• Home
  • »
  • News
  • »
  • state
  • »
  • Shivamogga: ಲಾಂಗ್ ಝಳಪಿಸಿ, ಜೀವ ಬೆದರಿಕೆ ಹಾಕಿದ್ರು: ಹರ್ಷನ ಸೋದರಿ ಸ್ಪೋಟಕ ಹೇಳಿಕೆ

Shivamogga: ಲಾಂಗ್ ಝಳಪಿಸಿ, ಜೀವ ಬೆದರಿಕೆ ಹಾಕಿದ್ರು: ಹರ್ಷನ ಸೋದರಿ ಸ್ಪೋಟಕ ಹೇಳಿಕೆ

ಹರ್ಷ ಮತ್ತು ಅಶ್ವಿನಿ

ಹರ್ಷ ಮತ್ತು ಅಶ್ವಿನಿ

ಸೋದರ ಹರ್ಷ ನಿಧನದ ಬಳಿಕ ನಾವೇ ಹೊರಗಡೆ ಹೋಗುತ್ತಿದ್ದೇವೆ. ಹಾಗಾಗಿ ಸರ್ಕಾರ ನಮ್ಮ ಕುಟುಂಬದ ಭದ್ರತೆ ಬಗ್ಗೆ ಗಮನ ನೀಡಬೇಕು ಎಂದು ಅಶ್ವಿನಿ ಮನವಿ ಮಾಡಿಕೊಂಡರು.

  • News18 Kannada
  • Last Updated :
  • Shimoga, India
  • Share this:

ಸೋಮವಾರ ತಡರಾತ್ರಿ ಅಪರಿಚಿತ ಮೂವರು ಕಲ್ಲು ತೂರಾಟ (Stone Pelting) ನಡೆಸಿ, ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾಗಿರುವ ಪ್ರಕಾಶ್​ ಎಂಬವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ (Mcgann hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪರಿಚಿತರ ದಾಳಿ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಹರ್ಷ ಸೋದರಿ ಅಶ್ವಿನಿ, ನಮ್ಮ ಕುಟುಂಬಕ್ಕೆ ಪೊಲೀಸರು ಭದ್ರತೆ (Police Protection) ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅಪರಿಚಿತರು ಮಚ್ಚು, ಲಾಂಗ್ ಝಳಪಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಹರ್ಷನ ಸ್ನೇಹಿತರ ಹೆಸರನ್ನ ಕೂಗುವ ಮೂಲಕ ಬೆದರಿಕೆ ಹಾಕಿದರು.  


ಮೂರು ಅಥವಾ ನಾಲ್ಕು ಬೈಕ್​ನಲ್ಲಿ ಬಂದ ಅಪರಿಚಿತರು ಅಲ್ಲಿ ನಿಂತಿದ್ದ ಮಹಿಳೆಯರ ತಲೆಗೆ ಹೊಡೆದಿದ್ದಾರೆ. ನಮ್ಮ ಬಳಿ ನಿಂತಿದ್ದ ಬೈಕ್ ಬೀಳಿಸಿ, ಬೀಡೋದೇ ಇಲ್ಲ ಎಂದು ಹೇಳಿದರು. ಇಲ್ಲಿಂದ ನೇರವಾಗಿ ಜ್ಞಾನಪ್ರಭಾ ಶಾಲೆ ಬಳಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಇಡೀ ಏರಿಯಾದಲ್ಲಿ ಸುತ್ತಿ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ ಎಂದರು.


ಒಂದಿಬ್ಬರನ್ನು ಎನ್​ಕೌಂಟರ್ ಮಾಡ್ಬೇಕಿತ್ತು


ಹರ್ಷ ಸತ್ತಾಗಲೇ ಒಂದಿಬ್ಬರನ್ನು ಎನ್​ಕೌಂಟರ್ ಮಾಡಿದ್ರೆ ಈ ರೀತಿಯ ಪ್ರಕರಣಗಳು ಪುನಾರ್ವತಿತ ಆಗುತ್ತಿರಲಿಲ್ಲ. ಅಪರಾಧ ಮಾಡಿ ಜೈಲಿನಲ್ಲಿ ವಿಲಾಸಿಯಾಗಿ ಬದುಕುಬಹುದು ಅಂತ ಅವರಿಗೆ ಗೊತ್ತಿದೆ. ಅವರಿಗೆ ಅಲ್ಲೇ ಎಲ್ಲಾ ಸಿಗುತ್ತೆ ಅಂತ ಗೊತ್ತಿದೆ. ಹಾಗಾಗಿ ಇಂತಹ ಕೃತ್ಯಗಳು ನಡೆಯುತ್ತಿವೆ.


Harshas sister ashwini reacts on stone pelting incident
ಶಿವಮೊಗ್ಗ ಗಲಾಟೆ


ಸೋದರ ಹರ್ಷ ನಿಧನದ ಬಳಿಕ ನಾವೇ ಹೊರಗಡೆ ಹೋಗುತ್ತಿದ್ದೇವೆ. ಹಾಗಾಗಿ ಸರ್ಕಾರ ನಮ್ಮ ಕುಟುಂಬದ ಭದ್ರತೆ ಬಗ್ಗೆ ಗಮನ ನೀಡಬೇಕು ಎಂದು ಅಶ್ವಿನಿ ಮನವಿ ಮಾಡಿಕೊಂಡರು.


ಇದೇ ವೇಳೆ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಿನಿ, ನಾನು ಹೇಗೆ ಅವರ ಕಾರ್​ ಜಖಂಗೊಳಿಸುತ್ತೇನೆ. ಎಫ್​ಐಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಬೇರೆಯವರ ಕಾರ್ ಜಖಂಗೊಳಿಸುವಷ್ಟು ಕೆಟ್ಟ ಬುದ್ಧಿ ನಮಗೆ ಇಲ್ಲ. ಅಷ್ಟು ಕೀಳುಮಟ್ಟಕ್ಕೆ ನಾವು ಇಳಿಯೋದಿಲ್ಲ ಎಂದು ಸ್ಪಷ್ಟಪಡಿಸಿದರು.


ಇದನ್ನೂ ಓದಿ:  Kantara ಸಿನಿಮಾ ವೀಕ್ಷಿಸಿ ಹೊರಬರುತ್ತಿದ್ದಂತೆ ಹೃದಯಾಘಾತದಿಂದ ಸಾವು


ಎಫ್​ಐಆರ್ ದಾಖಲು ಆಗಿದ್ದೇಕೆ?


ಮೃತ ಹಿಂದೂ ಕಾರ್ಯಕರ್ತ ಹರ್ಷ  (Hindu Activist Harsha) ಸೋದರಿ ಅಶ್ವಿನಿ ಸೇರಿದಂತೆ 15 ಜನರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ (Doddapet, Shivamogga) ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ.


ಅಕ್ಟೋಬರ್ 22ರಂದು ಶಿವಮೊಗ್ಗ ನಗರದಲ್ಲಿ ವೀರ ಸಾವರ್ಕರ್ ಸಾಮ್ರಾಜ್ಯ (Veer Savarkar Program) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ (Veer Savarkar Grand Son Sathyaki) ಆಗಮಿಸಿದ್ದರು.


ಕಾರ್ಯಕ್ರಮ ಹಿನ್ನೆಲೆ ನಗರದಲ್ಲಿ ಬೈಕ್ ಜಾಥಾ (Bike Rally) ಸಹ ಆಯೋಜಿಸಲಾಗಿತ್ತು.  ಬೈಕ್ ಜಾಥಾ ವೇಳೆ ಸೈಯದ್ ಫರ್ವೇಜ್ ಎಂಬವರ ಕಾರ್​ ಗೆ ಹಾನಿಯುಂಟು ಮಾಡಲಾಗಿದೆಯಂತೆ. ಈ ಸಂಬಂಧ ಸೈಯದ್ ಫರ್ವೇಜ್ ನೀಡಿದ ದೂರಿನ ಆಧಾರದ ಮೇಲೆ 15 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಹರ್ಷ ಸೋದರಿ ಸಹ ಭಾಗಿಯಾಗಿದ್ದರು.


ಶಿವಮೊಗ್ಗ ಗಲಾಟೆ


ಇದನ್ನೂ ಓದಿ:  Bangalore University Student: ಶಿಲ್ಪಾ ಸಾವು, ತಿರುಗಿಬಿದ್ದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ


ಕಾರ್ ಜಖಂ


ಸೈಯದ್ ಫರ್ವೇಜ್ ಅವರು ತಮ್ಮ ಇನ್ನೋವಾ ಕಾರ್​ ಮನೆ ಮುಂದೆ ಪಾರ್ಕ್ ಮಾಡಿದ್ದರು. ಬೈಕ್ ಜಾಥಾ ವೇಳೆ ಕಾರಿನ ಎಡಭಾದ ಹೆಡ್​ ಲೈಟ್​, ಸೈಡ್​ ಡೋರ್, ಬ್ಯಾಕ್​ ಸೈಡ್ ಮಡ್​ ಗಾರ್ಡ್​ ಜಖಂಗೊಳಿಸಲಾಗಿದೆ ಎಂದು ಸೈಯದ್ ಫರ್ವೇಜ್ ಆರೋಪಿಸಿದ್ದಾರೆ.

Published by:Mahmadrafik K
First published: