• Home
  • »
  • News
  • »
  • state
  • »
  • Har Ghar Tiranga: ರಾಜ್ಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ, ಮನೆ ಮನೆಯಲ್ಲೂ ಹಾರುತಿಹುದು ನೋಡು ನಮ್ಮ ಬಾವುಟ

Har Ghar Tiranga: ರಾಜ್ಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ, ಮನೆ ಮನೆಯಲ್ಲೂ ಹಾರುತಿಹುದು ನೋಡು ನಮ್ಮ ಬಾವುಟ

ಹರ್ ಘರ್ ತಿರಂಗಾ

ಹರ್ ಘರ್ ತಿರಂಗಾ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರಾದ ಡಾ. ಕೆ.ಸುಧಾಕರ್, ಆರ್. ಅಶೋಕ್ ಸೇರಿದಂತೆ ಹಲವು ರಾಜಕೀಯ ನಾಯಕರು ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನ ಸಾಮಾನ್ಯರೂ ಕೂಡ ತಿರಂಗಾ ಹಾರಿಸಿ, ಅಮೃತ ಮಹೋತ್ಸವದ ಸಂಭ್ರಮ್ರಕ್ಕೆ ಮುನ್ನುಡಿ ಬರೆದಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ (75th Independence day) ಸಂಭ್ರಮ ಮನೆಮಾಡಿದೆ. ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ (National Flag) ಹಾರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದರು. ಇದೀಗ ಪ್ರಧಾನಿ ಕರೆಗೆ ಸ್ಪಂದಿಸಿರುವ ಕನ್ನಡಿಗರು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ (Har Ghar Tiranga Abhiyan) ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa), ಸಚಿವರಾದ ಡಾ. ಕೆ.ಸುಧಾಕರ್ (Dr. K.Sudhakar), ಆರ್. ಅಶೋಕ್ (R. Ashok) ಸೇರಿದಂತೆ ಹಲವು ರಾಜಕೀಯ ನಾಯಕರು ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಜನ ಸಾಮಾನ್ಯರೂ ಕೂಡ ತಿರಂಗಾ ಹಾರಿಸಿ, ಅಮೃತ ಮಹೋತ್ಸವದ ಸಂಭ್ರಮ್ರಕ್ಕೆ ಮುನ್ನುಡಿ ಬರೆದಿದ್ದಾರೆ.
ಸಿಎಂ ಬೊಮ್ಮಾಯಿ ಮನೆಯಲ್ಲಿ ಧ್ವಜಾರೋಹಣ


ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದ ಮುಂದೆ ರಾಷ್ಟ್ರಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಅವರೊಂದಿಗೆ ಕುಟುಂಬದ ಸದಸ್ಯರು ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಇದ್ದರು.


ವಿಧಾನಸೌಧದಲ್ಲಿ ಚಾಲನೆ ನೀಡಿದ ಸಿಎಂ


ಇನ್ನು ವಿಧಾನಸೌಧದಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು. ಬಳಿಕ ಅಲ್ಲಿ ನೆರೆದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮನ್ನು ನೋಡಿದಾಗ 25 ವರ್ಷ ನನಗೆ ಕಡಿಮೆ ಆಗಿರೋ ಅನುಭವ ಆಗುತ್ತಿದೆ. ಭವ್ಯ ಭಾರತದ ಭವಿಷ್ಯ ನೀವೆಲ್ಲ. ಈಗ 75 ವರ್ಷದ ಸ್ವತಂತ್ರ ದಿವಸ ಬಂದಿದೆ, 75 ವರ್ಷ ಅಂದ್ರೆ ತರುಣ ದೇಶ‌ ಭಾರತ, ಅತಿ ಹೆಚ್ಚು ಯುವಕರು ಭಾರತದಲ್ಲಿ ಇದ್ದಾರೆ.  ಭಾರತದ ಶಕ್ತಿಯನ್ನು ಇಡಿ ವಿಶ್ವವೇ ಗಮನಿಸುತ್ತಿದೆ ಅಂತ ಹೇಳಿದ್ರು.


ಇದನ್ನೂ ಓದಿ: Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ


ಕಾವೇರಿಯಲ್ಲಿ ತಿರಂಗಾ ಹಾರಿಸಿದ ಬಿಎಸ್‌ವೈ


ಇನ್ನು ಬೆಂಗಳೂರಿನಲ್ಲಿ ತಿರಂಗಾ ಅಭಿಯಾನಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಕಾವೇರಿ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಶುಭಾಶಯ ಕೋರಿದರು. 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವಂತೆ ಮಾಜಿ ಸಿಎಂ ಕರೆ ಕೊಟ್ಟಿದ್ಧಾರೆ. ಇಂದಿನಿಂದ ಆಗಸ್ಟ್​ 15ರ ವರೆಗೆ ಬಾವುಟ ಹಾರಿಸಲು ಅವರು ಕರೆ ನೀಡಿದ್ಧಾರೆ.


ರಾಷ್ಟ್ರಧ್ವಜ ಹಾರಿಸಿದ ಬಿಎಸ್‌ವೈ


ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ


ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯದಲ್ಲೂ ಸಕಲ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 1 ಕೋಟಿ ಮನೆಗಳಲ್ಲಿ, ಸರ್ಕಾರಿ, ಖಾಸಗಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ.


ಇದನ್ನೂ ಓದಿ: Independence Day 2022: ಮೊದಲ ಬಾರಿ ರಾಷ್ಟ್ರಧ್ವಜ ಹಾರಾಡಿದ್ದು ಎಲ್ಲಿ ಗೊತ್ತಾ? ಇಲ್ಲಿವೆ ನೋಡಿ ಅಪರೂಪದ ಫೋಟೋಗಳು


ಮನೆ, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ


ಇಂದಿನಿಂದ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣ ಆಗಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ ಮೂರು ದಿನಗಳಂದು ಪ್ರತಿ ದಿನ ಬೆಳಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಇಳಿಸಬೇಕು. ಹಾಗೂ ಮನೆಗಳಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣ ಮಾಡಿ 15ರವರೆಗೆ ಇರಿಸಬಹುದಾಗಿದೆ.

Published by:Annappa Achari
First published: