• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಂವಿಧಾನ ಮೀರಿ ವರ್ತಿಸಲು ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ; RSS, VHP,  ಬಜರಂಗದಳ ಸರ್ಕಾರ ಅಲ್ಲ: ಹೆಚ್. ವಿಶ್ವನಾಥ್

ಸಂವಿಧಾನ ಮೀರಿ ವರ್ತಿಸಲು ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ; RSS, VHP,  ಬಜರಂಗದಳ ಸರ್ಕಾರ ಅಲ್ಲ: ಹೆಚ್. ವಿಶ್ವನಾಥ್

ಹೆಚ್​ ವಿಶ್ವನಾಥ್​

ಹೆಚ್​ ವಿಶ್ವನಾಥ್​

ದೇವಸ್ಥಾನ ಬಳಿ ಮುಸ್ಲಿಮರು ವ್ಯಾಪಾರ ಮಾಡಬೇಡಿ, ಹಲಾಲ್ ಮಾಡಬೇಡಿ ಎನ್ನುವುದು ಸರಿಯಲ್ಲ. ಇವೆಲ್ಲವೂ ಸಮಾಜವನ್ನು ಘಾಸಿಗೊಳಿಸುತ್ತವೆ. ಕೆಲವು ಸಂಘಟನೆಗಳು ಸಂವಿಧಾನಕ್ಕಿಂತ ಮೀರಿ ವರ್ತಿಸುತ್ತಿವೆ. ಹದ್ದು ಮೀರಿ ವರ್ತಿಸುತ್ತಿವೆ. ಜನರಿಂದ ಆಯ್ಕೆಯಾದ ಸರ್ಕಾರ ಮಧ್ಯಪ್ರವೇಶ ಮಾಡಬೇಕು.

  • Share this:

ನವದೆಹಲಿ, ಮಾ. 31: ರಾಜ್ಯದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷದ (Communal Crisis) ಬಗ್ಗೆ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು (BJP Government) ಬಿಜೆಪಿ ನಾಯಕರೇಯಾದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (Vishwanath H) ತರಾಟೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. ಆರ್‌ಎಸ್‌ಎಸ್ (RSS), ವಿಶ್ವ ಹಿಂದೂ ಪರಿಷತ್ (Vishwa Hindu Parishath) ಅಥವಾ ಭಜರಂಗದಳದ (Bajarangadal)ದ ಸರ್ಕಾರ ಅಲ್ಲ. ಕೆಲವು ಸಂಘಟನೆಗಳು ಸಂವಿಧಾನವನ್ನು ಮೀರಿ ವರ್ತಿಸುತ್ತಿವೆ‌ ಎಂದು ಕಿಡಿ ಕಾರಿದ್ದಾರೆ.


ವಿಶ್ವನಾಥ್ ವಿಷಾದ
ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೆಚ್. ವಿಶ್ವನಾಥ್ ಅವರು. ನಾನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸರವಾಗಿದೆ. ನಾನು ಬಿಜೆಪಿಯನ್ನು ಪ್ರತಿನಿಧಿಸುತ್ತೇನೆ ನಿಜ. ಹಾಗಂತ ಈಗ ನಡೆಯುತ್ತಿರುವ ಈ ಕೋಮು ಸೌಹಾರ್ದ ಕದಡುವ ಕೃತ್ಯಗಳನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜ್ಯದಲ್ಲೀಗ ದೊಡ್ಡ, ದೊಡ್ಡ ನಾಯಕರೇ ಧರ್ಮ ಜಾತಿ ಆಧರದ ಮೇಲೆ ಮಾತನಾಡುತ್ತಿದ್ದಾರೆ. ನಾವು ಹೀಗೆ ಮಾತನಾಡಿದರೆ ಯುವ ಪೀಳಿಗೆಗೆ ಯಾವ ರೀತಿಯ ಸಂದೇಶ ಹೋಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.


ರೋಹಿತ್ ಚಕ್ರತೀರ್ಥ ಹಿನ್ನೆಲೆ ಏನು?
ಕರ್ನಾಟಕದಲ್ಲಿ ಈಗ ಪಠ್ಯ ಪುಸ್ತಕಗಳನ್ನೇ ತಿರುಚಲಾಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಗೆ ರೋಹಿತ್ ಚಕ್ರತೀರ್ಥ ಎಂಬುವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರ ಹಿನ್ನಲೆ ಏನು? ಅವರು ಎಷ್ಟು ವರ್ಷ ಪಾಠ ಮಾಡಿದ್ದಾರೆ? ಇತಿಹಾಸದ ಬಗ್ಗೆ ರೋಹಿತ್ ಚಕ್ರತೀರ್ಥಗೆ ಎಷ್ಟು ಗೊತ್ತಿದೆ? ಎಂದು ವಿಶ್ಚನಾಥ್ ರೋಹಿತ್ ಚಕ್ರತೀರ್ಥ ಮತ್ತು ಅವರನ್ನು ನೇಮಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನು ಓದಿ: ನೀರಿನ ಬಾಟಲಿಯಿಂದ ಶುರುವಾದ ಜಗಳ, ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ನೂರಾರು ವಾಹನ ಜಖಂ


ಟಿಪ್ಪು ಸುಲ್ತಾನ್ ಒಂದು ಇತಿಹಾಸ
ಟಿಪ್ಪು ಸುಲ್ತಾನ್ ಒಂದು ಇತಿಹಾಸ. ಈ ಭೂಮಿ ಮೇಲೆ ಸೂರ್ಯ ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಇರುತ್ತಾರೆ‌ ಟಿಪ್ಪು ಸುಲ್ತಾನ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಆಡಳಿತದ ವಿರುದ್ಧ ದ್ವನಿ ಎತ್ತಿದ್ದವರು ಅವರ ತೇಜೋವಧೆ ಸಲ್ಲದು ಎಂದ ವಿಶ್ವನಾಥ್ ಅವರು ಸದ್ಯ ದೇವಸ್ಥಾನ ಬಳಿ ಮುಸ್ಲಿಮರು ವ್ಯಾಪಾರ ಮಾಡಬೇಡಿ, ಹಲಾಲ್ ಮಾಡಬೇಡಿ ಎನ್ನುವುದು ಸರಿಯಲ್ಲ. ಇವೆಲ್ಲವೂ ಸಮಾಜವನ್ನು ಘಾಸಿಗೊಳಿಸುತ್ತವೆ. ಕೆಲವು ಸಂಘಟನೆಗಳು ಸಂವಿಧಾನಕ್ಕಿಂತ ಮೀರಿ ವರ್ತಿಸುತ್ತಿವೆ. ಹದ್ದು ಮೀರಿ ವರ್ತಿಸುತ್ತಿವೆ. ಜನರಿಂದ ಆಯ್ಕೆಯಾದ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹಕ್ಕೆ ಮಾಡುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿಯನ್ನು ಕಾಪಡಬೇಕು ಎಂದು ಒತ್ತಾಯಿಸಿದರು.


ಇದನ್ನು ಓದಿ: ನಾಳೆ ತುಮಕೂರಿಗೆ Amit Shah; ಸಿದ್ದಗಂಗಾ ಮಠದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ಸಿಎಂ

top videos


    ಕ್ರಿಯೆಗೆ ಪ್ರತಿಕ್ರಿಯೆ ಎಂದು ಸರ್ಕಾರ ಹೇಳಬಾರದು. ಸರ್ಕಾರದ ಉತ್ತರ ಇದಾಗಿರಬಾರದು. ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಭಜರಂಗದಳದ ಸರ್ಕಾರ ಅಲ್ಲ. ಯಡಿಯೂರಪ್ಪ ಕಾಲದಲ್ಲಿ ಈ ರೀತಿ ಇರಲಿಲ್ಲ. ಯಡಿಯೂರಪ್ಪ ಟಿಪ್ಪು ವೇಷವನ್ನು ತೊಟ್ಟಿದ್ದರು. ಅವರಂತಹ ಹಿರಿಯ ನಾಯಕರು ಈ ಬಗ್ಗೆ ಗಮನ ಹರಿಸಬೇಕು. ಚುನಾವಣೆಗಾಗಿ ರಾಜಕೀಯ ನಾಯಕರು ತಂತ್ರಗಾರಿಕೆ ಮಾಡಬೇಕು. ಆದರೆ ಆ ತಂತ್ರಗಳು ಮಾರಕವಾಗಿರಬಾರದು. ರಾಜ್ಯದಲ್ಲಿ ಈವರೆಗೆ ಬಿಜೆಪಿ ಸ್ವತಂತ್ರವಾಗಿ ಗೆದ್ದಿಲ್ಲ. ನಮ್ಮಿಂದಾಗಿ ಸರ್ಕಾರ ಬಂದಿದೆ ಎಂದು  ರಾಜ್ಯ ಸರ್ಕಾರದ ವಿರುದ್ಧ ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು