H Vishwanath: ಸಿದ್ದರಾಮಯ್ಯರನ್ನು ಕುರುಬರ ಸಮಾವೇಶಗಳಿಂದ ದೂರ ಇಟ್ಟಿಲ್ಲ, ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು; ಎಚ್. ವಿಶ್ವನಾಥ್

ತಾಲಿಬಾನಿಗಳು ಯಾವ ಪಕ್ಷದಲ್ಲಿ ಇಲ್ಲ ಹೇಳಿ. ಅದೇ ಪಕ್ಷದಲ್ಲಿದ್ದು ಅವರ ನಾಯಕರನೇ ಮುಗಿಸುವ ಕೆಲಸ ಮಾಡಿಲ್ವಾ. ತಾಲಿಬಾನ್ ಮನಸ್ಥಿತಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೆ. ಎಲ್ಲಾ ರಾಜಕೀಯ ಪಕ್ಷವೆಂದ ಮೇಲೆ ಬಿಜೆಪಿಯು ಹೊರತಲ್ಲ ಎಂದು ಹೇಳಿದರು.

ಹೆಚ್. ವಿಶ್ವನಾಥ್- ಸಿದ್ದರಾಮಯ್ಯ.

ಹೆಚ್. ವಿಶ್ವನಾಥ್- ಸಿದ್ದರಾಮಯ್ಯ.

 • Share this:
  ಬೆಂಗಳೂರು: ಅಕ್ಟೋಬರ್ 2ರಂದು ಗುಜರಾತ್​ನಲ್ಲಿ ನಡೆಯುವ ಕುರುಬ ಸಮುದಾಯದ ಶೆಪರ್ಡ್ ಇಂಡಿಯನ್ ಇಂಟರ್​ ನ್ಯಾಷನಲ್ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ (Kuruba Community Shafard India International Conference) ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಬರ್ತಾರ ಅನ್ನೋ ಪ್ರಶ್ನೆಗೆ ಉತ್ತರಿಸಿದ ಎಚ್. ವಿಶ್ವನಾಥ್ (H Vishwanath) ಅವರು, ನಾವು ಸಿದ್ದರಾಮಯ್ಯ ಅವರನ್ನ ಸಮಾವೇಶಕ್ಕೆ ಕರೆಯುತ್ತೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟದ್ದು. ಅವರು ಬ್ಯೂಸಿ ಇರಬಹುದು. ಆದರೆ ಸಮಾವೇಶಕ್ಕೆ ಅವರ ವಿರೋಧವಿಲ್ಲ ಎಂದು ಹೇಳಿದರು.

  ಗುಜರಾತ್ ನಲ್ಲಿ ಶೆಪರ್ಡ್ ಇಂಡಿಯನ್ ಇಂಟರ್ನ್ಯಾಷನಲ್ ವಾರ್ಷಿಕೋತ್ಸವ
  ಕಾರ್ಯಕ್ರಮ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಅವರು, 2015 ರಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಥಾಪಿಸಲಾಯಿತು. ಅದರ ಉದ್ದೇಶ ಭಾರತದ ಬೇರೆ ಬೇರೆ ಕಡೆ ಇರುವ ಕುರುಬ ಸಮುದಾಯದವರನ್ನು ಒಂದುಗೂಡಿಸಲು ಈ ಸಂಸ್ಥೆ ಸ್ಥಾಪಿಸಲಾಯಿತು. ಭಾರತದ ಇತರೆ ಭಾಗಗಳಲ್ಲಿ 12 ಕೋಟಿ ಕುರುಬರು ಇದ್ದಾರೆ. ಅವರೆಲ್ಲರೂ ವಿವಿಧ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಆ ಎಲ್ಲರನ್ನೂ ಒಂದೇ ವೇದಿಕೆಗೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ಆಕ್ಟೋಬರ್ 2 ರಂದು ಗುಜರಾತಿನ ನಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ವಾರ್ಷಿಕೋತ್ಸವದ ಸಮಾವೇಶ ನಡಿಯುತ್ತಿದೆ.ಕೇಂದ್ರ ಸಚಿವರಾದ ಗಗನ್ ಸಿಂಗ ಕುಲಸ್ತೆ, ಎಸ್ ಪಿ ಸಿಂಗ್ ಬಘೇರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ಬೇರೆ ರಾಜ್ಯಗಳ, ರಾಜಕೀಯ ಸಮಾಜದ ಮುಖಂಡರು ಭಾಗವಹಿಸಿಲಿದ್ದಾರೆ. ರಾಜ್ಯದಿಂದ ನಾನು, ಬಂಡಪ್ಪ, ರೇವಣ್ಣ, ಮಲ್ಕಾಪುರೆ ಸೇರಿದಂತೆ ಹಲವರು ಭಾಗವಹಿಸಲಿದ್ದೇವೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದ ಮುಂಖಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

  ಸಮುದಾಯದ ಕೆಲ ಕಾರ್ಯಕ್ರಮಗಳಿಂದ ಮಾಜಿ ಸಿದ್ದರಾಮಯ್ಯ ದೂರ ಇರುವ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು, ನಾವು ಸಿದ್ದರಾಮಯ್ಯರನ್ನು ಎಲ್ಲ ಸಮಾವೇಶಕ್ಕೆ ಕರೆದಿದ್ದೇವೆ. ಅವರು ದೂರ ಇಲ್ಲ, ಯಾರೂ ದೂರ ಇಟ್ಟಿಲ್ಲ. ಬರುವುದು ಬೀಡುವುದು ಅವರಿಗೆ ಬಿಟ್ಟದ್ದು. ಅವರು ಬ್ಯುಸಿ ಇರಬಹುದು. ಈ ಹಿಂದೆ ಕಾಗಿನೆಲೆ ಶ್ರೀಗಳು ಮೀಸಲಾತಿ ಹೋರಾಟ ಸಮಾವೇಶದ ನೇತೃತ್ವ ವಹಿಸಿದ್ರು. ಆಗಲೂ ಸಿದ್ದರಾಮಯ್ಯ ಅವರನ್ನ ಕರೆದಿದ್ದರು ಎಂದು ಹೇಳಿದರು.

  ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಆದ್ರಾ ಎಂಬ ಪ್ರಶ್ನೆಗೆ ವಿಶ್ವನಾಥ್ ಅವರು, ಏನ್ ಎಲ್ಲ ಟೈಂನಲ್ಲೂ ಬೆಂಕಿಯಾಗೇ ಇರೋದಕ್ಕೆ ಆಗುತ್ತಾ ಎಂದು ನಕ್ಕು ಹೇಳಿದರು. ನಾನಾಗಲೀ, ಸಿದ್ದರಾಮಯ್ಯ ಆಗಲಿ ಸಮುದಾಯದಿಂದಲೇ ಸಾರ್ವಜನಿಕ ಜೀವನದಲ್ಲಿ ಬೆಳೆದಿದ್ದೇವೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ ನಿಜ. ಯಾರು ಯಾರನ್ನೂ ಸಮುದಾಯದ ಚಟುವಟಿಕೆಗಳಿಂದ ದೂರ ಇಟ್ಟಿಲ್ಲ. ಎಲ್ಲರನ್ನೂ ಕರೆಯುತ್ತಿದ್ದೇವೆ, ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಸಿದ್ದರಾಮಯ್ಯನವರಿಗೆ ಆಸಕ್ತಿ ಇದೆ, ನಿರಾಸಕ್ತಿ ಏನೂ ಇಲ್ಲ. ಆದರೆ ಅವರಿಗೆ ಸಮಯ ಇಲ್ವೋ ಏನೋ ಗೊತ್ತಿಲ್ಲ. ಸಿದ್ದರಾಮಯ್ಯನವರ ಧ್ವನಿ ಯಾವಾಗಲೂ ಪ್ರತಿಧ್ವನಿಸುತ್ತಲೇ ಇರುತ್ತದೆ. ನಾನು ಯಾವಾಗಲೂ ಬೆಂಕಿ ಆಗಿ ಇರಲು ಆಗುತ್ತದೆಯೇ? ಎಂದು ಹೇಳಿದರು.

  ಇದನ್ನು ಓದಿ: Karnataka Dams Water Level: ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾದ ಮಳೆ, ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

  ಸಿದ್ದರಾಮಯ್ಯ ಅವರು ಆರ್​ಎಸ್​ಎಸ್​ ಅನ್ನು ತಾಲಿಬಾನ್ ಗೆ ಹೋಲಿಕೆ ಮಾಡಿದ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಹೇಳಿಕೆ ತಪ್ಪು. ಯಾವುದೇ ಸಂಸ್ಥೆ ಬಗ್ಗೆ ಹಗುರವಾಗಿ ಮಾತನಾಡಬಾರದು. ಸಿದ್ದರಾಮಯ್ಯ ಸಿಎಂ ಆಗಿದ್ದವರು. ನಾನು ಬಿಜೆಪಿಯಲ್ಲಿ ಇದ್ದೀನಿ ಅಂತ ಈ ಮಾತು ಹೇಳ್ತಾಯಿಲ್ಲ. ತಾಲಿಬಾನಿಗಳು ಯಾವ ಪಕ್ಷದಲ್ಲಿ ಇಲ್ಲ ಹೇಳಿ. ಅದೇ ಪಕ್ಷದಲ್ಲಿದ್ದು ಅವರ ನಾಯಕರನೇ ಮುಗಿಸುವ ಕೆಲಸ ಮಾಡಿಲ್ವಾ. ತಾಲಿಬಾನ್ ಮನಸ್ಥಿತಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೆ. ಎಲ್ಲಾ ರಾಜಕೀಯ ಪಕ್ಷವೆಂದ ಮೇಲೆ ಬಿಜೆಪಿಯು ಹೊರತಲ್ಲ ಎಂದು ಹೇಳಿದರು.
  Published by:HR Ramesh
  First published: