• Home
  • »
  • News
  • »
  • state
  • »
  • Hassan: ಮೊದಲನೆಯವಳು ಇದ್ದಾಗಲೇ 2ನೇ ಮದುವೆಗೆ ಸಿದ್ಧತೆ! ಹನಿಮೂನ್‌ಗೆ ಹೋಗೋ ಆತುರದಲ್ಲಿದ್ದವ ಜೈಲು ಪಾಲಾದ!

Hassan: ಮೊದಲನೆಯವಳು ಇದ್ದಾಗಲೇ 2ನೇ ಮದುವೆಗೆ ಸಿದ್ಧತೆ! ಹನಿಮೂನ್‌ಗೆ ಹೋಗೋ ಆತುರದಲ್ಲಿದ್ದವ ಜೈಲು ಪಾಲಾದ!

ಮಧುಸೂದನ್​

ಮಧುಸೂದನ್​

ಮಧುಸೂದನ್ ಮದುವೆ ನಡೆಯಲಿದ್ದ ಕಲ್ಯಾಣ ಮಂಟಪದ ದೂರವಾಣಿ ಸಂಖ್ಯೆ ಸಿಕ್ಕಿದೆ ಬಳಿಕ ವಸುಧಾ ಕರೆ ಮಾಡುವಷ್ಟರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆ ಆಗಿತ್ತು. ಆದರೆ ನವವಧುವಿನ ಅದೃಷ್ಟವೋ ಏನೋ ಇನ್ನೂ ಮುಹೂರ್ತ ನಡೆದಿರಲಿಲ್ಲ.

  • News18 Kannada
  • Last Updated :
  • Karnataka, India
  • Share this:

ಮೊದಲೇ ಮದುವೆಯಾಗಿರೋದನ್ನು (First Marriage) ಮುಚ್ಚಿಟ್ಟು 2ನೇ ಮದುವೆಯಾಗಲು ಹೋಗಿ ಮದುವೆ ಮಂಟಪದಲ್ಲಿ (Wedding Hall) ಸಿಕ್ಕಿಬಿದ್ದ ಘಟನೆ ಹಾಸನದಲ್ಲಿ (Hassan) ನಡೆದಿದೆ.  ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಮಧುಸೂದನ್ ಎಂಬಾತ 4 ವರ್ಷಗಳ ಹಿಂದೆಯೇ ವಸುಧಾ (Vasudha) ಎಂಬಾಕೆಯನ್ನು ಮದುವೆ ಆಗಿದ್ದ. ಆದರೆ ಆಕೆಯೊಂದಿಗೆ ಜೊತೆ ಜಗಳವಾಡಿಕೊಂಡು ದೂರವಾಗಿದ್ದ. ಬಳಿಕ ಎರಡನೇ ಮದುವೆಯಾಗಲು ಮಧುಸೂದನ್​ ಮುಂದಾಗಿದ್ದಾನೆ. 


2ನೇ ಮದುವೆಯಾಗಲು ಮುಂದಾದ ಮಧುಸೂದನ್​


ಗುಟ್ಟಾಗಿ 2ನೇ ಮದುವೆಯಾಗಲು ಮುಂದಾದ ಮಧುಸೂದನ್​ ತನ್ನ ಸಹೋದರಿಯರ ಮೂಲಕ ಹೆಣ್ಣು ನೋಡಿ ಹಾಸನದ ಹುಡುಗಿಯೊಂದಿಗೆ ಮುಹೂರ್ತ ಫಿಕ್ಸ್​ ಮಾಡಿದ್ದ. ಶುಕ್ರವಾರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಹಸೆಮಣೆ ಏರಲು ಸಿದ್ಧನಾಗಿದ್ದ. ಅದಕ್ಕಾಗಿ ಎಲ್ಲ
ಸಿದ್ಧತೆಯೂ ನಡೆದಿತ್ತು. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ನಡೆದಿದ್ದೇ ಬೇರೆ.


hassan 2nd wedding phone call first wife police arrest honeymoon
ಮಧುಸೂದನ್​


ಮೊದಲನೇ ಪತ್ನಿಗೆ ಕಿವಿಗೆ ಬಿತ್ತು ಮದುವೆ ವಿಚಾರ


ಮಧುಸೂದನ್ ಹಾಸನದಲ್ಲಿ ಮತ್ತೊಂದು ಮದುವೆ ಆಗುತ್ತಿರುವ ವಿಷಯ ಮೊದಲ ಪತ್ನಿ ವಸುಧಾಗೆ ಗುರುವಾರ ಸಂಜೆ ಗೊತ್ತಾಗಿದೆ. ತಕ್ಷಣ ಆಕೆ ಗೂಗಲ್‌ನಲ್ಲಿ ಹಾಸನದ ಎಲ್ಲಾ ಕಲ್ಯಾಣ ಮಂಟಪಗಳ ವಿವರ ಮತ್ತು ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕರೆ ಮಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಿದ್ದಾಳೆ.


ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


ಹೆಣ್ಣಿನ ಮನೆಯವರಿಗೆ ವಿಷಯ ತಿಳಿಸಿದ ವಸುಧಾ


ಮಧುಸೂದನ್ ಮದುವೆ ನಡೆಯಲಿದ್ದ ಕಲ್ಯಾಣ ಮಂಟಪದ ದೂರವಾಣಿ ಸಂಖ್ಯೆ ಸಿಕ್ಕಿದೆ ಬಳಿಕ ವಸುಧಾ ಕರೆ ಮಾಡುವಷ್ಟರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆ ಆಗಿತ್ತು. ಆದರೆ ನವವಧುವಿನ ಅದೃಷ್ಟವೋ ಏನೋ ಇನ್ನೂ ಮುಹೂರ್ತ ನಡೆದಿರಲಿಲ್ಲ. ಹೆಣ್ಣಿನ ಮನೆಯವರಿಗೆ ವಸುಧಾ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಧುವಿನ ಮನೆಯವರು ಶಾಕ್ ಆಗಿದ್ದಾರೆ.


ತಪ್ಪು ಒಪ್ಪಿಕೊಂಡ ವಂಚಕ ಮಧುಸೂದನ್​


ವಿಷಯ ತಿಳಿದ ತಕ್ಷಣ ಹೆಣ್ಣಿನ ಮನೆಯವರು ವಂಚಕ ಮಧುಸೂದನನ್ನು ಎಳೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಪೊಲೀಸರಿಗೆ
ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಮಧುಸೂದನ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.


ಇದನ್ನೂ ಓದಿ: H D Kumaraswamy: ಕನ್ನಡದ ಕತ್ತು ಹಿಸುಕುವುದೇ ಬಿಜೆಪಿಯ ನಿತ್ಯ ಕಾಯಕ; ಎಚ್​ಡಿಕೆ ಕಿಡಿ


ಪತಿಯನ್ನ ತೊರೆದು 2ನೇ ಮದುವೆಯಾದ ಯುವತಿ


ಮೊದಲ ಪತಿಯನ್ನು ತೊರೆದು ಪ್ರೀತಿಸಿ ಮದುವೆಯಾದ 2ನೇ ಗಂಡನೂ ಕೈಕೊಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ತನ್ನ 16 ವರ್ಷದಲ್ಲೆ ಪೋಷಕರ ಒತ್ತಡದಿಂದ ಸೋದರ ಮಾವನೊಂದಿಗೆ ಪುಷ್ಪಲತಾಗೆ ಬಾಲ್ಯ ವಿವಾಹ ಆಗಿತ್ತು. ನನಗೆ ಮದುವೆ ಇಷ್ಟ ಇಲ್ಲ ಎಂದು ಗಂಡನನ್ನ ತೊರೆದು ಬಂದವರು ಪ್ರೀತಿಸಿ ಮತ್ತೋರ್ವ ಯುವಕನನ್ನು ವರಿಸಿದ್ದಳು. ಆದರೆ ಈಗ ಮೊದಲ ಮದುವೆಯಾಗಿದ್ದ ಸೋದರ ಮಾವನೂ ಇಲ್ಲ, ಪ್ರೀತಿಸಿ ಕಟ್ಟಿಕೊಂಡ ಗಂಡನೂ ಜೊತೆಗಿಲ್ಲ. ಎರಡು ಮನೆ ನಂಬಿ ದಾಸಯ್ಯ ಕೆಟ್ಟ ಅನ್ನೋ ಆಗಿದೆ ಆಕೆಯ ಪರಿಸ್ಥಿತಿ.


ಆದರೆ ಪುಷ್ಪಲತಾ ತನಗೆ ಮದುವೆ ಇಷ್ಟ ಇಲ್ಲ ಎಂದು ಅಜ್ಜಿ ಮನೆ ಸೇರಿಕೊಂಡಿದ್ದಳು. ನಂತರ ಗ್ರಾಮಸ್ಥರೆಲ್ಲ ನ್ಯಾಯ ಪಂಚಾಯ್ತಿ ಮಾಡಿ ಪ್ರಕರಣ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮುಂದಿಟ್ಟಿತು. ಆದರೆ ಇದು  ಬಾಲ್ಯ ವಿವಾಹ ಅಸಿಂಧು ಅಂದು ಅಧಿಕಾರಿಗಳು ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಿದ್ದರು. ಇಷ್ಟಾದ ನಂತರ ಈಕೆಯ ಮೊದಲ ಗಂಡ ಕುಮಾರ್ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದರು.

Published by:ಪಾವನ ಎಚ್ ಎಸ್
First published: