ರೌಡಿಶೀಟರ್​ನನ್ನು ಬಂಧಿಸಿದ ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆಯೊಡ್ಡಿದ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ 

ಅರೇಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಹಾಗೂ ಹಾಸನ ಜಿಲ್ಲೆಯ ಬಿಜೆಪಿಯ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಬಲಗೈ ಭಂಟ ಆಗಿರುವ ಮಧುಕುಮಾರ ಎಂಬಾತನ ವಿರುದ್ಧ ಕಳೆದ ವಾರ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾನೆಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

news18-kannada
Updated:September 23, 2020, 9:31 AM IST
ರೌಡಿಶೀಟರ್​ನನ್ನು ಬಂಧಿಸಿದ ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆಯೊಡ್ಡಿದ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ 
ಸಾಂದರ್ಭಿಕ ಚಿತ್ರ
  • Share this:
ಹಾಸನ (ಸೆ. 23): ಅಕ್ರಮ ಮರಳು ಸಾಗಾಣಿಕೆಯಲ್ಲಿ ರೌಡಿಶೀಟರ್ ವಿರುದ್ಧ ಕೇಸ್ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪೊಲೀಸ್ ಠಾಣೆಗೆ ಬಂದು ಗಲಾಟೆ ಮಾಡಿರುವ ಪ್ರಕರಣ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ತಮ್ಮ ಬೆಂಬಲಿಗರಾದ ಬೇಲೂರು ತಾಲೂಕು ಅಧ್ಯಕ್ಷ ಅಡಗೂರು ಆನಂದ್, ರೌಡಿಶೀಟರ್ ಗಳಾದ ಮಧು ಬಿರಾಡವಳ್ಳಿ, ಭರತ್, ಮತ್ತು ಇತರ ಬೇಲೂರು ತಾಲೂಕು ಅರೇಹಳ್ಳಿ ಪೊಲೀಸ್ ಠಾಣೆಗೆ ಬಂದು ಠಾಣೆಯ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಮರಳು ಮಾಫಿಯಾ ವಿರುದ್ಧ ನಮ್ಮ ಪಕ್ಷದವರ ವಿರುದ್ಧವೇ ಪ್ರಕರಣ ದಾಖಲಿಸುತ್ತೀರಾ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅಷ್ಟೇ ಅಲ್ಲದೆ ಪೊಲೀಸ್ ಠಾಣಾಧಿಕಾರಿ ವಿರುದ್ಧ ಏಕವಚನದಲ್ಲಿಯೇ ಏರುಧ್ವನಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಪಿಎಸ್ಐ ಮುಂದೆ ಏನಾದರೂ ಪ್ರಕರಣ ದಾಖಲಿಸಿದರೆ ಹಿಂದಿನ ಪಿಎಸ್ಐ ಗೆ ಆದ ರೀತಿಯಲ್ಲಿಯೇ ಎತ್ತಂಗಡಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಏನಿದು ಪ್ರಕರಣ:
ಅರೇಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಮಧು ಕುಮಾರ ಎಂಬಾತನ ವಿರುದ್ಧ ಕಳೆದ ವಾರ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾನೆಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಆದರೆ, ರೌಡಿಶೀಟರ್ ಆಗಿರುವ ಮಧು ಹಾಸನ ಜಿಲ್ಲೆಯ ಬಿಜೆಪಿಯ ಅಧ್ಯಕ್ಷ ಆಗಿರುವ ಹುಲ್ಲಹಳ್ಳಿ ಸುರೇಶ್ ಬಲಗೈ ಭಂಟ.  ಅಷ್ಟಲ್ಲದೆ ಬಿಜೆಪಿ ಕಾರ್ಯಕರ್ತ. ಹೀಗಾಗಿ ಈತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಂದು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿ ಒಂದೇ ನಮ್ಮ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Belagavi: 6 ತಿಂಗಳ ಬಳಿಕ ಮಹಾರಾಷ್ಟ್ರಕ್ಕೆ ಬೆಳಗಾವಿಯಿಂದ ಬಸ್ ಸಂಚಾರ ಆರಂಭ

ಅಷ್ಟೇ ಅಲ್ಲದೆ, ಬಿಜೆಪಿ ಕಾರ್ಯಕರ್ತರನ್ನು ಠಾಣೆಗೆ ಕರೆಸಿ ರೌಡಿ ಪೆರೇಡ್ ಮಾಡಿದರೆ ಎಲ್ಲರನ್ನೂ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಆರೋಪವೂ ಕೂಡ ಕೇಳಿಬಂದಿದೆ. ರೌಡಿಶೀಟರ್ ಆಗಿರುವ ಮಧುಕುಮಾರ್ ಠಾಣೆಯಲ್ಲಿದ್ದ ಮಹಿಳಾ ಸಿಬ್ಬಂದಿ ವಾಣಿಯವರೊಂದಿಗೂ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಬಳಿಕ ಬಿಜೆಪಿಯ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ನಿಮ್ಮ ಠಾಣೆಯ ಪಿಎಸ್ಐ ಯಾವ ಮಿನಿಸ್ಟರ್ ಕಡೆಯಿಂದ ಬಂದಿದ್ದಾರೆ ಎಂಬುದು ಗೊತ್ತಿದೆ ತಾನೆ?  ನಮ್ಮ ಕಾರ್ಯಕರ್ತರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾದರೆ ಹಿಂದಿನ ಪಿಎಸ್ಐಯನ್ನು ಎತ್ತಂಗಡಿ ಮಾಡಿಸಿದ ಹಾಗೆ ಎತ್ತಂಗಡಿ ಮಾಡಿಸುತ್ತೇವೆ ಎಂದು ಬೆದರಿಕೆಯೊಡ್ಡಿ, ದಬ್ಬಾಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು ಈಗ ಈ ಸಂಬಂಧ ಎಲ್ಲಾ ದೃಶ್ಯಗಳು ಪೊಲೀಸ್ ಠಾಣೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
Published by: Sushma Chakre
First published: September 23, 2020, 8:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading