Hamsalekha: ವಿವಾದ ಕುರಿತ ಹೇಳಿಕೆ ದಾಖಲಿಸಲು ಆಗಮಿಸಿದ ಹಂಸಲೇಖ; ಧರಣಿ ಕುಳಿತ ಅಹಿಂಸಾ ಚೇತನ್​

ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದರು. ಆ ನೋಟಿಸ್​​ನಂತೆ ಇಂದು ಹಂಸಲೇಖ ಅವರು ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

ಹಂಸಲೇಖ

ಹಂಸಲೇಖ

  • Share this:
    ಬೆಂಗಳೂರು (ನ. 25): ಪೇಜಾವರ ಶ್ರೀಗಳ  (Pejavar seer) ಬಗ್ಗೆ ಅವಹೇಳನ ಹೇಳಿಕೆ ನೀಡಿಕೆ ಆರೋಪದ ದೂರಿನ ಕುರಿತ ಹೇಳಿಕೆ ನೀಡಲು ಇಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಬಸವನಗುಡಿ ಠಾಣೆಗೆ ಆಗಮಿಸಿ ಹೇಳಿಕೆ ದಾಖಲಿಸಿದ್ದಾರೆ. ಹಂಸಲೇಖ ಅವರ ಆಗಮನಕ್ಕೂ ಮುನ್ನ ಹಂಸಲೇಖ ಪರ ವಕೀಲರಾದ ದ್ವಾರಕಾನಾಥ್​ ಠಾಣೆಗೆ ಆಗಮಿಸಿದ್ದರು. 

    ನಟ ಅಹಿಂಸಾ  ಚೇತನ್​ ಧರಣಿ

    ಹಂಸಲೇಖ ಅವರ ಜೊತೆಗೆ ನಟ ಅಹಿಂಸಾ ಚೇತನ್​ ಕೂಡ ಪೊಲೀಸ್​ ಠಾಣೆಗೆ ಆಗಮಿಸಿದರು. ಅವರ ಆಗಮಕ್ಕೆ ಭಜರಂಗದಳ ಕಾರ್ಯಕರ್ತರು ವಿರೋಧಿಸಿ ಧಿಕ್ಕಾರ ಕೂಗಿದರು.  ಅವರ ಆಗಮನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ ಅಹಿಂಸಾ ಚೇತನ್​​ ತಮ್ಮ ಬೆಂಬಲಿಗರೊಂದಿಗೆ ಠಾಣೆ ಎದುರು ಧರಣಿ ನಡೆಸಿದರು.

    ಚೇತನ್​ ಆಗಮನಕ್ಕೆ ವಿರೋಧ

    ಈ ವೇಳೆ ಭಜರಂಗದಳ ಹಾಗೂ ಹಂಸಲೇಖ ಪರ ಬಂದವರ ನಡುವೆ ವಾಗ್ವಾದ ಉಂಟಾಗಿ ಠಾಣೆಯ ಮುಂದೆ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು. ಇನ್ನು ಇದೇ ವೇಳೆ ನಟ ಅಹಿಂಸಾ ಚೇತನ್​ ಕೂಡ ಠಾಣೆಗೆ  ಆಗಮನಕ್ಕೆ ವಿರೋಧ ವ್ಯಕ್ತವಾಯಿತು. ಚೇತನ್​ ಹಿಂದೂಗಳನ್ನು ಒಡೆಯುವ ಕೆಲಸ ಮಾಡುತ್ತಾರೆ. ಅವರು ಯಾವುದೇ ಕಾರಣಕ್ಕೂ ಹಂಸಲೇಖ ಜೊತೆ ಠಾಣೆ ಒಳಗೆ ಬಿಡಬಾರದು ಎಂದು ಅವರ ವಿರುದ್ಧ ಧಿಕ್ಕಾರ ಕೂಗಿದರು. . ಚೇತನ್​ ಬಂದರೆ ನಾವು ಠಾಣೆ ಬಳಿ ಬಿಡುವುದಿಲ್ಲ ಎಂದು ಭಜರಂಗ ದಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದೇ ವೇಳೆ ಎರಡು ಗುಂಪುಗಳು ರಸ್ತೆಯಲ್ಲಿ ಪರಸ್ಪರ ಪ್ರತಿಭಟನಾ ಧರಣಿ ನಡೆಸಿವೆ

    ಬಿಗಿ ಬಂದೋಬಸ್ತ್​

    ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆಗೆ  ಭಜರಂಗದಳ ಕಾರ್ಯಕರ್ತರು ಭಾರೀ ಖಂಡನೆ ವ್ಯಕ್ತಪಡಿಸಿದ್ದರು. ಇಂದು ಹಂಸಲೇಖ ಅವರು ಠಾಣೆಗೆ ಆಗಮಿಸುವ ಹಿನ್ನಲೆ ಭಾರೀ ಸಂಖ್ಯೆಯ ಭಜರಂಗದಳ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದ್ದಾರೆ. ಈ ವೇಳೆ ಹಂಸಲೇಖ ಪರ ಕೂಡ ಹಲವರು ಸಂಘಟನೆಗಳು ಬೆಂಬಲಕ್ಕೆ ಆಗಮಿಸಿದೆ. ಈ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಬಿಗಿ ಬಂದೋ ಬಸ್ತ್​ ನಡೆಸಿದ್ದಾರೆ.

    ಇದನ್ನು ಓದಿ: ಹೇಮಾ ಮಾಲಿನಿಗೆ ವಯಸ್ಸಾಗಿದೆ, ಕತ್ರಿನಾ ಕೈಫ್​ ಕೆನ್ನೆಯಂತಹ ರಸ್ತೆ ನಿರ್ಮಿಸಿ ಎಂದ ರಾಜಸ್ಥಾನ ಸಚಿವ

    ದೂರು ನೀಡಿದ ಕಾರಣವೇನು?
    ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ದಲಿತರ ಮನೆಗೆ ಪೇಜಾವರ ಶ್ರೀಗಳಯು ಹೋಗಬಹುದು. ಆದರೆ, ಅವರ ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನಲು ಸಾಧ್ಯವಾ ಎಂದಿದ್ದರು. ಅವರ ಈ ಹೇಳಿಕೆ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದಾದ ಬಳಿಕ ಹಂಸಲೇಖ ಅವರು ತಾವು ಆಡಿದ ಮಾತಿಗೆ ಕ್ಷಮೆ ಕೋರಿದ್ದರು. ಈ ಸಂಬಂಧ ಬಸವನ ಗುಡಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ದೂರಿನ ವಿಚಾರಣೆಗೆ ಈ ಹಿಂದೆ ಅನಾರೋಗ್ಯದ ಹೇಳಿಕೆ ನೀಡಿ ಹಂಸಲೇಖ ಅವರು ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಪೊಲೀಸರು ನ. 25ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದರು. ಆ ನೋಟಿಸ್​​ನಂತೆ ಇಂದು ಹಂಸಲೇಖ ಅವರು ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
    Published by:Seema R
    First published: