ಮಾಜಿ ಸ್ಪೀಕರ್ ರಮೇಶ್ ಕುಮಾರ್​​​ ವಿರುದ್ಧ ಪ್ರಕರಣ ದಾಖಲಿಸಬೇಕು; ಎಚ್​ ವಿಶ್ವನಾಥ್​ ಆಗ್ರಹ

ಪೌರತ್ವ ಕಾಯ್ದೆ ಹಾಗೂ ಎನ್​ಆರ್​ಸಿ ಬಗ್ಗೆ ರಮೇಶ್​ ಕುಮಾರ್​, ಸಿದ್ದರಾಮಯ್ಯ ಮುಸ್ಲಿಂ ಕೇರಿಯಲ್ಲಿ ಮಾತನಾಡುತ್ತಾರೆ. ಯಾಕೆ ಹಿಂದೂ ಕೇರಿಯಲ್ಲಿ ಮಾತನಾಡುವುದಿಲ್ಲ. ಕಾರಣ ಮುಸ್ಲಿಂರನ್ನು ಬಲಿಪಶು ಮಾಡುವುದು ಕಾಂಗ್ರೆಸ್​ ಉದ್ದೇಶ.

news18-kannada
Updated:March 10, 2020, 3:23 PM IST
ಮಾಜಿ ಸ್ಪೀಕರ್ ರಮೇಶ್ ಕುಮಾರ್​​​ ವಿರುದ್ಧ ಪ್ರಕರಣ ದಾಖಲಿಸಬೇಕು; ಎಚ್​ ವಿಶ್ವನಾಥ್​ ಆಗ್ರಹ
ಹೆಚ್. ವಿಶ್ವನಾಥ್
  • Share this:
ಮೈಸೂರು (ಮಾ.10): ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ತಲೆ ಕೆಟ್ಟಂತೆ ಮಾತನಾಡುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿದ್ದ ಅವರು ಪ್ರಧಾನಿ, ಸಂವಿಧಾನದ ವಿರುದ್ಧವಾಗಿ ಹೇಳಿಕೆ ನೀಡುತ್ತಾರೆ. ಮೋದಿಯನ್ನು ಒದ್ದು ಒಳಗೆ ಹಾಕಬೇಕು ಎನ್ನುತ್ತಾರೆ. ಈ ರೀತಿ ಮಾತನಾಡುವ ಅವರ ವಿರುದ್ಧ ಸರ್ಕಾರ ಸುಮ್ಮನೆ ಕೂರದೆ ಪ್ರಕರಣ ದಾಖಲಿಸಬೇಕು ಎಂದು ಎಚ್​ ವಿಶ್ವನಾಥ್​ ಆಗ್ರಹಿಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ನಾನೇ ಬಸವಣ್ಣ, ನಾನೇ ಅಂಬೇಡ್ಕರ್, ನಾನೇ ಸಂವಿಧಾನ ಎಂದು ರಮೇಶ್​ ಕುಮಾರ್​ ಬಡಬಡಾಯಿಸುತ್ತಾರೆ. ಆದರೆ ಸಂವಿಧಾನದ ವಿರುದ್ಧವೇ ಅವರು ಮಾತನಾಡುತ್ತಾರೆ. ಇದೇ ಅವರು ಸಂವಿಧಾನ ರಕ್ಷಣೆ ಮಾಡುವ ವಿಧಾನ ಎಂದು ಹರಿಹಾಯ್ದರು.

ಪೌರತ್ವ ಕಾಯ್ದೆ ಹಾಗೂ ಎನ್​ಆರ್​ಸಿ ಬಗ್ಗೆ ರಮೇಶ್​ ಕುಮಾರ್​, ಸಿದ್ದರಾಮಯ್ಯ ಮುಸ್ಲಿಂ ಕೇರಿಯಲ್ಲಿ ಮಾತನಾಡುತ್ತಾರೆ. ಯಾಕೆ ಹಿಂದೂ ಕೇರಿಯಲ್ಲಿ ಮಾತನಾಡುವುದಿಲ್ಲ. ಕಾರಣ ಮುಸ್ಲಿಮರನ್ನು ಬಲಿಪಶು ಮಾಡುವುದು ಕಾಂಗ್ರೆಸ್​ ಉದ್ದೇಶ. ಸಿಎಎ ದೇಶದ ವಿರೋಧಿ ಆಗಿದ್ದರೆ ಎಲ್ಲ ಕಡೆ ವಿರೋಧಿಸಬೇಕು. ಆದರೆ, ಕಾಂಗ್ರೆಸ್​ನವರು ಬರಿ ಮುಸ್ಲಿಂ ಕೇರಿಯಲ್ಲಿ ಮಾತ್ರ ಹೋರಾಟ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ದೇವೇಗೌಡ ಅವರ ವಿರುದ್ಧವೂ ಹರಿಹಾಯ್ದ ಅವರು, ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಅಂತ ಜೆಡಿಎಸ್​ ವರಿಷ್ಠರು ಭಾಷಣ ಮಾಡುತ್ತಾರೆ. ಆದರೆ, ಸಮ್ಮಿಶ್ರ ಸರ್ಕಾರ ಇದ್ದಾಗ ಒಬ್ಬ ಮುಸ್ಲಿಂ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದ್ದರಾ? ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಶ್ರೀರಾಮುಲು ಹಾಗೂ ಕುಮಾರ‌ಸ್ವಾಮಿ ಸಾಮಾನ್ಯರಲ್ಲ

ಸಚಿವ ಶ್ರೀರಾಮಲು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರು  ಜವಾಬ್ದಾರಿಯುತ ಜನಪ್ರತಿನಿಧಿಗಳು. ಇತರರಿಗೆ ಮಾದರಿಯಾಗಿರಬೇಕಾದವರು. ಮಕ್ಕಳ ಮದುವೆಯನ್ನು ಸರಳವಾಗಿ ಮಾಡಬೇಕಿತ್ತು. ಆದರೆ ಶ್ರೀರಾಮುಲು ಬಳ್ಳಾರಿಯಿಂದ ಬೆಂಗಳೂರಿನವರೆಗೆ ಮಗಳ ಮದುವೆ ಮಾಡಿದರು. ಈಗ ಕುಮಾರ‌ಸ್ವಾಮಿ ರಾಮನಗರದಿಂದ ಚನ್ನಪಟ್ಟಣದವರೆಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಟೀಕಿಸಿದರು.

ಇದನ್ನು ಓದಿ: ವದಂತಿಗಳಿಗೆ ಕಿವಿಗೊಡದಿರಿ; ಕೊರೋನಾ ರೋಗಲಕ್ಷಣ ಕಾಣಿಸಿಕೊಂಡರೆ ಕೂಡಲೇ ವೈದ್ಯರ ಭೇಟಿಯಾಗಿ: ಸಿಎಂ ಸಲಹೆನೂರಾರು ಸಾಮೂಹಿಕ ವಿವಾಹ ಮಾಡಿದ್ದ ಶ್ರೀರಾಮುಲು ಮಗಳ ಮದುವೆಯನ್ನು ಅದೇ  ರೀತಿ ಮಾಡಬೇಕಿತ್ತು. ಕುಮಾರ‌ಸ್ವಾಮಿ ಈ ರಾಜ್ಯಕ್ಕೆ ಸಿಎಂ ಆಗಿದ್ದವರು. ಅವರು ಮಾದರಿಯಾಗಬೇಕಿತ್ತು. ಅದು ಬಿಟ್ಟು ಮದುವೆ ಮೂಲಕ ಪಕ್ಷ ಸಂಘಟನೆ ಅಂತ ಹೇಳುತ್ತಾರೆ. ಹಾಗಾದರೆ ಜೆಡಿಎಸ್‌‌ನವರು ಮಾತ್ರ ಮದುವೆಗೆ ಹೋಗಬೇಕಾ ಅಥವಾ ಸರ್ವರಿಗೂ ಸ್ವಾಗತ ಎಂದು ಹಾಕಿದ್ದಾರಾಲ್ಲಾ ನಮ್ಮಂತಹವರು ಹೋಗಬಹುದಾ ಎಂದು ಕುಟುಕಿದರು.

 
First published:March 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading