HOME » NEWS » State » HASSAN CRIME HASSAN MAN DIED AFTER QUARREL WITH NEIGHBOR PERSON ABOUT DOG RMD

ನಾಯಿಯನ್ನು ರಸ್ತೆಗೆ ಬಿಡಬೇಡಿ ಎಂದಿದ್ದಕ್ಕೆ ಹಾಸನದಲ್ಲಿ ನಡೆಯಿತು ಮರ್ಡರ್​!

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

news18-kannada
Updated:April 26, 2020, 9:53 AM IST
ನಾಯಿಯನ್ನು ರಸ್ತೆಗೆ ಬಿಡಬೇಡಿ ಎಂದಿದ್ದಕ್ಕೆ ಹಾಸನದಲ್ಲಿ ನಡೆಯಿತು ಮರ್ಡರ್​!
ಕೊಲೆಯಾದ ವ್ಯಕ್ತಿ ಜೊತೆ ಪೊಲೀಸರು
  • Share this:
ಹಾಸನ (ಏ.26): ಸಾಕು ನಾಯಿಯನ್ನು ರಸ್ತೆಗೆ ಬಿಡಬೇಡಿ ಎಂದು ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕೊಗರವಳ್ಳಿ ಗ್ರಾಮದ ಗಣೇಶ್ (48) ಕೊಲೆಯಾದ ವ್ಯಕ್ತಿ. ಗಣೇಶ್​ ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ವೆಳೆ  ಸಾಕು ನಾಯಿಯೊಂದು ಇವರನ್ನು ಕಚ್ಚಲು ಯತ್ನಿಸಿತ್ತು. ಈ ವಿಚಾರವನ್ನು ನಾಯಿ ಯಜಮಾನ ರಘು ಬಳಿ ಪ್ರಸ್ತಾಪಿಸಿದ್ದ ಗಣೇಶ್​, ನಾಯಿಯನ್ನು ರಸ್ತೆಗೆ ಬಿಡಬೇಡಿ ಎಂದು ಎಚ್ಚರಿಸಿದ್ದರು.

ಈ ವಿಚಾರದಲ್ಲಿ ಗಣೇಶ್​ ಹಾಗೂ ರಘು ನಡುವೆ ವಾಗ್ವಾದ ಆರಂಭಗೊಂಡಿದೆ. ರಘು ಪುತ್ರ ದರ್ಶನ್, ಸಹೋದರ ಪರಮೇಶ್ ಮೊದಲಾದವರು ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಹೋದ ಗಣೇಶ್ ಪುತ್ರಿ ಹಾಗೂ ಅಳಿಯನ ಮೇಲೂ ಹಲ್ಲೆ ನಡೆದಿದೆ. ಈ ವೆಳೆ ಮೂವರು ಸೇರಿ ಬಡಿಗೆಯಿಂದ ಗಣೇಶ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಆಸ್ಪತ್ರೆಗೆ‌‌‌‌ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಗಣೇಶ್ ಮೃತಪಟ್ಟಿದ್ದಾರೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 26 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; 824 ಸಾವು
First published: April 26, 2020, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories