ಬೆಂಗಳೂರು; ಕೊರೋನಾ ಮಹಾಮಾರಿ ನಡುವೆ ಉಪಚುನಾವಣೆ ನಡೆದಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಮತದಾರರಿಗೆ ಹ್ಯಾಂಡ್ ಗ್ಲೌಸ್ ವಿತರಣೆ ಮಾಡಿದೆ. ಆದರೆ ಮತದಾರರು ಹ್ಯಾಂಡ್ ಗ್ಲೌಸ್ ಬಳಸಿದ ನಂತರ ವಿಲೇವಾರಿ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಹಿನ್ನೆಲೆ ಮತ ಕೇಂದ್ರದ ಬಳಿ ಎಲ್ಲೆಂದರಲ್ಲೆ ಹ್ಯಾಂಡ್ ಗ್ಲೌಸ್ ಎಸೆದು ಹೋಗಿದ್ದಾರೆ.
ಜಾಲಹಳ್ಳಿಯ ಸಿದ್ದಾರ್ಥನಗರದ ಮತಗಟ್ಟೆ ಸಂಖ್ಯೆ 1, 1A, 2, 2A, 3, 3A, 4, 4A ಮತ ಕೇಂದ್ರದ ಬಳಿ ಚೆಲ್ಲಾಪಿಲ್ಲಿಯಾಗಿ ಹ್ಯಾಂಡ್ ಗ್ಲೌಸ್ ಎಸೆಯಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್‌ಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಇದ್ದರು ಸಹ ಬಳಸಿದ ಗ್ಲೌಸ್ ಸೂಕ್ತ ವಿಲೇವಾರಿಯಾಗದೆ ಮತಗಟ್ಟೆ ಸಮೀಪ ವಾಸಿಸುವ ಜನರಲ್ಲಿ ಸೋಂಕು ಹರಡುವ ಭೀತಿ ಎದುರಾಗಿದೆ. ಬಳಸಿದ ಗ್ಲೌಸ್ ಎಲ್ಲೆಂದರಲ್ಲೆ ಎಸೆಯುತ್ತಿರುವುದರಿಂದ ಸಾರ್ವಜನಿಕರು ಚುನಾವಣಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಆರ್ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆದಿದೆ. ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಜೆ 4ರಿಂದ 6 ಗಂಟೆಯವರೆಗೆ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೊರೋನಾ ಸೆಂಟರ್, ಹೋಂ ಐಸೋಲೇಷನ್ನಲ್ಲಿ ಇರುವ ಸೋಂಕಿತರನ್ನು ಆ್ಯಂಬುಲೆನ್ಸ್ನಲ್ಲಿ ಕರೆತಂದು ಮತ ಹಾಕಿಸಲಾಗುತ್ತಿದೆ. ಈ ಸಮಯದಲ್ಲಿ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇನ್ನಿತರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಇದನ್ನು ಓದಿ: RR Nagar, Sira Assembly Bypolls 2020 Voting Live: ಆರ್.ಆರ್.ನಗರಕ್ಕೆ ಹೋಲಿಸಿದರೆ ಶಿರಾದಲ್ಲೇ ಅತಿ ಹೆಚ್ಚು ಮತದಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ