HOME » NEWS » State » H VISHWANTH REACTION ON RAMESH JARKIHOLI SEX VIDEO SESR

H Vishwanth: ರಮೇಶ್​ ಜಾರಕಿಹೊಳಿ ಒಳ್ಳೆಯ ಕುಟುಂಬದಿಂದ ಬಂದವರು; ಈ ಸಿಡಿ ಬಗ್ಗೆ ತನಿಖೆಯಾಗಬೇಕು; ಎಚ್​ ವಿಶ್ವನಾಥ್​​

ರಮೇಶ್ ಜಾರಕಿಹೊಳಿ ಮೇಲೆ ಈ ರೀತಿ ಆರೋಪ ಬರಬಾರದಿತ್ತು. ಯಾವುದೋ ಷಡಂತ್ರ ಅವರನ್ನು ಬಲಿಪಡೆದುಕೊಂಡಿದೆ ಅಷ್ಟೆ

news18-kannada
Updated:March 3, 2021, 8:27 PM IST
H Vishwanth: ರಮೇಶ್​ ಜಾರಕಿಹೊಳಿ ಒಳ್ಳೆಯ ಕುಟುಂಬದಿಂದ ಬಂದವರು; ಈ ಸಿಡಿ ಬಗ್ಗೆ ತನಿಖೆಯಾಗಬೇಕು; ಎಚ್​ ವಿಶ್ವನಾಥ್​​
ಹೆಚ್. ವಿಶ್ವನಾಥ್.
  • Share this:
ಬೆಂಗಳೂರು (ಮಾ. 3): ಬಿಜೆಪಿ ಸರ್ಕಾರ ಬರಲು ರಮೇಶ್​ ಜಾರಕಿಹೊಳಿ ಕಾರಣ. ಅವರು ಒಳ್ಳೆಯ ಕುಟುಂಬದಿಂದ ಬಂದವರು. ರಾಸಲೀಲೆ ಸಿಡಿ ಪ್ರಕರಣದಿಂದ ಕೇವಲ ರಮೇಶ್ ಜಾರಕಿಹೊಳಿಗೆ ಮಾತ್ರವಲ್ಲ. ರಾಜಕಾರಣದಲ್ಲಿ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ. ಆದರೂ ಇದು ತನಿಖೆಯಾಗಬೇಕು. ಹಾಲಪ್ಪ, ಮೇಟಿ ಈಗ ರಮೇಶ್ ಜಾರಕಿಹೊಳಿ, ಕೇವಲ ಹಿಂದುಳಿದವರಿಗೆ ಇಂತಹ ಘಟನೆಯಾಗುತ್ತಿದೆ. ಈ ರೀತಿಯ ಘಟನೆ ಆಗಬಾರದಿತ್ತು. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೇಕು. ಈ ಘಟನೆ ಇಟ್ಟುಕೊಂಡು ಏನೋ ಸಾಧಿಸುತ್ತೇವೆ ಎನ್ನುವುದು ತಪ್ಪಿ. ರಾಜಕಾರಣ ವೈರತ್ವ ಆಗಿದೆ. ಸಿಡಿಯಲ್ಲಿರುವುದು ಅವನು ನಾನಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾನೆ. ಮೊದಲು ತನಿಖೆಯಾಗಿ ವರದಿ ಬರಲಿ ಎಂದು ವಿಧಾನ ಪರಿಷತ್​ ಸದಸ್ಯ ಎಚ್​ ವಿಶ್ವನಾಥ್​ ಆಗ್ರಹಿಸಿದರು.

ಶಾಸಕರ ಭವನದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಮೇಲೆ ಈ ರೀತಿ ಆರೋಪ ಬರಬಾರದಿತ್ತು. ಯಾವುದೋ ಷಡಂತ್ರ ಅವರನ್ನು ಬಲಿಪಡೆದುಕೊಂಡಿದೆ ಅಷ್ಟೆ ಎಂದರು.

ಕುಮಾರಸ್ವಾಮಿ ಸರ್ಕಾರ ಪತನ ಮಾಡಿದಾಗ ರಾಜಭವನ ಎದುರು ನಾನು ಹೇಳಿದ್ದು ನಿಜ. ರಾಕ್ಷಸಿ ಸರ್ಕಾರ ತೆಗೆಯಬೇಕೆಂದು ಹೇಳಿದ್ದು ನಿಜ. ನಾನು ಈಗಲೂ ನನ್ನ ಮಾತಿಗೆ ಬದ್ಧವಾಗಿದ್ದೇನೆ. ಕುಟುಂಬ ರಾಜಕಾರಣ ಅಂತ್ಯವಾಗಬೇಕು. ಪ್ರಧಾನಿ ಮೋದಿ ಕೂಡ ಇದನ್ನೇ ಹೇಳಿದ್ದಾರೆ. ಕುಟುಂಬ ರಾಜಕಾರಣವನ್ನ ಮೋದಿ ಒಪ್ಪಿಕೊಳ್ಳಲ್ಲ. ಯಡಿಯೂರಪ್ಪ ಮಗನಿಗೆ ಟಿಕೆಟ್ ಕೊಟ್ಟಿಲ್ಲ, ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ಕೊಟ್ಟಿಲ್ಲ. ರಾಮ ರಾಜ್ಯ ಬರಬೇಕಾದ್ರೆ ರಾಕ್ಷಸರು ಸಾಯಬೇಕು ಎಂದರು.

ಇದನ್ನು ಓದಿ: ರಮೇಶ್​ ಜಾರಕಿಹೊಳಿ ಪ್ರಕರಣದಲ್ಲಿ ಮೌನವಹಿಸುವಂತೆ ಸಚಿವರಿಗೆ ಸಿಎಂ ಕಿವಿಮಾತು

ಕರುನಾಡು ಹೋಗಿ ಸಿಡಿ ರಾಜ್ಯ:

ಕರುನಾಡು ಹೋಗಿ ಸಿಡಿ ರಾಜ್ಯ ಆಗುತ್ತಿದೆ. ಇನ್ನು ಸಿಡಿ ಬಿಡ ಬೇಡ್ರಪ್ಪ. ಈ ರಾಜ್ಯದ ಮಾನ ತೆಗಯಬೇಡಿ ಪ್ಲೀಸ್. ಸಿಡಿ ಇದ್ದರೆ ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಯಾರ್ಯಾರೊ ತಮ್ಮ ಬಳಿ ಸಿಡಿ ಇದೆ ಎಂದು ಹೇಳುತ್ತಿದ್ದಾರೆ. ಅವರು ಎಲ್ಲವೂ ನಿಮ್ಮ ಬಳಿಯೇ ಸಿಡಿ ಇಟ್ಟುಕೊಳ್ಳಿ ಎಂದರು

ಈ ಸಿಡಿ ಪ್ರಕರಣ ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದೊಡ್ಡಿದ್ದು, ಈ ಕುರಿತು ಮೌನತಾಳುವಂತೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ತಮ್ಮ ಸಚಿವರಿಗೆ ಸೂಚನೆ ನೀಡಿದ್ದಾರೆ. ವಿಪಕ್ಷಗಳಿಗೆ ಈ ಸುದ್ದಿ ಅಸ್ತ್ರವಾಗಿದ್ದು, ಯಾವುದೇ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರಿಕೆವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.
Published by: Seema R
First published: March 3, 2021, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories