ಸಮ್ಮಿಶ್ರ ಸರ್ಕಾರ ಅಳಿವು ಉಳಿವಿನ ಬಗ್ಗೆ ಮಿಶ್ರ ಪ್ರತಿಕ್ರಿಯೆ; ಅಲುಗಾಡುತ್ತಿದೆಯೇ ಕುಮಾರಸ್ವಾಮಿ ಕುರ್ಚಿ

news18
Updated:August 27, 2018, 4:26 PM IST
ಸಮ್ಮಿಶ್ರ ಸರ್ಕಾರ ಅಳಿವು ಉಳಿವಿನ ಬಗ್ಗೆ ಮಿಶ್ರ ಪ್ರತಿಕ್ರಿಯೆ; ಅಲುಗಾಡುತ್ತಿದೆಯೇ ಕುಮಾರಸ್ವಾಮಿ ಕುರ್ಚಿ
ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿಯವರ ಸಾಂದರ್ಭಿಕ ಚಿತ್ರ
news18
Updated: August 27, 2018, 4:26 PM IST
 ನ್ಯೂಸ್​ 18 ಕನ್ನಡ

ಮೈಸೂರು (ಆ.27) : ಸಮ್ಮಿಶ್ರ ಸರ್ಕಾರದ ಸಮನ್ವಯತೆ ಸಾಧಿಸಬೇಕಾದ ಸಮಿತಿ ಈಗ ಸಿಎಂ ಅಳಿವು ಉಳಿವಿನ ನಿರ್ಧಾರಕ ಸಮಿತಿಯಾಗಿ ಮಾರ್ಪಟ್ಟಿದೆ. ಸಮಿತಿ ನಿರ್ಧರಿಸಿದರೆ ಸಿಎಂ ಬದಲಾವಣೆ ಸಾಧ್ಯ ಎನ್ನುತ್ತಿರುವ ಸಚಿವರ ಮಾತು ಹಾಗೂ ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳು ಸಿಎಂ ಸ್ಥಾನ ಭದ್ರವೇ ಎಂಬ ಅನುಮಾನ ಪದೇ ಪದೇ ಮೂಡಿಸುತ್ತಿದೆ.

ಸಮನ್ವಯ ಸಮಿತಿ ಒಪ್ಪಿದರೆ ಸಿಎಂ ಬದಲಾವಣೆ

ಮತ್ತೊಮ್ಮೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ರಾಜಕೀಯ ಕೋಲಾಹಲ ಎಬ್ಬಿಸಿದ್ದು, ಅವರ ಹೇಳಿಕೆಗೆ ಸಚಿವರು ಕೂಡ ಬೆಂಬಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಶಿವಶಂಕರ ರೆಡ್ಡಿಸಮನ್ವಯ ಸಮಿತಿಯ ಉಭಯ ಸದಸ್ಯರು ಒಪ್ಪಿದರೆ ಮತ್ತೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬಹುದು ಎಂಬ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ. 

ಸಮನ್ವಯ ಸಮಿತಿ ಇರುವುದು ಬಲಪಡಿಸಲು: 

ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ ವಿಶ್ವನಾಥ್​ , ಸಮನ್ವಯ ಸಮಿತಿ ಸೃಷ್ಟಿಸಿರುವುದು ಮೈತ್ರಿ ಸರ್ಕಾರವನ್ನು ಬಲಪಡಿಸಲು ಹೊರತು ಒಡೆಯಲು ಅಲ್ಲ ಎಂದರು

ಕಾಂಗ್ರೆಸ್​, ಜೆಡಿಎಸ್​ ಈಗ ಎರಡು ಮದುವೆಯಾಗಿದೆ. ಈ ಸಂದರ್ಭದಲ್ಲಿ ಯಾವುದೇ ಹೇಳಿಕೆ ನೀಡಿದರು ಸರ್ಕಾರದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಹಿನ್ನಲೆಯಲ್ಲಿ ಯಾವುದೇ  ಹೇಳಿಕೆಗೂ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದರು
Loading...

ಮುಖ್ಯಮಂತ್ರಿ ಬದಲಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ  ನಿರ್ಧಾರ ತೆಗೆದುಕೊಂಡರೂ ಸಿಎಂ ಬದಲಾವಣೆ ಆಗುವುದಿಲ್ಲ.  ಮುಂದಿನ ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಲಿದ್ದಾರೆ  ಎಂದು ಸ್ಪಷ್ಟ ಪಡಿಸಿದರು.

ಸಮನ್ವಯ ಸಮಿತಿಯಲ್ಲಿ ಯಾರು ಇರಬೇಕು ಬೇಡ ಎನ್ನುವುದನ್ನು ಎರಡೂ ಪಕ್ಷದವರು ತೀರ್ಮಾನಿಸಬೇಕು. ಅದರಲ್ಲಿ ಜೆಡಿಎಸ್​, ಕಾಂಗ್ರೆಸ್​ ರಾಜ್ಯಾಧ್ಯಕ್ಷರು ಕೂಡ ಇರಬೇಕು. ಕಾಂಗ್ರೆಸ್​ ದಿನೇಶ್​​ ಗುಂಡೂರಾವ್​ ಸೇರ್ಪಡನೆ ಮಾಡಲು ಮುಂದಾಗಿದ್ದೇನೆ. ಜೆಡಿಎಸ್​ ಅಧ್ಯಕ್ಷನಾದ ನಾನು ಕೂಡ ಅದರಲ್ಲಿ ಶೀಘ್ರದಲ್ಲಿ ಸೇರ್ಪಡನೆಯಾಗಲಿದ್ದೇನೆ ಎಂದರು

ಸಿದ್ದರಾಮಯ್ಯ ಹಳೆಯದನ್ನು ಮರೆತಿದ್ದಾರೆ: 

ಇನ್ನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಸಿದ್ದರಾಮಯ್ಯ ಡಿಸಿಎಂ ಆಗಿದ್ದು ಜೆಡಿಎಸ್​ ನಿಂದ ಎನ್ನುವುದನ್ನು ಮರೆತು ಮೈಸೂರಿಗೆ ಬಿಜೆಪಿ, ಜೆಡಿಎಸ್​ ಕೊಡಗೆ ಏನಿಲ್ಲ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರವಿದ್ದಾಗ ನಿರೀಕ್ಷಿತ ಅಭಿವೃದ್ಧಿ ಕಷ್ಟ. ಹಾಗೇಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದಲ್ಲ. ಇಲ್ಲಿ ಯಾವುದೇ ತೀರ್ಮಾನಕ್ಕೂ ಎರಡು ಪಕ್ಷದ ಅಭಿಪ್ರಾಯಗಳು ಮುಖ್ಯವಾಗುತ್ತದೆ ಎಂದರು.

ಸಮನ್ವಯ ಸಾಧಿಸುವುದು ಮೈತ್ರಿ ಸರ್ಕಾರ ಉದ್ಧೇಶ: 

ಸಮನ್ವಯ ಸಮಿತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ನಿರ್ಧಾರ ಆಗೋಲ್ಲ. ಸಮಿತಿ ಇರುವು್ದು ಸಮನ್ವಯತೆ ಸಾಧಿಸಲು ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದ ಮೇರೆಗೆ ಜೆಡಿಎಸ್ ಗೆ ಬೆಂಬಲ ನೀಡಿದ್ದೇವೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ ಅವರನ್ನು ಸಮನ್ವಯ ಸಮಿತಿಗೆ ಸೇರ್ಪಡೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದರು.

ಈಗಾಗಲೇ ಎರಡು ಪಕ್ಷದ ನಾಯಕರು ಮೈತ್ರಿ ಸರ್ಕಾರಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ, ಇದರ ಮಧ್ಯೆ ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...