Mother assault: ಹಠ ಮಾಡುತ್ತಿದ್ದ ಮಗುವಿಗೆ ಬರೆ ಹಾಕಿದ‌ ತಾಯಿ, ಮತ್ತೊಂದೆಡೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿದ ಪತಿ!

ಮಕ್ಕಳು ಚಿಕ್ಕವರಿದ್ದಾಗ ಹಠ ಮಾಡೋದು ಸಾಮಾನ್ಯ. ಆದರೆ ತಾಯಿಯಾದವಳು ಮಕ್ಕಳ ತಪ್ಪನ್ನು ತಿದ್ದಿ, ಸಮಾಧಾನ ಮಾಡ್ಬೇಕು. ಆದ್ರೆ ಇಲ್ಲೊಬ್ಬ ಕಠೋರ ತಾಯಿ ತನ್ನ ಮಗುವಿಗೆ ಬರೆಹಾಕಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರೆ. ತಾಯಿ (Mother) ಎಂಬ ಪದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ. ಈ ಪದವು ಸ್ವತಃ ಸಂಪೂರ್ಣವಾಗಿದೆ. ಮೊದಲಿಗೆ, ತಾಯಿ ಮಗುವಿಗೆ ಜನ್ಮ (Birth) ನೀಡುತ್ತಾಳೆ. ನಂತರ ತನ್ನ ನೋವು ಮತ್ತು ದೈಹಿಕ ನೋವುಗಳನ್ನು ಮರೆತು ಮಗುವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾಳೆ. ತಾಯಿಯು ನಮ್ಮ ಜೀವನದ (Life) ಬಹುಮುಖ್ಯ ಭಾಗ. ಏಕೆಂದರೆ ತಾಯಿಯು ಶಾಲೆಗಿಂತ (School) ಮೊದಲೇ ಮಕ್ಕಳಿಗೆ ಸನ್ಮಾರ್ಗ ತೋರುತ್ತಾಳೆ. ತಾಯಿ ಯಾವಾಗಲೂ ತನ್ನ ಮಗುವಿನ (Children) ಬಗ್ಗೆ ಕಾಳಜಿ ವಹಿಸುತ್ತಾಳೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿ ನಡೆಸುತ್ತಾಳೆ. ಆದರೆ ಇಲ್ಲೊಬ್ಬಳು ತಾಯಿ ತನ್ನ ಪುಟ್ಟ ಮಗುವಿಗೆ ಬರೆ (Assault) ಹಾಕಿದ್ದಾಳೆ.

ತಾಯಿ ತನ್ನ ಮಕ್ಕಳ ಕಡೆ ಸಂಪೂರ್ಣ ಗಮನಹರಿಸುತ್ತಾಳೆ. ಮಕ್ಕಳ ಬೇಕು-ಬೇಡಗಳತ್ತ ನೋಡುತ್ತಿರುತ್ತಾಳೆ. ಮಕ್ಕಳು ಚಿಕ್ಕವರಿದ್ದಾಗ ಹಠ ಮಾಡೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಕಠೋರ ತಾಯಿ ತನ್ನ ಮಗುವಿಗೆ ಬರೆಹಾಕಿದ್ದಾಳೆ.

ಹಠ ಮಾಡಿದ್ದಕ್ಕೆ ಮಗುವಿಗೆ ಬರೆ!

ಈ ಘಟನೆ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ. ಇಲ್ಲಿನ ನಾವೂರ ಎಂಬಲ್ಲಿ 4 ವರ್ಷದ ಮಗು ಯಾವಾಗಲೂ ಹಠ ಮಾಡುತ್ತಿತ್ತಂತೆ. ಇದರಿಂದ ಬೇಸತ್ತ ತಾಯಿ ಮಗುವಿಗೆ ಬರೆ ಹಾಕಿದ್ದಾಳೆ. ನಾಲ್ಕು ವರ್ಷದ ಮಗುವಿಗೆ ಸಟ್ಟುಗ ಬಿಸಿ ಮಾಡಿ ಬರೆ ಎಳೆದಿದ್ದಾಳೆ.

ಇದನ್ನೂ ಓದಿ: ಕನ್ನಡದ ಖ್ಯಾತ ನಟಿಯಿಂದ ಶಾಕಿಂಗ್​ ನ್ಯೂಸ್​! ಮಕ್ಕಳಾಗ್ತಿಲ್ಲ ಅಂತ ಡಿವೋರ್ಸ್​ ಪಡೀತಿದ್ದಾರಂತೆ ಸೌತ್​ ಸ್ಟಾರ್​?

ಮುಖ, ಮೈಗೆ ಸೌಟಲ್ಲಿ ಸುಟ್ಟ ತಾಯಿ!

ಮಗು ಅರಚುತ್ತಿದ್ದರೂ ಬಿಡದೇ ತಾಯಿ ಮಗುವಿನ ಬೆನ್ನು, ಕಾಲು, ಮುಖಕ್ಕೆಲ್ಲಾ ಸೌಟನ್ನು ಬಿಸಿ ಮಾಡಿ ಇಟ್ಟಿದ್ದಾಳೆ. ಪರಿಣಾಮ ಮುಖ, ಕೈ, ಬೆನ್ನು ಸುಟ್ಟಿದೆ. ಸದ್ಯ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಚಿದಾಗ ಪ್ರಕರಣ ಬೆಳಕಿಗೆ!

ಹಠ ಮಾಡುತ್ತಿದ್ದ ಕಾರಣದಿಂದ ತಾಯಿ ಮಗುವಿಗೆ ಬರೆ ಹಾಕಿದ್ದು, ಮಗು ಅರಚಿಕೊಂಡಾಗ ವಿಚಾರ ಗೊತ್ತಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಘಟನೆಯ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗು ಮನೆಗೆ ಭೇಟಿ ನೀಡಿದರು. ಬಳಿಕ ಅಧಿಕಾರಿಗಳು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಫಿಯಾ, ಓರ್ವ ಅರೆಸ್ಟ್

1 ವರ್ಷದ ಮಗು ಸಾವು

ರಾಮನಗರದಲ್ಲಿ ಶೆಡ್​ನ‌ ಗೋಡೆ ಕುಸಿದು 1 ವರ್ಷದ ಮಗು ಸಾವನ್ನಪ್ಪಿದೆ. ಚನ್ನಪಟ್ಟಣ ನಗರದ ಹೌಸಿಂಗ್ ಬೋರ್ಡ್ ನಲ್ಲಿ ಈ ಘಟನೆ ಸಂಭವಿಸಿದೆ. ಮರಿಯಮ್ಮ ಸಾವನ್ನಪ್ಪಿರುವ ಮಗು. ಬಳ್ಳಾರಿಯ ಶಿರಗುಪ್ಪ ಮೂಲದ ಕುಟುಂಬ, ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದರು.

ಮಗು ಮರಿಯಮ್ಮರ ಕುಟುಂಬ ಕಟ್ಟಡ ನಿರ್ಮಾಣ ಕೆಲಸ ಮಾಡ್ತಿತ್ತು. ಲಾರಿಯೊಂದು ಶೆಡ್​ನ‌ ಗೋಡೆಗೆ ತಾಕಿ ಅವಘಡ ಸಂಭವಿಸಿದೆ. ಎರಡು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ.

ರಾಯಚೂರಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿದ ಪತಿ!

ಹೆಂಡತಿಯ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಗುಡದನಾಳದಲ್ಲಿ ನಡೆದಿದೆ. ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ. ರೇಣುಕಮ್ಮ (25) ಪತಿಯಿಂದ ಹತ್ಯೆಯಾದ ದುರ್ದೈವಿ. ಜಟ್ಟೆಪ್ಪ (30) ಕೊಲೆಗೈದ ಆರೋಪಿ.

ಕೊಲೆಗೈದು ಠಾಣೆಗೆ ಶರಣಾದ ಪತಿ!

ಪತ್ನಿ ರೇಣುಕಮ್ಮರನ್ನು ಕೊಲೆಗೈದ ಬಳಿಕ ಪತಿ ಸೀದಾ ಪೊಲೀಸ್​ ಠಾಣೆಗೆ ಬಂದಿದ್ದಾನೆ. ನಂತರ ಆರೋಪಿ ಪತಿ ಜಟ್ಟೆಪ್ಪ ಠಾಣೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಲಿಂಗಸಗೂರು ಸಿಪಿಐ ಸಂಜೀವ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published by:Thara Kemmara
First published: