆ ಅದರ ಮೇಲೆ ತೀರ್ಮಾನ ಆಗುತ್ತೆ ಎಂದು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ