• Home
  • »
  • News
  • »
  • state
  • »
  • Har Ghar Tiranga: ಧ್ವಜ ಮಾರಾಟ ಮಾಡಲು ಸುತ್ತೋಲೆ; ಬಂದ ಹಣ ಯಾರ ಖಾತೆಗೆ ಹೋಗುತ್ತೆ?

Har Ghar Tiranga: ಧ್ವಜ ಮಾರಾಟ ಮಾಡಲು ಸುತ್ತೋಲೆ; ಬಂದ ಹಣ ಯಾರ ಖಾತೆಗೆ ಹೋಗುತ್ತೆ?

ಹರ್ ಘರ್ ತಿರಂಗಾ

ಹರ್ ಘರ್ ತಿರಂಗಾ

ಎಲ್ಲಾ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಕೇಂದ್ರದಿಂದ ಸ್ವೀಕೃತವಾದ ಮತ್ತು ಸ್ವೀಕೃತವಾಗುವ ಎಲ್ಲಾ ಧ್ವಜಗಳನ್ನು ಮಾರಾಟ ಮಾಡಲು ತಮ್ಮ ಹಂತದಲ್ಲಿ ಯೋಜನೆಯನ್ನು ರೂಪಿಸಿಕೊಂಡು ಕ್ರಮವಹಿಸುವುದು.

  • Share this:

75ನೇ ಸ್ವತಂತ್ರ ದಿನಾಚರಣೆ  (Azadi ka Amrit Mahotsav) ಹಿನ್ನೆಲೆ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ (Har Ghar Tiranga Campaign) ಹಮ್ಮಿಕೊಂಡಿದೆ. ಈ ಅಭಿಯಾನದಡಿ  ಆಗಸ್ಟ್ 13, 14 ಮತ್ತು 15 ರಂದು ಎಲ್ಲರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಹೇಳಲಾಗಿದೆ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ತ್ರಿವರ್ಣ ಧ್ವಜಗಳಿಗೆ (Flags) ಬೇಡಿಕೆ ಹೆಚ್ಚಾಗಿತ್ತು. ಆದ್ದರಿಂದ ಧ್ವಜ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ (Central Government) ಮನವಿ ಮಾಡಿಕೊಳ್ಳಲಾಗಿತ್ತು. ಬೇಡಿಕೆ ಹಿನ್ನೆಲೆ ಕೇಂದ್ರ ಈಗ 25 ಲಕ್ಷ ಧ್ವಜಗಳನ್ನು ಪೂರೈಕೆ ಮಾಡಿದೆ. ಇದೀಗ ಇವುಗಳ ಮಾರಾಟ (Sale) ಹೇಗೆ ಮಾಡಬೇಕು ಎಂಬುದರ ಬಗ್ಗೆ ಕರ್ನಾಟಕ ಮತ್ತು ಸಂಸ್ಕೃತಿ ಇಲಾಖೆ ಸುತ್ತೋಲೆ ಹೊರಡಿಸಿದೆ.


ಈ ಎಲ್ಲಾ ಧ್ವಜಗಳನ್ನು ಜಿಲ್ಲೆಗಳು ಮತ್ತು ಬಿಬಿಎಂಪಿ ಹಂಚಿಕೆ ಮಾಡಲಾಗುತ್ತದೆ. ಹಂಚಿಕೆ ಮಾಡಲಾದ ಧ್ವಜಗಳನ್ನ ಮಾರಾಟ ಮಾಡಿ ಬಂದ ಹಣವನ್ನು ಕೇಂದ್ರಕ್ಕೆ ಹಿಂದಿರುಗಿಸಬೇಕು.


ಈ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿ, ಧ್ವಜ ಮಾರಾಟ ಮಾಡುವ ಕುರಿತ ಮಾಹಿತಿಯನ್ನು ನೀಡಲಾಗಿದೆ. ಈ ಸುತ್ತೋಲೆಯಲ್ಲಿ ಯಾವ ಬೆಲೆಗೆ ಧ್ವಜ ಮಾರಾಟ ಮಾಡಬೇಕು ಮತ್ತು ಬಂದ ಹಣವನ್ನು ಎಲ್ಲಿಗೆ ವರ್ಗಾಯಿಸಬೇಕು ಎಬುದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ.


har ghar tiranga campaign Karnataka government release circular for sale national flags mrq
ತ್ರಿವರ್ಣ ಧ್ವಜ


ಇದನ್ನೂ ಓದಿ:  YASH: ಹರ್ ಘರ್ ತಿರಂಗಾ ಎಂದ ರಾಕಿ ಭಾಯ್​, ಪ್ರಧಾನಿ ಮೋದಿ ಅಭಿಯಾನಕ್ಕೆ ಯಶ್​ ಸಾಥ್​


ಸುತ್ತೋಲೆಯಲ್ಲಿರುವ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.


1.ಸ್ಥಳೀಯವಾಗಿ ಆಗಸ್ಟ್ 13ರಿಂದ 15ರವರೆಗೆ ಧ್ವಜಗಳನ್ನು ಸಾರ್ವಜನಿಕರು ಅವರವರ ಮನೆಗಳ ಮೇಲೆ ಹಾರಿಸುವಂತೆ ಪ್ರೇರೇಪಿಸುವುದು.


2.ಸ್ವೀಕೃತವಾದ ಧ್ವಜಗಳ ಅಳತೆ, ಹೊಲಿಗೆ ಹಾಕಲ್ಪಟ್ಟ ಬಗ್ಗೆ ಮತ್ತು ಯಾವುದಾದರೂ ನ್ಯೂನ್ಯತೆಗಳ ಬಗ್ಗೆ ಪರಿಶೀಲಿಸಿಕೊಳ್ಳುವುದು. ನ್ಯೂನ್ಯತೆ ಇರುವ ಧ್ವಜಗಳನ್ನು ಪ್ರತ್ಯೇಕಿಸುವುದು ಹಾಗು ಎಲ್ಲಾ ರೀತಿಯಿಂದ ಸರಿ ಇರುವ ಧ್ವಜಗಳನ್ನು ಮಾತ್ರ ಮಾರಾಟ ಮಾಡುವುದು.


3.ಧ್ವಜಗಳನ್ನ ಸಾರ್ವಜನಿಕರು ತಮ್ಮ ಹಣದಿಂದ ಖರೀದಿಸಿ ಅವುಗಳನ್ನು ಹಾರಿಸುವಂತೆ ಹಾಗೂ ಈ ರೀತಿ ಮಾಡಿ ರಾಷ್ಟ್ರಪ್ರೇಮವನ್ನು ಮರೆಯುವುದು.


4.ಕೇಂದ್ರ ಸರ್ಕಾರದಿಂದ ಸರಬರಾಜು ಮಾಡಿದ ಎಲ್ಲಾ ಧ್ವಜಗಳನ್ನು ಮಾರಾಟ ಮಾಡುವುದು.


5.ಸದರಿ ಧ್ವಜಗಳನ್ನು ಧ್ವಜ ಒಂದಕ್ಕೆ 22 ರೂ.ಗಳಂತೆ ಮಾರಾಟ ಮಾಡುವುದು.


6.ಸದರಿ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮವಹಿಸಲಾಗ್ತಿದೆ. ಅಲ್ಲಿಯವರೆಗೆ ಜಿಲ್ಲಾಧಿಕಾರಿಗಳು ತಮ್ಮ ಅಧೀನದಲ್ಲಿರುವ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿ ತದನಂತರ ಮುಂದೆ ತಿಳಿಸಲಾಗುವ ಹರ್ ಘರ್ ತಿರಂಗಾ ಬ್ಯಾಂಕ್ ಖಾತೆಗೆ ಜಮೆ ಮಾಡುವುದು.


7.ಎಲ್ಲಾ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಕೇಂದ್ರದಿಂದ ಸ್ವೀಕೃತವಾದ ಮತ್ತು ಸ್ವೀಕೃತವಾಗುವ ಎಲ್ಲಾ ಧ್ವಜಗಳನ್ನು ಮಾರಾಟ ಮಾಡಲು ತಮ್ಮ ಹಂತದಲ್ಲಿ ಯೋಜನೆಯನ್ನು ರೂಪಿಸಿಕೊಂಡು ಕ್ರಮವಹಿಸುವುದು.


8.ಎಲ್ಲಾ ಜಿಲ್ಲಾಧಿಕಾರಿಗಳು ಸಂಬಂಧಿಸಿದ  ಧ್ವಜಗಳ ಮಾರಾಟದ ವಹಿಯನ್ನು ನಿರ್ವಹಿಸಲು ಜವಾಬ್ದಾರಿಯುತ ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸುವುದು.


har ghar tiranga campaign Karnataka government release circular for sale national flags mrq
ತ್ರಿವರ್ಣ ಧ್ವಜ


9.ಸದರಿ ಧ್ವಜಗಳನ್ನು ಸರಬರಾಜು ಮಾಡುವ ಸಂಸ್ಥೆಗಳಿಗೆ ಅಥವಾ ಕಂಪನಿಗಳಿಗೆ ಆಗಸ್ಟ್ 15ರ ನಂತರ ಹಣ ಪಾವತಿಸಬೇಕು. ಈ ಹಿನ್ನೆಲೆ ಎಲ್ಲಾ ಜಿಲ್ಲಾಧಿಕಾರಿಗಳು ಪ್ರತಿ ಧ್ವಜಗಳನ್ನು ಮಾರಾಟ ಮಾಡಿ ಬಂದ ಹಣದ ವಿವರಗಳನ್ನು ಮತ್ತು ಒಟ್ಟು ಹಣವನ್ನು ಸಂಬಂಧಿಸಿದ ಖಾತೆಗೆ ಜಮೆ ಮಾಡಲು ಕ್ರಮವಹಿಸುವುದು.


ಇದನ್ನೂ ಓದಿ:  Har Ghar Tiranga: ಮನೆ ಮನೆಯಲ್ಲೂ ಹಾರಾಡಲಿದೆ ತಿರಂಗಾ, ಬಾಗಲಕೋಟೆಯಲ್ಲಿ ಭರ್ಜರಿ ಸಿದ್ಧತೆ


ಆಗಸ್ಟ್ 13ರಿಂದ 15ರವರೆಗೆ ಅಭಿಯಾನ


ಅಗಸ್ಟ್-13 ರಿಂದ ಆರಂಭವಾಗುವ ಹರ್ ಘರ್ ತಿರಂಗಾ ಅಭಿಯಾನವು ಅಗಷ್ಟ್-15 ಸ್ವಾತಂತ್ರ್ಯ ದಿನೋತ್ಸವ ದವರೆಗೂ ನಡೆಯುವ ಈ ಅಭಿಯಾನದಲ್ಲಿ ಗ್ರಾಮಗಳ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಪ್ರೇರೇಪಿಸುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮವನ್ನು ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

Published by:Mahmadrafik K
First published: