ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಲು ವಿಶ್ವನಾಥ್ ಕಾರಣ: ಸಾ.ರಾ. ಮಹೇಶ್ ಆರೋಪ

ತಾನು ಯಾವುದೇ ಆಮಿಷಕ್ಕೆ ಒಳಗಾಗಿಲ್ಲವೆಂದು ಹೆಚ್. ವಿಶ್ವನಾಥ್ ಅವರು ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಹೇಳಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸಾ.ರಾ. ಮಹೇಶ್ ಸವಾಲು ಎಸೆದಿದ್ದಾರೆ.

news18-kannada
Updated:August 21, 2019, 1:32 PM IST
ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಲು ವಿಶ್ವನಾಥ್ ಕಾರಣ: ಸಾ.ರಾ. ಮಹೇಶ್ ಆರೋಪ
ಸಾರಾ ಮಹೇಶ್​
  • Share this:
ಮೈಸೂರು(ಆ. 21): ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮೈಸೂರು ಭಾಗದ ಒಬ್ಬ ಶಾಸಕರಿಗೂ ಸ್ಥಾನ ನೀಡಲಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್, ಮೈಸೂರಿನ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಲು ಹೆಚ್. ವಿಶ್ವನಾಥ್ ಕಾರಣ ಎಂದು ಗಂಭೀರ ಆರೋಪ ಮಾಡಿದರು. ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾ.ರಾ. ಮಹೇಶ್, ಇತ್ತೀಚೆಗೆ ಯಾರು ಸಭೆ ಸೇರಿದ್ದರು. ಮುಖ್ಯಮಂತ್ರಿಯನ್ನು ಭೇಟಿಯಾಗಿ ಯಾವ ಬೇಡಿಕೆ ಮುಂದಿಟ್ಟಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದರು.

ಮೈಸೂರು, ಕೊಡಗು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಭಾಗಗಳ ಯಾವೊಬ್ಬರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿಲ್ಲ. ಕೊಡಗಿನ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಪೈಕಿ ಯಾರನ್ನಾದರೂ ಸಚಿವರನ್ನಾಗಿ ಮಾಡಬಹುದಿತ್ತು. ಮೈಸೂರಿನಲ್ಲೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಇದ್ದಾರೆ. ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು ಎಂದು ಸಾ.ರಾ. ಮಹೇಶ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ನನಗೆ ಸಚಿವ ಸ್ಥಾನ ಸಿಗದಂತೆ ನಮ್ಮ ಪಕ್ಷದವರೇ ಗೇಮ್ ಆಡಿದ್ದಾರೆ; ಸುರಪುರ ಶಾಸಕ ರಾಜುಗೌಡ ಆರೋಪ!

ಬೆಂಗಳೂರು ಮೂಲದವರು ಮೈಸೂರಿಗೆ ಬಂದು ಗಜಪ್ರಯಾಣಕ್ಕೆ ಪೂಜೆ ಮಾಡಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಇದೆ. ಬೇರೆ ಭಾಗದ ಸಚಿವರು ಬಂದು ಇಲ್ಲಿಯ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬಲ್ಲರು? ಪ್ರವಾಹ ಸಂದರ್ಭದಲ್ಲಿ ಬೆಂಗಳೂರಿನವರೆಗೂ ಪ್ರಯಾಣ ಮಾಡಿ ಸಚಿವರನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವರೂ ಆಗಿರುವ ಸಾ.ರಾ. ಮಹೇಶ್ ಟೀಕಿಸಿದರು.

ಸಾ.ರಾ. ಮಹೇಶ್ ಅವರು ಈ ಸಂದರ್ಭದಲ್ಲಿ ಹೆಚ್. ವಿಶ್ವನಾಥ್ ಅವರನ್ನ ಅತೃಪ್ತ ಆತ್ಮ ಎಂದು ಪರೋಕ್ಷವಾಗಿ ಕುಟುಕಿದರು. ಮೈಸೂರು ಭಾಗದಲ್ಲಿರುವ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿಕೊಡಲು ಮೈಸೂರಿನ ಯಾರಿಗೂ ಸಚಿವ ಸ್ಥಾನ ಕೊಡದೇ ಇರಬಹುದು ಎಂದು ಮಹೇಶ್ ವ್ಯಂಗ್ಯವಾಡಿದರು.

ಹೆಚ್. ವಿಶ್ವನಾಥ್ ಮೇಲೆ ಇನ್ನಷ್ಟು ಹರಿಹಾಯ್ದ ಸಾ.ರಾ. ಮಹೇಶ್, ತಾನು ಯಾವುದೇ ಆಮಿಷಕ್ಕೆ ಒಳಗಾಗಿಲ್ಲವೆಂದು ವಿಶ್ವನಾಥ್ ಅವರೇ ಅವರಿಷ್ಟದ ದೇಗುಲಕ್ಕೆ ಬಂದು ಪ್ರಮಾಣ ಮಾಡಲಿ. ಅವರು ಆಮಿಷಕ್ಕೆ ಬಲಿಯಾಗಿಲ್ಲವೆಂದು ಪ್ರಮಾಣ ಮಾಡಿ ಹೇಳಿದರೆ ತಾನು ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸವಾಲು ಎಸೆದರು.

ಇದನ್ನೂ ಓದಿ: ಆನಂದ್​​ ಸಿಂಗ್ ವಿರುದ್ಧ ಸೂರ್ಯನಾರಾಯಣ ರೆಡ್ಡಿ ಕಣಕ್ಕೆ?; ಸಿದ್ದರಾಮಯ್ಯ ಮಾಸ್ಟರ್​​​ ಪ್ಲಾನ್ಸಂತ್ರಸ್ತರ ಬಾಡಿಗೆ ಭತ್ಯೆ ಇಳಿಕೆಗೆ ಆಕ್ರೋಶ:
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಬಾಡಿಗೆ ಭತ್ಯೆಯಾಗಿ 10 ಸಾವಿರ ರೂ ನೀಡಲಾಗುತ್ತಿತ್ತು. ಆದರೀಗ ಬಾಡಿಗೆ ಭತ್ಯೆಯನ್ನು 5 ಸಾವಿರಕ್ಕೆ ಇಳಿಸಲಾಗಿದೆ. ಬಾಡಿಗೆ ಭತ್ಯೆಯನ್ನ ಏಕಾಏಕಿ ಇಷ್ಟು ಮಟ್ಟಕ್ಕೆ ಇಳಿಸಿರುವುದು ಯಾವ ನ್ಯಾಯ ಎಂದು ಸಾ.ರಾ. ಮಹೇಶ್ ಕಿಡಿಕಾರಿದರು.

ಆಪರೇಷನ್ ಕಮಲಕ್ಕೂ ಸಿಬಿಐ ತನಿಖೆಯಾಗಲಿ:
ಮೈತ್ರಿ ಸರ್ಕಾರವನ್ನು ಉರುಳಿಸಲು ನಡೆಸಲಾದ ಆಪರೇಷನ್ ಕಮಲ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ಎಂದು ಸಾ.ರಾ. ಮಹೇಶ್ ಆಗ್ರಹಿಸಿದರು. ಆಡಿಯೋ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದೀರಿ. ಅದರಂತೆಯೇ ನೀವು ಯಾರಿಗೆ ಆಪರೇಷನ್ ಕಮಲ ಮಾಡಿದ್ದೀರೋ, ಯಾರ ಜೊತೆ ಮಾತನಾಡಿ ಹಣವನ್ನು ನೀಡಿದ್ದೀರೋ ಈ ಎಲ್ಲಾ ಪ್ರಕರಣಗಳನ್ನೂ ಸಹ ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯಿಸುತ್ತೇನೆ ಎಂದವರು ತಿಳಿಸಿದರು.

ಮೈತ್ರಿಸರ್ಕಾರದವು ವರ್ಗಾವಣೆ ದಂಧೆಯಲ್ಲಿ ಮುಳುಗಿತ್ತೆಂಬ ಬಿಜೆಪಿ ಆರೋಪಕ್ಕೆ ಸಾ.ರಾ. ಮಹೇಶ್ ತಿರುಗೇಟು ನೀಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂತ್ರಿಮಂಡಲವೇ ಇಲ್ಲದಿದ್ದರೂ 600ಕ್ಕೂ ಹೆಚ್ಚು ವರ್ಗಾವಣೆ ಮಾಡಲಾಗಿದೆ. ಹಾಗಾದರೆ ಬಿಜೆಪಿ ಮಾಡಿದ್ದೇನು ಎಂದವರು ಪ್ರಶ್ನಿಸಿದರು.

(ವರದಿ: ಪುಟ್ಟಪ್ಪ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: August 21, 2019, 1:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading