Hacker Sriki: ಜೈಲಿನಿಂದ ಬಿಡುಗಡೆಯಾದ ಬಳಿಕ ಹ್ಯಾಕರ್ ಶ್ರೀಕಿ ನಾಪತ್ತೆ, ವಿಚಾರಣೆಗೂ ಗೈರು, ಪೊಲೀಸರಿಗೆ ತಲೆನೋವು

ಆತ ಮೊಬೈಲ್ ಪೋನ್ ಸಹ ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.  ಠಾಣೆಗೆ ಹಾಜರಾಗದೆ ಇರೋದಕ್ಕೆ ಶ್ರೀಕೃಷ್ಣ ಕಾರಣವನ್ನೂ ನೀಡಿಲ್ಲ. ಹೀಗಾಗಿ ಆತನ ನಡೆ ನಿಗೂಢವಾಗಿದೆ.  ಇನ್ನು ಕೆಲ ದಿನ ಕಾದು ಕೋರ್ಟ್ ಮುಂದೆ ವರದಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

ಹ್ಯಾಕರ್ ಶ್ರೀಕಿ

ಹ್ಯಾಕರ್ ಶ್ರೀಕಿ

  • Share this:
    ಬೆಂಗಳೂರು(ನ.28): ಬಿಟ್​ ಕಾಯಿನ್(Bitcoin) ದಂಧೆಯ ಆರೋಪ ಹೊತ್ತಿರುವ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ(Hacker Sriki) ಇನ್ನೂ ಸಹ ಪತ್ತೆಯಾಗಿಲ್ಲ. ಹ್ಯಾಕರ್ ಶ್ರೀಕಿ ಎಲ್ಲಿದ್ದಾನೆ ಅನ್ನೋದು ಇನ್ನೂ ಸಹ ನಿಗೂಢವಾಗಿ ಉಳಿದಿದೆ. ಹೋಟೆಲ್​(Hotel) ಗಲಾಟೆ ಸಂಬಂಧ ನಿರೀಕ್ಷಣಾ ಜಾಮೀನು(Bail) ಪಡೆದು ಹೊರಬಂದಿರುವ ಶ್ರೀಕೃಷ್ಣ, ಈಗ ತಲೆ ಮರೆಸಿಕೊಂಡಿದ್ದಾನೆ. ತನಿಖಾಧಿಕಾರಿ ಮುಂದೆಯೂ ಹಾಜರಾಗದೇ, ಖಾಕಿ ಕಣ್ಣಿಗೂ ಕಾಣಿಸದೇ ಮರೆಯಾಗಿದ್ದಾನೆ. ಸದ್ಯ ಪೊಲೀಸರು(Police) ಮತ್ತೆ ಶ್ರೀಕಿಯ ಬೆನ್ನು ಹತ್ತಿದ್ದಾರೆ.

    ಜಾಮೀನಿನ ಮೇಲೆ ಹೊರ ಬಂದಿದ್ದ

    ಹೋಟೆಲ್ ಗಲಾಟೆ ಸಂಬಂಧ ಜೆಪಿ ನಗರ ಪೊಲೀಸರು ಶ್ರೀಕಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಷರತ್ತುಬದ್ಧ ಜಾಮೀನಿನ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ಶ್ರೀಕಿ ಹೊರ ಬಂದಿದ್ದ. ಷರತ್ತು ಬದ್ಧ ಜಾಮೀನಿನಲ್ಲಿ ಪ್ರತಿ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಆದ್ರೆ ನಿನ್ನೆ ಶ್ರೀಕಿ ತನಿಖಾಧಿಕಾರಿ ಮುಂದೆ ಹಾಜರಾಗಲಿಲ್ಲ.

    ಮೊಬೈಲ್​​ನ್ನೂ ಬಳಸುತ್ತಿಲ್ಲ ಶ್ರೀಕಿ

    ಆತ ಮೊಬೈಲ್ ಪೋನ್ ಸಹ ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.  ಠಾಣೆಗೆ ಹಾಜರಾಗದೆ ಇರೋದಕ್ಕೆ ಶ್ರೀಕೃಷ್ಣ ಕಾರಣವನ್ನೂ ನೀಡಿಲ್ಲ. ಹೀಗಾಗಿ ಆತನ ನಡೆ ನಿಗೂಢವಾಗಿದೆ.  ಇನ್ನು ಕೆಲ ದಿನ ಕಾದು ಕೋರ್ಟ್ ಮುಂದೆ ವರದಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

    ಇದನ್ನೂ ಓದಿ: ಯಾರಿವನು ಹ್ಯಾಕರ್ ಶ್ರೀಕಿ? Bitcoin ದಂಧೆ ಮಾಸ್ಟರ್​​ಮೈಂಡ್​​ Hacker Sriki ಇತಿಹಾಸ ಹೇಳಿದ್ರೆ ದಂಗಾಗಿ ಹೋಗ್ತೀರ!

    ಗಲಾಟೆ ಸಂಬಂಧ ಬಂಧಿಸಿದ್ದ ಪೊಲೀಸರು

    ಕ್ರಿಪ್ಟೋ ಕರೆನ್ಸಿ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿಯನ್ನು ಕಳೆದ ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜೆಪಿ ನಗರ ಪೊಲೀಸರು ಆತನನ್ನು ಬಂಧಿಸಿದ ಬಳಿಕ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 4,500 ರೂ ದಂಡ ವಿಧಿಸಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಶ್ರೀಕಿ ಬಳಸುತ್ತಿದ್ದ ಫೋನ್ ಹಾಗೂ ಇತರೆ ಗ್ಯಾಡ್ಜೆಟ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು.

    ನನಗೆ ಏನೂ ಗೊತ್ತಿಲ್ಲ ಎಂದಿದ್ದ ಶ್ರೀಕಿ

    ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಜಾಮೀನು ಕೊಡಿಸಿದವರು ಯಾರು ಎಂಬುದೂ ತಿಳಿದಿಲ್ಲ. ದೊಡ್ಡವರು ದೊಡ್ಡ ದೊಡ್ಡವರ ಹೆಸರು ಹೇಳುತ್ತಾರೆ ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ಶ್ರೀಕಿ ಮಾಧ್ಯಮಗಳೆದುರು ಹೇಳಿದ್ದ. ಮಾಧ್ಯಮಗಳಲ್ಲಿ ಸುಮ್ಮನೆ ಹೈಪ್ ಕ್ರಿಯೇಟ್ ಆಗಿದೆ. ನನಗೆ ಏನೂ ಗೊತ್ತಿಲ್ಲ. ದಯವಿಟ್ಟು ನನ್ನನ್ನು ಹಿಂಬಾಲಿಸಬೇಡಿ ಎಂದೂ ಸಹ ವಿನಂತಿಸಿದ್ದ.

    ಬಾಲ್ಯದಲ್ಲೇ ಹ್ಯಾಕಿಂಗ್ ಬಗ್ಗೆ ಆಸಕ್ತಿ

    ಶ್ರೀಕಿ ಬಾಲ್ಯದಲ್ಲೇ ಕಂಪ್ಯೂಟರ್ ಟೆಕ್ನಾಲಜಿ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ. 4 ನೇ ತರಗತಿ ಓದುವಾಗಲೇ ವೆಬ್ ಟೆಕ್ನಾಲಜಿ ಬಗೆಗೆ ಒಲವು ಮೂಡಿತ್ತು. ಗೇಮ್ ಸೃಷ್ಟಿ ಮಾಡುವುದು ಮತ್ತು ರಿವರ್ಸ್ ಇಂಜಿನಿಯರಿಂಗ್ ಬಗ್ಗೆ ತಿಳಿದಿದ್ದ. ಈ ನಿಟ್ಟಿನಲ್ಲಿ ಬಾಲ್ಯದಿಂದ ಕಂಪ್ಯೂಟರ್ ಟೆಕ್ನಾಲಜಿ ಬಗೆಗೆ ನೈಪುಣ್ಯತೆ ಗಳಿಸಲು ಇಚ್ಚಿಸಿದ್ದ ಎಂದು ಪೊಲೀಸರ ತನಿಖೆ ಮೇಳೆ ಶ್ರೀಕಿ ಮಾಹಿತಿ ನೀಡಿದ್ದಾನೆ.

    ಸ್ಕೂಲ್​​ನಲ್ಲಿ ಬಿಟ್​ಕಾಯಿನ್ ಹ್ಯಾಕ್ ಮಾಡಿದ್ದ

    ಶ್ರೀಕೃಷ್ಣ 10ನೇ ತರಗತಿಯಲ್ಲಿ ಇರುವಾಗಲೇ ಸಾವಿರಾರು ಬಿಟ್​​ಕಾಯಿನ್​ಗಳನ್ನು ಹ್ಯಾಕ್ ಮಾಡಿದ್ದ. ಶ್ರೀಕೃಷ್ಣ ಶಾಲೆ ಯಲ್ಲಿ ವ್ಯಾಸಂಗ ಮಾಡುವಾಗಲೇ ಶೇನ್ ಎಂಬ ವಿದ್ಯಾರ್ಥಿ ಸಹ ಪರಿಚಯವಾಗಿದ್ದು ಇಬ್ಬರು ಜೊತೆಯಲ್ಲಿ ಕೋಡ್ ವರ್ಡ್ ಗಳನ್ನು ಕಲಿತಿದ್ದಾರೆ. ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ PCMC ವ್ಯಾಸಂಗ ಮಾಡಿದ್ದ.

    ಇದನ್ನೂ ಓದಿ: ACB Raid: ಆದಾಯಕ್ಕಿಂತ 1,408% ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್: 28 ಮನೆ, ಬೆಂಗಳೂರಲ್ಲಿ ಎಲ್ಲಿ ನೋಡಿದ್ರೂ ಸೈಟ್, 5 ಕಾರ್

    ಶ್ರೀಕೃಷ್ಣ 2nd PUC ವ್ಯಾಸಂಗ ಮಾಡುತ್ತಿರುವಾಗಲೇ ಕ್ರಿಪ್ಟೋ ಕರೆನ್ಸಿ ಬಗ್ಗೆ ಕಲಿತಿದ್ದ. ಶ್ರೀಕೃಷ್ಣ 17ನೇ ವರ್ಷಕ್ಕೆ ನನ್ನ ಫ್ರೆಂಡ್ ರಿತ್ವಿಕ್ ಜೊತೆ ಹಿಮಾಲಯಕ್ಕೆ ಸಹ ತೆರಳಿದ್ದ. ಹಿಮಾಲಯದಲ್ಲಿರುವ ಬದ್ರಿನಾಥ್ ನಲ್ಲಿ ಸುಮಾರು ತಿಂಗಳುಗಳು ನೆಲೆಸಿದ್ದ. ರಿತ್ವಿಕ್ ತಾಯಿಂದ ಸಿದ್ದಾಪುರ ಹಾಗೂ ತಿಲಕ್​​ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಸಹ ದಾಖಲಾಗಿದೆ.
    Published by:Latha CG
    First published: