ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆ ವಿಚಾರ; ಸ್ಪಷ್ಟನೆ ನೀಡಿದ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ

ನಾನು ವಿಧಾನಸಭೆ ಕಲಾಪ ಸಮಯದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಊಹಾಪೋಹಗಳ ಬಗ್ಗೆ ನಾನು ಚರ್ಚಿಸುವುದಿಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಎಂದು ಜೆಡಿಎಸ್​ ಶಾಸಕ ಎ.ಟಿ. ರಾಮಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

news18-kannada
Updated:November 19, 2019, 11:40 AM IST
ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆ ವಿಚಾರ; ಸ್ಪಷ್ಟನೆ ನೀಡಿದ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ
ಸಿದ್ದರಾಮಯ್ಯ- ಎ.ಟಿ. ರಾಮಸ್ವಾಮಿ
  • Share this:
ಹಾಸನ (ನ. 19): ಹಾಸನದಲ್ಲಿ ಮತ್ತೆ ಜೆಡಿಎಸ್​ ನಾಯಕರಲ್ಲಿ ಭಿನ್ನಮತ ಎದ್ದಿದ್ದು, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಎ.ಟಿ. ರಾಮಸ್ವಾಮಿ ಚರ್ಚೆಯನ್ನೂ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಎ.ಟಿ. ರಾಮಸ್ವಾಮಿ ತಾವು ಜೆಡಿಎಸ್​ ತೊರೆಯುವ ಮಾತೇ ಇಲ್ಲ. ಸುಮ್ಮನೆ ಯಾರೂ ವದಂತಿ ಹಬ್ಬಿಸಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್​ ಶಾಸಕ ಎ.ಟಿ. ರಾಮಸ್ವಾಮಿ ಇತ್ತೀಚೆಗೆ 2 ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ  ಅವರನ್ನು ಭೇಟಿ ಮಾಡಿದ್ದ ವಿಚಾರದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾಸಕ ಎ.ಟಿ. ರಾಮಸ್ವಾಮಿ ಸಿದ್ದರಾಮಯ್ಯ ಜೊತೆ ಖಾಸಗಿಯಾಗಿ ಮಾತುಕತೆ ನಡೆಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. 2 ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಎ.ಟಿ. ರಾಮಸ್ವಾಮಿ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಈ ಹಿಂದೆ ಮೈತ್ರಿ ಸರ್ಕಾರದಿಂದ ಅಂತರ ಕಾಯ್ದುಕೊಂಡಿದ್ದ ಎ.ಟಿ. ರಾಮಸ್ವಾಮಿ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿತ್ತು.

ಜೈಲಿಂದ ಬಂದಮೇಲೆ ಹೆಚ್ಚಾಯ್ತು ಡಿಕೆಶಿ ವರ್ಚಸ್ಸು; ಚುನಾವಣಾ ಅಖಾಡದಲ್ಲಿ ಸಿದ್ದರಾಮಯ್ಯ ಬದಲು ಟ್ರಬಲ್ ಶೂಟರ್ ಜಪ!

ಈ ಬಗ್ಗೆ ನ್ಯೂಸ್18 ಕನ್ನಡಕ್ಕೆ ಶಾಸಕ ಎ.ಟಿ. ರಾಮಸ್ವಾಮಿ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಜೊತೆ ನಾನು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚಿಸಿದ್ದೇನೆ ಎಂಬುದು ವದಂತಿ. ನಮ್ಮಿಬ್ಬರ ಬಗ್ಗೆ ಏನೂ ಬರೆಯಬೇಡಿ ಎಂದಿದ್ದಾರೆ. ಸಿದ್ದರಾಮಯ್ಯ ಭೇಟಿ ಬಗ್ಗೆ ಗುಟ್ಟು ಬಿಡದ ಎ.ಟಿ. ರಾಮಸ್ವಾಮಿ, ನಾವಿಬ್ಬರೂ ಭೇಟಿಯಾಗಿದ್ದೇವೆ, ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಕ್ಷೇತ್ರದ ಜನರು ಚರ್ಚಿಸುತ್ತಿದ್ದಾರೆ. ಚರ್ಚೆ ಮಾಡಿದ್ರೆ ನಾನು ಬಾಯಿ ಮುಚ್ಚಿಸೋಕೆ ಆಗುತ್ತಾ? ಅದು ಅವರ ಅಭಿಪ್ರಾಯ, ನಾನು ಬೇಡ ಅನ್ನೋಕೆ ಆಗುತ್ತಾ? ಮಾತನಾಡಬೇಡಿ ಎಂದು ಹೇಳೋಕಾಗುತ್ತಾ ಎಂದು ಪ್ರಶ್ನೆ ಹಾಕಿದ್ದಾರೆ.

ಹಾಸನದಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ; ಕೈ ಹಿಡಿಯಲು ಸಿದ್ಧರಾದ ಜೆಡಿಎಸ್​ ಶಾಸಕ ಇವರೇ...

ನಾನು ವಿಧಾನಸಭೆ ಕಲಾಪ ಸಮಯದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಊಹಾಪೋಹಗಳ ಬಗ್ಗೆ ನಾನು ಚರ್ಚಿಸುವುದಿಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿದ್ದೇನೆ  ಎಂದು ಅರಕಲಗೂಡು ಜೆಡಿಎಸ್​ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದ್ದಾರೆ.

(ವರದಿ: ಡಿಜಿಎಂ ಹಳ್ಳಿ ಅಶೋಕ್)
First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ