• Home
  • »
  • News
  • »
  • state
  • »
  • Handi Anni Murder: ಪೊಲೀಸರ ಮುಂದೆ ಹಂದಿ ಅಣ್ಣಿ ಹಂತಕರು ಶರಣು; ಹಣ ಇಲ್ಲ ಸರ್, ಬಸ್​ನಲ್ಲಿ ಬಂದ್ದೀವಿ ಅಂದ್ರು

Handi Anni Murder: ಪೊಲೀಸರ ಮುಂದೆ ಹಂದಿ ಅಣ್ಣಿ ಹಂತಕರು ಶರಣು; ಹಣ ಇಲ್ಲ ಸರ್, ಬಸ್​ನಲ್ಲಿ ಬಂದ್ದೀವಿ ಅಂದ್ರು

ಆರೋಪಿಗಳು

ಆರೋಪಿಗಳು

ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳಿಗೆ ಜೀವ ಭಯ ಇದ್ದ ಕಾರಣ ಶರಣಾಗತಿ ಆಗಿದ್ದಾರೆ ಎಂಬ ಅನುಮಾನ ಹುಟ್ಟಿದೆ.

  • Share this:

ಶಿವಮೊಗ್ಗ ನಗರದ ವಿನೋಬ ನಗರ ಪೊಲೀಸ್ ಚೌಕಿ ಸಮೀಪ ರೌಡಿ ಶೀಟರ್ ಹಂದಿ ಅಣ್ಣಿಯನ್ನು (Rowdysheeter Handi Anni Murder Case) ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿಗಳು (Accused) ಸೋಮವಾರ ತಡರಾತ್ರಿ ಚಿಕ್ಕಮಗಳೂರು (Chikkamagaluru) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ವಿನೋಬ ನಗರ ಪೊಲೀಸ್ ಚೌಕಿ ಸಮೀಪ ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರೌಡಿ ಶೀಟರ್ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಕಣ್ಮರೆಯಾಗಿದ್ದರು. ಆರೋಪಿಗಳ ಬಂಧನಕ್ಕಾಗಿ ಶಿವಮೊಗ್ಗ ಪೊಲೀಸ್ (Shivamogga Police) ಇಲಾಖೆ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಸೋಮವಾರ ತಡರಾತ್ರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ 8 ಜನ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಮುಂದೆ ಶರಣಾಗಿ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಮಾಡಿರುವುದು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ.


ಆರೋಪಿಗಳಾದ ನಿತಿನ್, ಕಾರ್ತಿಕ್, ಮಧು, ಫಾರೂಕ್, ಚಂದನ್, ಆಂಜನೇಯ, ಮಧು ಸೂದನ್, ಮದನ್ ರಾಯ್ ಎಂಬುವರನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ಮೆಡಿಕಲ್ ಟೆಸ್ಟ್ ಗೆ ಒಳಪಡಿಸಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ.


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚಿಕ್ಕಮಗಳೂರು SP ಅಕ್ಷಯ್ ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಹತ್ಯೆಯಾದ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಿದ್ದಾರೆ. ಬಸ್ಸಿನಲ್ಲಿ ಬಂದ ಆರೋಪಿಗಳು ಸೋಮವಾರ ತಡರಾತ್ರಿ ನೇರವಾಗಿ ನಮ್ಮ ಕಚೇರಿಗೆ ಬಂದು ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದವರು ನಾವೇ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.


Handi anni Murder Case Accused seven accused surrender in Chikkamagaluru vctv mrq
ರೌಡಿಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ


ಇದನ್ನೂ ಓದಿ:  Murder: ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ; ಹಂದಿ ಹಣ್ಣಿಯನ್ನು ಕೊಚ್ಚಿ ಕೊಲೆ ಮಾಡಲು ಕಾರಣವೇನು?


ಬಸ್ಸಿನಲ್ಲಿ ಬಂದ ಆರೋಪಿಗಳು


8 ಜನ ಆರೋಪಿಗಳ ನಮ್ಮ ವಶದಲ್ಲಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಶಿವ ಮೊಗ್ಗ ಪೊಲೀಸರ ವಶಕ್ಕೆ ನೀಡುವುದಾಗಿ ಹೇಳಿದರು‌. ಇನ್ನು ಆರೋಪಿಗಳು ಕೊಲೆ ಮಾಡಿರುವುದು ನಾವೇ, ನಮ್ಮ ಬಳಿ ಹಣ ಇಲ್ಲದ ಕಾರಣ ನಾವೇ  ನಿಮ್ಮ ಬಳಿ ಬಂದಿದ್ದೇವೆ. ಬಸ್ಸಿನಲ್ಲಿ ಅರಸೀಕೆರೆಯಿಂದ ಚಿಕ್ಕಮಗಳೂರಿಗೆ ಬಂದಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ SP ಅಕ್ಷಯ್ ತಿಳಿಸಿದರು.


ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಟೆಸ್ಟ್ ಮಾಡಿಸಿದ ನಗರದ ಪೊಲೀಸರು ನಂತರ ಆರೋಪಿಗಳನ್ನ ಶಿವಮೊಗ್ಗ ರವಾನೆ ಮಾಡಿದ್ದಾರೆ..


Handi anni Murder Case Accused seven accused surrender in Chikkamagaluru vctv mrq
ಆರೋಪಿಗಳು


ಜೀವ ಭಯದಲ್ಲಿ ಶರಣಾದರಾ ಆರೋಪಿಗಳು?


ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳಿಗೆ ಜೀವ ಭಯ ಇದ್ದ ಕಾರಣ ಶರಣಾಗತಿ ಆಗಿದ್ದಾರೆ ಎಂಬ ಅನುಮಾನ ಹುಟ್ಟಿದೆ. ಹಂದಿ ಅಣ್ಣಿ ಹಿಂಬಾಲಕರು ಕೊಲೆ ಮಾಡಿದ ಆರೋಪಿಗಳಿಗೆ ಇನ್ನಿಲ್ಲದ ಹುಡುಕಾಟ ನಡೆಸಿದ್ದರು ಎಂಬ ಮಾಹಿತಿ ಮೇರೆಗೆ ಆರೋಪಿಗಳು ಖುದ್ದಾಗಿ ಶರಣಾಗಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯ ಹುಟ್ಟಿಕೊಂಡಿದೆ.


ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಮೇಲೆ 9 ಕೇಸ್​


ಮೊದಲು ಶಿವಮೊಗ್ಗವನ್ನು ಬೆಚ್ಚಿಬೀಳಿಸಿದ ಜೋಡಿ ಲವ ಕುಶ ಮರ್ಡರ್ ಕೇಸ್ ನಲ್ಲಿ ಪಾತಕ ಲೋಕಕ್ಕೆ ಇಳಿದ ಈತ , ಬಂಕ್ ಬಾಲು ಕೇಸ್ ನಲ್ಲಿ ಹಬ್ಬೆಟ್ಟು ಮಂಜನಿಗೆ ರೈಟ್ ಹ್ಯಾಂಡ್ ಆಗಿ ಬಡ್ತಿ ಹೊಂದಿದ. ಹಬ್ಬೆಟ್ಟು ಮಂಜನ ಹಲವು ಕೆಲಸಗಳಲ್ಲಿ ಕೈ ಜೋಡಿಸಿದ ಹಂದಿ ಅಣ್ಣಿ ಶಿವಮೊಗ್ಗದ ರೌಡಿ ಲೋಕದಲ್ಲಿ ಬೆಳೆಯುತ್ತಾ ಬಂದಿದ್ದನು.


ಇದನ್ನೂ ಓದಿ:  Kolara: ಕೋಲಾರದಲ್ಲಿ ಒಂದೇ ದಿನ 45 ಲಕ್ಷ ಮೌಲ್ಯದ ಗಾಂಜಾ ಸೀಜ್!


ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಮೇಲೆ 9 ಕೇಸುಗಳಿದ್ದು, ಇದರಲ್ಲಿ ಎರಡು ಕೊಲೆ ಕೇಸುಗಳು ಸೇರಿದಂತೆ, ಹಫ್ತಾ ವಸೂಲಿ, ಡಕಾಯಿತಿ, ದೊಂಬಿ, ಬೆದರಿಕೆ ಹೀಗೆ ಹಲವಾರು ಕೇಸುಗಳಿವೆ. ಇನ್ನು ದುಷ್ಕರ್ಮಿಗಳು ಬೆಂಗಳೂರಿನಿಂದ ಬಂದಿದ್ದರು ಎಂದು ಹೇಳಲಾಗಿದ್ದು, ಈ ಹಿಂದೆ ನಟೋರಿಯಸ್ ರೌಡಿ ಶೀಟರ್ ಗಳಾಗಿದ್ದ ಲವ-ಕುಶ ಮರ್ಡರ್ ಕೇಸಿನಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದ.


Handi anni Murder Case Accused seven accused surrender in Chikkamagaluru vctv mrq
ಆರೋಪಿಗಳು


ಅಷ್ಟೇಅಲ್ಲದೇ, ನನ್ನ ಯಾರು ಕೂಡ ತುಳಿಯೋಕೆ ಆಗಲ್ಲಾ ಎಂಬ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ಕೇವಲ 15 ನಿಮಿಷಗಳಲ್ಲಿಯೇ, ರೌಡಿ ಶೀಟರ್ ನ ಹತ್ಯೆ ನಡೆದಿರುವುದು ಕಾಕತಾಳಿಯವಾಗಿದೆ.

Published by:Mahmadrafik K
First published: