HOME » NEWS » State » H VISHWANATH PARTICIPATES IN BIGG BOSS SHOW RHHSN DBDEL

ಪ್ರಮುಖ ರಾಜಕಾರಣಿಗೆ ಬಿಗ್ ಬಾಸ್ ಗಾಳ; ಕನ್ನಡದ 8ನೇ ಆವೃತಿಯಲ್ಲಿ ಕೇಳಲಿದೆಯೇ ಹಳ್ಳಿ ಹಕ್ಕಿ ಕಲರವ?

7ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದ ವಿಶ್ವನಾಥ್ ಈಗ 8ನೇ ಆವೃತ್ತಿಯಲ್ಲಿ ಭಾಗವಹಿಸಲು ಒಪ್ಪುತ್ತಾರಾ? ರಾಜಕೀಯ ಜಂಜಾಟದ ನಡುವೆ ಕಿರುತೆರೆಗೂ ಬಂದು ಕಚಗುಳಿ ಇಡುತ್ತಾರಾ? ಎಂಬುದು ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.

news18-kannada
Updated:December 16, 2020, 3:54 PM IST
ಪ್ರಮುಖ ರಾಜಕಾರಣಿಗೆ ಬಿಗ್ ಬಾಸ್ ಗಾಳ; ಕನ್ನಡದ 8ನೇ ಆವೃತಿಯಲ್ಲಿ ಕೇಳಲಿದೆಯೇ ಹಳ್ಳಿ ಹಕ್ಕಿ ಕಲರವ?
ಬಿಗ್ ಬಾಸ್
  • Share this:
ಬೆಂಗಳೂರು: ರಾಜ್ಯದ ಪ್ರಮುಖ ರಾಜಕಾರಣಿಗಳ ಪೈಕಿ ಒಬ್ಬರಾದ, ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ಅನುಗುಣವಾಗಿ, ಕ್ಷಣಾರ್ಧದಲ್ಲಿ ಗುಣಕಾರ ಭಾಗಕಾರ ಹಾಕಿ ಮಾತನಾಡುವ, ಮಾತಿನ ಮಧ್ಯೆ ಹಾಸ್ಯವನ್ನು ಹರಿಬಿಡುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಈಗ ರಾಜ್ಯದ ಜನತೆ ಮುಂದೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

'ಕಲರ್ಸ್ ಕನ್ನಡ' ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್'ನಲ್ಲಿ ಭಾಗವಹಿಸುವಂತೆ 'ಮಾತಿನ ಮಲ್ಲ' ಹೆಚ್. ವಿಶ್ವನಾಥ್ ಅವರನ್ನು ಆಹ್ವಾನಿಸಲಾಗಿದೆ ಎಂದು 'ನ್ಯೂಸ್ 18 ಕನ್ನಡ'ಕ್ಕೆ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

'ಬಿಗ್ ಬಾಸ್' ಕಾರ್ಯಕ್ರಮದ 8ನೇ ಆವೃತ್ತಿಗೆ ಹೆಚ್. ವಿಶ್ವನಾಥ್ ಅವರನ್ನು ಕರತರಲು ಬಿಗ್ ಬಾಸ್ ತಂಡವು ಪ್ರಯತ್ನಿಸುತ್ತಿದ್ದು ಮಾತುಕತೆ ಮುಂದುವರೆದಿದೆ ಎಂಬುದಾಗಿ ತಿಳಿದುಬಂದಿದೆ.

ರಾಜ್ಯ ರಾಜಕಾರಣಿಗಳ ಪೈಕಿ ಹೆಚ್. ವಿಶ್ವನಾಥ್ ಬಹಳ ಭಿನ್ನ. ರಾಜಕೀಯವಾಗಿ ಅವರು ಏನೇ ಆಗಿದ್ದರೂ ಸದಾ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿ ಇರುತ್ತಾರೆ. ಮಾಧ್ಯಮಗಳಲ್ಲಿ ಎಂದಿಗೂ ಅವರಿಗೆ 'ಸ್ಪೇಸ್' ಇದೆ. ಆಗಾಗ ತಮ್ಮ ಬಗ್ಗೆ ಕೇಳಿಬರುವ ಕಟುವಾದ ಟೀಕೆಗಳನ್ನೂ ವಿಶ್ವನಾಥ್ ಲಘುವಾಗಿ ಪರಿಗಣಿಸುತ್ತಾರೆ. ತಿಳಿ ಹಾಸ್ಯವಾಗಿ ಪರಿವರ್ತಿಸುತ್ತಾರೆ. ನಗುನಗುತ್ತಲೇ ರಾಜಕೀಯ ಎದುರಾಳಿಗಳಿಗೆ ಇರಿಯುತ್ತಾರೆ.
ಇಂಥ 'ಮೋಸ್ಟ್ ಎಂಟರ್​ಟೈನರ್' ರಾಜಕಾರಣಿ ಸಿಕ್ಕರೆ 'ಬಿಗ್ ಬಾಸ್' ಬಿಡುವುದೇ?

ಕಳೆದ (7ನೇ) ಆವೃತ್ತಿಯಲ್ಲೇ ಹೆಚ್. ವಿಶ್ವನಾಥ್ ಅವರನ್ನು ಬಿಗ್ ಬಾಸ್ ಮನೆಗೆ ಕರೆತರುವ ಪ್ರಯತ್ನ ಆಗಿತ್ತು. ಬಿಗ್ ಬಾಸ್ ತಂಡ ಭಾರೀ ಪ್ರಯತ್ನ ಪಟ್ಟಿತ್ತು. ಆದರೆ ಆಗ ರಾಜ್ಯ ರಾಜಕೀಯದಲ್ಲಿ ಬಹಳ ಬೆಳವಣಿಗೆಗಳು ಆಗುತ್ತಿದ್ದುದರಿಂದ ಮತ್ತು ಅದರಲ್ಲಿ ವಿಶ್ವನಾಥ್ ಅವರು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ.
7ನೇ ಆವೃತ್ತಿಯಲ್ಲಿ ಆಗದ ಕೆಲಸ 8ನೇ ಆವೃತ್ತಿಯಲ್ಲಾದರೂ ಸಿದ್ಧಿಸಬಹುದೆಂದು ಬಿಗ್ ಬಾಸ್ ತಂಡ ಈಗ ಮತ್ತೆ ವಿಶ್ವನಾಥ್ ಅವರನ್ನು ಸಂಪರ್ಕಿಸಿದೆ. ‌ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ. 2021ರ ಫೆಬ್ರವರಿಗೆ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಲಿದ್ದು 'ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದು ವಿಶ್ವನಾಥ್ ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.
ಹೆಚ್. ವಿಶ್ವನಾಥ್


ಇದನ್ನು ಓದಿ: KGF Chapter 2: ರವಿಶಂಕರ್ ಅಲ್ಲ: ಕೆಜಿಎಫ್ ಅಧೀರ ಸಂಜಯ್ ದತ್ ಪಾತ್ರಕ್ಕೆ ಕನ್ನಡದಲ್ಲಿ ಡಬ್ ಮಾಡುವವರು ಯಾರು ಗೊತ್ತಾ?

ಏಕೆಂದರೆ, ಮೊದಲನೆಯದಾಗಿ‌ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಪ್ಪಿಕೊಂಡರೆ ಮೂರು ತಿಂಗಳು ಶೂಟಿಂಗ್ ಇರುತ್ತದೆ. ಮೂರು ತಿಂಗಳು ಶೂಟಿಂಗ್ ನಲ್ಲಿ ಭಾಗವಹಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಇದರ ನಡುವೆ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯಲಿದೆ. ಆದುದರಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕಿದೆ. ಅಲ್ಲದೆ ವಿಶ್ವನಾಥ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಗಿದ್ದಾರೆ.‌ ರಾಜ್ಯದಲ್ಲಿ ಯಾವಾಗ ಬೇಕಾದರೂ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ರಚನೆ ಆಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ವಿಶ್ವನಾಥ್ 'ನಿರ್ಧಾರ ತಿಳಿಸಲು ಸ್ವಲ್ಪ ಸಮಯ ಕೊಡಿ' ಎಂದು ಹೇಳಿದ್ದಾರೆ ಎಂಬುದಾಗಿ ಗೊತ್ತಾಗಿದೆ.
Youtube Video

7ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದ ವಿಶ್ವನಾಥ್ ಈಗ 8ನೇ ಆವೃತ್ತಿಯಲ್ಲಿ ಭಾಗವಹಿಸಲು ಒಪ್ಪುತ್ತಾರಾ? ರಾಜಕೀಯ ಜಂಜಾಟದ ನಡುವೆ ಕಿರುತೆರೆಗೂ ಬಂದು ಕಚಗುಳಿ ಇಡುತ್ತಾರಾ? ಎಂಬುದು ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.
Published by: HR Ramesh
First published: December 16, 2020, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories