• Home
  • »
  • News
  • »
  • state
  • »
  • Hassan: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕ; ಸಾರ್ವಜನಿಕರಿಂದ ಬಿತ್ತು ಧರ್ಮದೇಟು

Hassan: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕ; ಸಾರ್ವಜನಿಕರಿಂದ ಬಿತ್ತು ಧರ್ಮದೇಟು

ಶಿಕ್ಷಕನ ಬಂಧನ

ಶಿಕ್ಷಕನ ಬಂಧನ

ಮುಖ್ಯ ಶಿಕ್ಷಕ ನರೇಂದ್ರನ್ ಪದೇ ಪದೇ ತಮ್ಮ ಕಚೇರಿಗೆ ಕರೆಸಿ ಕಸ ಗುಡಿಸಲು ಹೇಳುವುದರ ಜೊತೆಗೆ ವಿದ್ಯಾರ್ಥಿನಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.

  • News18 Kannada
  • Last Updated :
  • Karnataka, India
  • Share this:

ಹಾಸನ (ನ.12): ಗುರುಗಳನ್ನು ಪೂಜ್ಯ ಭಾವದಲ್ಲಿ ಕಾಣ್ತಿವೆ. ಆದ್ರೆ ಅವರೇ ಭಕ್ಷಕರಾದ್ರೆ ಹೇಗೆ? ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಶಾಲೆಯೊಂದರ ಮುಖ್ಯ ಶಿಕ್ಷಕ ನರೇಂದ್ರನ್, 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.


ವಿದ್ಯಾರ್ಥಿನಿಯ ಜೊತೆ ಅನುಚಿತ ವರ್ತನೆ


ಮುಖ್ಯ ಶಿಕ್ಷಕ ನರೇಂದ್ರನ್ ಪದೇ ಪದೇ ತಮ್ಮ ಕಚೇರಿಗೆ ಕರೆಸಿ ಕಸ ಗುಡಿಸಲು ಹೇಳುವುದರ ಜೊತೆಗೆ ವಿದ್ಯಾರ್ಥಿನಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಅರ್ಧವಾರ್ಷಿಕ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿಯನ್ನು ಮತ್ತೇ ಕಚೇರಿಗೆ ಕರೆದು ಕೈ ಹಿಡಿದು ಮುತ್ತು ಕೊಡಲು ಮುಂದಾಗಿದ್ದ ಎನ್ನಲಾಗಿದೆ.


ಶಿಕ್ಷಕನ ಬಂಧನ


ಶಾಲೆಗೆ ಬಂದು ತರಾಟೆಗೆ ತೆಗೆದುಕೊಂಡ ಪೋಷಕರು


ಘಟನೆಯಿಂದ ನೊಂದ ವಿದ್ಯಾರ್ಥಿನಿ ಭಯದಿಂದ ಈ ವಿಷಯವನ್ನು ಪೋಷಕರಿಗೆ ಹೇಳದೇ ತನ್ನ ಕೆಲವು ಸಹಪಾಠಿಗಳೊಂದಿಗೆ ಈ ಬಗ್ಗೆ ಹೇಳಿಕೊಂಡಿದ್ದಾಳೆ. ನಂತರ ವಿದ್ಯಾರ್ಥಿನಿ ತನ್ನ ತಾಯಿ ಮತ್ತು ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದಾಳೆ. ವಿದ್ಯಾರ್ಥಿನಿಯ ಪೋಷಕರು ಮುಖ್ಯ ಶಿಕ್ಷಕನನ್ನು ಪ್ರಶ್ನಿಸಿ ಪೊಲೀಸ್​ ಠಾಣೆಗೆ ಬರುವಂತೆ ಹೇಳಿದ್ದಾರೆ. ಠಾಣೆಗೆ ಬರಲು​ ನಿರಾಕರಿಸಿದ ನರೇಂದ್ರನ್​ಗೆ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.


ಇನ್ನು ವಿದ್ಯಾರ್ಥಿನಿ ಹಾಗೂ ಸಂಬಂಧಿಕರು ಠಾಣೆಗೆ ತೆರಳದ ಕಾರಣ ಬೇಲೂರು ಜಿಲ್ಲಾ ನಿರೀಕ್ಷಕ ರವಿಕಿರಣ್, ಪಿಎಸ್​ಐ ಎಸ್.ಜಿ.ಪಾಟೀಲ್ ವಿದ್ಯಾರ್ಥಿನಿಯ ಮನೆಗೆ ತೆರಳಿ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿಕ್ಷಕನನ್ನು  ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.


ಕಾಮುಕನಿಗೆ 3 ವರ್ಷ ಶಿಕ್ಷೆ


ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ (Student) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಂಗಳೂರಿನ (Mangaluru) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದಲ್ಲಿ (Court) ಸಾಬೀತಾಗಿದ್ದು, ಅಪರಾಧಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕೊಕ್ಕಡದ ಪದ್ಮನಾಭ ಶಿಕ್ಷೆಗೊಳಗಾದ ಕಾಮುಕನಾಗಿದ್ದು, ಅಪ್ರಾಪ್ತ ಬಾಲಕಿಯೊಬ್ಬಳು ಶಾಲೆಯಿಂದ (School) ಮನೆಗೆ ವಾಪಸ್ ಆಗುತ್ತಿದ್ದಾಗ ಆಕೆಯನ್ನು ತಡೆದು ದೌರ್ಜನ್ಯ ಎಸಗಿದ್ದ.


ಪ್ರಕರಣದ ವಿವರ


2019 ರ ಆ.17 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತನ್ನ ಗೆಳತಿಯೊಂದಿಗೆ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದಳು. ಗೆಳತಿ ಆಕೆಯ ಮನೆಯ ಕಡೆಗೆ ತೆರಳಿದಳು. ಈ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದ ಆರೋಪಿ ಲೈಂಗಿಕ ಉದ್ದೇಶದಿಂದ ಆಕೆಯ ಕೈ ಹಿಡಿದು ಎಳೆದಿದ್ದ. ಆಕೆ ಬಿಡಿಸಿಕೊಂಡು ಗೆಳತಿಯ ಮನೆಯ ಕಡೆಗೆ ಹೋಗಿ ಗೆಳತಿಯನ್ನು ಕೂಗಿ ಕರೆದಿದ್ದಳು. ಆಗ ಆಕೆಯ ಗೆಳತಿ ಆಕೆಯ ತಂದೆಗೆ ವಿಷಯ ತಿಳಿಸಿದಳು. ಈ ವೇಳೆ ಆರೋಪಿ ಆಕೆಯ ಮನೆಗೂ ಬಂದು ಆಕೆಯ ತಂದೆಗೆ ಅವಾಚ್ಯವಾಗಿ ಬೈದಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಇದನ್ನೂ ಓದಿ: Karnataka Weather Report: ವಾಯುಭಾರ ಕುಸಿತ, ಮುಂದಿನ ಐದು ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ!


ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಆರೋಪಿ ತಪ್ಪಿತಸ್ಥನೆಂದು ರುಜುವಾತಾಗಿದೆ ಎಂದು ತೀರ್ಪು ನೀಡಿದ್ದಾರೆ. ಆರೋಪಿಗೆ ಪೊಕ್ಸೋ ಕಾಯಿದೆಯ ಕಲಂ 12ರಡಿ 3 ವರ್ಷ ಸಾದಾ ಸಜೆ ಮತ್ತು 500 ರೂ. ದಂಡ, ಐಪಿಸಿ ಸೆಕ್ಷನ್‌ 354 (ಡಿ) ಪ್ರಕಾರ 3 ವರ್ಷ ಸಾದಾ ಸಜೆ ಮತ್ತು 500 ರೂ ದಂಡ ಹಾಗೂ ಐಪಿಸಿ 341ರಂತೆ 1 ವರ್ಷ ಸಜೆ ವಿಧಿಸಿದ್ದಾರೆ.

Published by:ಪಾವನ ಎಚ್ ಎಸ್
First published: