ಮಂಡ್ಯ (ಮೇ 8) : ಸರ್ಕಾರದ ವಿರೋಧದ ನಡುವೆಯೂ ನಾಳೆ ಹಿಂದು ದೇವಾಲಯಗಳಲ್ಲಿ (Hindu Temple) ಹನುಮಾನ್ ಚಾಲಿಸ್ ಹಾಗೂ ಭಕ್ತಿ ಗೀತೆಗಳ ಪಠಣವನ್ನ ಪ್ರಾರಂಭಿಸಲು ಹಿಂದುಪರ ಸಂಘಟನೆಗಳು ತಯಾರಿ ನಡೆಸಿವೆ. ಇದರ ನಡುವೆ ಮಸೀದಿಗಳಲ್ಲಿನ (Mosque) ಆಜಾನ್ ಮೈಕ್ಗಳನ್ನ ತೆಗೆಸುವಂತೆ ಮೇ 9ರ ವರೆಗೆ ಗಡುವು ನೀಡಿದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Mutalik) ನಾಳೆ ಸಾವಿರ ದೇವಸ್ಥಾನಗಳಲ್ಲಿ (Temple) ಹನುಮಾನ್ ಚಾಲಿಸ್ (Hanuman) ಪಠಣ ಮಾಡುವುದಾಗಿ ತಿಳಿಸಿದ್ದಾರೆ.
ಆಜಾನ್ ವಿರುದ್ದ ಹನುಮಾನ್ ಚಾಲಿಸ್ ಪಠಣ
ಹೌದು.. ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಸದ್ದು ಮಾಡಲು ಶುರುವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಮಸಿದಿಗಳಲ್ಲಿನ ಆಜಾನ್ ನಿಲ್ಲಬೇಕು. ಮಸಿದಿಗಳಲ್ಲಿ ಮೈಕ್ಗಳನ್ನ ತೆರವುಗೊಳಿಸಬೇಕು ಎಂದು ಶ್ರೀರಾಮಸೇನೆ ಮುಖಂಡ ಮುತಾಲಿಕ್ ಮೇ 9 ರ ವರೆಗೆ ಸರ್ಕಾರಕ್ಕೆ ಗಡವು ನೀಡಿದ್ದರು. ಆದ್ರೆ ಸರ್ಕಾರ ಇದುವರೆಗೂ ಮೈಕ್ ಗಳನ್ನ ತೆರವು ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ ಹಿಗಾಗಿ ನಾಳೆ ಬೆಳಗ್ಗೆ 5 ಗಂಟೆಯಿಂದ ರಾಜ್ಯದ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಹನುಮಾನ್ ಚಾಲಿಸ್ ಹಾಗೂ ಭಕ್ತಿ ಗೀತೆಗಳು ಮೊಳಗಲಿವೆ ಎಂದು ಮುತಾಲಿಕ್ ತಿಳಿಸಿದ್ರು
ಸರ್ಕಾರ ಅಭಿಯಾನ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ
ಮುಸ್ಲಿಮರ ವಿರುದ್ದ ಕ್ರಮ ಕೈಗೊಳ್ಳದ ಸರ್ಕಾರ ಬರಿ ನೋಟಿಸ್ ನೀಡಿ ಸುಮ್ಮನಾಗಿದೆ. ಅಲ್ಲದೆ ನಾವು ಸಂಪರ್ಕಿಸಿದ ದೇವಾಲಯಕ್ಕೆ ಹೋಗಿ ಹನುಮಾನ್ ಚಾಲಿಸ್ ಹಾಕದಂತೆ ಹೆದರಿಸುತ್ತಿದ್ದಾರೆ. ಈ ದಾದ ಗಿರಿ ನಡೆಯಲ್ಲ, ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ ನಮ್ಮ ಓಟಿನಿಂದಲೇ ನೀವು ಗೆದ್ದಿರುವುದು ಎಂದು ಬಿಜೆಪಿ ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ ನೀಡಿದ್ರು.
ಇದನ್ನೂ ಓದಿ: PSI Recruitment Scam: ಹಾಸನದಲ್ಲಿ ತಂದೆ-ಮಗ ಸೇರಿ ಮೂವರ ಬಂಧನ; ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳ ವಿಚಾರಣೆ
ಅಲ್ಲದೆ ಪೊಲೀಸರಿಂದ ದೇವಾಲಯಗಳಲ್ಲಿ ಹೆದರಿಸುವ ಕೆಲಸ ಸರಿಯಲ್ಲ. ಯಾವುದೇ ಗದ್ದಲವಿಲ್ಲದೆ ಶಾಂತ ರೀತಿಯಲ್ಲಿ ಅಭಿಯಾನ ಮಾಡುತ್ತೇವೆ. ಗಲಭೆ ಅಶಾಂತಿ ಮಸೀದಿ ಮೈಕ್ ಮೂಲಕ ಆಗುತ್ತಿದೆ. ಹಿಂದೂಗಳಿಂದ ಗೆದ್ದ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ನಮ್ಮ ರಾಜ್ಯದಲ್ಲಿ ಯಾಕೆ ಆ ಕೆಲಸ ಆಗುತ್ತಿಲ್ಲ. ಯೋಗಿ ರೀತಿ ಗಡ್ಸ್ ಬೊಮ್ಮಾಯಿ, ಆರಗ ಜ್ಞಾನೇಂದ್ರ ಅವರು ಯಾಕೆ ತೋರಿಸುತ್ತಿಲ್ಲ. ಸುಪ್ರೀಂ ಆದೇಶ ಎಲ್ಲರಿಗೂ ಒಂದೇ. ನೀವು ಹೊಸ ನಿಯಮ ಮಾಡಬೇಕಿಲ್ಲ, ನಿಮ್ಮ ತಾಕತ್ತು ತೋರಿಸಿ ಎಂದ್ರು.
ಈ ಸರ್ಕಾರಕ್ಕೆ ಗಡ್ಸ್, ತಾಕತ್ತು ಇಲ್ಲ
ಸರ್ಕಾರ ಆದೇಶ ಪಾಲಿಸದ ಇರೋದ್ರಿಂದ ನಾವು ಹೋರಾಟ ಮಾಡಬೇಕಾದ ಅನಿವಾರ್ಯ ಇದೆ. ಅಲ್ಲದೆ ಬಿಜೆಪಿಯವರು ಬುರ್ಕಾ ಹಾಕೊಂಡು ಓಡಾಡಿದ್ರು ಬಿಜೆಪಿಗೆ ಒಂದು ಮುಸ್ಲಿಂ ಓಟು ಬರಲ್ಲ. ಆದ್ರೂ ಯಾಕೆ ಇವರು ಮುಸ್ಲಿಮರ ಓಲೈಕೆ ಮಾಡಬೇಕು.? ಬೇರೇನು ಇಲ್ಲ ಇವರು ಮುಸ್ಲಿಮರಿಗೆ ಹೆದರುತ್ತಿದ್ದಾರೆ. ನಿಮಗೆ ಆಗದಿದ್ರೆ ಹೇಳಿ ನಾವು ಮೈಕ್ ಬಂದ್ ಮಾಡುತ್ತೇವೆ ಎಂದು ಮಂಡ್ಯದಲ್ಲಿ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ರು.
ಇದನ್ನೂ ಓದಿ: BasanaGowda Patil Yatnal: ಸಿಎಂ ಸ್ಥಾನಕ್ಕೆ 2500 ಕೋಟಿ ಹೇಳಿಕೆ; ಯು ಟರ್ನ್ ಹೊಡೆದ ಶಾಸಕ ಯತ್ನಾಳ್, ಈಗ ಹೇಳಿದ್ದೇನು?
ಅಭಿಯಾನ ತಡೆಯಲು ಮುಂದಾದ್ರೆ ಸಂಘರ್ಷವಾಗಲಿದೆ
ಇನ್ನು ಪೊಲೀಸರು ನಮ್ಮ ಅಭಿಯಾನ ತಡೆಯುವುದಲ್ಲ, ಅದರ ಬದಲಿಗೆ ಮಸೀದಿಗಳ ಮೈಕ್ ತಡೆಯಲಿ. ಈಗಾಗಲೇ ರಾಜ್ಯದಾದ್ಯಂತ ನಮ್ಮ ಸಂಘಟನೆ ಕಾರ್ಯಕರ್ತರು ದೇವಾಲಯಗಳಲ್ಲಿ ಮನವಿ ಮಾಡಿದ್ದಾರೆ. ನಾಳೆಯಿಂದ ಹನುಮಾನ್ ಚಾಲೀಸಾ, ಭಕ್ತಿಗೀತೆಗಳು ಹಾಕಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರೆ ಭಕ್ತಿಗೀತೆಗಳನ್ನು ಹಾಕ್ತಾರೆ. ಬೆಳಿಗ್ಗೆ 5 ಗಂಟೆಗೆ ಹಾಕಲು ಅಭಿಯಾನ ಆರಂಭಿಸಿದ್ದೇವೆ. ದಿನಕ್ಕೆ 4 ಬಾರಿ ಮಸೀದಿ ಅಜಾನ್ ಮೊಳಗುವ ವೇಳೆ ಭಕ್ತಿ ಗೀತೆ ಹಾಕುವ ಬಗ್ಗೆ ನಿರ್ಧರಿಸುತ್ತೇವೆ. ಬೆಳಿಗ್ಗೆ 5 ಗಂಟೆಗೆ ಮೈಕ್ ಹಾಕಲು ಅವಕಾಶ ಇಲ್ಲವೇ ಇಲ್ಲ. ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದ್ರೆ ಮಸೀದಿಗಳಲ್ಲಿ ಬೆಳಗಿನ ಜಾವ ಆಜಾನ್ ಕೂಗೂತ್ತಾರೆ. ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಆದೇಶ ಉಲ್ಲಂಘಿಸುತ್ತಿದ್ದೇವೆ. ನಾಳೆ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ದವಾಗಲಿದೆ ಎಂದು ಮುತಾಲಿಕ್ ತಿಳಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ