• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Puttur: ಉಜಿರೆಯಲ್ಲಿ ಉದ್ಯಮಿಯಿಂದ ನೀಚ ಕೃತ್ಯ; ಕೆಲಸ ಕೊಡಿಸೋ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

Puttur: ಉಜಿರೆಯಲ್ಲಿ ಉದ್ಯಮಿಯಿಂದ ನೀಚ ಕೃತ್ಯ; ಕೆಲಸ ಕೊಡಿಸೋ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಾಬರಿಗೊಂಡ ಮಹಿಳೆ ಕಾರಿನಲ್ಲಿ ಕಿರುಚಾಟ ಮಾಡಿ ಹೊರ ಬಂದಿದ್ದರಂತೆ. ಈ ವೇಳೆ ಅದೇ ಮಾರ್ಗವಾಗಿ ಬೈಕ್​​ನಲ್ಲಿ ಬಂದ ಕೆಲ ಸಾರ್ವಜನಿಕರು ಮಹಿಳೆಯನ್ನು ರಕ್ಷಣೆ ಮಾಡಿದ್ದರು.

  • Share this:

ಪುತ್ತೂರು: ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ (Woman) ಉದ್ಯಮಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳ್ತಂಗಡಿ (Belthangady) ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಉದ್ಯಮಿ ತನ್ನ ಕಾರಿನಲ್ಲಿ (Car) ಮಹಿಳೆಗೆ, ಸೂಪರ್ ಮಾರ್ಕೆಟ್​ನ (Market) ಬಿಲ್ಲಿಂಗ್ ತೋರಿಸುವುದಾಗಿ ಕಾರಿನಲ್ಲಿ ಕರೆದೊಯ್ದು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಉಜಿರೆಯಲ್ಲಿರುವ ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಪ್ರಭಾಕರ ಹೆಗ್ಡೆ ಮೇಲೆ ಲೈಂಗಿಕ ಕಿರುಕುಳ (Harassment) ಆರೋಪ ಕೇಳಿ ಬಂದಿದೆ.


20 ವರ್ಷದ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಆಕೆಯ ಗಂಡನಿಂದ ಉದ್ಯಮಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ ಆರೋಪಿ ಉದ್ಯಮಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: CT Ravi: ಗೆದ್ದಾಗ ಅಮಲಿನಲ್ಲಿ ಮಾತಾಡ್ತಿದ್ದಾರೆ, ಆ ಅಮಲು ಎಷ್ಟು ದಿನ ಇರುತ್ತೆ ನೋಡೋಣ! ಕಾಂಗ್ರೆಸ್​​ ನಾಯಕನಿಗೆ ಸಿಟಿ ರವಿ ತಿರುಗೇಟು


ಮಹಾವೀರ ಟೆಕ್ಸ್ ಟೈಲ್ ಹಾಗೂ ಧರ್ಮಸ್ಥಳದಲ್ಲಿರುವ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕರಾಗಿರುವ ಉದ್ಯಮಿ ಮಹಿಳೆಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರಂತೆ. ತನ್ನ ಸೂಪರ್ ಮಾರ್ಕೆಟ್​ನಲ್ಲಿ ಬಿಲ್ಲಿಂಗ್ ತೋರಿಸುವುದಾಗಿ ಕಾರಿನಲ್ಲಿ ಕರೆದೊಯ್ದು, ಕಾರಿನಲ್ಲೇ ಮಹಿಳೆಯ ಖಾಸಗಿ ಭಾಗಗಳನ್ನ ಮುಟ್ಟಲು ಯತ್ನಿಸಿ ಲೈಂಗಿಕ ಕಿರುಕುಳ ನೀಡಿದ್ದರಂತೆ.


top videos



    ಇದರಿಂದ ಗಾಬರಿಗೊಂಡ ಮಹಿಳೆ ಕಾರಿನಲ್ಲಿ ಕಿರುಚಾಟ ಮಾಡಿ ಹೊರ ಬಂದಿದ್ದರಂತೆ. ಈ ವೇಳೆ ಅದೇ ಮಾರ್ಗವಾಗಿ ಬೈಕ್​​ನಲ್ಲಿ ಬಂದ ಕೆಲ ಸಾರ್ವಜನಿಕರು ಮಹಿಳೆಯನ್ನು ರಕ್ಷಣೆ ಮಾಡಿದ್ದರಂತೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು