ಸೌದಿಯಿಂದ ಬಿಡುಗಡೆಯಾಗಿ ಬಂದ ಹರೀಶ್ ಬಂಗೇರ; ಜೈಲಿನ ಕರಾಳ ನೆನಪು ಬಿಚ್ಚಿಟ್ಟ ಕುಂದಾಪುರ ನಿವಾಸಿ

ಜೈಲುಪಾಲು ಮಾಡಿ ಜೀವನ ಹಾಳು ಮಾಡಬೇಕೆನ್ನುವ ದುರುದ್ದೇಶದಿಂದ ಹರೀಶ್ ಅವರ ಹೆಸರಲ್ಲಿ‌ ನಕಲಿ ಖಾತೆ ತೆರೆದು ಅಲ್ಲಿ ಸೌದಿ ದೊರೆ ಸಲ್ಮಾನ್ ‌ಬಿನ್‌ ಅಬ್ದುಲ್ಲಾಜೀಜ್ ಬಗ್ಗೆ ಅವಾಚ್ಯ ಶಬ್ದ ಗಳಿಂದ ನಿಂದಿಸಿ ಮೆಕ್ಕಾ ಕುರಿತು ಅವಹೇಳನಕಾರಿ ಪೋಸ್ಟ್​​ನ್ನು ಹರೀಶ್ ಅವರ ನಕಲಿ ಖಾತೆಯಲ್ಲಿ ಹರಿಯಬಿಡುತ್ತಾರೆ.

ಹರೀಶ್ ಬಂಗೇರ- ಹೂವಿನ ಬೊಕ್ಕೆ ಹಿಡಿದಿರುವವರು

ಹರೀಶ್ ಬಂಗೇರ- ಹೂವಿನ ಬೊಕ್ಕೆ ಹಿಡಿದಿರುವವರು

  • Share this:
ಉಡುಪಿ(ಆ.21): ಅದು ಬರೋಬ್ಬರಿ ಒಂದು ವರ್ಷ ಎಂಟು ತಿಂಗಳು. ದೂರದ ಸೌದಿ ದೇಶದಲ್ಲಿ ಮಾಡದ ತಪ್ಪಿಗೆ ಖೈದಿಯಾಗಿದ್ದ. ಹಲವು ಹೋರಾಟಗಳ ಫಲವಾಗಿ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ನಿವಾಸಿ ಹರೀಶ್ ಬಂಗೇರ ನಿರಪರಾಧಿಯಾಗಿ ತವರಿಗೆ ಆಗಮಿಸಿದ್ದಾರೆ.

ತನ್ನ ಮನೆಯ ಕಷ್ಟವನ್ನ ತಕ್ಕಮಟ್ಟಿಗಾದರೂ ಸರಿಮಾಡಬೇಕು. ತನ್ನ ಪತ್ನಿ  ಹಾಗೂ  ಮಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಲವು ಕನಸನ್ನ ಹೊತ್ತು ಸೌದಿ ದೇಶದಲ್ಲಿ ಎಸಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು ಹರೀಶ್ ಬಂಗೇರ. ಅದೊಂದು ದಿನ ಭಾರತದಲ್ಲಿ ನಡೆಯುತ್ತಿದ್ದ ಎನ್ ಆರ್‌ಸಿ ಎಂಬ ಧರ್ಮದ ನಡುವಿನ ಸಮರದ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನ ಗಮನಿಸಿದ ಹರೀಶ್ ಬಂಗೇರ, ಅದನ್ನ ಲೈಕ್ ಮಾಡಿ ಶೇರ್ ಮಾಡಿದ್ದಾರೆ‌. ಅಲ್ಲಿಂದಲೇ ಶುರುವಾದವು ನೋಡಿ ಹರೀಶ್​ಗೆ ಕೆಟ್ಟ ದಿನಗಳು.

ಅದನ್ನ ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ನಿವಾಸಿಗಳಾದ ಅಬ್ದುಲ್‌ ತುಯೇಜ್ ಹಾಗೂ ಅಬ್ದುಲ್‌ ಹುಯೇಜ್ ಎಂಬ  ಸಹೋದರರು ಹರೀಶ್ ಬಂಗೇರ ಅವರ ಪೋಸ್ಟ್ ಕಂಡು ಸೌದಿಯಲ್ಲಿ ರುವ ಹರೀಶ್ ಅವರಿಗೆ ಬುದ್ದಿ ಕಲಿಸಬೇಕು, ಜೈಲುಪಾಲು ಮಾಡಿ ಜೀವನ ಹಾಳು ಮಾಡಬೇಕೆನ್ನುವ ದುರುದ್ದೇಶದಿಂದ ಹರೀಶ್ ಅವರ ಹೆಸರಲ್ಲಿ‌ ನಕಲಿ ಖಾತೆ ತೆರೆದು ಅಲ್ಲಿ ಸೌದಿ ದೊರೆ ಸಲ್ಮಾನ್ ‌ಬಿನ್‌ ಅಬ್ದುಲ್ಲಾಜೀಜ್ ಬಗ್ಗೆ ಅವಾಚ್ಯ ಶಬ್ದ ಗಳಿಂದ ನಿಂದಿಸಿ ಮೆಕ್ಕಾ ಕುರಿತು ಅವಹೇಳನಕಾರಿ ಪೋಸ್ಟ್​​ನ್ನು ಹರೀಶ್ ಅವರ ನಕಲಿ ಖಾತೆಯಲ್ಲಿ ಹರಿಯಬಿಡುತ್ತಾರೆ.

ಇದನ್ನೂ ಓದಿ:Bengaluru: ಬಿಎಂಟಿಸಿಯ ಮೂರು ಮಾರ್ಗಗಳಲ್ಲಿ ಎಸಿ ಬಸ್ ಸೇವೆ; ಬೆಂಗಳೂರು ದರ್ಶಿನಿ ಪುನಾರಂಭ

2019ರ ಡಿಸೆಂಬರ್‌ ತಿಂಗಳಲ್ಲಿ ನಡೆದ ಈ ಕೃತ್ಯ ದೊಡ್ಡ ಚರ್ಚೆಗೆ ಕಾರವಾಗುತ್ತೆ.‌ ಹಲವರು ಹರೀಶ್ ಅವರಿಗೆ ಬೆದರಿಕೆ ಒಡ್ಡುತ್ತಾರೆ. ಈ ದೇಶದಿಂದ ಹೋಗಲು ಬಿಡುವುದಿಲ್ಲ.  ಇಲ್ಲೇ ನಿನ್ನ ಕತೆ ಮುಗಿಯಿತು ಎಂಬ ಬೆದರಿಕೆ ಬರುತ್ತೆ‌.‌ ಕೆಲಸ‌ ಮಾಡುವ ಕಂಪೆನಿಯಲ್ಲೂ ಹಲ್ಲೆ ಯತ್ನ ನಡೆಯುತ್ತೆ.‌ ಕೂಡಲೇ ಕೆಲವು ಸಹೋದ್ಯೋಗಿಗಳ ಸಹಾಯದಿಂದ ತಾನಿದ್ದ ಕೋಣೆ ಸೇರುತ್ತಾರೆ ಹರೀಶ.

ಇನ್ನು ಕೆಲ‌ ಸ್ನೇಹಿತರ ಮಾತನ್ನ ಕೇಳಿದ‌ ಹರೀಶ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯನ್ನ ಕೂಡ ಕೇಳುತ್ತಾರೆ. ಈ ಕ್ಷಮೆ ವಿಡಿಯೋ ಕೂಡ ಹರಿಯ ಬಿಟ್ಟು ಅವಮಾನ ಮಾಡಲಾಗುತ್ತೆ‌.‌ ಕೊನೆಗೆ ಹರೀಶ್ ಕೆಲಸ ಮಾಡುತ್ತಿದ್ದ ಕಂಪೆನಿ ಹರೀಶ್​ನನ್ನು ಪೊಲೀಸರ ವಶಕ್ಕೆ ‌ನೀಡುತ್ತಾರೆ. ಇದನ್ನ ಬಂಧನ ಎಂಬಂತೆ ಬಿಂಬಿಸುವ ಕೆಲಸವು‌‌ ನಡೆಯುತ್ತೆ.

ಸೌದಿ ರಾಜನ ಬಗ್ಗೆ ಅವಹೇಳನ ಮಾಡಿದರೆ‌ 5 ವರ್ಷ ಜೈಲು ಶಿಕ್ಷೆ ತಪ್ಪಲ್ಲ. ಯಾರ ಮಾತು, ಇನ್ಪ್ಲೂಯೆನ್ಸ್ ನಡೆಯಲ್ಲ.‌ ಹೀಗಿರುವಾಗ ಹರೀಶ ಅವರ ಸ್ನೇಹಿತ ಲೋಕೇಶ್, ಮಾನವ ಹಕ್ಕು ಹೋರಾಟಗಾರ ರವೀಂದ್ರ ನಾಥ ಶ್ಯಾನುಭಾಗ್ ಅವರ ಎಡೆಬಿಡದೆ ಕಾನೂನು ಹೋರಾಟ, ಮನವೊಲಿಸುವಿಕೆ ಫಲವಾಗಿ ಒಂದು ವರ್ಷ 8 ತಿಂಗಳಲ್ಲೇ ಹರೀಶ್ ನಿರಪರಾಧಿಯಾಗಿ ಹೊರಬರುವಂತಾಯಿತು.

ಬಿಡುಗಡೆಯಾಗಿ ತವರಿಗೆ ಆಗಮಿಸಿದ ಖುಷಿ ಒಂದೆಡೆಯಾದರೆ ಮಾಡದ ತಪ್ಪಿಗೆ ‌ಶಿಕ್ಷೆ ಅನುಭವಿಸಿದ ನೋವು ಇನ್ನೊಂದೆಡೆ ಇದೆ ಎಂದು‌ ನೋವನ್ನ‌ ತೋಡಿಕೊಂಡ್ರು ಹರೀಶ್ ಬಂಗೇರ.

ಇನ್ನು ಸೌದಿ ಜೈಲಿನಲ್ಲಿ ಕಳೆದ ಕರಾಳ ದಿನ ನ್ಯೂಸ್18ಕನ್ನಡ ಜೊತೆ ಹರೀಶ್ ಹಂಚಿಕೊಂಡಿದ್ದಾರೆ. ಎಷ್ಟೇ ನಿರಪರಾಧಿಯೆಂದು ಹೇಳಿದರೂ ಕೇಳದ ಸೌದಿ ಜೈಲಿನ ಮೇಲಾಧಿಕಾರಿಗಳು ಹಾಗೂ ನ್ಯಾಯಾಲಯ ನನ್ನನ್ನ ಜೈಲಿಗಟ್ಟಿತ್ತು.‌ ನಖಲಿ ಫೇಸ್ ಬುಕ್ ನಲ್ಲಿ ನನ್ನದೇ ಭಾವಚಿತ್ರ ಇರುವ ಕಾರಣ ನೀನೇ ಅಪರಾಧಿ ಎಂದು ಹೇಳಲಾಗಿತ್ತು.‌ ಒಂದೇ ಕೋಣೆಯಲ್ಲಿ ಒಂದು ವರ್ಷ ಎರಡು ತಿಂಗಳು ಇಡಲಾಗಿತ್ತು. ಯಾರ ಸಂಪರ್ಕಕ್ಕೂ ಅವಕಾಶ ಕೊಡಲಿಲ್ಲ. ಕರೆ ಮಾಡಲು ಚಾನ್ಸೇ ಇರಲಿಲ್ಲ.‌ ಪ್ರತೀ‌ ಗಂಟೆಯೂ ನರಕವಾಗಿತ್ತು. ದಿನ ಹೋದಂತೆ ಮನಸ್ಸಿನ ನೋವು ಹೆಚ್ಚುತ್ತಿತ್ತು. ಯಾರ ಸಹಾಯವೂ ಇಲ್ಲ. ಸೌದಿಯಲ್ಲಿ ಹಿಂದೂಗಳಿಗೆ ಬೆಲೆಯೇ ಇಲ್ಲ. ಸಣ್ಣ ತಪ್ಪು ‌ಮಾಡಿದರೂ ದೊಡ್ಡ ಶಿಕ್ಷೆ. ‌ಆದರೆ ನಾನು ತಪ್ಪೇ ಮಾಡದೆ ಶಿಕ್ಷೆ ಅನುಭವಿಸಿದ್ದೇನೆ. ನನ್ನ ಈ‌ ಶಿಕ್ಷಗೆ ಕಾರಣರಾದ ಸಹೋದರರು ಒಂದೇ ವಾರದಲ್ಲಿ ಬೇಲ್ ಮೇಲೆ‌ ಹೊರಗೆ ಬಂದಿದ್ದಾರೆ. ಇದು ಸೌದಿಗೂ ಭಾರತದ ನೆಲಕ್ಕೆ ಇರುವ ವ್ಯತ್ಯಾಸ. ನಾನು ಅನುಭವಿಸಿದಕ್ಕಿಂತ ದೊಡ್ಡ ಶಿಕ್ಷೆ ಆ ಇಬ್ಬರು ಸಹೋದರರಿಗೆ ಆಗಬೇಕು ಅಂತ ಹರೀಶ್ ನ್ಯೂಸ್18ಕನ್ನಡ ದ ಮೂಲಕ ಒತ್ತಾಯಿಸಿದ್ರು.

ಇದನ್ನೂ ಓದಿ:ಆಲಮಟ್ಟಿಗೆ ಡ್ಯಾಂಗೆ ಬಾಗಿನ ಅರ್ಪಿಸಿ, ರೈತರ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ

ನಾನು ಅನುಭವಿಸಿದ ಜೈಲಿನ ದಿನಗಳ ಲೆಕ್ಕದಲ್ಲಿ ಹಣ ನೀಡಬೇಕಿತ್ತು. ನನ್ನ ಮೊಬೈಲ್ ಕೂಡ ನೀಡಿಲ್ಲ.  ಜೊತೆಗೆ ಕಂಪೆನಿ‌ ಎರಡು ವರ್ಷದ ಸಂಬಳ‌ ಇನ್ನೂ ನೀಡಿಲ್ಲ. ನನಗೆ ಅನ್ಯಾಯವಾಗಿದೆ. ಕಳೆದು ಹೋದ ಸಮಯದ ಹೊಣೆ ಯಾರು. ಮನೆಯ ಸಾಲ ಇನ್ನೂ ತೀರಿಲ್ಲ. ಇಎಂಐ ಸಮಯ‌ ಕೈ‌ಮೀರಿದೆ.‌ ಇದಕ್ಕೆಲ್ಲ ಹೊಣೆ ಯಾರು.‌ ಇಲ್ಲೇ ಒಂದೊಳ್ಳೆ‌ ಕೆಲಸದ ಅನಿವಾರ್ಯ ಇದೆ. ಜೊತೆಗೆ‌ ಕೆಲಸ ಮಾಡಿಸಿಕೊಂಡಿದ್ದ ಸೌದಿ ಕಂಪೆನಿ‌ ನನ್ನ‌ಬಾಕಿ‌ ಸಂಬಳ‌ ನೀಡಲೇಬೇಕು ಎಂದು ಹೇಳಿದರು.

ಇನ್ನು ನನ್ನನ್ನು ಜೈಲಿಗೆ ಹೋಗುವಂತೆ ಮಾಡಿದ ಇಬ್ಬರು ಸಹೋದರರಿಗೆ ಶಿಕ್ಷೆ ಆಗಲೇಬೇಕು ಅಂತ ಒತ್ತಾಯಿಸಿದ್ದಾರೆ ಹರೀಶ್ ಬಂಗೇರ‌ ಹಾಗೂ ಹರೀಶ್ ಪತ್ನಿ ಸುಮನ. ಸೌದಿಯಲ್ಲಿ ‌ಹರೀಶ್ ಅವರಂತೆ ಹಲವರು ನಿರಪರಾಧಿಯಾಗಿ ಜೈಲು ವಾಸ ಇನ್ನೂ ಅನುಭವಿಸುತ್ತಿದ್ದಾರೆ.‌ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ‌ಸಹೋದರರಂತೆ ಹಲವರು ಸೌದಿಯಲ್ಲಿರುವ ಹಿಂದೂ ಯುವಕರನ್ನೇ ಟಾರ್ಗೆಟ್ ‌ಮಾಡಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಜೈಲಿಗಟ್ಟುವ ಕೆಲಸದಲ್ಲಿದ್ದಾರೆ‌ ಹಲವು ಯುವಕರು.. ಇಂತಹ ಯುವಕರನ್ನು ‌ಹೆಡೆಮುರಿ ಕಟ್ಟುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯಬೇಕಿದೆ.
Published by:Latha CG
First published: