HOME » NEWS » State » H VISWANATH INVITES GT DEVEGOWDA COME TO THE BJP INSTEAD OF GOING TO CONGRESS SESR PMTV

ಕಾಂಗ್ರೆಸ್‌ಗೆ ಹೋಗಿ ಪೆಟ್ಟು ತಿನ್ನುವ ಬದಲು ಬಿಜೆಪಿಗೆ ಬನ್ನಿ: ಜಿಟಿ ದೇವೇಗೌಡರಿಗೆ ವಿಶ್ವನಾಥ್​ ಆಹ್ವಾನ

ಜೆಡಿಎಸ್‌ನಲ್ಲಿ ಜಿಟಿಡಿಗೆ ಗೌರವ ಸಿಗುತ್ತಿಲ್ಲ.  ಹಾಗಾಗಿ ನೀವು ಕಾಂಗ್ರೆಸ್ ಹೋಗಿ ಏಟು ತಿನ್ನುವ ಬದಲು ಬಿಜೆಪಿಗೆ ಬಂದರೆ ಒಳ್ಳೆಯದು

news18-kannada
Updated:January 20, 2021, 7:26 PM IST
ಕಾಂಗ್ರೆಸ್‌ಗೆ ಹೋಗಿ ಪೆಟ್ಟು ತಿನ್ನುವ ಬದಲು ಬಿಜೆಪಿಗೆ ಬನ್ನಿ: ಜಿಟಿ ದೇವೇಗೌಡರಿಗೆ ವಿಶ್ವನಾಥ್​ ಆಹ್ವಾನ
ಹೆಚ್. ವಿಶ್ವನಾಥ್.
  • Share this:
ಮೈಸೂರು (ಜ. 20):  ಜೆಡಿಎಸ್‌ನಿಂದ ದೂರ ಉಳಿದಿರುವ ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ. ದೇವೇಗೌಡರನ್ನು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಬಿಜೆಪಿಗೆ ಆಹ್ವಾನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್​ ಪಕ್ಷ ಸಂಘಟನೆಯಿಂದ ದೂರಾಗಿರುವ ಹಿರಿಯ ನಾಯಕರನ್ನು ತಮ್ಮ ಪಕ್ಷಕ್ಕೆ ಬರುವಂತೆ  ಬಹಿರಂಗವಾಗಿ ಮಾಧ್ಯಮಗಳ ಮೂಲಕ ಆಹ್ವಾನಿಸಿದರು. ಜೆಡಿಎಸ್‌ನಲ್ಲಿ ಜಿಟಿಡಿಗೆ ಗೌರವ ಸಿಗುತ್ತಿಲ್ಲ.  ಹಾಗಾಗಿ ನೀವು ಕಾಂಗ್ರೆಸ್ ಹೋಗಿ ಏಟು ತಿನ್ನುವ ಬದಲು ಬಿಜೆಪಿಗೆ ಬಂದರೆ ಒಳ್ಳೆಯದು. ಈ ಹಿಂದೆ ಸಹಾ ಬಿಜೆಪಿ ನಿಮ್ಮನ್ನು  ಗೌರವಯುತವಾಗಿ ನಡೆಸಿಕೊಂಡಿದೆ. ಈ ಹಿಂದೆ ಜೆಡಿಎಸ್​-ಬಿಜೆಪಿ  ಸಮ್ಮಿಶ್ರ ಸರ್ಕಾರದಲ್ಲಿ  ಯಡಿಯೂರಪ್ಪ, ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ  ವೇಳೆ ನಿಮಗೆ ಒಳ್ಳೆಯ ಸ್ಥಾನಮಾನ ನೀಡಿದೆ. ಹಾಗಾಗಿ ನೀವು ಬಿಜೆಪಿಗೆ ಬರುವುದೇ ಸೂಕ್ತ. ಕಾಂಗ್ರೆಸ್‌ಗೆ ಹೋಗಿ ಅಲ್ಲಿ ಪೆಟ್ಟು ತಿನ್ನಬೇಡಿ ಎಂದು ಸಲಹೆ ನೀಡಿದರು. ಜಿಟಿಡಿ ಮೈಸೂರು ಭಾಗದ ಶಕ್ತಿವಂತ ರಾಜಕಾರಣಿಯಾಗಿದ್ದಾರೆ. ನಾನು ಹುಣಸೂರಿನಲ್ಲಿ ಚುನಾವಣೆ ಗೆಲ್ಲಲು ಅವರ ಶಕ್ತಿಯೂ ಸಹ ನನಗೆ ಸಹಾಯ ಮಾಡಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿದ್ದರೂ ಅವರು ಹುಣಸೂರಿನಲ್ಲಿ ತನ್ನದೆ ಆದ ಸಂಘಟನೆ ಹೊಂದಿದ್ದಾರೆ. ಹೀಗಾಗಿ ಅವರನ್ನು ಲಘುವಾಗಿ ಕಾಣುವುದು ಸರಿಯಲ್ಲ. ಅವರ ಪಕ್ಷದಲ್ಲಿ ಎಲ್ಲವು ಸರಿಯಿಲ್ಲ ಅವರು ನಮ್ಮ ಪಕ್ಷಕ್ಕೆ ಬಂದರೆ ಉತ್ತಮ ಅಂತ ಹೇಳಿದರು. 

ಜೆಡಿಎಸ್​ ತಮ್ಮ ಪಕ್ಷದ ನಾಯಕರಾಗಿರುವ ಜಿಟಿ ದೇವೇಗೌಡ ಅವರ ಹೆಸರನ್ನು ವಿಭಾಗೀಯ ಸಂಘಟನೆಯ ಪಟ್ಟಿಯಲ್ಲಿ ಕೈ ಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು,  ಇದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರ ಸಮಸ್ಯೆಯಲ್ಲ. ಎಲ್ಲಾ ಪಕ್ಷದ ಶಾಸಕಾಂಗ ಸಭೆಯ ನಾಯಕರ ನಡವಳಿಕೆ ಸರಿ ಇಲ್ಲ. ಈ ಕಾರಣದಿಂದಲೇ ಅಲ್ಲವೇ ನಾವೇಲ್ಲ ಪಕ್ಷದಿಂದ ಹೊರಗೆ ಬಂದಿದ್ದು ಎಂದು ತಾವು ಪಕ್ಷ ತೊರೆದ ಕಾರಣವನ್ನು ಬಿಚ್ಚಿಟ್ಟರು

ಜೆಡಿಎಸ್‌ ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರ ನಡವಳಿಕೆಯೂ ಸರಿಯಿಲ್ಲ. ಎಲ್ಲ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರುಗಳ ನಡವಳಿಕೆಯಿಂದಲೇ ಪಕ್ಷಗಳು ಹಾಳಾಗುತ್ತಿವೆ. ನಾನು ನಾನು ಎನ್ನುವ ಹಿರಿಮೆ ಎಲ್ಲಾ ಪಕ್ಷದ ನಾಯಕರಲ್ಲಿ ಬಂದಿದೆ. ಇದೇ ಕಾರಣದಿಂದ ಪಕ್ಷಗಳು ತಳಕ್ಕೆ ಇಳಿಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಓದಿ: ಶಶಿಕಲಾ ಆರೋಗ್ಯದಲ್ಲಿ ಏರುಪೇರು; ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ

ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು,   ಸಚಿವ ಸಂಪುಟ ವಿಸ್ತರಣೆ ಆಗಿರುವುದು ಸಿಎಂ ಪರಮಾಧಿಕಾರದಿಂದ. ಸಿಎಂಗೆ ಸಂಪುಟ ರಚಿಸುವ ವಿಸ್ತರಿಸುವ ಅಧಿಕಾರ ಇದೆ. ಇದರಲ್ಲಿ ಹೈ ಕಮಾಂಡ್ ಪಾತ್ರ ಏನು ಇಲ್ಲ. ಯಡಿಯೂರಪ್ಪ ಸುಮ್ಮನೇ ಹೈಕಮಾಂಡ್ ಎಂದು ತೋರಿಸುತ್ತಿದ್ದಾರೆ. ಹೈಕಮಾಂಡ್‌ಗೆ ರಾಜ್ಯದ ವಿಚಾರ ಏನು ಗೊತ್ತಿಲ್ಲ. ಅವರುಗಳನ್ನ ತೋರಿಸಿ ಸುಮ್ಮನೆ ಸಮಾಧಾನ ಮಾಡುತ್ತಾರೆ ಎಂದು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಸಚಿವರಾಗಿರುವ ಸಿ.ಪಿ.ಯೋಗೇಶ್ವರ್‌ ಮೈಸೂರು ಉಸ್ತುವಾರಿ ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ  ಅವರು,  ಯೋಗೇಶ್ವರ್‌ಗೆ  ಮೈಸೂರು ಏಕೆ ರಾಜ್ಯದ ಉಸ್ತುವಾರಿಯನ್ನೇ ನೀಡಿ. ಆತ  ಬಂದು ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾನೆ. ಇಲ್ಲಿಗೂ ಬಂದು ಇನ್ನೊಂದು ಮೆಗಾಸಿಟಿ ಮಾಡಿ, ಇಲ್ಲಿನ ಸ್ವಲ್ಪ ಜನರಿಗೆ ಟೋಪಿ ಹಾಕುತ್ತಾನೆ. ಈಗಾಗಲೇ ಆತನ ಮೇಲೆ‌ ಸಾಕಷ್ಟು ಆರೋಪ ಇದೆ. ಪ್ರಕರಣಗಳಿವೆ  ಇದೆ. ಇನ್ನಷ್ಟು ಪ್ರಕರಣಗಳು ಆಗಲಿ ಕೊಡಿ ಅಂತ ಕಿಡಿಕಾರಿದರು.
Published by: Seema R
First published: January 20, 2021, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories