ಹಾಸನ (ಫೆ. 11): ಪ್ರಾಚೀನ ಕಾಲದ ಜೈನ ಯಾತ್ರಾ ಸ್ಥಳವಾಗಿರುವ ಹಳೇಬೀಡಿನ ಬಸ್ತಿಹಳ್ಳಿ ಹೊಯ್ಸಳರ ಕಾಲದ ಜಿನಮಂದಿರಗಳ ಹಿಂಭಾಗ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ವಿಶಿಷ್ಟ ವಿನ್ಯಾಸದ ಹೊಯ್ಸಳ ಶೈಲಿಯ ಸ್ಮಾರಕದ ತಳಪಾಯದ ಕಟ್ಟಡ ಹೊರಬಂದಿದೆ. ಕಳೆದ 10 ದಿನದಿಂದ ಇಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಇತಿಹಾಸದ ಅಮೂಲ್ಯ ಸಾಕ್ಷಿಗೆ ಧಕ್ಕೆಯಾಗಬಾರದು, ಮಣ್ಣಿನಿಂದ ಶಿಲ್ಪಗಳನ್ನು ಹೊರ ತೆಗೆಯುವಾಗ ಕುಸುರಿ ಶಿಲ್ಪ ಕಲೆಗೆ ಹಾನಿಯಾಗಬಾರಾದು ಎಂದು ಯಂತ್ರ ಬಳಸದೆ ಸಣ್ಣ ಪರಿಕರಗಳಿಂದ ಕೆಲಸ ಮಾಡಲಾಗುತ್ತಿದೆ.
ಹತ್ತು ದಿನದಿಂದ ಹಳೇಬೀಡಿನಲ್ಲಿ ಉತ್ಪನನ ಕಾರ್ಯ ಭರದಿಂದ ಸಾಗುತ್ತಿದೆ. ಮಣ್ಣಿನಿಂದ ಶಿಲ್ಪಗಳನ್ನು ಹೊರತೆಗೆಯುವಾಗ ಕುಸುರಿ ಶಿಲ್ಪ ಕಲೆಗೆ ಹಾನಿಯಾಗಬಾರದು ಎಂದು ಯಂತ್ರ ಬಳಸದೆ ಸಣ್ಣ ಪರಿಕರಗಳಿಂದ ಕೆಲಸ ಮಾಡಲಾಗುತ್ತಿದೆ. ವಿಶಿಷ್ಟ ಕಲಾಕೃತಿ ಹೊಂದಿರುವ ತಳಪಾಯ ಮಾತ್ರವಲ್ಲದೆ ಜಿನಮೂರ್ತಿಗಳು ಉತ್ಕನನ ಸ್ಥಳದಲ್ಲಿ ಗೋಚರಿಸುತ್ತಿವೆ. ದಾಖಲೀಕರಣ, ಛಾಯಾಗ್ರಹಣ ಮಾಡಿಕೊಂಡು ಎಚ್ಚರಿಕೆಯಿಂದ ಶಿಲ್ಪಗಳನ್ನು ಹೊರತೆಗೆಯಲಾಗುತ್ತಿದೆ. ಪುರಾತತ್ವ ಶಾಸ್ತ್ರಜ್ಞರು ಹಾಗೂ ತಂತ್ರಜ್ಞರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗದ ಗುಂಡಿಯಲ್ಲಿ ಸುಮಾರು 40 ವರ್ಷದ ಹಿಂದೆಯೇ 18 ಅಡಿ ಎತ್ತರದ ತೀರ್ಥಂಕರ ಮೂರ್ತಿ ಸಿಕ್ಕಿದೆ. ಈಗ ಹಳೇಬೀಡಿನ ಪುರಾತತ್ವ ಮ್ಯೂಸಿಯಂನಲ್ಲಿ ಸಂರಕ್ಷಣೆಗೆ ಒಳಪಟ್ಟಿದೆ. ಮೂರ್ತಿ ಸಿಕ್ಕಿದ ಸ್ಥಳಕ್ಕೆ ಸ್ಥಳೀಯರು ಶ್ರವಣಪ್ಪನ ಗುಂಡಿ ಎಂದು ಕರೆಯುತ್ತಾರೆ.
ಇದನ್ನೂ ಓದಿ: Areca nut Price: ಅಡಕೆ ಬೆಲೆಯಲ್ಲಿ ದಾಖಲೆಯ ಏರಿಕೆ; ಅಡಕೆ ದರ ಹೆಚ್ಚಳಕ್ಕೆ ಕಾರಣವೇನು ಗೊತ್ತಾ?
ವಿಶಿಷ್ಟ ಕಲಾಕೃತಿ ಹೊಂದಿರುವ ತಳಪಾಯ ಮಾತ್ರವಲ್ಲದೆ ಜಿನಮೂರ್ತಿಗಳು ಉತ್ಖನನ ಸ್ಥಳದಲ್ಲಿ ಗೋಚರಿಸುತ್ತಿವೆ. ದಾಖಲೀಕರಣ, ಛಾಯಾಗ್ರಹಣ ಮಾಡಿಕೊಂಡು ಎಚ್ಚರಿಕೆಯಿಂದ ಶಿಲ್ಪಗಳನ್ನು ಹೊರತೆಗೆಯಲಾಗುತ್ತಿದೆ. ಪುರಾತತ್ವ ಶಾಸ್ತ್ರಜ್ಞರು ಹಾಗೂ ತಂತ್ರಜ್ಞರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಶಿಲಾಶಾಸನ, ಬರಹ ಇರುವಂತಹ ಜೋಡಣೆಯ ಕಲ್ಲುಗಳು ಕಾಣಸಿಗುತ್ತವೆಯೇ ಎಂಬ ಅನ್ವೇಷಣೆಯಲ್ಲಿ ಪುರಾತತ್ವ ಶಾಸ್ತ್ರಜ್ಞರು ತೊಡಗಿದ್ದಾರೆ.
ಪುರಾತತ್ವ ಅಧಿಕಾರಿಗಳು ಕೆಂದ್ರ ಸರ್ಕಾರದಿಂದ ಸೂಕ್ತಪರಿಹಾರ ಕೊಡಿಸುವ ಭರವಸೆ ಕೊಟ್ಟು, ರೈತರ ಮನವೊಲಿಸಿ ಉತ್ಖನನ ಕೆಲಸ ಕೈಗೊಂಡಿದ್ದಾರೆ. ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗದ ಗುಂಡಿಯಲ್ಲಿ ಸುಮಾರು 40 ವರ್ಷದ ಹಿಂದೆಯೇ 18 ಅಡಿ ಎತ್ತರದ ತೀರ್ಥಂಕರ ಮೂರ್ತಿ ಸಿಕ್ಕಿದೆ. ಈಗ ಹಳೇಬೀಡಿನ ಪುರಾತತ್ವ ಮ್ಯೂಸಿಯಂನಲ್ಲಿ ಸಂರಕ್ಷಣೆಗೆ ಒಳಪಟ್ಟಿದೆ.
ಮೂರ್ತಿ ಸಿಕ್ಕಿದ ಸ್ಥಳಕ್ಕೆ ಸ್ಥಳೀಯರು ಶ್ರವಣಪ್ಪನ ಗುಂಡಿ ಎಂದು ಕರೆಯುತ್ತಾರೆ. ಗುಂಡಿಯನ್ನು ಶೋಧಿಸಿದರೆ ಸಾಕಷ್ಟು ಪ್ರಾಚೀನ ಕಾಲದ ಅವಶೇಷಗಳು ದೊರಕುತ್ತವೆ ಎನ್ನುತ್ತಾರೆ ಇತಿಹಾಸ ಆಸಕ್ತರು.
ಉತ್ಖನನ ನಡೆಯುತ್ತಿರುವ ಜಾಗದ ಹಿಂಭಾಗದಲ್ಲಿ ಪರಿಪೂರ್ಣವಾಗಿ ಉತ್ಖನನ ಕೈಗೊಂಡರೆ 5ರಿಂದ 7 ಜಿನಮಂದಿರಗಳು ದೊರಕುವ ಸಾಧ್ಯತೆ ಇದೆ. ಈ ಸ್ಥಳದಲ್ಲಿ ಜೈನ ಮಠ ಸಹ ಇತ್ತು ಎನ್ನುತ್ತಾರೆ ಸಂಶೋಧಕರು. ಈ ನಿಟ್ಟಿನಲ್ಲಿ ಪರಿಪೂರ್ಣವಾದ ಉತ್ಖನನ ಆಗಬೇಕಾಗಿದೆ ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕ ವಸಂತ ಕುಮಾರ್.
ಉತ್ಖನನ ನಡೆಯುತ್ತಿರುವ ಬಸ್ತಿಹಳ್ಳಿಯ ಜಿನಮಂದಿರದ ಹಿಂಭಾಗದ ಸ್ಥಳವನ್ನು ಪುರಾತತ್ವ ಶಾಸ್ತ್ರಜ್ಞರು ಅನ್ವೇಷಣೆ ಮಾಡಿದ್ದಾರೆ. ಈಗ ಕೈಗೊಂಡಿರುವ ಕೆಲಸ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾದೇಶಿ ನಿರ್ದೇಶಕಿ ಮಹೇಶ್ವರಿ.
(ವರದಿ - ಡಿಎಂಜಿ ಹಳ್ಳಿ ಅಶೋಕ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ