HOME » NEWS » State » H VISHWANATH URGES MINISTER POST TO ALL 17 MEMBERS WHO RESIGNED FOR BJP GOVERNMENT SESR

ಬಿಎಸ್​ವೈಗೆ ದೊಡ್ಡ ತಲೆನೋವು: ಶಾಸಕ ಸ್ಥಾನ ತ್ಯಾಗ ಮಾಡಿದ್ದ ಎಲ್ಲಾ 17 ಮಂದಿಯನ್ನೂ ಮಂತ್ರಿ ಮಾಡಿ - ವಿಶ್ವನಾಥ್​​ ಪಟ್ಟು

ಎಸ್​ ಯಡಿಯೂರಪ್ಪ ಸರ್ಕಾರ ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ 17 ರೆಬೆಲ್​ ನಾಯಕರಿಗೂ ಮಂತ್ರಿ ಸ್ಥಾನದ ಭರವಸೆ ನೀಡಿದ್ದರು. ಅದರಂತೆ ಅವರು ಎಲ್ಲರಿಗೂ ಮಂತ್ರಿ ಸ್ಥಾನ ನೀಡಬೇಕು. ನಾಳೆ, ನಾಡಿದ್ದು ಏನಾಗಲಿದೆ ಎಂದು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು - ವಿಶ್ವನಾಥ್​​

news18-kannada
Updated:January 13, 2020, 4:05 PM IST
ಬಿಎಸ್​ವೈಗೆ ದೊಡ್ಡ ತಲೆನೋವು: ಶಾಸಕ ಸ್ಥಾನ ತ್ಯಾಗ ಮಾಡಿದ್ದ ಎಲ್ಲಾ 17 ಮಂದಿಯನ್ನೂ ಮಂತ್ರಿ ಮಾಡಿ - ವಿಶ್ವನಾಥ್​​ ಪಟ್ಟು
ಹೆಚ್. ವಿಶ್ವನಾಥ್
  • Share this:
ರಾಯಚೂರು(ಜ. 13): ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗುತ್ತಿದ್ದಂತೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮೇಲೆ ಒತ್ತಡ ಕೂಡ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದ 17 ರೆಬೆಲ್​ ನಾಯಕರು ಈಗ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಮಂತ್ರಿ ಸ್ಥಾನ ನೀಡದಿದ್ದರೆ, ಮುಂದೆನಾಗಲಿದೆ ಕಾದು ನೋಡಿ ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. 

ನಾಳೆ, ನಾಡಿದ್ದರಲ್ಲಿ ಹೈ ಕಮಾಂಡ್​ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುತ್ತೇನೆ ಎಂದಿರುವ ಬಿಎಸ್​ವೈ, ಉಪಚುನಾವಣೆಯಲ್ಲಿ ಗೆದ್ದಿರುವ 11ಜನರಲ್ಲಿ ಕೇವಲ 9 ಜನರಿಗೆ ಮಾತ್ರ ಸಚಿವ ಸ್ಥಾನ ಎಂಬ ಮಾತು ಹೇಳುತ್ತಿದ್ದಾರೆ. ಆದರೆ, ಸರ್ಕಾರ ರಚಿಸುವಲ್ಲಿ 17 ಜನರ ತ್ಯಾಗ ಕೂಡ ಇದ್ದು, ಅವರಿಗೆಲ್ಲಾ ಸಚಿವ ಸ್ಥಾನ ನೀಡಲೇ ಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಎಚ್​. ವಿಶ್ವನಾಥ್​ ಪಟ್ಟುಹಿಡಿದಿದ್ದಾರೆ.

ಈ ಕುರಿತು ದೇವದುರ್ಗದಲ್ಲಿ ಮಾತನಾಡಿದ  ಅವರು, ಬಿಎಸ್​ ಯಡಿಯೂರಪ್ಪ ಸರ್ಕಾರ ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ 17 ರೆಬೆಲ್​ ನಾಯಕರಿಗೂ ಮಂತ್ರಿ ಸ್ಥಾನದ ಭರವಸೆ ನೀಡಿದ್ದರು. ಅದರಂತೆ ಅವರು ಎಲ್ಲರಿಗೂ ಮಂತ್ರಿ ಸ್ಥಾನ ನೀಡಬೇಕು. ನಾಳೆ, ನಾಡಿದ್ದು ಏನಾಗಲಿದೆ ಎಂದು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಹೊಸ ಬಾಂಬ್​ ಸಿಡಿಸಿದ್ದಾರೆ.

ಕಾಗಿನೆಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ನುಡಿದಂತೆ ನಡೆದ ಮುಖ್ಯಮಂತ್ರಿಗಳಾಗಬೇಕು. ಅವರು ನಾಲ್ಕನೆಯ ಬಾರಿ ಮುಖ್ಯಮಂತ್ರಿ ಗಳಾಗಲು ಕುರುಬರ ಸಮಾಜದ ನಾಲ್ಕು ಶಾಸಕರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಏನೇ ಹೇಳಿದ್ರು ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯ ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಸಿಎಂ ಯಡಿಯೂರಪ್ಪ ಹೇಳಿದಂತೆ ನಡೆದುಕೊಳ್ಳಲಿ; ಶಾಸಕ ಕೆ ಸುಧಾಕರ್

ಇನ್ನು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಬಿಜೆಪಿ ನೂತನ ಶಾಸಕ ಡಾ| ಕೆ. ಸುಧಾಕರ್​, ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಿದ್ದರು. ಮಾತಿಗೆ ತಪ್ಪದೇ ಹೇಳಿದಂತೆ ನಡೆದುಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.

ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ ಬಿಜೆಪಿ ನೂತನ ಶಾಸಕರ ತಾಳ್ಮೆ ಕೂಡ ಕೆಡುತ್ತಿದ್ದು, ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕುತ್ತಿರುವುದು ಕಂಡು ಬರುತ್ತಿದೆ.
Published by: Seema R
First published: January 13, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories