Hassanamba Temple: ಅಕ್ಟೋಬರ್ 13 ರಿಂದ 27ರವರೆಗೆ ಹಾಸನಾಂಬೆ ದೇವಾಲಯ ಓಪನ್

ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಸರಳವಾಗಿ ಹಾಸನಾಂಬಾ ಜಾತ್ರೆಯನ್ನು ಆಚರಿಸಲಾಗಿತ್ತು. ಈ ಬಾರಿ ಜಿಲ್ಲಾಡಳಿತ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ.

ಹಾಸನಾಂಬೆ ದೇವಸ್ಥಾನ

ಹಾಸನಾಂಬೆ ದೇವಸ್ಥಾನ

  • Share this:
ಹಾಸನಾಂಬ ದೇವಾಲಯ (Hasanamba Temple) ಮುಂದಿನ ತಿಂಗಳು ಅಂದ್ರೆ ಅಕ್ಟೋಬರ್ 13ರಿಂದ ತೆರೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಅಧಿದೇವತೆಯ ದರ್ಶನವನ್ನು ಭಕ್ತರು (Devotees) ಪಡೆಯಬಹುದಾಗಿದೆ. ಒಟ್ಟು 12 ದಿನಗಳ ಕಾಲ ದೇವಾಲಯ (Temple) ತೆರೆಯಲಿದೆ. ಆಶ್ವಿಜ ಮಾಸದ ಶುಕ್ಲ ಪಕ್ಷದ ಮೊದಲ ಗುರುವಾರದಂದು ಹಾಸನಾಂಬೆಯ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿಯ ಮಾರನೇಯ ದಿನ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು  ಬಾಗಿಲು ತೆರೆಯುವ ಮತ್ತು ಮುಚ್ಚುವ ವೇಳೆ ಉಪಸ್ಥಿತರಿರುತ್ತಾರೆ. ಕಳೆದ ಎರಡು ವರ್ಷ ಕೊರೊನಾ (COVID 19) ಹಿನ್ನೆಲೆ ಭಕ್ತರಿಗೆ ಹಲವು ನಿಬಂಧನೆಗಳನ್ನು ಹಾಕಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.

ಈ ಕುರಿತು ಮಾತನಾಡಿದ ಸ್ಥಳೀಯ ಬಿಜೆಪಿ ಶಾಸಕ ಪ್ರೀತಂಗೌಡ (MLA Preetham Gowda), ಪ್ರತಿ ವರ್ಷದಂತೆ ಈ ಬಾರಿಯೂ 15 ದಿನಗಳ ಕಾಲ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಮೊದಲ ಮತ್ತು ಕೊನೆಯ ದಿನ ಹಾಗೂ ಆಕ್ಟೋಬರ್ 25ರ  ಸೂರ್ಯ ಗ್ರಹಣದ ದಿನದಂದು ಭಕ್ತರಿಗೆ ಪ್ರವೇಶ ಇರಲ್ಲ. ಇನ್ನುಳಿದ 12 ದಿನ ಭಕ್ತರು ತಾಯಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಬಾರಿ ಅದ್ಧೂರಿಯಾಗಿ ಆಚರಣೆ

ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಸರಳವಾಗಿ ಹಾಸನಾಂಬಾ ಜಾತ್ರೆಯನ್ನು ಆಚರಿಸಲಾಗಿತ್ತು. ಈ ಬಾರಿ ಜಿಲ್ಲಾಡಳಿತ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

Is Hasanamba temple open, What is the story of Hasanamba Temple, Which are the temples of India which open once in a year,hasanamba temple opening 2022,hasanamba temple mystery, hasanamba temple story, hasanamba temple contact number, hasanamba temple website, hasanamba temple timings, bangalore to hasanamba temple distance, ಹಾಸನಾಂಬಾ ದೇವಸ್ಥಾನ ದರ್ಶನದ ಸಮಯ, ಹಾಸನಾಂಬಾ ದೇವಸ್ಥಾನ ಓಪನ್, Kannada News, Karnataka News
ಹಾಸನಾಂಬೆ


ಇನ್ನು ಜಾತ್ರೆ ಆಚರಣೆ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮತ್ತು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಸಭೆಗೆ ಸಂಸದರು, ಎಂಎಲ್​ಸಿ ಸೇರಿದಂತೆ ಎಲ್ಲಾ ಜನ್ರಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. ಎಂದು ಪ್ರೀತಂಗೌಡ ಮಾಹಿತಿ ನೀಡಿದರು.

ಎಲ್ಲಾ ಗಣ್ಯರಿಗೂ ಆಹ್ವಾನ

ಜಿಲ್ಲಾಡಳಿತದಿಂದ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಎಲ್ಲಾ ಗಣ್ಯರನ್ನು ಹಾಸನಾಂಬಾ ಜಾತ್ರಾ ಮಹೋತ್ಸವಕಕ್ಕೆ ಆಹ್ವಾನಿಸಲಾಗುವುದು ಎಂದು ಪ್ರೀತಂ ಗೌಡ ಹೇಳಿದರು.

ಇದನ್ನೂ ಓದಿ:  Fishing Port: ಬಹು‌ಕೋಟಿ ವೆಚ್ಚದ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರಿಂದಲೇ ವಿರೋಧ!

ದೇಗುಲದ ಇತಿಹಾಸ (Hasanamba temple history)

ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣ ನಾಯ್ಕರು ಪ್ರಯಾಣ ನಡೆಸಿದಾಗ ಮಾರ್ಗ ಮಧ್ಯೆಯಲ್ಲಿ ಆದಿಶಕ್ತಿ ಸ್ವರೂಪಿಣಿಯಾಗಿ ದೇವರು ಪ್ರತ್ಯಕ್ಷಳಾದಳು. ಈ ವೇಳೆ ಆಕೆ ತಾನು ಇಲ್ಲಿ ಹುತ್ತದ ಸ್ವರೂಪದಲ್ಲಿ ನೆಲೆಸುವೆ. ಗುಡಿಯನ್ನು ಕಟ್ಟುವಂತೆ ಸೂಚನೆ ನೀಡಿದಳಂತೆ. ಅದರಂತೆ ಶ್ರೀ ಕೃಷ್ಣ ನಾಯ್ಕರು ದೇವಿಗೆ ಗುಡಿ ಕಟ್ಟಿಸಿದರು.

ಮಹಾಭಾರತದ ಪುರಣಾದ ಪ್ರಕಾರ (According to Mahabharata)

ಮಹಾಭಾರತದ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ನಂತರ ಸಿಂಹಾಸನಪುರ ಆಡು ಮಾತಿನಿಂದ ಹಾಸನ ಎಂದಾಗಿದೆ ಎಂದು ನಂಬಲಾಗಿದೆ. ಇನ್ನು ಪುರಾಣಗಳಲ್ಲೂ ಸಿಂಹಾಸನಪುರಿ ಅಂದರೆ ಹಾಸನದ ಬಗ್ಗೆ ಉಲ್ಲೇಖಗಳಿವೆ.

ಇದನ್ನೂ ಓದಿ:  Hasanamba Temple: ಹಾಸನಾಂಬೆ ದೇಗುಲದಲ್ಲಿ ಹೊಸ ಸಂಪ್ರದಾಯ ಸೃಷ್ಟಿಸಿದ ಅರ್ಚಕರು; ಸಾರ್ವಜನಿಕರಿಂದ ಆಕ್ರೋಶ

ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ನೆಲೆಸಲು ನಿರ್ಧರಿಸಿದ ಕ್ಷೇತ್ರವೇ ಸಿಂಹಾಸನಪುರಿ ಅಂದರೆ ಹಾಸನ ಎಂದು ವರ್ಣಿಸಲಾಗಿದೆ. ಅವರುಗಳಲ್ಲಿ ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿ ನೆಲೆಸಿದರು ಎನ್ನುವ ಐತಿಹ್ಯ ಇದೆ.
Published by:Mahmadrafik K
First published: