• Home
  • »
  • News
  • »
  • state
  • »
  • H Vishwanath: ಸಿದ್ದರಾಮಯ್ಯ ಅಂತಹ ನಾಯಕರು ಗೆಲ್ಲಬೇಕು; ಬಿಜೆಪಿ ತೊರೆಯುವ ಸುಳಿವು ನೀಡಿದ್ರಾ ವಿಶ್ವನಾಥ್?

H Vishwanath: ಸಿದ್ದರಾಮಯ್ಯ ಅಂತಹ ನಾಯಕರು ಗೆಲ್ಲಬೇಕು; ಬಿಜೆಪಿ ತೊರೆಯುವ ಸುಳಿವು ನೀಡಿದ್ರಾ ವಿಶ್ವನಾಥ್?

ಹೆಚ್ ವಿಶ್ವನಾಥ್

ಹೆಚ್ ವಿಶ್ವನಾಥ್

ಯಾವುದೇ ಚುನಾವಣೆಗಳು ಗೆಲುವು ಮಹತ್ವದಾಗಿರುತ್ತದೆ. ಅವರಿಗೆ ಈಗಾಗಲೇ ಬೇರೆ ಬೇರೆ ದೊಡ್ಡ ವಿರೋಧಿಗಳು ಶುರು ಆಗಿದ್ದಾರೆ. ಅವರು ಎಲ್ಲೇ ಸ್ಪರ್ಧೆ ಮಾಡಿದರೂ ಗೆಲ್ಲಬೇಕು, ಗೆಲ್ತಾರೆ ಎಂದು ಹೇಳಿದರು.

  • Share this:

ಕಾಂಗ್ರೆಸ್​​ಗೆ (Congress) ಗುಡ್​ ಬೈ ಹೇಳಿದ ದಿನದಿಂದ ​ ಬಿಜೆಪಿಯ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (BJP MLC H Vishwanath) ಸಮಯ ಸಿಕ್ಕಾಗೆಲ್ಲ ನೇರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ತೊರೆದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ (JDS State President) ಹೆಚ್.ವಿಶ್ವನಾಥ್ ಮೈತ್ರಿ ಸರ್ಕಾರದಲ್ಲಿಯೂ  (Collision Government) ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಜೊತೆಯಾಗಿಯೇ ಸರ್ಕಾರ ರಚನೆ ಮಾಡಿದ್ರೂ ವಿಶ್ವನಾಥ್ ವಾಗ್ದಾಳಿ ನಿಂತಿಲ್ಲ. ಮೈತ್ರಿ ಸರ್ಕಾರ ಪತನದ ಬಳಿಕ ಬಿಜೆಪಿಯ ಪರಿಷತ್ ಸದಸ್ಯರಾಗಿರುವ ವಿಶ್ವನಾಥ್ ಮೊದಲ ಬಾರಿ ತಮ್ಮ ರಾಜಕೀಯ ವಿರೋಧಿಯಾಗಿರುವ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ.


ಇಂದು ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದ ಹೆಚ್​​.ವಿಶ್ವನಾಥ್, ಯಾವುದೇ ವಿರೋಧ ಪಕ್ಷದ ನಾಯಕರಿಗೆ ವಿರೋಧ ಜಾಸ್ತಿ ಇರುತ್ತದೆ. ಅದಕ್ಕಾಗಿಯೇ ಸಿದ್ದರಾಮಯ್ಯ ಈಗ ಸೇಫ್ಟಿ ಕ್ಷೇತ್ರ ಹುಡುಕುತ್ತಿದ್ದಾರೆ ಎಂದಿದ್ದಾರೆ.


ಸಿದ್ದರಾಮಯ್ಯ ಅಂತಹ ನಾಯಕರು ಗೆಲ್ಲಬೇಕು


ಯಾವುದೇ ಚುನಾವಣೆಗಳು ಗೆಲುವು ಮಹತ್ವದಾಗಿರುತ್ತದೆ. ಅವರಿಗೆ ಈಗಾಗಲೇ ಬೇರೆ ಬೇರೆ ದೊಡ್ಡ ವಿರೋಧಿಗಳು ಶುರು ಆಗಿದ್ದಾರೆ. ಅವರು ಎಲ್ಲೇ ಸ್ಪರ್ಧೆ ಮಾಡಿದರೂ ಗೆಲ್ಲಬೇಕು, ಗೆಲ್ತಾರೆ ಎಂದು ಹೇಳಿದರು.


ಸಿದ್ದರಾಮಯ್ಯ ಗೆದ್ದ ಪಾರುಪತ್ಯ ಸಾಧಿಸಬೇಕು


ಈ ಹಿಂದೆ ಯಾವಾಗ್ಲೂ ನಾನು  ಸಿದ್ದರಾಮಯ್ಯ ಸೋಲ್ತಾರೆ ಅಂತಾ ಹೇಳಿಲ್ಲ. ಅವರಂತಹವರು ಗೆದ್ದು ವಿಧಾನಸೌಧಕ್ಕೆ ಬರಬೇಕು. ಈ ಹಿಂದೆ ಮುಖ್ಯಮಂತ್ರಿಗಳಾಗದವರಿಗೆ ಅವರದೇ ಆದ ಅನುಭವ ಇದೆ. ಹೀಗಾಗಿ ಈ ತರದವರು ಗೆದ್ದು ಪಾರುಪತ್ಯ ಸಾಧಿಸಬೇಕು ಎಂದರು.


ಬಿಜೆಪಿ ತೊರೆಯುವ ಸುಳಿವು


ನಾನು ನಲವತ್ತು ವರ್ಷಗಳ ಕಾಲ ಕಾಂಗ್ರೆಸ್​​ನಲ್ಲಿದ್ದವನು. ನಾನು ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಮೇಲೆ ಅಪಾರವಾದ ನಂಬಿಕೆ ಇದೆ. ಮುಂದೆ ಕಾಂಗ್ರೆಸ್ ಸೇರುವ ಬಗ್ಗೆ ಸಮಯ ಏನೇನು ಆಗುತ್ತೆ ನೋಡೋಣ ಎಂದು ಬಿಜೆಪಿ ತೊರೆಯುವ ಸುಳಿವು ನೀಡಿದರು. ಈ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದರು.


ಕಮಲ ಅಂಗಳದ ರೆಬೆಲ್ ನಾಯಕ


ಬಿಜೆಪಿ ಸರ್ಕಾರ ರಚನೆಗಾಗಿ ಶಾಸಕ ಸ್ಥಾನಕ್ಕಾಗಿ ರಾಜೀನಾಮೆ ನೀಡಿದ ನಾಯಕರ ಪೈಕಿ ವಿಶ್ವನಾಥ್ ಸಹ ಒಬ್ಬರಾಗಿದ್ದಾರೆ. ಆದ್ರೆ ಹುಣಸೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ವಿಶ್ವನಾಥ್ ಸೋತಿದ್ದರಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದ್ರೆ ಕಾನೂನು ತೊಡಕುಗಳಿಂದಾಗಿ ಮಂತ್ರಿಯಾಗುವ ಭಾಗ್ಯ ವಿಶ್ವನಾಥ್ ಅವರಿಗೆ ಸಿಕ್ಕಿಲ್ಲ. ಈ ಹಿನ್ನೆಲೆ ಬಿಜೆಪಿಯಲ್ಲಿ ರೆಬೆಲ್ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.+


ಇದನ್ನೂ ಓದಿ:  Karnataka Politics: ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು ಬಿದ್ದಿದೆ; ಪ್ರಹ್ಲಾದ್ ಜೋಶಿ


ಜೆಡಿಎಸ್ ಪಣ


ಇನ್ನು ಕಳೆದುಕೊಂಡ ವಿಧಾನಸಭಾ ಕ್ಷೇತ್ರಗಳನ್ನು ಮರಳಿ ಪಡೆಯಲು ಜೆಡಿಎಸ್​ ಪಣ ತೊಟ್ಟಿದೆ. ಮಾಜಿ ಶಾಸಕ  ಸತ್ಯನಾರಾಯಣ್ (Former MLA Sathya Narayan) ಅವರ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದ್ರೆ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.


ಇದೀಗ ಉಪಚುನಾವಣೆಯಲ್ಲಿ ಸೋತಿರುವ ಜೆಡಿಎಸ್ ಶಿರಾದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಇಂದು ಶಿರಾ ಕ್ಷೇತ್ರದ ಸ್ಥಳೀಯ ಮುಖಂಡರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.


ಇದನ್ನೂ ಓದಿ:  Siddaramaiah: ನಾಮಿನೇಷನ್ ಮಾಡೋಕೆ ಹೋಗ್ತಿಲ್ಲಪ್ಪ; ಕೋಲಾರದತ್ತ ಸಿದ್ದರಾಮಯ್ಯ


ಶಿರಾದಂತೆ ಸಿಂದಗಿ (Sindagi) ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಜೆಡಿಎಸ್ ಕಳೆದುಕೊಂಡಿದೆ.  ಎಂಸಿ ಮನಗೂಳಿ (MC Manuguli) ಅವರ ಅಕಾಲಿಕ ನಿಧನದಿಂದ ಸಿಂದಗಿಗೆ ಉಪಚುನಾವಣೆ ನಡೆದಿತ್ತು. ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಹ ಪ್ರಚಾರ ನಡೆಸಿದ್ದರು. ಆದ್ರೆ ಬಿಜೆಪಿ ಗೆದ್ದಿತ್ತು.

Published by:Mahmadrafik K
First published: