ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಹಲಾಲ್ ಮುಕ್ತ (Halal Free) ಮಹಾ ಸಮ್ಮೇಳನ ನಡೆದಿದ್ದು, ದೀಪಾವಳಿ ಹಬ್ಬಕ್ಕೆ (Diwali Festival) ಹಲಾಲ್ ಮಾಂಸ ಬಳಕೆ ಮಾಡಬಾರದೆಂದು ಸಮ್ಮೇಳನದಲ್ಲಿ ಹಿಂದೂಗಳಿಗೆ (Hindu) ಕರೆ ನೀಡಲಾಗಿದೆ. ಹಿಂದೂ ಜನ ಜಾಗೃತಿ ವೇದಿಕೆಯಿಂದ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲಾಲ್ ಜಿಹಾದ್? ಗ್ರಂಥ ಲೋಕಾರ್ಪಣೆ ಮಾಡಲಾಗಿದೆ. ಬಳಿಕ ಧಾನ್ಯಗಳು, ಹಣ್ಣು, ಸೌಂದರ್ಯ ವರ್ಧಕ ಹಾಗೂ ಔಷಧಿಗಳು ಅನೇಕ ಪದಾರ್ಥಗಳನ್ನು ಮುಸ್ಲಿಂ ವ್ಯಾಪಾರಿಗಳಿಂದ (Merchant) ಕೊಳ್ಳದಂತೆ ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಹಿಂದೂ ವ್ಯಾಪಾರಿಗಳಿಂದ ಲೂಟಿ
ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ.
ರಾಜ್ಯದಾದ್ಯಂತ ಈ ಹಲಾಲ್ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಸಭೆಯಲ್ಲಿ ಕರೆ ನೀಡಿದ್ದಾರೆ. ಈ ಮಹಾ ಸಮ್ಮೇಳನದಲ್ಲಿ ಹಲವು ಹಿಂದೂ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.
ಹಿಂದೂ ಸಂಘಟನೆಗಳ ಮುಖ್ಯಸ್ಥರು ಭಾಗಿ
ಕಾರ್ಯಕ್ರಮದಲ್ಲಿ ವಿಜಯ ಕುಮಾರ ರೆಡ್ಡಿ ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ಹೆಲ್ಡ್‌ಲೈನ್, ಎಸ್. ಭಾಸ್ಕರನ್, ಅಧ್ಯಕ್ಷರು ವಿಶ್ವ ಸನಾತನ ಪರಿಷದ್, ಡಿ.ಎಸ್. ರಾಘವೇಂದ್ರ ಉದ್ಯಮಿ, ಅಮೃತೇಶ್ ಎನ್.ಪಿ., ವಕೀಲರು, ಬೆಂಗಳೂರು ಉಚ್ಚ ನ್ಯಾಯಾಲಯ. ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: Murugha Mutt: ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರ ನೇಮಕ; ಬಸವಪ್ರಭು ಶ್ರೀಗಳಿಗೆ ಪೂಜಾ ಕೈಂಕರ್ಯದ ಉಸ್ತುವಾರಿ
ಮುಸ್ಲಿಂನ ಜೊತೆಗೆ ವ್ಯಾಪಾರ ಮಾಡಬಾರದು- ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ: ಮುಸ್ಲಿಂನ ಜೊತೆಗೆ ವ್ಯಾಪಾರ ಮಾಡಬಾರದು. ಇದನ್ನು ಸಂಪೂರ್ಣ ರದ್ದು ಮಾಡಬೇಕೆಂದು ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹಾಗೂ ಇದೇ ವೇಳೆ ಅವರು ಬ್ರಾಹ್ಮಣ ಸಮಾಜ ಮೂರ್ಖ ಸಮಾಜ ಎಂದು ಬ್ರಾಹ್ಮಣರ ವಿರುದ್ಧ ಕಿಡಿಕಾರಿದ್ದಾರೆ. ರಾಮ್ ರಹೀಮ್ ಮಿಲ್ಕ ಡೈರಿಯಲ್ಲಿ ತುಪ್ಪ ಖರೀದಿ ಮಾಡ್ತಾರೆ. ಮುಸ್ಲಿಮರ ಕಡೆ ಕಬ್ಬು, ಎಲೆ, ಹೂ ಖರೀದಿ ಮಾಡಿದ್ರೆ ಅಶಾಸ್ತ್ರ ಆಗತ್ತೆ. ಶಾಸ್ತ್ರ ಒಪ್ಪಲ್ಲ, ದೇವರು ಶಾಪ ಕೊಡ್ತಾರೆ. ಗೋ ಹಂತಕ, ಗೋ ಭಕ್ಷಕರ ಕಡೆ ಖರೀದಿ ಮಾಡಿದ್ರೆ ದೇವರು ಒಪ್ಪಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.
ಹಲಾಲ್ ಗಂಭೀರತೆ ಭಯಾನಕ
ಪ್ರತಿಯೊಬ್ಬ ಹಿಂದೂ ಸಹ ದೀಪಾವಳಿ ಹಲಾಲ್ ಮುಕ್ತ ದೀಪಾವಳಿಗಾಗಿ ಸಂಕಲ್ಪ ಮಾಡಬೇಕು. ಹಲಾಲ್ ಗಂಭೀರತೆ ಭಯಾನಕವಾಗಿದೆ. ಇದರ ಗಂಭೀರತೆ ಪ್ರವೀಣ್ ನೆಟ್ಟಾರು ಕೊಲೆವರೆಗೂ ಬಂದಿದೆ. ಹೀಗೆ ಆದ್ರೆ ನಿಮ್ಮ ಮನೆ ಹೊಕ್ಕು ಹೊಡಿತಾರೆ ಎಂದ ಪ್ರಮೋದ್ ಮುತಾಲಿಕ್ ಆಕ್ರೋಶ ಭರಿತ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: Siddaramaiah Vs Sriramulu: ದಾಖಲೆ ಇಟ್ಕೊಂಡು ಡಿಕೆಶಿಗೆ ಸಿದ್ದರಾಮಯ್ಯ ಬ್ಲ್ಯಾಕ್ಮೇಲ್; ಶ್ರೀರಾಮುಲು ಸ್ಫೋಟಕ ಹೇಳಿಕೆ
ಕೊಲೆ ಮಾಡಿದ್ದು ಹಲಾಲ್ ಮಾಡುವ ಮುಸ್ಲಿಂ
ಪ್ರವೀಣ್ ನೆಟ್ಟಾರು ಮಾಂಸದ ವ್ಯಾಪಾರ ಮಾಡ್ತಿದ್ದ. ಅದೇ ಅಂಗಡಿಯಲ್ಲಿ ಕೊಲೆ ಮಾಡಿದವನ ಅಪ್ಪ ಕೆಲಸ ಮಾಡ್ತಿದ್ದ. ಪ್ರವೀಣ್ ನೆಟ್ಟಾರು ಕೊಲೆ ಮಾಡಿದ್ದು ಇದೇ ಹಲಾಲ್ ಮಾಡುವ ಮುಸ್ಲಿಂ. ಇಂತಹ ಕೊಲೆಗಡುಕರ ಜೊತೆ ವ್ಯಾಪಾರ ಮಾಡಬೇಕಾ? ನಾವು ಇವತ್ತು ಜಾಗೃತಿ ಆಗದೆ ಹೋದ್ರೆ ನಮ್ಮ ಮೊಮ್ಮಕ್ಕಳು ಉಳಿಯೋದಿಲ್ಲ. ಈ ಕ್ಷಣದಿಂದಲೇ ಹಲಾಲ್ ತಡೆಯುವ ಕೆಲಸ ಆಗಬೇಕು. ಪ್ರತಿಯೊಬ್ಬ ವ್ಯಕ್ತಿ ಹಲಾಲ್ ಕುರಿತು ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.
ನಮ್ಮ ಹಿಂದೂ ಸಂಸ್ಕೃತಿ ಹಾಳು ಮಾಡ್ತಿದ್ದಾರೆ
ಹಲಾಲ್ ವಿಚಾರದಲ್ಲಿ ಹಲಾಲ್ ಸಮಾಜದವರು ನಮ್ಮ ಹಿಂದೂ ಸಂಸ್ಕೃತಿ ಹಾಳು ಮಾಡ್ತಿದ್ದಾರೆ. ಇಸ್ಲಾಂ ಹುಟ್ಟಿ 1400 ವರ್ಷ ಆಯ್ತು, ಹಿಂದೂ ಸಮಾಜ ಹುಟ್ಟಿ ಹತ್ತು ಸಾವಿರ ವರ್ಷ ಆಯ್ತು. ಅವಾಗ ನಿಮ್ಮ ಮೌಲ್ವಿ ಎಲ್ಲಿದ್ದ? ಇಷ್ಟು ಸಾಮಾನ್ಯ ಜ್ಞಾನ ಹಲಾಲ್ ಸಮಾಜದವರಿಗೆ ಇಲ್ಲ ಎಂದು ಹಲಾಲ್ ಜಿಹಾದ್ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ