Happy Akshaya Tritiya 2019: ಬಂಗಾರದ ಅಂಗಡಿಗಳಲ್ಲಿ ಭರ್ಜರಿ ಆಫರ್​​

ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಅದು ವೃದ್ಧಿಯಾಗುತ್ತದೆ. ಬಂಗಾರ ಲಕ್ಷ್ಮೀ ಸ್ವರೂಪ ಎಂಬ ನಂಬಿಕೆ ಕೆಲವು ಜನರದ್ದು. ಈ ಹಿನ್ನೆಲೆಯಲ್ಲಿ ಬಂಗಾರ ಎಷ್ಟೇ ದುಬಾರಿಯಾದರೂ ಇಂದು ಕೊಳ್ಳುವವರ ಸಂಖ್ಯೆ ಅಧಿಕ. ಅದರ ಜೊತೆ ವಿಶೇಷ ಆಫರ್​ ನೀಡಿರುವುದರಿಂದ ಜನರು ಕೊಳ್ಳಲು ಹಿಂಜರಿಯುವುದಿಲ್ಲ ಎಂಬ ನಂಬಿಕೆ ಚಿನ್ನದ ಅಂಗಡಿ ಮಾಲೀಕರದ್ದು

Seema.R | news18
Updated:May 7, 2019, 11:16 AM IST
Happy Akshaya Tritiya 2019: ಬಂಗಾರದ ಅಂಗಡಿಗಳಲ್ಲಿ ಭರ್ಜರಿ ಆಫರ್​​
ಸಾಂದರ್ಭಿಕ ಚಿತ್ರ
  • News18
  • Last Updated: May 7, 2019, 11:16 AM IST
  • Share this:
ಬೆಂಗಳೂರು (ಮೇ.7): ಇಂದು ಬಸವ ಜಯಂತಿಯ ವಿಶೇಷದೊಂದಿಗೆ ಅಕ್ಷಯ ತೃತೀಯದ ಸಂಭ್ರಮ ಮಹಿಳೆಯರಿಗೆ. ಅಕ್ಷಯ ತೃತೀಯದಂದು ಬಂಗಾರಕೊಂಡರೆ ಅದು ಶುಭ ಎನ್ನುವ ಮಾತಿದೆ. ಇದೇ ಹಿನ್ನೆಲೆಯಲ್ಲಿ ಒಂದು ಗ್ರಾಂ ಚಿನ್ನವನ್ನಾದರೂ ಕೊಳ್ಳಲು ಜನರು ಮುಗಿಬಿಳುತ್ತಾರೆ.  ಈ ಕಾರಣದಿಂದಾಗಿ ಬಂಗಾರದ ಅಂಗಡಿಗಳಲ್ಲಿ ಚಿನ್ನ ಕೊಳ್ಳುವವರಿಗಾಗಿಯೇ ಭರ್ಜರಿ ಆಫರ್​ ಕೂಡ ನೀಡಲಾಗಿದೆ.

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಜನರನ್ನು ಸೆಳೆಯಲು ಬಂಗಾರದ ಅಂಗಡಿ ಮಾಲೀಕರು ವಿಶೇಷ ರಿಯಾಯಿತಿ, ಉಡುಗೊರೆ ಕೊಡುಗೆಗಳಂತಹ ಭರ್ಜರಿ ಆಫರ್​ ಕೂಡ ನೀಡಿದ್ದಾರೆ. ಪ್ರಮುಖ ಅಂಗಡಿಗಳಲ್ಲಿ ಆಭರಣಗಳ ಮೇಲೆ ರಿಯಾಯಿತಿ, ಲಕ್ಕಿ ಕೂಪನ್​, ಮೇಕಿಂಗ್​ ಚಾರ್ಚ್​ ಫ್ರೀ, ಸ್ಟೋನ್​ ಚಾರ್ಚ್​ಗಳ ಮೇಲೆ ಬೆಲೆ ಕಡಿತ ಕೂಡ ಮಾಡಲಾಗಿದೆ. ಒಂದು ವಾರದಿಂದಲೇ ಜಾಹೀರಾತಿನ ಮೂಲಕ ಗ್ರಾಹಕರನ್ನು ಆಕರ್ಷಿಸಿರುವ  ಬಂಗಾರದ ಅಂಗಡಿಗಳು ಮಧುವಣಗಿತ್ತಿಯಂತೆ ಈಗಾಗಲೇ ಶೃಂಗಾರಗೊಂಡಿದೆ.

ಇನ್ನು ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಅದು ವೃದ್ಧಿಯಾಗುತ್ತದೆ. ಬಂಗಾರ ಲಕ್ಷ್ಮೀ ಸ್ವರೂಪ ಎಂಬ ನಂಬಿಕೆ ಕೆಲವು ಜನರದ್ದು. ಈ ಹಿನ್ನೆಲೆಯಲ್ಲಿ ಬಂಗಾರ ಎಷ್ಟೇ ದುಬಾರಿಯಾದರೂ ಇಂದು ಕೊಳ್ಳುವವರ ಸಂಖ್ಯೆ ಅಧಿಕ. ಅದರ ಜೊತೆ ವಿಶೇಷ ಆಫರ್​ ನೀಡಿರುವುದರಿಂದ ಜನರು ಕೊಳ್ಳಲು ಹಿಂಜರಿಯುವುದಿಲ್ಲ ಎಂಬ ನಂಬಿಕೆ ಚಿನ್ನದ ಅಂಗಡಿ ಮಾಲೀಕರದ್ದು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿಗೆ ವಹಿವಾಟು ಆಗುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು  ಶೀಲಾ ಹಾಗೂ  ಆರ್ ಆರ್ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್  ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಅಕ್ಷಯ ತೃತೀಯ ಆಫರ್​: ಪೇಟಿಎಂನಲ್ಲಿ 1 ರೂ.ಗೆ ಚಿನ್ನ ಖರೀದಿಸುವ ಅವಕಾಶ

ಇನ್ನು ಅಕ್ಷಯ ತೃತೀಯ ಹಿನ್ನೆಲೆ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಶೇ. 5 ರಷ್ಟು ಅಲ್ಪ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರ 10 ಗ್ರಾಂಗೆ 29,550 ಹಾಗೂ ಅಪರಂಜಿ ಚಿನ್ನ 10 ಗ್ರಾಂಗೆ 31,600 ಇದೆ. ಬೆಳ್ಳಿ ದರ ಕೆ.ಜಿಗೆ 37,400 ಇದೆ.

First published:May 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ