ನಿಷ್ಠಾವಂತ ಕಾರ್ಯಕರ್ತನ ಒತ್ತಾಯಕ್ಕೆ ಮಣಿದ ಬಿಎಸ್​ವೈ; ಟಿಕೆಟ್​ ಪಡೆಯುವಲ್ಲಿ ಹಾಲಪ್ಪ ಯಶಸ್ವಿ

news18
Updated:April 16, 2018, 4:41 PM IST
ನಿಷ್ಠಾವಂತ ಕಾರ್ಯಕರ್ತನ ಒತ್ತಾಯಕ್ಕೆ ಮಣಿದ ಬಿಎಸ್​ವೈ; ಟಿಕೆಟ್​ ಪಡೆಯುವಲ್ಲಿ ಹಾಲಪ್ಪ ಯಶಸ್ವಿ
news18
Updated: April 16, 2018, 4:41 PM IST
ಬೆಂಗಳೂರು, (ಏ.16): ಬಿಜೆಪಿ ಎರಡನೇ ಪಟ್ಟಿಯಲ್ಲಿ ಯಡಿಯೂರಪ್ಪ ತಮ್ಮ ಆಪ್ತರಿಗೆ ಟಿಕೆಟ್​ ಕೊಡಿಸುವಲ್ಲಿ ಬಿಎಸ್​ ಯಡಿಯೂರಪ್ಪ ಸಫಲರಾಗಿದ್ದಾರೆ.

ಯಡಿಯೂರಪ್ಪ ತವರು ಕ್ಷೇತ್ರವಾದ ಶಿವಮೊಗ್ಗದ ಸಾಗರ ಕ್ಷೇತ್ರದಲ್ಲಿ ಕಡೆಗೂ ಹರತಾಳು ಹಾಲಪ್ಪಗೆ ಟಿಕೆಟ್​ ಕೊಡಿಸುವಲ್ಲಿ  ಸಫಲರಾಗಿದ್ದಾರೆ. ಕಂಗಟ್ಟಾಗಿದ್ದ ಸಾಗರ ಕ್ಷೇತ್ರಕ್ಕೆ ಕಡೆಗೂ ತಮ್ಮ ಭಂಟನಿಗೆ ಟಿಕೆಟ್​ ಕೊಡಿಸಿ ತಮ್ಮ ನಿಷ್ಠಾವಂತ ಶಿಷ್ಯನ ರಾಜಕೀಯ ಜೀವನ ಸುಗಮ ಮಾಡಿದ್ದಾರೆ.

ಈ ಹಿಂದೆ ಬಿಜೆಪಿ ಟಿಕೆಟ್​ ಬೇಳೂರು ಗೋಪಾಲ ಕೃಷ್ಣಗೆ ಟಿಕೆಟ್​ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಹಾಲಪ್ಪ ಮುನಿಸಿಕೊಂಡಿದ್ದರು. ಯಡಿಯೂರಪ್ಪ ಕೆಜೆಪಿಗೆ ಹೋದಾಗಲು ಸಹಾಯಮಾಡಿದ್ದ ಕಾರ್ಯಕರ್ತರನ್ನು ಬಿಟ್ಟ, ಪಕ್ಷಾಂತರ ಮಾಡುತ್ತಿದ್ದ ಬೇಳೂರುಗೆ ಮಣೆ ಹಾಕುತ್ತಿದ್ದಾರೆ ಎಂದು ಹಾಲಪ್ಪ ಸಿಡಿದೆದ್ದಿದ್ದರು.

ಪಕ್ಷ ಬಿಟ್ಟು ಹೋಗುವರೆಗೂ ನಿರ್ಧಾರ ಮಾಡಿದ್ದ ಹಾಲಪ್ಪ ಕಡೆಗೆ ಯಡಿಯೂರಪ್ಪನೆ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದರು. ಅಲ್ಲದೇ ಎರಡನೇ ಪಟ್ಟಿಯಲ್ಲಿ ಟಿಕೆಟ್​ಗೆ ಕೊನೆ ಕ್ಷಣದವರೆಗೆ ಕಸರತ್ತು ಮಾಡಿದ್ದು, ಕೊನೆಗೆ ಯಶಸ್ವಿಯಾಗಿದ್ದಾರೆ.

ಹಾಲಪ್ಪಗೆ ಟಿಕೆಟ್​ ನೀಡಿರುವುದರಿಂದ ಬೇಳೂರು ಬೇಸರಕ್ಕೆ ಕಾರಣವಾಗಿದೆ.  ಆ ಮೂಲಕ ಗೋಪಾಲಕೃಷ್ಣ ಬೇಳೂರು ಟಿಕೆಟ್ ವಂಚಿತರಾಗಿದ್ದು, ಇದು ಕಾಗೋಡು ಗೆಲುವಿಗೆ ಪರೋಕ್ಷವಾಗಿ ಬೆಂಬಲವಾಗಿ ನೀಡಲಿದ್ದಾರಾ ಎಂಬ ಅನುಮಾನ ಮೂಡಿದೆ.

 

 
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...