"Harsha Murder Caseನಲ್ಲಿ ಹಂತಕರಿಗೆ ಕಠಿಣ ಶಿಕ್ಷೆಯಾಗಲಿದೆ" ಸಚಿವ ಆರಗ ಜ್ಞಾನೇಂದ್ರ ಭರವಸೆ

ಕೋಲಾರ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ಕೋಲಾರ ಹಾಗೂ ಕೆಜಿಎಫ್ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ಆರಗ ಜ್ಞಾನೇಂದ್ರ, ಎರಡು ಇಲಾಖೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ರು. ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ತನಿಖೆ ಬಗ್ಗೆಯೂ ಮಾಹಿತಿ ನೀಡಿದರು.

ಗೃಹಸಚಿವ ಆರಗ ಜ್ಞಾನೇಂದ್ರ

ಗೃಹಸಚಿವ ಆರಗ ಜ್ಞಾನೇಂದ್ರ

  • Share this:
ಕೋಲಾರ: ಶಿವಮೊಗ್ಗ (Shivamogga) ಜಿಲ್ಲೆಯ ಬಜರಂಗದಳ (Bajarangadal) ಸಂಘಟನೆ ಕಾರ್ಯಕರ್ತ  ಹರ್ಷ (Hursha) ಕೊಲೆ (Murder) ನಂತರ ಕೋಲಾರ (Kolar) ಜಿಲ್ಲೆಯ ಎಸ್ಪಿ (SP) ಕಚೇರಿಗೆ ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ (Araga Jnanendra) ಭೇಟಿ ನೀಡಿ, ಕೋಲಾರ ಹಾಗು ಕೆಜಿಎಫ್ (KGF) ಪೊಲೀಸ್ ಇಲಾಖೆಯ ಎಸ್ಪಿ ಹಾಗೂ ಡಿವೈಎಸ್ಪಿಗಳ (Dysp) ಸಭೆ ನಡೆಸಿದರು.  ಸಭೆಯಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭಾಗಿಯಾಗಿದ್ದು, ಜಿಲ್ಲೆಯ ಸದ್ಯದ ಪರಿಸ್ತಿತಿ ಹಾಗು ಸೂಕ್ಷ ಪ್ರದೇಶಗಳಲ್ಲಿನ ಭದ್ರತೆ, ಗಡಿಯಲ್ಲಿನ ಭದ್ರತೆ ಕುರಿತಂತೆ ಅಧಿಕಾರಿಗಳಿಂದ ಗೃಹ ಸಚಿವರು ಮಾಹಿತಿ  ಕಲೆಹಾಕಿದರು. ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕೋಲಾರದಲ್ಲಿ ಕಾನೂನು ಸುವ್ಯವಸ್ತೆ ಉತ್ತಮ ಸ್ತಿತಿಯಲ್ಲಿದೆ, ಮಟ್ಕಾ, ಗಾಂಜಾ ವನ್ನು ಪೊಲೀಸರು ಹತೋಟಿಗೆ ತಂದಿದ್ದಾರೆ, ಇನ್ನು ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುವ ಕಸಾಯಿಖಾನೆ, ಜಾನುವಾರ ಸಾಗಣೆ ತಡೆಗಟ್ಟುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇನ್ನು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಮೇಲೆ ಜನರಿಗೆ ಉತ್ತಮ ಅಭಿಪ್ರಾಯ ಇದೆ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು,  ಇನ್ನು ಕೆಜಿಎಪ್ ಎಸ್ಪಿ ಕಚೇರಿ ಸ್ತಳಾಂತರ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವರು ಹೇಳಿದರು.

“144 ಸೆಕ್ಷನ್ ರೂಲ್ಸ್ ಬ್ರೇಕ್ ಆಗಿಲ್ಲ” ಡಿಕೆಶಿಗೆ ಹೋಮ್ ಮಿನಿಸ್ಟರ್ ತಿರುಗೇಟು

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣವನ್ನ ಪ್ರಾಮಾಣಿಕವಾಗಿ ತನಿಖೆ ಮಾಡಲಾಗುತ್ತಿದೆ, ಬಿಜೆಪಿಗೆ ಎಸ್‌ಡಿಪಿಐ ಜೊತೆಗೆ ಸಂಬಂದ ಇರಲು ಹೇಗೆ ಸಾಧ್ಯ, ಪ್ರಮೋದ್ ಮುತಾಲಿಕ್ ಸುಮಾರು ವಿಚಾರ ಹೇಳುತ್ತಾರೆ,  ಅದೆಲ್ಲ ಸತ್ಯಕ್ಕೆ ದೂರವಾದದ್ದು  ಎಂದು ಕೋಲಾರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಮೋದ್ ಮುತಾಲಿಕ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇನ್ನು ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದ ವೇಳೆ,  ಹರ್ಷ ಮೃತದೇಹ ಮೆರವಣಿಗೆ ವಿಚಾರಕ್ಕೆ  ಕಾನೂನು ಉಲ್ಲಂಘನೆ ಆಗಿಲ್ಲ, ಸಂಘಟನೆಯ ಕಾರ್ಯಕರ್ತ ಎಂದು ಸಚಿವ ಈಶ್ವರಪ್ಪ  ಮುಂದೆ ಸಾಗಿದ್ದಾರೆ, ಜನರು ಪಾರ್ಥೀವ ಶರೀರದ ಮೆರವಣಿಗೆ ಹಿಂಬಾಲಿಸಿದ್ದಾರೆ, 144 ಸೆಕ್ಷನ್ ಇದೆಯೆಂದು ಪೊಲೀಸರು ಮತ್ತಷ್ಟು ಬಿಗಿ ಮಾಡಿದ್ದರೆ ಇನ್ನು ಐದಾರು ಹೆಣ ಉರುಳುತ್ತಿತ್ತು, ಪೊಲೀಸರು ಸಂಯಮದಿಂದ ಎಲ್ಲವನ್ನು ನಿಭಾಯಿಸಿದ್ದಾರೆ ಎಂದರು.

ಇದನ್ನೂ ಓದಿ: ಕೊಲೆಗೂ ಮುನ್ನ Harsha Mobileಗೆ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್: ಯಾರವರು? ಹೊಸ ತಿರುವು!

ಮೊನ್ನೆ ಕಾಂಗ್ರೆಸ್ ಪಾದಯಾತ್ರೆ ವೇಳೆ ಎಲ್ಲಾ ನಾಯಕರು ಕಾನೂನು ಉಲ್ಲಂಘಿಸಿದ್ದಾರೆ ಅದರ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿ, 24 ಗಂಟೆಯಲ್ಲಿ 8 ಆರೋಪಿಗಳನ್ನ ಬಂದಿಸಿದ್ದೇವೆ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲಸಿದೆ. ಕುಮಾರಸ್ವಾಮಿ ವಿರೋದ ಪಕ್ಷದಲ್ಲಿ ಇದ್ದುಕೊಂಡು ಅದನ್ನು ಮಾತ್ರ ಹೇಳಲು ಸಾಧ್ಯ ಎಂದರು.

“ಹರ್ಷ ತಾಯಿಯ ಆಸೆಯಂತೆ ಕಠಿಣ ಕ್ರಮ ಜರುಗುಸಲಿದ್ದೇವೆ”

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಕೇಳಿಬರ್ತಿರುವ ಮಹಿಳೆಯರ ವಿಡಿಯೋ ಕಾಲ್ ಬಗ್ಗೆ ನಂಗೆ ಮಾಹಿತಿಯಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದು, ಕೆಲವೊಮ್ಮೆ ಮಾಹಿತಿಗಳು ತಪ್ಪಿರ ಬಹುದು ಎಂದಿದ್ದಾರೆ, ಭದ್ರತೆ ವಿಚಾರವಾಗಿ ಸರ್ಕಾರ ಎಲ್ಲರಿಗು ರಕ್ಷಣೆ ನೀಡುವಲ್ಲಿ ಬದ್ದತೆ ತೋರಿದೆ, ಬೇರೆ ಸರ್ಕಾರದಲ್ಲಿ ಕೊಲೆಗಳು ನಡೆದಾಗ ಅಪರಾಧಿಗಳನ್ನ ಪತ್ತೆಹಚ್ಚಲು ತಿಂಗಳ ಗಟ್ಟಲೆ ಸಮಯ ತೆಗೆದುಕೊಂಡಿದ್ದಾರೆ ಅಂತ ಟಾಂಗ್ ಕೊಟ್ರು.

ಹರ್ಷ ಕೊಲೆ ಪ್ರಕರಣದಂತಹ ಕೇಸ್‌ಗಳು ರಾಜ್ಯದಲ್ಲಿ ಕೊನೆಯಾಗಬೇಕು, ಕೆಲವರು ಎನ್‍ಕೌಂಟರ್ ಮಾಡಿ ಎನ್ನುತ್ತಾರೆ, ಆದರೆ ಹಾಗೆ ಮಾಡಲು ಸಾಧ್ಯವಿಲ್ಲ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ವಿಶೇಷ ಅಭಿಯೋಜಕರನ್ನ ನೇಮಿಸುವೆ,  ನಾನು ಅವರ ತಾಯಿಯನ್ನ ಭೇಟಿಯಾದಾಗ, ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು, ಅದರಂತೆ   ಹರ್ಷ ಸಾವಿಗೆ  ನ್ಯಾಯ ಕೊಡಿಸೋದಾಗಿ ಸಚಿವ ಅರಗ ಜ್ಞಾನೇಂದ್ರ ಭರವಸೆ ನೀಡಿದರು.

ಇದನ್ನೂ ಓದಿ: Explained: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಟಾರ್ಗೆಟ್ ಆಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದು ಏನು?

“ಪೊಲೀಸರ ವಿರುದ್ಧವೂ ತನಿಖೆ”

ಇನ್ನು ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿದ ಗೃಹ ಸಚಿವರು, ಅವರ ಕಾಲದಲ್ಲಿನ ಅಸಮರ್ಥತೆಯನ್ನ ಮರೆತಿದ್ದಾರೆ, ಶಿವಾಜಿನಗರದಲ್ಲಿ ಹಾಡಹಗಲೆ ರುದ್ರೇಶ್ ಕೊಲೆಯಾಗಿದ್ದು, ಆರೋಪಿಗಳು ಶೀಘ್ರದಲ್ಲಿ ಪತ್ತೆಯಾಗಲಿಲ್ಲ, ಹರ್ಷ ಕೊಲೆ ಆರೋಪಿಗಳ ವಿರುದ್ದ ಎರಡು ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳಿದೆ, ಇವರನ್ನ ಹೆಡೆಮುರಿ ಕಟ್ಟುವಲ್ಲಿ ಸ್ತಳೀಯ ಪೊಲೀಸರು ವಿಫಲರಾಗಿದ್ದಾರೆ, ಹಾಗಾಗಿ ಪೊಲೀಸರ ವಿರುದ್ದ ತನಿಖೆ ಮಾಡುವಂತೆ, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರೊದಾಗಿ ತಿಳಿಸಿದರು.
Published by:Annappa Achari
First published: