ಹಾಸನ ಕ್ಷೇತ್ರಕ್ಕೆ ಬಂದ್ರೆ ರಾಜಕೀಯ ಏನಂತ ಹೇಳಿಕೊಡ್ತೀನಿ: ಗೌಡ್ರ ಮೊಮ್ಮಗನಿಗೆ ಪ್ರೀತಂಗೌಡ ಟಾಂಟ್

BJP MLA Preetham Gowda: ಎಂ ಮಂಜು ಓದಿರುವ ಶಾಲೆಯಲ್ಲೇ ನಾನು ಓದಿ ಟೀಚರ್ ಆಗಿ ಪ್ರಿನ್ಸಿಪಾಲ್ ಆಗಿ ರಿಟೈರ್ ಆಗಿದ್ದೇನೆ. ಆದರೆ ಅವರಿನ್ನೂ ಓದುತ್ತಲೇ ಇದ್ದಾರೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಲೇವಡಿ ಮಾಡಿದ್ದಾರೆ.

ಪ್ರೀತಂ ಗೌಡ

ಪ್ರೀತಂ ಗೌಡ

  • Share this:
ಹಾಸನ: ನನ್ನ ಮಗನಿಗೆ ಟಿಕೆಟ್ ತಪ್ಪಿಸುವ ಮೂಲಕ ನನ್ನ ಕುಟುಂಬ ಒಡೆಯಲು ಶಾಸಕ ಪ್ರೀತಂಗೌಡ ಕಾರಣ ಎಂಬ ಮಾಜಿ ಸಚಿವ ಎ. ಮಂಜು ಆರೋಪಕ್ಕೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ. ಅವರ ಮನೆ ಒಡೆಯುವಂತಹ ಕೆಲಸ ನಾನು ಮಾಡಿಲ್ಲ, ಹೀಗೆ ಹೇಳಬೇಕಾದರೆ ಅವರ ಮನಸ್ಥಿತಿ ಎಷ್ಟು ವೀಕಿರಬೇಕು. ಹಾಗಾದರೆ ನಾನು ಅಷ್ಟೊಂದು ಸ್ಟ್ರಾಂಗ್ ಅಂತ ಈಗ ಗೊತ್ತಾಗುತ್ತಿದೆ. ನಮ್ಮ ಹತ್ತಿರ ಬಿಜೆಪಿ ಅಭ್ಯರ್ಥಿ ಆಗ್ತೀನಿ ಅಂತಾ ಚರ್ಚೆ ಮಾಡಿದ್ರು, ಆದರೆ ಕಾಂಗ್ರೆಸ್ ಅಭ್ಯರ್ಥಿ ಆಗಲು ಯಾವಾಗ ಡಿಡಿ ಕೊಟ್ಟಿದ್ದಾರೆ ಅನ್ನೊದನ್ನ ಕೆಪಿಸಿಸಿ ಕಚೇರಿಯಲ್ಲಿ ಚೆಕ್ ಮಾಡಲಿ ಎನ್ನುವ ಮೂಲಕ ಎ. ಮಂಜು ಅವರಿಗೆ ಟಾಂಟ್ ಕೊಟ್ಟಿದ್ದಾರೆ.

ನನ್ನನ್ನು ಜನ ಹತ್ತು ವರ್ಷದಿಂದ ನೋಡ್ತಿದ್ದಾರೆ. ಅವರನ್ನು ಮೂವತ್ತು ವರ್ಷದಿಂದ ನೋಡ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರ್ತಾರೆ, ಯಾರು ಯಾವ್ಯಾವ ಪಾರ್ಟಿಗೆ ಯಾವ್ಯಾವ ಟೈಪಲಿ ಲಾಂಗ್ ಜಂಪ್ ಹಾರ್ತರೆ ಅನ್ನೋದು ಗೊತ್ತಿದೆ. ನಾನು ಬದುಕಿರುವವರೆಗೂ ಬಿಜೆಪಿ, ಸಾಯೋವರೆಗೂ ಬಿಜೆಪಿಯಲ್ಲೇ ಇರ್ತೇನೆ. ಯಾರೂ ಮಾತನಾಡುತ್ತಿದ್ದಾರೋ ಅವರ ಬಾಯಲ್ಲಿ ಇವತ್ತು ಯಾವ ಪಕ್ಷ, ನಾಳೆ ಯಾವ ಪಕ್ಷ ಅಂದರೆ ನಾಲಿಗೆ ಹೊರಳಲ್ಲ, ಅಂಥವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ಅದೇ ಸ್ಕೂಲ್​ನಲ್ಲಿ ಓದಿ ರಿಟೈರ್ ಆಗಿದೀನಿ:

ಇವರು ಓದಿರುವ ಸ್ಕೂಲ್ ನಲ್ಲಿ ನಾನು ಓದಿ, ಆ ಸ್ಕೂಲಿನಲ್ಲೇ ಟೀಚರ್ ಆಗಿ, ಪ್ರಿನ್ಸಿಪಲ್ ಆಗಿ, ರಿಟೈರ್ಡ್ ಆಗಿ ಮ್ಯಾನೇಜ್ಮೆಂಟ್ ಕಮಿಟಿ ಅಧ್ಯಕ್ಷ ಆಗೀದ್ದಿನಿ. ಅವರಿನ್ನೂ ಆ ಸ್ಕೂಲ್ ನಲ್ಲೇ ಓದ್ತಿದ್ದಾರೆ. ಜಗತ್ತಿಗೆ ನಾನೋಬ್ಬನೆ ಬುದ್ದಿವಂತ ಅನ್ಕೊಂಡಿದ್ದರೆ, ಆ ಕಾಲ ಮುಗಿದು ಹೋಗಿದೆ. ಅಂತಹವರು ಸುಮಾರು ಜನ ಬಂದಿದ್ದಾರೆ. ಹಾಗಾಗಿ ಹೆಚ್ಚು ಚಾಣಾಕ್ಷತನ ತೋರಿಸೋದು ಬೇಡ ಎಂದು ಎ ಮಂಜು ಅವರನ್ನ ಪ್ರೀತಂ ಗೌಡ ತಿವಿದರು.

ಬಾಡಿಗೆ ಗಿರಾಕಿಗಳ ಬಗ್ಗೆ ಮಾತಾಡಲ್ಲ:

ನನಗೆ ಬಿಜೆಪಿ ಇಷ್ಟವಿಲ್ಲ, ಚುನಾವಣೆ ಮಾಡಿದೆ ಗೆಲ್ಲಲು ಆಗಲಿಲ್ಲ, ವಾಪಾಸ್ ಹೋಗ್ತಿನಿ ಅಂದರೆ ಜಿಲ್ಲೆಯ ಜನ ಒಪ್ಪಿಕೊಳ್ತಾರೆ. ಯಾರು ಹೋದರೂ ಬಿಜೆಪಿಗೆ ಏನು ವ್ಯತ್ಯಾಸ ಆಗಲ್ಲ. ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಹಾಸನ ಜಿಲ್ಲೆಯಲ್ಲೂ ಮುಂದೆ ಬಿಜೆಪಿ ದೊಡ್ಡ ಪಕ್ಷ ಆಗುತ್ತೆ. ಎಲ್ಲಾ ರೆಡಿ ಆಗಿರುವ ಮನೆಗೆ ಬಂದು ನಾನು ಗೃಹಪ್ರವೇಶ ಮಾಡೋದಿಲ್ಲ. ಹೊಸದಾಗಿ ಸೈಟ್ ಹುಡುಕಿ, ಫೌಂಡೇಶನ್ ತೆಗೆದು, ಕ್ಯೂರಿಂಗ್ ಮಾಡಿ, ಆರ್.ಸಿ.ಸಿ. ಹಾಕಿ ಬಣ್ಣ ಹೊಡೆದು ವಾಸ ಮಾಡಬೇಕೆಂದು ಬಂದಿರುವವನು ನಾನು. ಅವರು ಎಲ್ಲೆಲ್ಲಿ ಮನೆ ಇರುತ್ತೋ ಅಲ್ಲಲ್ಲಿ ಹೋಗಿ ವಾಸ ಮಾಡಿ ಮತ್ತೆ ಬಾಡಿಗೆ ಮನೆಗೆ ಹೋಗ್ತಿರ್ತರೆ. ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದು ಹಾಸನದ ಬಿಜೆಪಿ ಶಾಸಕ ತಿರುಗೇಟು ನೀಡಿದರು.

ಇದನ್ನೂ ಓದಿ: ಎಂಇಎಸ್ ಪುಂಡಾಡಿಕೆ: ಕನ್ನಡಪರ ಸಂಘಟನೆಗಳಿಂದ ನಾಳೆ ಬೆಳಗಾವಿ ಚಲೋ; ಕುಂದಾನಗರಿಗೆ ಕನ್ನಡಿಗರ ಪ್ರವಾಹ

ಕೊಡಗಿನಲ್ಲಿ ಬಿಜೆಪಿನೆ ಗೆದ್ದಿರುವುದು. ಹಾಗಾದ್ರೆ ಜನ ಯಾರಿಗೆ ಬುದ್ದಿ ಕಳ್ಸಿದ್ರು, ಒಂದು ಓಟಿನಲ್ಲಿ ಸೋತರೂ ಸೋಲೆ, ನೂರು, ಸಾವಿರ ಓಟಿನಲ್ಲಿ ಸೋತರೂ ಸೋಲೇ. ವಿಧಾನ ಪರಿಷತ್​ಗೆ ಹೋಗ್ತಿರದು ಯಾರು? ಎಂದು ಪ್ರಶ್ನಿಸಿದರು.

ಪಲಾಯನವಾದ ರಾಜಕಾರಣ ಅಲ್ಲ:

ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿರದು ಸತ್ಯ. ಯಾರೂ ಮಾತನಾಡಿದ್ದಾರೋ ಅವರು ಕಳೆದ ಮೂರ್ನಾಲ್ಕು ಚುನಾವಣೆಯಲ್ಲಿ ಗೆಲುವೇ ಕಂಡಿಲ್ಲ. ಹಾಗಂತ ಬೇಜಾರ್ ಮಾಡ್ಕಳಕೆ ಆಗುತ್ತಾ, ರಾಜಕಾರಣ ಬಿಡಕೆ ಆಗುತ್ತಾ. ಹಾಸನ ಆಗಲಿಲ್ಲ ಅಂಥಾ ಈಗ ಕೂರ್ಗಿಗೆ ಹೋಗಿದ್ದಾರೆ. ನಾಳೆ ಯಾವ ಜಿಲ್ಲೆಗೆ ಹೋಗ್ತಾರೆ ಗೊತ್ತಿಲ್ಲ. ಆದರೆ ನಾನು ರಾಜಕಾರಣ ಮಾಡದು ಹಾಸನದಲ್ಲೇ, ಪಲಾಯನವಾದ ರಾಜಕಾರಣ ನಾನು ಮಾಡೋದಿಲ್ಲ. ದೇವೇಗೌಡರು ಕುಟುಂಬದವರು ನಿಂತರೆ ನಾನು ವಿರೋಧವಾಗಿ ನಿಲ್ತಿನಿ ಅಂಥಾ ಹೇಳುತ್ತಿದ್ದರು, ಈಗ ಎಲ್ಲಿ ನಿಂತರು, ಹೋಗಿ ಕೂರ್ಗ್​ನಲ್ಲಿ ನಿಂತರು ಎಂದು ಲೇವಡಿ ಮಾಡಿದರು.

ಮಂಜಣ್ಣ ಜೊತೆ ಕಮ್ಯೂನಿಕೇಶನ್ ಗ್ಯಾಪ್ ಆಗಿರಬಹುದು:

ನಮ್ಮ‌ ನಾಯಕರಾದ ಎ. ಮಂಜಣ್ಣ ಏನು ಹೇಳಿದ್ದಾರೆ ಎಂದು ಗಮನಿಸಿದ್ದೇನೆ. ಆದರೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಮಾಹಿತಿಯಿಲ್ಲ. ಮುಂದಿನ ವಾರ ಪಕ್ಷದ ಕಚೇರಿಗೆ ಅವರು ಬಂದ ಸಂದರ್ಭದಲ್ಲಿ ಚರ್ಚೆ ಮಾಡ್ತೀನಿ. ಏನಾದರೂ ಕಮ್ಯೂನಿಕೇಷನ್ ಗ್ಯಾಪ್ ಇದ್ರೆ ಅದುನ್ನ ಸರಿಪಡಿಸುವಂತಹ ಕೆಲಸವನ್ನು ಎಲ್ಲಾರೂ ಒಟ್ಟಿಗೆ ಸೇರಿ ಮಾಡ್ತಿವಿ. ಯಾವ ಸಮಯದಲ್ಲಿ, ಯಾವ ಸಂದರ್ಭದಲ್ಲಿ ಅವರ ಮಗನಿಗೆ ಟಿಕೆಟ್ ಕೊಡ್ತೀವಿ, ನಾನು ಐದು ಕೋಟಿ ಕೊಡ್ತೀನಿ ಅಂಥಾ ಯಾರೂ ಹೇಳಿದ್ರು ನನಗೆ ಗೊತ್ತಿಲ್ಲ. ನಾನು ಒಬ್ಬ ಶಾಸಕ. ಅಭ್ಯರ್ಥಿ ಆಗಬೇಕು ಅಂದಾಗ ಬೇರೆ ರೀತಿ ಚರ್ಚೆಗಳು ನಡೆದಿರಬಹುದು. ಬೇರೆ ಯಾರೋ ಹೇಳಿರಬಹುದು, ನಾನೇ ಹೇಳಿರಬಹುದು. ಅದುನ್ನ ಮಾಧ್ಯಮದ ಮುಂದೆ ಹೇಳುವಂತಹ ಅಸಂಬದ್ದತೆ, ಇಮೆಚುರಿಟಿ ಪ್ರೀತಂಗೌಡಂಗೆ ಇಲ್ಲಾ ಅನ್ನೋದು ರಾಜ್ಯದ, ಜಿಲ್ಲೆಯ ಜನತೆಗೆ ಗೊತ್ತು ಎಂದು ಹೇಳಿದರು.

ಇದನ್ನೂ ಓದಿ: RIP R L Jalappa- ಸರ್ಕಾರಿ ಗೌರವಗೊಂದಿಗೆ, ಈಡಿಗ ಸಂಪ್ರದಾಯದಂತೆ ಆರ್.ಎಲ್. ಜಾಲಪ್ಪ ಅಂತ್ಯಕ್ರಿಯೆ

ಪಕ್ಷದ ಸದಸ್ಯನಲ್ಲದವರಿಗೆ ಟಿಕೆಟ್ ಕೊಡಿಸುವಷ್ಟು ದೊಡ್ಡವನಲ್ಲ:

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಎಂ.ಎಲ್.ಸಿ., ಎಂ.ಎಲ್.ಎ. ಅಭ್ಯರ್ಥಿ ಆಯ್ಕೆ ಮಾಡದು ಕೇಂದ್ರದ ನಾಯಕರು. ನಾನು ಒಬ್ಬರ ಪರವಾಗಿ ಇವರಿಗೆ ಟಿಕೆಟ್ ಕೊಡಿ ಅಂಥಾ ಹೇಳಬಹುದೇ ಹೊರತು ಟಿಕೆಟ್ ಕೊಡಿಸೋ ಅಷ್ಟು ದೊಡ್ಡವನಲ್ಲ. ಮಂಥರ್ ಗೌಡ್ರು ಬಿಜೆಪಿ ಪಕ್ಷದ ಸದಸ್ಯನೇ ಆಗಿರಲಿಲ್ಲ. ಅವರಿಗೆ ಎಂ.ಎಲ್.ಸಿ. ಟಿಕೆಟ್ ಬಗ್ಗೆ ಆಶ್ವಾಸನೆ ಕೊಡೊವಷ್ಟು ದೊಡ್ಡವನು ನಾನಲ್ಲ. ಯಾರಿಗೆ ಟಿಕೆಟ್ ಕೊಡಬಹುದು ಅಂತಾ ಚರ್ಚೆ ಬಂದಾಗ ನಾಲ್ಕು ಒಳ್ಳೆಯ ಮಾತನಾಡಿರಬಹುದು. ಆದರೆ ಪಾರ್ಟಿ ಸದಸ್ಯರಲ್ಲದವರನ್ನು ಅಭ್ಯರ್ಥಿ ಮಾಡ್ತಿನಿ ಅನ್ನೋ ಉದ್ಧಟನದ ಮಾತನ್ನು ಆಡಲು ಹೋಗೋದಿಲ್ಲ. ಅಷ್ಟಕ್ಕೆ ಮನಸ್ಸಿಗೆ ತುಂಬಾ ಬೇಜಾರಾಗಿ ಬೇರೆ ಪಾರ್ಟಿಗೆ ಹೋಗ್ತಿನಿ ಅಂಥಾ ಹೇಳಿದ್ರೆ ಖಂಡಿತಾ ಅವರ ಜೊತೆ ಮಾತನಾಡುತ್ತೇನೆ. ಮಂಥರ್ ಗೌಡ್ರಿಗೆ ಬೇಜಾರಾಗಿದ್ರೆ ಅವರ ಹತ್ತಿರ ಚರ್ಚೆ ಮಾಡ್ತಿನಿ. ಬಿಜೆಪಿಗೆ ಬರುವವರಿದ್ದರೂ ಯಾಕೆ ಬಂದಿಲ್ಲ ಅಂಥಾ ಕೇಳ್ತಿನಿ ಎಂದರು.

ಬೈಕಂಡು ಬಿಟ್ರೆ ನೀರೂ ಸಿಕ್ಕಲ್ಲ:

ಎ.ಮಂಜು ಅವರು ಇನ್ನೂ ಬಿಜೆಪಿಯಲ್ಲಿದ್ದರೆ, ಅವರನ್ನು ಉಪಯೋಗಿಸಿಕೊಳ್ಳುತ್ತೇವೆ.ಕಾಂಗ್ರೆಸ್ ಹವಾ ಇದೆ ಅಂಥಾ ಕೊನೆಗೆ ಹೇಳಿದ್ದಾರೆ. ಅದರ ಅರ್ಥ ಕಾಂಗ್ರೆಸ್​ಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ ಅಂತ. ಹೋಗಬೇಕಾದ್ರೆ ಹೋಗ್ತಿನಿ ಅಂಥಾ ಹೇಳಿದ್ರೆ ಕಾಫಿ ಕುಡಿಸಿ ಕಳುಸ್ತನಿ. ಅದನ್ನ ಬಿಟ್ಟು ಬೈಕಂಡು ಹೋದ್ರೆ ಬಿಜೆಪಿ ಪಕ್ಷದಲ್ಲಿ ನೀರನ್ನೂ ಕೊಡೋದಿಲ್ಲ ಅನ್ನೋದು ಅಷ್ಟು ತಲೇಲಿ ಇರ್ಲಿ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ಶಿವಾಜಿ ಪ್ರತಿಮೆಗೆ ಮಸಿ: ಸ್ಥಳದಲ್ಲಿ ಪೊಲೀಸರ ನಿಯೋಜನೆ

ಸೂರಜ್ ರೇವಣ್ಣಗೆ ರಾಜಕೀಯ ಪಾಠ:

ಮುಂದಿನ ಚುನಾವಣೆಯಲ್ಲಿ ಹಾಸನದ ಶಾಸಕರನ್ನು ಮನೆಯಲ್ಲಿ ಕೂರಿಸುತ್ತೇನೆ ಎಂಬ ನೂತನ ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರೀತಂಗೌಡ, ನನ್ನ ಚುನಾವಣೆ ಬರಲಿ ರಾಜಕಾರಣ ಏನು ಅಂಥಾ ತೋರಿಸುತ್ತೇನೆ. ರಾಜಕಾರಣ ಮಾಡದು ಹೇಗೆ ಅಂಥಾ ಅವರಿಗೆ ಗೊತ್ತಿಲ್ಲದ ವಿದ್ಯೆಯನ್ನು ನಾನು ಹೇಳ್ಕೊಡ್ತಿನಿ. ಅವರು ಹೇಳಿಕೊಟ್ಟಿರುವ ವಿದ್ಯೆ ಕಲಿತು ಆಗಿದೆ. ನನ್ನ ಚುನಾವಣೆಗೆ ಬರಲಿ ಯಾವ ತರಾ ರಾಜಕಾರಣ ಮಾಡದು ಅಂಥಾ ತೋರಿಸಿ ಕೊಡ್ತಿನಿ. ಯಾರ್ಯಾರು ಉದ್ದುದ್ದ ಭಾಷಣ ಮಾಡ್ತಿದ್ದಾರಲ್ಲಾ ಬರ್ಲಿ. ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಂದು ಪ್ರೀತಂಗೌಡನ ವಿರುದ್ಧ ರಾಜಕಾರಣ ಮಾಡಲಿ ಆಮೇಲೆ ಮಾತಾಡ್ತಿನಿ ಎಂದು ಜೆಡಿಎಸ್ ನಾಯಕರ ವಿರುದ್ಧ ಗರಂ ಆದರು.

ನನ್ನ ಕ್ಷೇತ್ರದ ವಿಚಾರವಾಗಿ ಯಾರಾದರೂ ಬರುವವರಿದ್ದರೆ ಬಂದು ಮಾತನಾಡಲು ಹೇಳಿ, ನಾನು ಯಾವದಕ್ಕೂ ಹೆದರದು ಇಲ್ಲಾ, ತಲೆನೂ ಕೆಡುಸ್ಕಳದು ಇಲ್ಲಾ, ಏನಾದರೂ ಹೆದರುವ ಪರಿಸ್ಥಿತಿ ಇದ್ದರೆ ಅವರು ಹೆದರಬೇಕು, ಹೆದರದೆ ಇರಿ ಅಂಥಾ ಅವರಿಗೆ ನೈತಿಕ ಬೆಂಬಲ ಕೊಡ್ತಿನಿ ಎಂದರು.

ವರದಿ: ಶಶಿಧರ್.ಬಿ.ಸಿ.
Published by:Vijayasarthy SN
First published: