Happy Engineer's Day 2020: ಇಂದು ದೇಶ ಕಂಡ ಅಪ್ರತಿಮ ಮೇಧಾವಿ ಸರ್​.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ

Sir M. Visvesvaraya Birth Anniversary: ಸರ್ ಎಂವಿ ಅವರು ಹುಟ್ಟಿದ ದಿನ ಸೆಪ್ಟೆಂಬರ್ 15ನ್ನು ಅಭಿಯಂತರರ ದಿನಾಚರಣೆ(ಎಂಜಿನಿಯರ್ಸ್​​ ಡೇ) ಎಂದು ಭಾರತದಲ್ಲಿ ಮಾತ್ರವಲ್ಲದೇ, ಶ್ರೀಲಂಕಾ ಮತ್ತು ತಂಜಾನಿಯಾ ರಾಷ್ಟ್ರಗಳಲ್ಲೂ ಆಚರಿಸಲಾಗುತ್ತಿದೆ.

ಸರ್ ಎಂ.ವಿಶ್ವೇಶ್ವರಯ್ಯ

ಸರ್ ಎಂ.ವಿಶ್ವೇಶ್ವರಯ್ಯ

  • Share this:
    ಬೆಂಗಳೂರು(ಸೆ.15): ಇಂದು ಸೆಪ್ಟೆಂಬರ್ 15 ಎಂಜಿನಿಯರ್ಸ್​ ಡೇ. ಭಾರತ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಸರ್​​ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಹುಟ್ಟಿದ ದಿನವನ್ನು ಅವರ ಗೌರವಾರ್ಥವಾಗಿ ಅಭಿಯಂತರರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಸೆಪ್ಟೆಂಬರ್ 15ರ 1861ರಲ್ಲಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆ-ತಾಯಿ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದರು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿದರು. ಕಲಾ ವಿಭಾಗದಲ್ಲಿ ಪದವಿ ಪಡೆದ ನಂತರ ಅವರ ಆಸಕ್ತಿ ಇಂಜಿನಿಯರ್ ಕಡೆ ಬೆಳೆಯಿತು. ಹೀಗಾಗಿ ವಿಶ್ವೇಶ್ವರಯ್ಯನವರು ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್​ ಪದವಿ ಪಡೆದರು. ಸರ್ ಎಂ. ವಿಶ್ವೇಶ್ವರಯ್ಯನವರು ಭಾರತದ ಶ್ರೇಷ್ಠ ಸಿವಿಲ್ ಎಂಜಿನಿಯರಿಂಗ್ ಮಾತ್ರ ಆಗಿರದೇ, ಮೈಸೂರು ಸಂಸ್ಥಾನದಲ್ಲಿ 1912-1919ರವರೆಗೆ ದಿವಾನರಾಗಿ ಸೇವೆ ಸಲ್ಲಿಸಿದ್ದಾರೆ.

    ವಿಶ್ವೇಶ್ವರಯ್ಯನವರಿಗೆ 1955ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸರ್ ಎಂವಿ ಅವರು ಹುಟ್ಟಿದ ದಿನ ಸೆಪ್ಟೆಂಬರ್ 15ನ್ನು ಅಭಿಯಂತರರ ದಿನಾಚರಣೆ(ಎಂಜಿನಿಯರ್ಸ್​​ ಡೇ) ಎಂದು ಭಾರತದಲ್ಲಿ ಮಾತ್ರವಲ್ಲದೇ, ಶ್ರೀಲಂಕಾ ಮತ್ತು ತಂಜಾನಿಯಾ ರಾಷ್ಟ್ರಗಳಲ್ಲೂ ಆಚರಿಸಲಾಗುತ್ತಿದೆ.

    Radhika Pandit: ರಾಧಿಕಾ ಪಂಡಿತ್​ಗೆ ತಿಳಿಯಂದತೆ ಅವರ ವಿಡಿಯೋ ಮಾಡಿದ ಯಶ್​-ಆಯ್ರಾ..! ​

    ಸರ್​ ಎಂ ವಿಶ್ವೇಶ್ವರಯ್ಯನವರು ಮಂಡ್ಯ ಜಿಲ್ಲೆಯ ಬಳಿ ಇರುವ ಕೃಷ್ಣರಾಜ ಸಾಗರ ಅಣೆಕಟ್ಟೆಯ ನಿರ್ಮಾತೃ ಕೂಡ ಹೌದು. ಅಂದಿನ ವೇಳೆ ಮುಖ್ಯ ಎಂಜಿನಿಯರ್​ ಆಗಿ ಅಣೆಕಟ್ಟೆಗೆ ನೀಲಿ ನಕ್ಷೆ ಹಾಕಿದ ರೂವಾರಿ ಆಗಿದ್ದಾರೆ ಸರ್ ಎಂ ವಿ.

    ಸರ್ ಎಂ ವಿಶ್ವೇಶ್ವರಯ್ಯನವರು ನೀರಾವರಿ ತಂತ್ರಜ್ಞಾನ ಮತ್ತು ಪ್ರವಾಹ ವಿಪತ್ತು ನಿರ್ವಹಣೆಯಲ್ಲಿ ಪರಿಣತಿ ಪಡೆದಿದ್ದರು. ಅಣೆಕಟ್ಟು ಅಥವಾ ಜಲಾಶಯಗಳಲ್ಲಿ ನೀರು ತುಂಬಿದ ಬಳಿಕ ಗೇಟುಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುವ ತಂತ್ರಜ್ಞಾನವನ್ನು ಅಳವಡಿಸಿರುವ ಹಿರಿಮೆಯೂ ಸರ್ ಎಂ ವಿಗೆ ಸೇರುತ್ತದೆ.

    ಇವರು 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿರಿಂಗ್ ಕಾಲೇಜೊಂದನ್ನು ನಿರ್ಮಿಸಿದರು. ಇದು ಭಾರತದ ಮೊದಲ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಾಗಿತ್ತು. ಬಳಿಕ ಆ ಕಾಲೇಜನ್ನು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂದು ಹೆಸರು ಬದಲಿಸಲಾಯಿತು.
    Published by:Latha CG
    First published: