• Home
 • »
 • News
 • »
 • state
 • »
 • Bengaluru: ಅವನು ಕ್ಷಮೆ ಕೇಳಿದ್ದರೆ, ನಾನು ಅವನನ್ನು ಬಿಟ್ಟುಬಿಡುತ್ತಿದ್ದೆ! ಬೈಕ್‌ ಸವಾರನಿಂದ ಗಾಯಗೊಂಡ 71 ವರ್ಷದ ವೃದ್ಧನ ಮಾತು

Bengaluru: ಅವನು ಕ್ಷಮೆ ಕೇಳಿದ್ದರೆ, ನಾನು ಅವನನ್ನು ಬಿಟ್ಟುಬಿಡುತ್ತಿದ್ದೆ! ಬೈಕ್‌ ಸವಾರನಿಂದ ಗಾಯಗೊಂಡ 71 ವರ್ಷದ ವೃದ್ಧನ ಮಾತು

ಗಾಯಗೊಂಡ ವೃದ್ಧ

ಗಾಯಗೊಂಡ ವೃದ್ಧ

ವಿಜಯನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಾಹಿಲ್ ಎಂಬ ಯುವಕ ತನ್ನ ದ್ವಿಚಕ್ರ ವಾಹನದಿಂದ ವೃದ್ಧನನ್ನು ಅಮಾನವೀಯವಾಗಿ ಸುಮಾರು 750 ಮೀಟರ್​ವರೆಗೆ ಎಳೆದೊಯ್ದ ನಂತರ ಆತನನ್ನು ಆಸ್ಪತ್ರೆಗೆ ದಾಖಲಾಯಿತು. ಘಟನೆಯ ಕುರಿತು ಯುವಕ ಕ್ಷಮೆ ಕೇಳಿದ್ದರೆ, ನಾನು ಅವನನ್ನು ಹೋಗಲು ಬಿಡುತ್ತಿದ್ದೆ ಎಂದು ವೃದ್ಧ ತಿಳಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • New Delhi, India
 • Share this:

ಬೆಂಗಳೂರು : “ನಾನು 71 ವರ್ಷದ ವೃದ್ಧ, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ಮಕ್ಕಳ ತಂದೆ. ನನ್ನ ಜೀಪಿಗೆ ತನ್ನ ಗೇರ್‌ಲೆಸ್ ದ್ವಿಚಕ್ರ ವಾಹನದಿಂದ ಡಿಕ್ಕಿ ಹೊಡೆದ ಯುವಕ ನನ್ನ ಮಕ್ಕಳಿಗಿಂತ ಚಿಕ್ಕವನು.- ನಾನು ಅವನನ್ನು ನಿಲ್ಲಿಸಿ, ವಿಚಾರಿಸುವಾಗ ಅವನು ನನ್ನನ್ನು ನಿಂದಿಸಿ, ಹಲ್ಲೆ ಮಾಡಿದ್ದಾನೆ. ನಾನು ಅದನ್ನು ಸಹಿಸಲಾರದೆ ಅವನನ್ನು ಹಿಡಿಯಲು ನಿರ್ಧರಿಸಿದೆ. ನಾನು ಆತನ ದ್ವಿಚಕ್ರ ವಾಹನವನ್ನು ಹಿಡಿಯುವ ಪ್ರಯತ್ನವನ್ನು ನೋಡಿದ ಯುವಕರು ವ್ಯಂಗ್ಯವಾಗಿ ನಗುತ್ತಾ, ನಿಂದಿಸಿ ಅಲ್ಲಿಂದ ವೇಗವಾಗಿ ಓಡಿದರು. ಆದರೆ ನಾನು ದ್ವಿಚಕ್ರ ವಾಹನದ ಹಿಂಬದಿಯ ಸೀಟಿನ ಲೋಹದ ಚೌಕಟ್ಟನ್ನು ಗಟ್ಟಿಯಾಗಿ ಹಿಡಿದುಕೊಂಡೆ," ಎಂದು ಮಾಗಡಿ ರಸ್ತೆಯ ಹೆಗ್ಗನಹಳ್ಳಿ ನಿವಾಸಿ ಮುತ್ತಪ್ಪ ಶಿವಯೋಗಿ ತೋಂಟಾಪುರ ತಿಳಿಸಿದ್ದಾರೆ.


ವೃದ್ಧನನ್ನು 750 ಕಿ.ಮೀ. ಎಳೆದೊಯ್ದ ಬೈಕ್ ಸವಾರ


ವಿಜಯನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಾಹಿಲ್ ಎಂಬ ಯುವಕ ತನ್ನ ದ್ವಿಚಕ್ರ ವಾಹನದಿಂದ ವೃದ್ಧನನ್ನು ಅಮಾನವೀಯವಾಗಿ ಸುಮಾರು 750 ಮೀಟರ್​ವರೆಗೆ ಎಳೆದೊಯ್ದ ನಂತರ ಆತನನ್ನು ಆಸ್ಪತ್ರೆಗೆ ದಾಖಲಾಯಿತು. “ಘಟನೆಯ ಕುರಿತು ಯುವಕ ಕ್ಷಮೆ ಕೇಳಿದ್ದರೆ, ನಾನು ಅವನನ್ನು ಹೋಗಲು ಬಿಡುತ್ತಿದ್ದೆ. ನನ್ನ ಮೊಣಕಾಲುಗಳು ರಸ್ತೆಗೆ ತಾಗಿ ನಾನು ನೋವಿನಿಂದ ಕೂಗುತ್ತಿದ್ದೆ, ಆದರೂ ದ್ವಿ ಚಕ್ರ ವಾಹನದ ಹಿಂಬದಿಯ ಹಿಡಿಕೆಯನ್ನು ಬಿಡಲಿಲ್ಲ,” ಎಂದು ಮುತ್ತಪ್ಪ ಅ ಭಯಾನಕ ಕ್ಷಣಗಳನ್ನು ವಿವರಿಸಿದರು.


ಗಾಯಗೊಂಡ ವ್ತಕ್ತಿಗೆ ವಿಜಯನಗರದ ಗಾಯತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ


ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಮುತ್ತಪ್ಪ ಅವರು ತಮ್ಮ ಮಹೀಂದ್ರಾ ಬೊಲೆರೋ ಜೀಪ್ ಡ್ರೈವ್ ಮಾಡಿಕೊಂಡು ಚಂದ್ರಾ ಲೇಔಟ್ ಕಡೆಗೆ ಸಾಗುತ್ತಿದ್ದರು. ಅವರು ಮಾಗಡಿ ರಸ್ತೆಯ ಟೋಲ್ ಗೇಟ್ ತಲುಪುತ್ತಿದ್ದಂತೆ, ಫೋನ್ ಕರೆ ಸ್ವೀಕರಿಸಿ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಅವರು ಫೋನ್ ನಲ್ಲಿ ಮಾತನಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಮುತ್ತಪ್ಪ ಅವರ ಜೀಪಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ವಿಜಯನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಾಯತ್ರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾದ ಮುತ್ತಪ್ಪ ತಿಳಿಸಿದ್ದಾರೆ.


ನಾನು ತೆಗೆದುಕೊಂಡ ರಿಸ್ಕ್ ಬಗ್ಗೆ ನನಗೆ ತಿಳಿದಿತ್ತು. ಆದರೆ ಆ ಕ್ಷಣದಲ್ಲಿ, ನಾನು ಎದುರಿಸಿದ ಅವಮಾನ ನನ್ನಲ್ಲಿತ್ತು. ಮನಸ್ಸಿನಲ್ಲಿ, ಯುವಕ ನನ್ನನ್ನು ಎಳೆದುಕೊಂಡು ಹೋಗುತ್ತಿದ್ದಾನೆ ಎಂದು ಚೆನ್ನಾಗಿ ತಿಳಿದಿತ್ತು. ಅವನು ದ್ವಿಚಕ್ರ ವಾಹನವನ್ನು ಅಂಕುಡೊಂಕಾದ ರೀತಿಯಲ್ಲಿ ಚಲಾಯಿಸುತ್ತಿದ್ದ. ನಾನು ನನ್ನ ಕೈ ಬಿಡಬಲ್ಲೆ ಎಂದುಕೊಂಡು ಅವನು ಇನ್ನು ಜೋರಾಗಿ ವಾಹನ ಚಲಾಯಿಸುತ್ತಿದ್ದ. ಆದರೆ ದ್ವಿಚಕ್ರ ವಾಹನವು ವೇಗವನ್ನು ಪಡೆಯುತ್ತಿದ್ದಂತೆ ನಾನು ವಾಹನವನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದೆ" ಎಂದಿದ್ದಾರೆ.


Had he apologised, I'd have let him off: 71-year-old victim dragged by two-wheeler in Bengaluru
ಸಾಂದರ್ಭಿಕ ಚಿತ್ರ


ಗಾಯತ್ರಿ ಆಸ್ಪತ್ರೆಯ ವೈದ್ಯ ಸುನೀಲ್ ಮಲ್ಲೇಶ್ ಮಾತನಾಡಿ, ಮುತ್ತಪ್ಪ ಅವರ ಕಾಲಿಗೆ ಯಾವುದೇ ಮುರಿತವಾಗದಿರುವುದು ಪವಾಡ. ಮುತ್ತಪ್ಪ ಅವರಿಗೆ ಅ ಸಮಯದಲ್ಲಿ ಹೆಚ್ಚು ಗಂಭೀರವಾದ ಗಾಯಗಳು ಆಗುವ ಸಾಧ್ಯತೆಗಳು ಹೆಚ್ಚಿದ್ದವು. ಮುತ್ತಪ್ಪ ಅವರ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸವು ಹೆಚ್ಚಿದ್ದ ಕಾರಣ ಅವರಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನಾಯಂಡನಹಳ್ಳಿ ನಿವಾಸಿಯಾಗಿರುವ ಆರೋಪಿ ಸಾಹಿಲ್ ಯಾಸಿನ್ 


ಆರೋಪಿಯಾಗಿರುವ ಸಾಹಿಲ್ ಯಾಸಿನ್ ನಾಯಂಡನಹಳ್ಳಿ ನಿವಾಸಿಯಾಗಿದ್ದು, ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ಸಾಹಿಲ್ ಯಾಸಿನ್ ಮಧ್ಯಾಹ್ನ ಊಟ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗೋವಿಂದರಾಜನಗರ ಪೊಲೀಸರ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ, ಯಾಸಿನ್ ತಾನು ಮಾಡಿದ ಅಪಘಾತಕ್ಕೆ ಸಿಕ್ಕಿಬೀಳಬಹುದೆಂಬ ಭಯದಿಂದ ಹಾಗೇ ಮಾಡಿದೆ ಎಂದಿದ್ದಾನೆ.


Had he apologised, I'd have let him off: 71-year-old victim dragged by two-wheeler in Bengaluru
ಗಾಯಗೊಂಡ ವೃದ್ಧ


ಜೀಪ್‌ನ ಹಿಂದಿನ ಭಾಗವು ಹೆಚ್ಚು ಹಾನಿಗೊಳಗಾಗಿದ್ದರಿಂದ ಅದನ್ನು ಸರಿಪಡಿಸುವುದು ದುಬಾರಿ ವ್ಯವಹಾರವಾಗಿದೆ ಎಂದು ನಾನು ಅರಿತುಕೊಂಡೆ. ಡ್ರೈವಿಂಗ್ ಸೀಟಿನಿಂದ ಕೆಳಗಿಳಿದ ವ್ಯಕ್ತಿಯ ಮೇಲೆ ನಾನು ಹಲ್ಲೆಮಾಡಿ ವಾಹನವನ್ನು ವೇಗವಾಗಿ ಓಡಿಸಿದೆ ಎಂದು ಆರೋಪಿ ಸಾಹಿಲ್ ಹೇಳಿದ್ದಾನೆ.


ಆರೋಪಿಯನ್ನು ಹಿಂಬಾಲಿಸಿ ಹಿಡಿದ ದಾರಿಹೋಕರು


ವೃದ್ಧನ ಸಹಾಯಕ್ಕೆ ಬಂದ ಅಲ್ಲಿನ ನಿವಾಸಿ ಕುಮಾರ್, ಯಾಸಿನ್‌ನನ್ನು ಹಿಂಬಾಲಿಸುತ್ತಾ, ಸಾಹಿಲ್ ನನ್ನು ಹಿಡಿಯುವಂತೆ ಕೂಗಿದ್ದಾನೆ. ಅದರಂತೆ ಖಾಸಗಿ ಕಾರಿನಲ್ಲಿದ್ದ ವ್ಯಕ್ತಿ, ಆಟೋರಿಕ್ಷಾ ಚಾಲಕ ಮತ್ತು ಇಬ್ಬರು ವಾಹನ ಚಾಲಕರು ಸಾಹಿಲ್​​ನನ್ನು ಹಿಂಬಾಲಿಸಿ ಹೊಸಹಳ್ಳಿಯ ಬಾಲಗಂಗಾಧರನಾಥ ಸ್ವಾಮೀಜಿ ಮೆಟ್ರೋ ನಿಲ್ದಾಣದಲ್ಲಿ ಆತನನ್ನು ಹಿಡಿದಿದ್ದಾರೆ.
ಇದನ್ನೂ ಓದಿ: Shocking Video: ಚಲಿಸುತ್ತಿರುವ ಬೈಕ್‌ನಲ್ಲೇ ವೃದ್ಧನನ್ನು ಎಳೆದೊಯ್ದ ಸವಾರ! ನೀವು ಬೆಚ್ಚಿ ಬೀಳುವ ವಿಡಿಯೋ ಇಲ್ಲಿದೆ


"ಮುತ್ತಪ್ಪ ಅವರ ಪ್ಯಾಂಟ್ ಹರಿದಿದ್ದು, ಅವರ ಮೊಣಕಾಲುಗಳಿಗೆ ಗಾಯಗಳಾಗಿ ರಕ್ತ ಸೋರುತ್ತಿತ್ತು. ಅಲ್ಲದೆ ಅವರ ಕಾಲ್ಬೆರಳುಗಳಿಗೆ ಸಹ ಗಾಯಗಳಾಗಿವೆ" ಎಂದು ಕುಮಾರ್ ಹೇಳಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ವಸತಿ ಸಚಿವ ವಿ.ಸೋಮಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮುತ್ತಪ್ಪ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.

Published by:Monika N
First published: