Harangi Dam: ಬಜೆಟ್​​ನಲ್ಲಿ ₹130 ಕೋಟಿ ಘೋಷಣೆಯಾಗಿದ್ದರೂ ಹಾರಂಗಿ ಜಲಾಶಯಕ್ಕೆ ಹೂಳಿನಿಂದ ಮುಕ್ತಿಯಿಲ್ಲ

2018-19ರ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹಾರಂಗಿ ಜಲಾಶಯದ ಹೂಳು ತೆಗೆಯುವುದಕ್ಕೆ 130 ಕೋಟಿ ರೂಪಾಯಿ ಘೋಷಿಸಿದ್ದರು. ಆದರೆ ಈವರೆಗೆ ಹೂಳೆತ್ತಲು ಟೆಂಡರ್​ ಸಹ ಕರೆದಿಲ್ಲ.

ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

  • Share this:
ಮಡಿಕೇರಿ : ಕೊಡಗು ಜಿಲ್ಲೆ 2018 ರಲ್ಲಿ ಪ್ರವಾಹ, ಭೂಕುಸಿತದಿಂದ (Flood) ಅಕ್ಷರಶಃ ಕುಸಿದು ಹೋಗಿತ್ತು. ಅದರಲ್ಲೂ ಸೋಮವಾರಪೇಟೆ ತಾಲ್ಲೂಕಿನ ಹಟ್ಟಿಹೊಳೆಯಿಂದ ಮಡಿಕೇರಿ (Madikeri) ತಾಲ್ಲೂಕಿನ ಗಾಳಿಬೀಡು ತನಕ ಒಂದರ್ಥದಲ್ಲಿ ಸರ್ವನಾಶವೇ ಆಗಿತ್ತು. ಅದಕ್ಕೆ ಮುಖ್ಯವಾಗಿ ಹಾರಂಗಿ ಜಲಾಶಯದಲ್ಲಿ (Harangi Dam) ಅಪಾರ ಪ್ರಮಾಣದ ಹೂಳು ತುಂಬಿದ್ದೇ ಕಾರಣ ಎಂದು ಅಂದಾಜಿಸಲಾಗಿತ್ತು. ಹೀಗಾಗಿಯೇ 2018-19 ರ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಹಾರಂಗಿ ಜಲಾಶಯದ ಹೂಳು ತೆಗೆಯುವುದಕ್ಕೆ 130 ಕೋಟಿ ರೂಪಾಯಿ ಘೋಷಿಸಿದ್ದರು. ಅದಾದ ಬಳಿಕ 2020 ರ ಮೇ, ಏಪ್ರಿಲ್ ತಿಂಗಳಿನಲ್ಲಿ ಬೋಟ್ ಮತ್ತು ಏರಿಯಲ್ ಸರ್ವೇ ಮಾಡಲಾಗಿತ್ತು. ಅದು ಬಿಟ್ಟರೆ ಇದುವರೆಗೆ ಹೂಳು ತೆಗೆಯುವುದಕ್ಕೆ ಕ್ರಮಕೈಗೊಳ್ಳಲೇ ಇಲ್ಲ.

ಇದನ್ನೂ ಓದಿ: Padayatre: ಧರ್ಮಸ್ಥಳಕ್ಕೆ ಪ್ರಜ್ವಲ್, ಮಾದಪ್ಪನ ಗುಡಿಗೆ ನಿಖಿಲ್ ಪಾದಯಾತ್ರೆ, ಜೆಡಿಎಸ್ ‘ಬ್ರದರ್ಸ್‘ ಯಾತ್ರೆ ಫೈಟ್!

ಹೂಳು ತೆಗೆಯುವುದಕ್ಕೆ ಟೆಂಡರೇ ಕರೆದಿಲ್ಲ.. 

ಇದೀಗ ಮತ್ತೊಂದು ಬಜೆಟ್ ನ ಹೊಸ್ತಿಲಿನಲ್ಲಿದ್ದೇವೆ. ಆದರೆ ಹೂಳು ತೆಗೆಯುವುದಕ್ಕಾಗಿ ಘೋಷಣೆಯಾಗಿ ಮೂರು ವರ್ಷಗಳೇ ಕಳೆದಿವೆ. ಈ ಬಾರಿಯೂ ಹೂಳು ತೆಗೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 8.5 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಈಗಲೂ 7 ಟಿಎಂಸಿ ಅಡಿ ನೀರು ಇದೆ. ಫೆಬ್ರವರಿ ತಿಂಗಳ ಕೊನೆಯಿಂದ ಕಾಲುವೆಗಳಿಗೆ ನೀರು ಹರಿಸಲಿದ್ದು, ಏಪ್ರಿಲ್- ಮೇ ತಿಂಗಳಿನಲ್ಲಿ ನೀರೇನೋ ಒಂದಷ್ಟು ಪ್ರಮಾಣದಲ್ಲಿ ಕಡಿಮೆ ಆಗಬಹುದು.  ವಿಪರ್ಯಾಸವೆಂದರೆ ಹೂಳು ತೆಗೆಯುವುದಕ್ಕೆ ಸಂಬಂಧಿಸಿದಂತೆ ಇದುವರೆಗೆ ಟೆಂಡರ್ ಆಗಿಲ್ಲ. ಒಂದು ವೇಳೆ ಟೆಂಡರ್ ಆಗಿ ಯಾರಾದರೂ ಹೂಳು ತೆಗೆಯುವುದಕ್ಕೆ ಮುಂದೆ ಬಂದರೂ ಅದು ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲಕ್ಕೂ ಮುನ್ನ ಮುಗಿಯಲು ಸಾಧ್ಯವಿಲ್ಲ. ಏಕೆಂದರೆ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಬರೋಬ್ಬರಿ ಎರಡು ಟಿಎಂಸಿ ಪ್ರಮಾಣದಷ್ಟು ಹೂಳು ತುಂಬಿದೆ.



130 ಕೋಟಿ ರೂಪಾಯಿ ಘೋಷಿಸಿದ್ದರೂ ಪ್ರಯೋಜನವಿಲ್ಲ 

ಹೀಗಾಗಿ ಜಲಾಶಯದ ಸಾಮರ್ಥ್ಯ ಕಡಿಮೆಯಾಗಿದ್ದು, ಕಡಿಮೆ ಮಳೆಗೆ ತುಂಬ ಜಲಾಶಯ ಬಳಿಕ ತೀವ್ರ ಮಳೆಯಾದಾಗಲೆಲ್ಲ ಜಲಾಶಯಕ್ಕೆ ಹರಿದು ಬರುವ ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತದೆ. ಹಾಗಾಗಿ ಕುಶಾಲನಗರ, ಕೂಡಿಗೆ ಕಣಿವೆ ಗ್ರಾಮಗಳ ಸುತ್ತಮುತ್ತ ಪ್ರತೀ ವರ್ಷ ಪ್ರವಾಹ ಸೃಷ್ಟಿಯಾಗುತ್ತಿದೆ. ಇದು ಈ ಬಾರಿಯೂ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ತುಂಬಿರುವ ಹೂಳನ್ನು ತೆಗೆದು ಪ್ರವಾಹದ ಆತಂಕ ತಪ್ಪಿಸುವುದಕ್ಕಾಗಿ 130 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿಯೇ ಘೋಷಿಸಿ ಮೂರು ವರ್ಷಗಳಾಗಿದ್ದರು ಅದು ಘೋಷಣೆಯಾಗಿ ಉಳಿದಿರೋದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯರ ಆಕ್ರೋಶ 

ಈ ಕುರಿತು ಪ್ರತಿಕ್ರಿಯಿಸಿರುವ ಕುಶಾಲನಗರ ಸ್ಥಳೀಯರಾದ ದೇವರಾಜ್ ಅವರು ಹೂಳು ತುಂಬಿರುವುದರಿಂದಲೇ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗದೆ ನದಿ ಪಾತ್ರದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಇದು ಗೊತ್ತಿದ್ದರೂ ಜನಪ್ರತಿನಿಧಿಗಳು ಹೀಗೆ ನಿರ್ಲಕ್ಷ್ಯ ವಹಿಸೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಮಂಜುನಾಥ್ ಅವರು ಬಜೆಟ್ ನಲ್ಲಿ ಘೋಷಣೆಯಾಗಿದ್ದರೂ ಆ ಅನುದಾನ ತಂದು ಹೂಳೆತ್ತುವುದರಲ್ಲಿ ಶಾಸಕರು ಸಂಪೂರ್ಣ ಸೋತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರಿಗೆ Good News: ದಸರಾ ವೇಳೆಗೆ ಬೆಂಗಳೂರು-ಮೈಸೂರು Expressway ಸಂಚಾರಕ್ಕೆ ಮುಕ್ತ

ಕುಶಾಲನಗರದ ಯೋಗಾನಂದ ಬಡಾವಣೆಯಿಂದ ಆದಿಶಂಕರಾಚಾರ್ಯ ಬಡಾವಣೆವರೆಗೆ ಕಾವೇರಿ ನದಿಯಲ್ಲಿ ಲಕ್ಷಾಂತರ ಲೋಡ್‍ಗಳಷ್ಟು ಹೂಳು ತುಂಬಿಕೊಂಡು ನದಿಯ ಬಹುತೇಕ ಭಾಗ ಮುಚ್ಚಿ ಹೋಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕುಶಾಲನಗರದ ಕಾವೇರಿ ಸಂತ್ರಸ್ತರ ವೇದಿಕೆ ಮುಖಂಡರು ಕಾವೇರಿ ನದಿಯ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ತುಂಬಿರುವ ಹೂಳು ದಿಣ್ಣೆಗಳ ಸರ್ವೆ ಮಾಡಿದ್ದರು. ಕುಶಾಲನಗರದ ಅಯ್ಯಪ್ಪ ದೇವಾಲಯದಿಂದ ಬೋಟ್‍ಗಳ ಮೂಲಕ ನದಿಯಲ್ಲಿ ತೆರಳಿದ ವೇದಿಕೆ ಕಾರ್ಯಕರ್ತರು ಸರ್ವೆ ನಡೆಸಿದ್ದರು.
Published by:Kavya V
First published: