• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hassan Politics: ಹೆಚ್ ಪಿ ಸ್ವರೂಪ್ Vs ಭವಾನಿ ರೇವಣ್ಣ; ಹಾಸನ ಜೆಡಿಎಸ್ ಟಿಕೆಟ್ ಯಾರಿಗೆ?

Hassan Politics: ಹೆಚ್ ಪಿ ಸ್ವರೂಪ್ Vs ಭವಾನಿ ರೇವಣ್ಣ; ಹಾಸನ ಜೆಡಿಎಸ್ ಟಿಕೆಟ್ ಯಾರಿಗೆ?

ಹೆಚ್ ಪಿ ಸ್ವರೂಪ್ ಮತ್ತು ಭವಾನಿ ರೇವಣ್ಣ

ಹೆಚ್ ಪಿ ಸ್ವರೂಪ್ ಮತ್ತು ಭವಾನಿ ರೇವಣ್ಣ

ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಭವಾನಿ ರೇವಣ್ಣ ಜ.28 ರಂದು ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ರರ ಜೊತೆ ಭಾಗವಹಿಸಿದ್ದರ ಬಗ್ಗೆ ಪೋಸ್ಟ್ ಮಾಡಿದ್ದಾರೆ.

  • Share this:

ಹಾಸನ: ಚುನಾವಣೆ (Assembly Election 2023) ಸಮೀಪಿಸುತ್ತಿದ್ದಂತೆ ಹಾಸನ (Hassan Politics) ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (Former Minister HD Revanna) ಕುಟುಂಬ ಸಂಚಾರ ನಡೆಸುತ್ತಿದೆ. ಹಾಸನ ಜಿಲ್ಲೆಯಲ್ಲಿ ಕಮಲ ಅರಳಿಸಿರುವ ಶಾಸಕ ಪ್ರೀತಂಗೌಡ (BJP MLA Preetham Gowda)ವಿರುದ್ಧ ಯಾರು ಕಣಕ್ಕೆ ಇಳಿಯುತ್ತಾರಾ ಅನ್ನೋ ಕುತೂಹಲಕ್ಕೆ ಅಧಿಕೃತ ತೆರೆ ಬಿದ್ದಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಎಚ್.ಪಿ.ಸ್ವರೂಪ್ (HP Swaroop) ಆಕ್ಟಿವ್ ಆಗಿದ್ದಾರೆ. ಹಗಲು, ರಾತ್ರಿ ಎನ್ನದೆ ಗ್ರಾಮಗಳಿಗೆ ತೆರಳುತ್ತಿರುವ ಸ್ವರೂಪ್ ಪ್ರಚಾರ ನಡೆಸುತ್ತಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಗ್ಯಾರಳ್ಳಿ, ಮಾವಿನಹಳ್ಳಿ, ದೊಡ್ಡಕೊಂಡಗುಳ ಗ್ರಾಮಗಳಿಗೆ ಕಳೆದ ರಾತ್ರಿ ಭೇಟಿ ನೀಡಿ ಗ್ರಾಮಸ್ಥರನ್ನು ಭೇಟಿ ಮಾಡಿರುವ ಎಚ್.ಪಿ.ಸ್ವರೂಪ್ ಮಾತುಕತೆ ನಡೆಸಿದ್ದಾರೆ.


ದೊಡ್ಡಕೊಂಡಗುಳ ಗ್ರಾಮದ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವರೂಪ್ ಅವರನ್ನು ಬರಮಾಡಿಕೊಂಡಿದ್ದಾರೆ. ದೊಡ್ಡಕೊಂಡಗುಳ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗ್ರಾಮಸ್ಥರೊಂದಿಗೆ ಸ್ವರೂಪ್ ಸಮಾಲೋಚನೆ ನಡೆಸಿದ್ದಾರೆ. ಈ ಹಿನ್ನೆಲೆ ಹಾಸನ ರಾಜಕೀಯದಲ್ಲಿ ಸ್ವರೂಪ್ ಅವರ ಸಂಚಾರ ತೀವ್ರ ಕುತೂಹಲ ಕೆರಳಿಸಿದೆ.


ಇತ್ತ ಭವಾನಿ ರೇವಣ್ಣ ಸಂಚಾರ


ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಭವಾನಿ ರೇವಣ್ಣ ಜ.28 ರಂದು ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ರರ ಜೊತೆ ಭಾಗವಹಿಸಿದ್ದರ ಬಗ್ಗೆ ಪೋಸ್ಟ್ ಮಾಡಿದ್ದಾರೆ.


ಹಾಸನದ ಅರಳೀಕಟ್ಟೆ ಸರ್ಕಲ್‌ನಲ್ಲಿ ಭಾರತೀಯ ಮಜ್ದೂರ್ ಆಟೋ ರಿಕ್ಷಾ ಚಾಲಕರ ಸಂಘದ (ರಿ) ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದು ಪೋಸ್ಟ್ ಎಂದು ಭವಾನಿ ರೇವಣ್ಣ ಬರೆದುಕೊಂಡಿದ್ದಾರೆ.


ಟಿಕೆಟ್ ಯಾರಿಗೆ ಅನ್ನೋದು ಖಾತ್ರಿಯಾಗದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಸಂಚಾರ ತೀವ್ರ ಕುತೂಹಲ ಕೆರಳಿಸಿದೆ.


ಅರಸೀಕೆರೆಯಲ್ಲಿ ದಳಪತಿಗಳು ಆಕ್ಟಿವ್


ಹಾಲಿ ಜೆಡಿಎಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಪಕ್ಷ ಬಿಡುವ ಮುನ್ಸೂಚನೆ ಹಿನ್ನಲೆ ಅರಸೀಕೆರೆಯಲ್ಲಿ ಸಕ್ರಿಯರಾಗಿರುವ ರೇವಣ್ಣ ಕುಟುಂಬ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಅರಸೀಕೆರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಪಕ್ಷದ‌ ಕಾರ್ಯಕರ್ತರು ಮತ್ತು ಅನರ್ಹ ನಗರಸಭೆ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ.


ಶಾಸಕ ಶಿವಲಿಂಗೇಗೌಡ ಜೊತೆ ತಿಕ್ಕಾಟದಿಂದ ಬಿಜೆಪಿ ಸಂಪರ್ಕ ಬೆಳೆಸಿ ಆರು ನಗರಸಭಾ ಸದಸ್ಯರು ಅನರ್ಹಗೊಂಡಿದ್ದರು. ಇದೀಗ ಅನರ್ಹರನ್ನು ಮತ್ತೆ ಪಕ್ಷಕ್ಕೆ ಕರೆತರುವ ಭರವಸೆಯನ್ನು ಸೂರಜ್ ರೇವಣ್ಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.




ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಸೂರಜ್ ರೇವಣ್ಣ


ಜಿಲ್ಲೆಯಲ್ಲಿ ಉತ್ತಮ ವಿಶ್ವಾಸ ವಾತಾವರಣವನ್ನ ನೋಡುತ್ತಿದ್ದೇನೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನ್ನ ಅಧಿಕಾರಕ್ಕೆ ತರಬೇಕು ಎಂದು ಜನ ಬಯಸಿದ್ದಾರೆ. ರೇವಣ್ಣನವರು ಅಭಿವೃದ್ಧಿ ಮಂತ್ರ ಒಂದನ್ನೇ ಇಟ್ಟುಕೊಂಡು ಜಿಲ್ಲೆಯಲ್ಲಿ‌ ದುಡಿಮೆ ಮಾಡಿದ್ದಾರೆ. ಅವರ ದುಡಿಮೆಗೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಆರನ್ನ ಗೆಲ್ಲಿಸಬೇಕು ಎಂಬ ನಿಮ್ಮ ಅಭಿಪ್ರಾಯ ಇದೆ ಎಂದು ಹೇಳುವ ಮೂಲಕ ಅರಸೀಕೆರೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಸೂರಜ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ದಳಪತಿಗಳ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ


ಕೋಲಾರದ ಒಕ್ಕಲಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಬೈರೇಗೌಡ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಜನತಾ ಪರಿವಾರದ ಒಕ್ಕಲಿಗ ಸಮುದಾಯದ ನಾಯಕರನ್ನ ತುಳಿದಿದ್ದು ಜೆಡಿಎಸ್ ವರಿಷ್ಠರು. ಸಿ ಬೈರೇಗೌಡರನ್ನ ಡಿಸಿಎಂ ಸ್ಥಾನದಿಂದ ತಪ್ಪಿಸಿದ್ರು,  ಹೊಸಕೋಟೆ ಬಚ್ಚೇಗೌಡರನ್ನ ತುಳಿದಿದ್ದು ಜೆಡಿಎಸ್ ನಾಯಕರು. ಅಧಿಕಾರ ಇದ್ದಾಗ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಹೋಗಿ ಕೂತಿದ್ರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  HD Kumaraswamy: ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ರೈತರಿಗೆ 10 ಸಾವಿರ, ವಿಧವೆಯರಿಗೆ 2 ಸಾವಿರ, ಹಿರಿಯರಿಗೆ 5 ಸಾವಿರ ಸಹಾಯಧನ! ಎಚ್‌ಡಿಕೆ ಘೋಷಣೆ




ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬಂದಲ್ಲಿ ಜೆಡಿಎಸ್ ನವರ ಕುಟುಂಬಕ್ಕೆ ಅಧಿಕಾರ ಹಂಚಲು ಸಾಕಾಗಲ್ಲ. ಅಷ್ಟು ಜನ ಅವರೇ ಆಕಾಂಕ್ಷಿಗಳು ಇದ್ದಾರೆ. ಈ ಸಲ ಸಮ್ಮಿಶ್ರ ಸರ್ಕಾರ ಬಂದರೆ, ಕುದುರೆ ವ್ಯಾಪಾರ ಅಲ್ಲ ಕತ್ತೆ ವ್ಯಾಪಾರ ನಡೆಯುತ್ತೆ. ಬಿಜೆಪಿಯವರು ಜೆಡಿಎಸ್ ನೊಂದಿಗೆ ಸರ್ಕಾರ ಮಾಡುವ ಯೋಚನೆಯಲ್ಲಿದ್ದಾರೆ ಎಂದು ಹೇಳಿದರು.

Published by:Mahmadrafik K
First published: